ಐಪಿಎಲ್ 2021 ಬಾಕಿ ಉಳಿದ ಸಂಭ್ರಮ ಇನ್ನು ಕ್ರಿಕೆಟ್​ ಕಾಶಿ ಇಂಗ್ಲೆಂಡ್​​ನಲ್ಲಿ!?

September 14ರವರೆಗೂ ಭಾರತ ಕ್ರಿಕೆಟ್​ ತಂಡ ಇಂಗ್ಲೆಂಡ್​ ಟೆಸ್ಟ್​ ಪ್ರವಾಸದಲ್ಲಿರುತ್ತದೆ. ಅದಾದ ಬಳಿಕವಷ್ಟೇ ​ಐಪಿಎಲ್ 2021 ಟೂರ್ನಿ ಮುಂದುವರಿಕೆ. ಅದಾದ ಮೇಲೆ ಒಂದು ವೇಳೆ ನಡೆದರೆ, ಐಪಿಎಲ್ 2021 ಮುಗಿಯುತ್ತಿದ್ದಂತೆ T20 World Cup ಶುರುವಾಗಲಿದೆ. ಇದರಿಂದ ಆಟಗಾರರ ದೈಹಿಕ ಸಾಮರ್ಥ್ಯದ ಮೇಲೆ ಹೆಚ್ಚು ಪರಿಣಾಮ ಬೀರುವ ಸಾಧ್ಯತೆಯಿದೆ ಎಂದು ಕ್ರಿಕೆಟ್​ ಪಂಡಿತರು ಎಚ್ಚರಿಸಿದ್ದಾರೆ.

ಐಪಿಎಲ್ 2021 ಬಾಕಿ ಉಳಿದ ಸಂಭ್ರಮ ಇನ್ನು ಕ್ರಿಕೆಟ್​ ಕಾಶಿ ಇಂಗ್ಲೆಂಡ್​​ನಲ್ಲಿ!?
ಫೈನಲ್​ ಪಂದ್ಯ ಸೇರಿದಂತೆ ಇನ್ನೂ 31 ಮ್ಯಾಚ್​ಗಳು ಈ ಬಾರಿಯ ​ಐಪಿಎಲ್ 2021 ಟೂರ್ನಿಯಲ್ಲಿ ಬಾಕಿ ಉಳಿದಿವೆ.
Follow us
ಸಾಧು ಶ್ರೀನಾಥ್​
|

Updated on:May 07, 2021 | 1:26 PM

ಬೆಂಗಳೂರು: ಭಾರತದ ಕ್ರಿಕೆಟ್ ಪ್ರೇಮಿಗಳು ಭ್ರಮನಿರಸನಕ್ಕೊಳಗಾಗುವಂತೆ ಈ ಬಾರಿಯ ಐಪಿಎಲ್ ಟೂರ್ನಿಯನ್ನು ಕೊರೊನಾ ಸ್ವಾಹಾ ಮಾಡಿದೆ. ಆದರೆ ನಮ್ಮ ಕ್ರಿಕೆಟ್ ಪ್ರೇಮಿಗಳು ಹೆಚ್ಚು ಭ್ರಮನಿರಸನಕ್ಕೆ ಈಡಾಗುವ ಸಾಧ್ಯತೆಯಿಲ್ಲ. ಏಕೆಂದ್ರೆ ಬಾಕಿ ಉಳಿದ ಐಪಿಎಲ್ 2021 ಪಂದ್ಯಗಳು ಕ್ರಿಕೆಟ್​ ತವರೂರಾದ ಇಂಗ್ಲೆಂಡ್​​ನಲ್ಲಿ ಜರುಗುವ ಸಾಧ್ಯತೆಯಿದೆ. ಇದಕ್ಕೆ ಆದರೆಯಾಗಿ ಅಲ್ಲಿನ ಇಂಗ್ಲೀಷ್​ ಕೌಂಟಿಗಳಾದ ವರ್ವಿಕ್​ಷೈರ್​, ಸರ್ರೆ ಮತ್ತು ಎಂಸಿಸಿ ಕ್ರಿಕೆಟ್​ ಸಂಸ್ಥೆಗಳು ಐಪಿಎಲ್ 2021 ಬಾಕಿ ಪಂದ್ಯಗಳಿಗೆ ಆತಿಥ್ಯ ನೀಡಲು ತವಕಿಸುತ್ತಿವೆ.

ಎಲ್ಲವೂ ಅಂದುಕೊಂಡಂತೆ ಸುಸೂತ್ರವಾಗಿ ನಡೆದರೆ ಇಂಗ್ಲೆಂಡ್​ನ Warwickshire, Surrey ಮತ್ತು MCC ಕ್ರಿಕೆಟ್​ ಸಂಸ್ಥೆಗಳು ಮುಂದಿನ ಸೆಪ್ಟೆಂಬರ್ ತಿಂಗಳ ದ್ವಿತೀಯಾರ್ಧದಲ್ಲಿ (September 14ರ ನಂತರ) ಐಪಿಎಲ್ 2021 ಬಾಕಿ ಪಂದ್ಯಗಳನ್ನು ತನ್ನ ನೆಲದಲ್ಲಿ ಆಡಿಸುವುದಕ್ಕೆ ಅವಕಾಶ ನೀಡಲಿವೆ. ಈ ಬಾರಿ ಐಪಿಎಲ್ 2021 ಪೂರ್ಣಗೊಳ್ಳದೆ ಹೋದರೆ ತನಗೆ ಸಿಕ್ಕಾಪಟ್ಟೆ ನಷ್ಟವಾಗುವುದು ಕಟ್ಟಿಟ್ಟಬುತ್ತಿ ಎಂದು ಭಾರತೀಯ ಕ್ರಿಕೆಟ್​ ನಿಯಂತ್ರಣ ಮಂಡಳಿ ನಾಲ್ಕಾರು ದಿನಗಳಿಂದ ತಲೆಯೆ ಮೇಲೆ ಕೈಹೊತ್ತು ಕುಳಿತಿದೆ.

ಇದನ್ನು ಓದಿ: ಇಂಡಿಯನ್​ ಪ್ರೀಮಿಯರ್​ ಲೀಗ್​ ಎಂಬ ಕ್ರಿಕೆಟ್​ ಮಾಯೆ ಅಪ್ಪಟ ಭಾರತೀಯದ್ದು. ಆದರೆ ಕ್ರಿಕೆಟ್ ತವರೂರಾದ ಇಂಗ್ಲೆಂಡ್​ನಲ್ಲಿಯೂ ಈ IPL matches ನಡೆಯಲಿ ಎಂದು ನಮ್ಮನ್ನು ಶತಮಾನ ಕಾಲ ಆಳಿದ ಬ್ರಿಟಿಷರು ಇದೀಗ ಬಯಸುತ್ತಿರುವುದು ಸೋಜಿಗವೇ ಸರಿ. ಕಳೆದ IPL ಟೂರ್ನಮೆಂಟ್ ದುಬೈನಲ್ಲಿ ನಡೆದ ಬಳಿಕ ಭಾರತದಿಂದ ಆಚೆಗೆ IPL ನಡೆದರೆ ತೊಂದರೆ ಏನೂ ಇಲ್ಲ ಎಂಬ ಭಾವನೆ ಮೂಡುತ್ತಿರುವಾಗ ಇಂಗ್ಲೆಂಡ್​ನಲ್ಲಿ IPL ಟೂರ್ನಮೆಂಟ್ ನಡೆಯಬಹುದಲ್ವಾ ಎಂಬ ಜಿಜ್ಞಾಸೆಯೂ ಮೂಡಿದೆ. 2009ರಲ್ಲಿ ದಕ್ಷಿಣ ಆಫ್ರಿಕಾದಲ್ಲಿಯೂ ಒಮ್ಮೆ ಐಪಿಎಲ್ ನಡೆದಿತ್ತು ಎಂಬುದು ಗಮನಾರ್ಹ. ಇದೆಲ್ಲದರ ಮಧ್ಯೆ ಅಲ್ಲಿ ಲಂಡನ್​ನಲ್ಲಿ ಮೇಯರ್​ ಸ್ಥಾನಕ್ಕೆ ಚುನಾವಣೆಗಳು ನಡೆಯುತ್ತಿವೆ. ಹಾಗಾಗಿ ಅಲ್ಲಿನ ಹಾಲಿ ಮೇಯರ್ ಸಾದಿಖ್ ಖಾನ್​ ಮತ್ತೊಮ್ಮೆ ಮೇಯರ್ ಸ್ಥಾನ ಬಯಸಿದ್ದಾರೆ. ಕೆಳಗಿನ ಲಿಂಕ್​ ಒತ್ತಿ:

IPL: ಮುಂದಿನ ಐಪಿಎಲ್ ಲಂಡನ್​ನಲ್ಲಿಯೇ ನಡೆಯಲಿ ಅನ್ನುತ್ತಿದ್ದಾರೆ ಲಂಡನ್ ಮೇಯರ್! ಯಾಕೆ ಗೊತ್ತಾ?

ಕಳೆದ ಬಾರಿಯೂ ಹೀಗೆಯೇ ಕೊರೊನಾ ಕಾಟ ಹೆಚ್ಚಾದಾಗ ದುಬೈ ಆತಿಥ್ಯ ವಹಿಸಿ, ಬಿಸಿಸಿಐ ಅನ್ನು ಪಾರು ಮಾಡಿತ್ತು. ಆದರೆ ಈ ಬಾರಿಯೂ ಅಂತಹುದೇ ಪರಿಸ್ಥಿತಿ ಉದ್ಭವವಾಗಿದ್ದು ಈ ಬಾರಿ ಇನ್ನೂ ಹೆಚ್ಚು ವೃತ್ತಿಪರ ತಂಡಗಳಾದ ವರ್ವಿಕ್​ಷೈರ್​, ಸರ್ರೆ ಮತ್ತು ಎಂಸಿಸಿ ಕ್ರಿಕೆಟ್​ ಕೌಂಟಿ ಸಂಸ್ಥೆಗಳು ಆತಿಥ್ಯಕ್ಕೆ ಸಿದ್ಧ ಎಂದು ಘೋಷಿಸಿರುವುದು ಬಿಸಿಸಿಐಗೆ ಮರುಜೀವ ಬಂದಂತಾಗಿದೆ.

ಇಂಗ್ಲೆಂಡಿನ ಈ ಮೂರೂ ಕ್ರಿಕೆಟ್​ ಕೌಂಟಿ ಸಂಸ್ಥೆಗಳು ಮೂರು ದಿನಗಳ ಹಿಂದೆ ಇಂಗ್ಲೆಂಡ್​ ಮತ್ತು ವೇಲ್ಸ್​ ಕ್ರಿಕೆಟ್ ಮಂಡಳಿಗಳಿಗೆ ಪತ್ರ ಬರೆದು ಬಿಸಿಸಿಐ ಜೊತೆ ಮಾತನಾಡುವಂತೆ ಕೋರಿವೆ. ಫೈನಲ್​ ಪಂದ್ಯ ಸೇರಿದಂತೆ ಇನ್ನೂ 31 ಮ್ಯಾಚ್​ಗಳು ಈ ಬಾರಿಯ ​ಐಪಿಎಲ್ 2021 ಟೂರ್ನಿಯಲ್ಲಿ ಬಾಕಿ ಉಳಿದಿವೆ.

ಲಂಡನ್​ನಲ್ಲಿ ಲಾರ್ಡ್ಸ್​​ ಮೈದಾನ ಮತ್ತು ಓವಲ್​ ಮೈದಾನ ಹಾಗೂ ಬರ್ಮಿಂಗ್​ಹ್ಯಾಮ್​ನಲ್ಲಿ ಎಜ್​ಬಾಸ್ಟನ್​ ​ಕ್ರಿಕೆಟ್ ಮೈದಾನ​ದಲ್ಲಿ ಬಾಕಿ 31 ಮ್ಯಾಚ್​ಗಳು ನಡೆಯಲಿವೆ. ಮ್ಯಾಂಚೆಸ್ಟರ್​​ನಲ್ಲೂ ಪಂದ್ಯಗಳು ನಡೆಯುವ ಸಾಧ್ಯತೆಯಿದೆ.

ಇನ್ನು ಅಕ್ಟೋಬರ್​ ತಿಂಗಳಲ್ಲಿ ಭಾರತದಲ್ಲಿ ನಡೆಯಬೇಕಿರುವ T20 World Cup ಟೂರ್ನಿಯ ಮೇಲೂ ಕೊರೊನಾ ಕಾರ್ಮೋಡ ದಟ್ಟವಾಗಿ ಹರಡಿದೆ. ಅದು ಬಹುಶಃ ಕೊಲ್ಲಿ ರಾಷ್ಟ್ರಗಳಲ್ಲಿ (UAE) ನಡೆಯುವ ಸಾಧ್ಯತೆಯಿದೆ. ಏಕೆಂದ್ರೆ ​ಐಪಿಎಲ್ 2020 ಟೂರ್ನಿಯನ್ನು UAE ಯಶಸ್ವಿಯಾಗಿ ನಡೆಸಿಕೊಟ್ಟಿತ್ತು.

September 14ರವರೆಗೂ ಭಾರತ ಕ್ರಿಕೆಟ್​ ತಂಡ ಇಂಗ್ಲೆಂಡ್​ ಟೆಸ್ಟ್​ ಪ್ರವಾಸದಲ್ಲಿರುತ್ತದೆ. ಅದಾದ ಬಳಿಕವಷ್ಟೇ ​ಐಪಿಎಲ್ 2021 ಟೂರ್ನಿ ಮುಂದುವರಿಕೆ. ಅದಾದ ಮೇಲೆ ಒಂದು ವೇಳೆ ನಡೆದರೆ, ಐಪಿಎಲ್ 2021 ಮುಗಿಯುತ್ತಿದ್ದಂತೆ T20 World Cup ಶುರುವಾಗಲಿದೆ. ಇದರಿಂದ ಆಟಗಾರರ ದೈಹಿಕ ಸಾಮರ್ಥ್ಯದ ಮೇಲೆ ಹೆಚ್ಚು ಪರಿಣಾಮ ಬೀರುವ ಸಾಧ್ಯತೆಯಿದೆ ಎಂದು ಕ್ರಿಕೆಟ್​ ಪಂಡಿತರು ಎಚ್ಚರಿಸಿದ್ದಾರೆ.

(English counties Warwickshire, Surrey and the MCC have offered to host IPL in September)

Published On - 1:16 pm, Fri, 7 May 21

ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ