IPL 2021 ಮತ್ತೆ ಶುರು ಮಾಡಿದರೆ ನಾವು ಬರುವುದಿಲ್ಲ ಅನ್ನುತ್ತಿದ್ದಾರಂತೆ ಇಂಗ್ಲೆಂಡ್ ಆಟಗಾರರು! ಯಾಕೆ ಗೊತ್ತಾ?
ಆದರೆ ಇದಕ್ಕೆ ಒಂದೊಂದೇ ಒಂದು ವಿನಾಯ್ತಿ ಅಂದ್ರೆ ಸೆಪ್ಟೆಂಬರ್ ಮತ್ತು ಅಕ್ಟೋಬರ್ನಲ್ಲಿ ಇಂಗ್ಲೆಂಡ್ ಕ್ರಿಕೆಟ್ ತಂಡ ಪಾಕಿಸ್ತಾನ ಮತ್ತು ಬಾಂಗ್ಲಾದೇಶ ಪ್ರವಾಸ ಕೈಗೊಳ್ಳಲಿದೆ. ಆ ಪ್ರವಾಸಗಳು ಏನಾದರೂ ಕ್ಯಾನ್ಸಲ್ ಆದ್ರೆ ಮಾತ್ರ ಇಂಗ್ಲೆಂಡ್ ಆಟಗಾರರು 2021 ಟೂರ್ನಿಯ ಉಳಿದ ಪಂದ್ಯಗಳಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ವರದಿಯಾಗಿದೆ.
ಕೊರೊನಾ ಕ್ರಮಿಯಿಂದಾಗಿ IPL 2021 ಟೂರ್ನಿ ಇದ್ದಕ್ಕಿದ್ದಂತೆ ಸ್ಥಗಿತಗೊಂಡಿದ್ದು ಎಲ್ಲರಿಗೂ ಗೊತ್ತೇ ಇದೆ. ಆ ಟೂರ್ನಿಯಲ್ಲಿ ಭಾಗವಹಿಸಿದ್ದ ಇಂಗ್ಲೆಂಡ್ ಆಟಗಾರರು ಈಗಾಗಲೇ ಭಾರತ ಬಿಟ್ಟು ತಮ್ಮ ತಮ್ಮ ಊರುಗಳನ್ನು ತಲುಪಿಕೊಂಡಿದ್ದಾರೆ. ಆದರೆ ತಾಯ್ನಾಡಿಗೆ ಮರಳಿದ ಬಳಿಕ ಆ ಆಟಗಾರರು ಯಾರೂ ಇನ್ನು ಬಾಕಿಯಿರುವ IPL 2021 ಟೂರ್ನಿಯಲ್ಲಿ ಭಾಗಹಿಸುವುದಿಲ್ಲ ಎಂದು ಹೇಳಿರುವುದಾಗಿ ವರದಿಯಾಗಿದೆ. ಅಷ್ಟೇ ಅಲ್ಲ, ಆಕಸ್ಮಾತ್ ಬಾಕಿ 31 ಪಂದ್ಯಗಳು ಮತ್ತೆ ಇಂಗ್ಲೆಂಡ್ ಸೇರಿದಂತೆ ಎಲ್ಲೇ ನಡೆದರೂ ನಾವು ಬರಾಕಿಲ್ಲ ಎಂದಿದ್ದಾರಂತೆ. ಇದಕ್ಕೆ ಕಾರಣವೂ ಇದೆ. ಏನಪ್ಪಾ ಅಂದ್ರೆ.
ಈ ಹಿಂದಿನಂತೆ IPL 2021 ಟೂರ್ನಿ ಭಾರತದಲ್ಲಿಯೇ ನಿಗದಿತ ಅವಧಿಯಲ್ಲಿ ನಡೆದಿದ್ದರೆ ಅದರಲ್ಲಿ ಪಾಲ್ಗೊಂಡಿದ್ದ ಅಷ್ಟೂ ಇಂಗ್ಲೆಂಡ್ ಆಟಗಾರರಿಗೆ ವಿನಾಯ್ತಿ ನೀಡಲಾಗಿತ್ತು. ಇಂಗ್ಲೆಂಡ್ ತಂಡ ಜೂನ್ ತಿಂಗಳಲ್ಲಿ ನ್ಯೂಜಿಲ್ಯಾಂಡ್ ಟೆಸ್ಟ್ ಪ್ರವಾಸ ಕೈಗೊಳ್ಳಬೇಕಿದೆ. ಇದೀಗ ಐಪಿಎಲ್ 2021 ಟೂರ್ನಿ ವೇಳಾಪಟ್ಟಿ ಮರುನಿಗದಿಯಾದರೆ ಇಂಗ್ಲೆಂಡ್ ತಂಡದ ಪ್ರವಾಸಕ್ಕೆ ಧಕ್ಕೆಯಾಗಲಿದೆ. ಹಾಗಾಗಿ IPL 2021 ಟೂರ್ನಿ ಪುನರಾರಂಭವಾದರೆ ಅದರಲ್ಲಿ ಇಂಗ್ಲೆಂಡ್ ತಂಡದ 12 ಆಟಗಾರರು ಮತ್ತೆ ಆಡುವುದು ಸಾಧ್ಯವಾಗದು. ಆದ ಅದನ್ನು ಬೇರೆಯದ್ದೇ ಮಾನದಂಡದೊಂದಿಗೆ ನೋಡಬೇಕಾಗುತ್ತದೆ ಎಂದು ಇಂಗ್ಲೆಂಡ್ ಕ್ರಿಕೆಟ್ ಮಂಡಳಿಯ ನಿರ್ದೇಶಕ ಆಶ್ಲೆ ಗಿಲ್ಸ್ ಹೇಳಿದ್ದಾರೆ.
ಭಾರತದಲ್ಲಿ ಯಶ್ವಸ್ವಿಯಾಗಿ ನಡೆಯುತ್ತಿದ್ದ IPL 2021 ಟೂರ್ನಿಯು ಕೊರೊನಾ ಕಾಟದಿಂದ ಕಳೆದ ವಾರವಷ್ಟೇ ದಿಢೀರನೆ ಸ್ಥಗಿತಗೊಂಡಿತ್ತು. ಸೆಪ್ಟೆಂಬರ್ ಮಧ್ಯ ಭಾಗದಲ್ಲೋ ಅಥವಾ ಮಧ್ಯ ಭಾಗದಲ್ಲೋ ಬೇರೆ ಯಾವುದಾದರೂ ಸುರಕ್ಷಿತ ದೇಶದಲ್ಲಿ ಟೂರ್ನಿಯ ಉಳಿದ 31 ಪಂದ್ಯಗಳನ್ನು ಪೂರ್ಣಗೊಳಿಸಲು ಆಲೋಚಿಸುತ್ತಿರುವುದಾಗಿ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಹೇಳಿದ್ದರು. ಆದರೆ ಈ ಅವಧಿಯಲ್ಲಿ ಇಂಗ್ಲೆಂಡ್ ಆಟಗಾರರು ತಮ್ಮ ತಾಯ್ನಾಡಿನ ತಂಡದೊಂದಿಗೆ ಅಧಿಕೃತ ಪ್ರವಾಸದಲ್ಲಿ ಬಿಸಿಯಾಗಿರುತ್ತಾರೆ. 2022 ಮಾರ್ಚ್ ವರೆಗೂ ಇಂಗ್ಲೆಂಡ್ ತಂಡದ ಕ್ರಿಕೆಟ್ ವೇಳಾಪಟ್ಟಿ ನಿಗದಿಯಾಗಿದೆ. ಹಾಗಾಗಿ ಇಂಗ್ಲೆಂಡ್ ಆಟಗಾರರು ಯಾವುದೇ ಪರಿಷ್ಕೃತ ವೇಳಾಪಟ್ಟಿಗೆ ಹೊಂದಿಕೊಂಡು ಆಡುವುದು ಅನುಮಾನವಾಗಿದೆ.
ಆದರೆ ಇದಕ್ಕೆ ಒಂದೊಂದೇ ಒಂದು ವಿನಾಯ್ತಿ ಅಂದ್ರೆ ಸೆಪ್ಟೆಂಬರ್ ಮತ್ತು ಅಕ್ಟೋಬರ್ನಲ್ಲಿ ಇಂಗ್ಲೆಂಡ್ ಕ್ರಿಕೆಟ್ ತಂಡ ಪಾಕಿಸ್ತಾನ ಮತ್ತು ಬಾಂಗ್ಲಾದೇಶ ಪ್ರವಾಸ ಕೈಗೊಳ್ಳಲಿದೆ. ಆ ಪ್ರವಾಸಗಳು ಏನಾದರೂ ಕ್ಯಾನ್ಸಲ್ ಆದ್ರೆ ಮಾತ್ರ ಇಂಗ್ಲೆಂಡ್ ಆಟಗಾರರು 2021 ಟೂರ್ನಿಯ ಉಳಿದ ಪಂದ್ಯಗಳಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ವರದಿಯಾಗಿದೆ.
ಈ ಕೊರೊನಾ ಕಾಲದಲ್ಲಿ ಆಟಗಾರರು ಹೆಚ್ಚು ಹೆಚ್ಚು ಪ್ರವಾಸ ಮಾಡುವುದು, ಒತ್ತಡದಲ್ಲಿ ಆಡುವುದು ಸುರಕ್ಷಿತವಲ್ಲ. ಹಾಗಾಗಿ ಕ್ರಿಕೆಟ್ ಪ್ರವಾಸದಲ್ಲಿ ಯಾವುದೇ ಏರುಪೇರುಗಳಾಗುವುದು ಸಮಂಜಸವಲ್ಲ ಎಂಬುದು ಕ್ರಿಕೆಟ್ ಪಂಡಿತರ ಅನಿಸಿಕೆಯಾಗಿದೆ.
( England players may not involve in rescheduled IPL 2021 anywhere due to Future Tours Programme)
ಐಪಿಎಲ್ 2021 ಬಾಕಿ ಉಳಿದ ಸಂಭ್ರಮ ಇನ್ನು ಕ್ರಿಕೆಟ್ ಕಾಶಿ ಇಂಗ್ಲೆಂಡ್ನಲ್ಲಿ!?