IPL: ಮುಂದಿನ ಐಪಿಎಲ್ ಲಂಡನ್​ನಲ್ಲಿಯೇ ನಡೆಯಲಿ ಅನ್ನುತ್ತಿದ್ದಾರೆ ಲಂಡನ್ ಮೇಯರ್! ಯಾಕೆ ಗೊತ್ತಾ?

ಲಂಡನ್​ಗೆ ಭಾರತದಿಂದ ಕೇವಲ ಉದ್ಯಮಿಗಳು, ಬಾಲಿವುಡ್​ ಮಂದಿಯಷ್ಟೇ ಬಂದುಹೋಗಬೇಕು ಯಾಕೆ? ಭಾರತದ ಐಪಿಎಲ್​ ಸಹ ಇಲ್ಲಿ ಸ್ಥಾನ ಪಡೆಯಲಿದೆ. ಇದು ನಮ್ಮ ಮಹದಾಸೆಯಾಗಬೇಕು ಎಂದು ಆಶಿಸಿದ್ದಾರೆ ಮೇಯರ್​ ಸಾದಿಖ್. ದುಡ್ಡೇ ದೊಡ್ಡಪ್ಪ ಎನ್ನುವ ಜಗತ್ತಿನ ಅತಿ ದೊಡ್ಡ ಕುಬೇರರಾದ ಬಿಸಿಸಿಐ ಕ್ರೀಡಾಸಂಸ್ಥೆ ಮೇಯರ್​ ಸಾದಿಖ್ ಕೋರಿಕೆಗೆ ಹೇಗೆ ಸ್ಪಂದಿಸುತ್ತದೆ ಎಂಬ ಕುತೂಹಲ ಇದೀಗ ಗರಿಗೆದರಿದೆ.

IPL: ಮುಂದಿನ ಐಪಿಎಲ್ ಲಂಡನ್​ನಲ್ಲಿಯೇ ನಡೆಯಲಿ ಅನ್ನುತ್ತಿದ್ದಾರೆ ಲಂಡನ್ ಮೇಯರ್! ಯಾಕೆ ಗೊತ್ತಾ?
​ಐಪಿಎಲ್​ ಸೆಳೆಯುವ ನಿಟ್ಟಿನಲ್ಲಿ ಬೌಲಿಂಗ್ ಮಾಡುತ್ತಿರುವ ಲಂಡನ್​ ಹಾಲಿ ಮೇಯರ್ ಸಾದಿಖ್ ಖಾನ್
Follow us
ಸಾಧು ಶ್ರೀನಾಥ್​
|

Updated on: Apr 10, 2021 | 3:35 PM

ಇಂಡಿಯನ್​ ಪ್ರೀಮಿಯರ್​ ಲೀಗ್​ ಎಂಬ ಕ್ರಿಕೆಟ್​ ಮಾಯೆ ಅಪ್ಪಟ ಭಾರತೀಯದ್ದು. ಆದರೆ ಕ್ರಿಕೆಟ್ ತವರೂರಾದ ಇಂಗ್ಲೆಂಡ್​ನಲ್ಲಿಯೂ ಈ IPL matches ನಡೆಯಲಿ ಎಂದು ನಮ್ಮನ್ನು ಶತಮಾನ ಕಾಲ ಆಳಿದ ಬ್ರಿಟಿಷರು ಇದೀಗ ಬಯಸುತ್ತಿರುವುದು ಸೋಜಿಗವೇ ಸರಿ. ಕಳೆದ IPL ಟೂರ್ನಮೆಂಟ್ ದುಬೈನಲ್ಲಿ ನಡೆದ ಬಳಿಕ ಭಾರತದಿಂದ ಆಚೆಗೆ IPL ನಡೆದರೆ ತೊಂದರೆ ಏನೂ ಇಲ್ಲ ಎಂಬ ಭಾವನೆ ಮೂಡುತ್ತಿರುವಾಗ ಇಂಗ್ಲೆಂಡ್​ನಲ್ಲಿ IPL ಟೂರ್ನಮೆಂಟ್ ನಡೆಯಬಹುದಲ್ವಾ ಎಂಬ ಜಿಜ್ಞಾಸೆಯೂ ಮೂಡಿದೆ. 2009ರಲ್ಲಿ ದಕ್ಷಿಣ ಆಫ್ರಿಕಾದಲ್ಲಿಯೂ ಒಮ್ಮೆ ಐಪಿಎಲ್ ನಡೆದಿತ್ತು ಎಂಬುದು ಗಮನಾರ್ಹ. ಇದೆಲ್ಲದರ ಮಧ್ಯೆ ಅಲ್ಲಿ ಲಂಡನ್​ನಲ್ಲಿ ಮೇಯರ್​ ಸ್ಥಾನಕ್ಕೆ ಚುನಾವಣೆಗಳು ನಡೆಯುತ್ತಿವೆ. ಹಾಗಾಗಿ ಅಲ್ಲಿನ ಹಾಲಿ ಮೇಯರ್ ಸಾದಿಖ್ ಖಾನ್​ ಮತ್ತೊಮ್ಮೆ ಮೇಯರ್ ಸ್ಥಾನ ಬಯಸಿದ್ದಾರೆ.

ಅದಕ್ಕಾಗಿ ಥೇಟ್ ನಮ್ಮ ರಾಜಕಾರಣಿಗಳಂತೆ ಮತದಾರರನ್ನು ಇಂದ್ರ ಚಂದ್ರ ಎಂದು ಹೊಗಳುತ್ತಾ, ಇಂದ್ರ ಚಂದ್ರರನ್ನೇ ತಂದುಕೊಡುವ ಮಾತನ್ನಾಡುತ್ತಿದ್ದಾರೆ. ಅದರಲ್ಲೂ ಈ ಸಾದಿಖ್ ಖಾನ್​ ಸಾಹೇಬರು ಹೇಳಿಕೇಳಿ ಈ ಲಂಡನ್​ ಮಂದಿಗೆ ಕ್ರಿಕೆಟ್​ ಅಂದ್ರೆ ಪಂಚಪ್ರಾಣ ಎಂಬುದನ್ನು ಅರಿತಿದ್ದಾರೆ. ಅದಕ್ಕಾಗಿ ಭರ್ಜರಿ ಪ್ಲಾನ್ ಮಾಡಿ.. IPL ಟೂರ್ನಮೆಂಟ್ ಅನ್ನೇ ಹೈಜಾಕ್ ಮಾಡಿ, ಲಂಡನ್ನಿನಲ್ಲಿಯೇ ಭಾರತದ IPL ಆಯೋಜಿಸುವುದಾಗಿ ಆಶ್ವಾಸನೆ ನೀಡಿದ್ದಾರೆ.

ಕಿಂಗ್ಸ್​ಟನ್​ ಕ್ರಿಕೆಟ್​ ಕ್ಲಬ್​ ಮೈದಾನದಲ್ಲಿ ಚುನಾವಣೆ ಪ್ರಚಾರದ ವೇಳೆ ಸ್ವತಃ ಬ್ಯಾಟ್​ ಬೀಸಿದ ಮೇಯರ್ ಸಾದಿಖ್ ಸಾಹೇಬರು (London Mayor Sadiq Khan) ಅಲ್ಲಿನ ಸರ್ರೆ ತಂಡದ ಮ್ಯಾನೇಜ್ಮೆಂಟ್​ ಜೊತೆ ಮಾತಿಗಿಳಿದು IPL ಟೂರ್ನಿಯನ್ನು ನಮ್ಮಲ್ಲೇ ಆಡಿಸಿದರೆ ಹೇಗೆ? ಈ ಬಗ್ಗೆ ಬಿಸಿಸಿಐ ಜೊತೆ ಮಾತನಾಡಿ, ಕಾರ್ಯಗತಗೊಳಿಸಿ. ಇದಕ್ಕೆ ಮತ್ತೆ ಮೇಯರ್​ ಆಗಿ ನಾನೇ ನೆರವಿಗೆ ನಿಲ್ಲುವೆ ಎಂದು ಸೀದಾ ಸಿಕ್ಸರ್​ ಬಾರಿಸಿದ್ದಾರೆ.

ಕ್ರಿಕೆಟ್​ ಅಂದ್ರೆ ಖುದ್ದು ಎದ್ದುಬಿದ್ದು ಓಡುವ ಮೇಯರ್ ಸಾದಿಖ್ ಸಾಹೇಬರು ಭಾರತದ ಕ್ರಿಕೆಟ್​ ಆಟಗಾರರ ಬಗ್ಗೆ ವಿಶೇಷ ಆಸ್ಥೆ ಹೊಂದಿದ್ದಾರೆ. ಎಂ ಎಸ್​ ಧೋನಿ ವಿರಾಟ್​ ಕೊಹ್ಲಿ, ರೋಹಿತ್​ ಶರ್ಮಾ ಅಂತಹಾ ಆಟಗಾರರು ಕ್ರಿಕೆಟ್​ ಮೈದಾನದಲ್ಲಿ ಮೆರೆಯುವುದನ್ನು ನಮ್ಮ ಲಂಡನ್​ ಪ್ರಜೆಗಳೂ ಕಣ್ತುಂಬಿಕೊಳ್ಳಲಿ ಎಂದು ಬಯಸಿದ್ದಾರೆ. 2008ರಲ್ಲಿ ಆರಂಭಗೊಂಡ ಐಪಿಎಲ್ ಇದೀಗ 14ನೇ ಬಾರಿಗೆ ಟೂರ್ನಮೆಂಟ್ ಆಯೋಜಿಸಿದೆ. ಇದು ಇದುವರೆಗೂ ಕ್ರೀಡಾರಂಗದಲ್ಲಿ ಅಪಾರ ಯಶಸ್ಸು ಕಂಡ ಕ್ರೀಡೆಯಾಗಿದೆ. ಹೆಚ್ಚು ಜನಪ್ರಿಯವೂ ಆಗಿದೆ. ಹಾಗಾಗಿಯೇ ಲಂಡನ್ ಮೇಯರ್​ ಸಾದಿಖ್​ ಅವರ ಕಣ್ಣೂ ಇದರ ಮೇಲೆ ಬಿದ್ದಿದೆ.

ಇಲ್ಲಿಗೆ ಭಾರತದಿಂದ ಕೇವಲ ಉದ್ಯಮಿಗಳು, ಬಾಲಿವುಡ್​ ಮಂದಿಯಷ್ಟೇ ಬಂದುಹೋಗಬೇಕು ಯಾಕೆ? ಭಾರತದ ಐಪಿಎಲ್​ ಸಹ ಇಲ್ಲಿ ಸ್ಥಾನ ಪಡೆಯಲಿದೆ. ಇದು ನಮ್ಮ ಮಹದಾಸೆಯಾಗಬೇಕು ಎಂದು ಆಶಿಸಿದ್ದಾರೆ ಮೇಯರ್​ ಸಾದಿಖ್. ದುಡ್ಡೇ ದೊಡ್ಡಪ್ಪ ಎನ್ನುವ ಜಗತ್ತಿನ ಅತಿ ದೊಡ್ಡ ಕುಬೇರರಾದ ಬಿಸಿಸಿಐ ಕ್ರೀಡಾಸಂಸ್ಥೆ ಮೇಯರ್​ ಸಾದಿಖ್ ಕೋರಿಕೆಗೆ ಹೇಗೆ ಸ್ಪಂದಿಸುತ್ತದೆ ಎಂಬ ಕುತೂಹಲ ಇದೀಗ ಗರಿಗೆದರಿದೆ.

ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ