AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇಂಗ್ಲೆಂಡ್ ಪ್ರವಾಸ ಕೈಗೊಳ್ಳಲಿರುವ ಭಾರತೀಯ ಕ್ರಿಕೆಟಿಗರಿಗೆ ಕೊವಿಶೀಲ್ಡ್ ಲಸಿಕೆ ಪಡೆಯಲು ಸಲಹೆ; ಕಾರಣವೇನು?

ಬಿಸಿಸಿಐನ ಬಯೋ ಬಬಲ್ ವ್ಯವಸ್ಥೆಯಲ್ಲಿದ್ದ ಆಟಗಾರರು ಈಗ ಲಸಿಕೆ ಪಡೆದುಕೊಳ್ಳುವಂತೆ ಸೂಚಿಸಲಾಗಿದೆ ಎಂದು ತಿಳಿದುಬಂದಿದೆ. ಆಯಾ ಆಟಗಾರರು ಅವರ ರಾಜ್ಯದಲ್ಲಿ ಲಸಿಕೆಯ ಮೊದಲ ಡೋಸ್ ಪಡೆಯುವಂತೆ ಹೇಳಲಾಗಿದೆ.

ಇಂಗ್ಲೆಂಡ್ ಪ್ರವಾಸ ಕೈಗೊಳ್ಳಲಿರುವ ಭಾರತೀಯ ಕ್ರಿಕೆಟಿಗರಿಗೆ ಕೊವಿಶೀಲ್ಡ್ ಲಸಿಕೆ ಪಡೆಯಲು ಸಲಹೆ; ಕಾರಣವೇನು?
ಕೊವಿಶೀಲ್ಡ್ ಲಸಿಕೆ- ವಿರಾಟ್ ಕೊಹ್ಲಿ (ಸಾಂದರ್ಭಿಕ ಚಿತ್ರ)
TV9 Web
| Updated By: ganapathi bhat|

Updated on:Aug 23, 2021 | 12:48 PM

Share

ಬಯೋ ಬಬಲ್​ನಲ್ಲಿ ಇದ್ದರೂ ಕೆಲ ಆಟಗಾರರು ಹಾಗೂ ಸಿಬ್ಬಂದಿಗಳಿಗೆ ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಐಪಿಎಲ್ 2021 ಸರಣಿಯನ್ನು ಅರ್ಧಕ್ಕೆ ಮೊಟಕುಗೊಳಿಸಬೇಕಾಯಿತು. ಕಳೆದ ಮಂಗಳವಾರ ಐಪಿಎಲ್ ಸರಣಿಯನ್ನು ಸ್ಥಗಿತಗೊಳಿಸುವ ಬಗ್ಗೆ ತೀರ್ಮಾನ ಕೈಗೊಳ್ಳಲಾಯಿತು. ಇದೀಗ ಭಾರತೀಯ ಆಟಗಾರರಿಗೆ ಕುಟುಂಬದೊಂದಿಗೆ ಸಮಯ ಕಳೆಯಲು ಅವಕಾಶ ಲಭಿಸಿದೆ. ಜೂನ್ ಅರ್ಧ ತಿಂಗಳ ಬಳಿಕ ಇಂಗ್ಲೆಂಡ್​ನಲ್ಲಿ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ನಡೆಯಲಿದೆ. ಈ ಅವಧಿಗೂ ಮುನ್ನ ಭಾರತೀಯ ಕ್ರಿಕೆಟರ್​ಗಳಿಗೆ ತಮ್ಮ ಸಮಯ ಕಳೆಯಲು ಅವಕಾಶ ಸಿಕ್ಕಿದೆ.

ಈ ಅವಧಿಯಲ್ಲಿ ಚರ್ಚೆಯಾಗುತ್ತಿರುವ ಮತ್ತೊಂದು ಮುಖ್ಯ ವಿಚಾರ ಎಂದರೆ, ಆಟಗಾರರ ಲಸಿಕೆ ನೀಡಿಕೆ ಪ್ರಕ್ರಿಯೆ. ಐಪಿಎಲ್ ಅರ್ಧಕ್ಕೆ ಸ್ಥಗಿತಗೊಳಿಸಿ, ಮುಂದೆ ಟೆಸ್ಟ್ ಚಾಂಪಿಯನ್​ಶಿಪ್ ಆಡಲಿರುವ ಆಟಗಾರರ ವ್ಯಾಕ್ಸಿನೇಷನ್ ಪ್ರಕ್ರಿಯೆ. ಭಾರತೀಯ ಕ್ರಿಕೆಟ್ ಆಟಗಾರರ ಪೈಕಿ ಬಹುತೇಕ ಎಲ್ಲರೂ 18ರಿಂದ 45 ವರ್ಷ ವಯಸ್ಸಿನ ಒಳಗಿನವರಾಗಿದ್ದಾರೆ. ಭಾರತ ಸರ್ಕಾರ ಕೂಡ ಇತ್ತೀಚೆಗಷ್ಟೇ 18 ವರ್ಷ ಮೇಲ್ಪಟ್ಟ ಹಾಗೂ 45 ವರ್ಷ ವಯಸ್ಸಿನ ಜನರಿಗೂ ಲಸಿಕೆ ನೀಡುವ ಬಗ್ಗೆ ಅನುಮತಿ ನೀಡಿದೆ. ಆಟಗಾರರು ಐಪಿಎಲ್ ನಿಂತ ಕಾರಣ ಮುಂದಿನ ಕ್ರಿಕೆಟ್ ಕೂಟ ನಡೆಯುವವರೆಗೂ ವಿರಾಮದಲ್ಲಿ ಇರುವುದರಿಂದ, ಈ ವೇಳೆ ಲಸಿಕೆ ಪಡೆದುಕೊಳ್ಳುವ ಸಾಧ್ಯತೆ ಇದೆ.

ಬಿಸಿಸಿಐನ ಬಯೋ ಬಬಲ್ ವ್ಯವಸ್ಥೆಯಲ್ಲಿದ್ದ ಆಟಗಾರರು ಈಗ ಲಸಿಕೆ ಪಡೆದುಕೊಳ್ಳುವಂತೆ ಸೂಚಿಸಲಾಗಿದೆ ಎಂದು ತಿಳಿದುಬಂದಿದೆ. ಆಯಾ ಆಟಗಾರರು ಅವರ ರಾಜ್ಯದಲ್ಲಿ ಲಸಿಕೆಯ ಮೊದಲ ಡೋಸ್ ಪಡೆಯುವಂತೆ ಹೇಳಲಾಗಿದೆ. ಅದರಲ್ಲೂ ಮುಖ್ಯ ಅಂಶ ಎಂದರೆ, ಆಟಗಾರರಿಗೆ ಕೊವಿಶೀಲ್ಡ್ ಲಸಿಕೆ ಪಡೆದುಕೊಳ್ಳುವಂತೆ ಸೂಚನೆ ನೀಡಲಾಗಿದೆ. ಅದಕ್ಕೆ ಕಾರಣವೇನು ಅಂತೀರಾ, ಇಲ್ಲಿದೆ ಮಾಹಿತಿ.

ಭಾರತೀಯ ಕ್ರಿಕೆಟ್ ಆಟಗಾರರು ಶೀಘ್ರದಲ್ಲೇ ಇಂಗ್ಲೆಂಡ್​ಗೆ ಪ್ರಯಾಣ ಬೆಳೆಸಲಿದ್ದಾರೆ. ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಹಾಗೂ ಟೆಸ್ಟ್ ಸರಣಿಗಾಗಿ ಅವರು ಇಂಗ್ಲೆಂಡ್​ ಪ್ರವಾಸ ಬೆಳೆಸಲಿದ್ದಾರೆ. ಹಾಗಾಗಿ, ಈಗ ಲಭಿಸಿರುವ ಸಣ್ಣ ಅವಧಿಯಲ್ಲಿ ಅವರು ಎರಡನೇ ಡೋಸ್ ಲಸಿಕೆಯನ್ನೂ ಪಡೆದುಕೊಳ್ಳಲಾಗುವುದಿಲ್ಲ. ಮೊದಲ ಡೋಸ್ ಪಡೆದ ನಂತರ ನಿಗದಿತ ಸಮಯ ಬೇಕಿರುವುದರಿಂದ, ಇಂಗ್ಲೆಂಡ್​ಗೆ ಹೋಗುವ ಮುನ್ನ ಎರಡನೇ ಡೋಸ್ ಲಸಿಕೆ ಪಡೆಯವುದು ಕಷ್ಟ. ಕೊವಿಶೀಲ್ಡ್ ವ್ಯಾಕ್ಸೀನ್ ಆಕ್ಸ್​​ಫರ್ಡ್- ಆಸ್ಟ್ರಾಜೆನೆಕಾ (ಯುನೈಟೆಡ್ ಕಿಂಗ್ಡಮ್ ಉತ್ಪನ್ನ) ಸಂಸ್ಥಯೆ ಲಸಿಕೆ ಆಗಿರುವುದರಿಂದ ಇಂಗ್ಲೆಂಡ್ ಸರಣಿಯ ಸಂದರ್ಭದಲ್ಲಿ ಆಟಗಾರರು ತಮ್ಮ ಎರಡನೇ ಡೋಸ್ ಲಸಿಕೆ ಪಡೆಯಬಹುದಾಗಿದೆ.

ಮೊದಲ ಡೋಸ್ ಲಸಿಕೆಯನ್ನು ಭಾರತದಲ್ಲಿ ಈ ಅವಧಿಯಲ್ಲಿ ಪಡೆದುಕೊಂಡರೆ, ನಂತರ ಎರಡನೇ ಡೋಸ್ ಲಸಿಕೆಯನ್ನು ಇಂಗ್ಲೆಂಡ್​ನಲ್ಲಿ ಪಡೆಯಬಹುದು. ಹೀಗೆ ಆಗಲು ಅವಕಾಶ ಇರುವುದು ಕೊವಿಶೀಲ್ಡ್ ಲಸಿಕೆಗೆ ಮಾತ್ರ. ಲಸಿಕೆಯ ಒಂದನೇ ಮತ್ತು ಎರಡನೇ ಡೋಸ್ ಒಂದೇ ಲಸಿಕೆಯದ್ದು ಆಗಿರಬೇಕಾಗಿದೆ. ಹಾಗಾಗಿ ಕೊವಿಶೀಲ್ಡ್ ಪಡೆದುಕೊಳ್ಳಲು ಸೂಚಿಸಲಾಗಿದೆ. ಈ ಬಗ್ಗೆ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.

ನಾಲ್ಕು ತಿಂಗಳ ಕಾಲ ಕ್ರಿಕೆಟ್ ವಿದೇಶ ಪ್ರವಾಸದಲ್ಲಿ ಇರಬೇಕಾದ ಕಾರಣ, ಈಗ ಮೊದಲ ಡೋಸ್ ಲಸಿಕೆ ಪಡೆಯಲು ಹಾಗೂ ನಂತರ ಪ್ರವಾಸದಲ್ಲಿ ಎರಡನೇ ಡೋಸ್ ಲಸಿಕೆ ಪಡೆಯಲು ಸಲಹೆ ನೀಡಲಾಗಿದೆ. ಈ ಕ್ರಮ ಅನುಸರಿಸಲು ಕೊವಿಶೀಲ್ಡ್ ಲಸಿಕೆ ಸರಿಯಾದ ಆಯ್ಕೆಯಾಗಿದೆ.

ಇದನ್ನೂ ಓದಿ: IPL 2021: ಐಪಿಎಲ್​ನಲ್ಲಿ ದುಡಿದ ಹಣದಿಂದ ಕೊರೊನಾ ಸೋಂಕಿತ ನನ್ನ ತಂದೆಗೆ ಚಿಕಿತ್ಸೆ ಕೊಡಿಸುತ್ತಿದ್ದೇನೆ: ಚೇತನ್ ಸಕಾರಿಯಾ

ಐಪಿಎಲ್ 2021 ಬಾಕಿ ಉಳಿದ ಸಂಭ್ರಮ ಇನ್ನು ಕ್ರಿಕೆಟ್​ ಕಾಶಿ ಇಂಗ್ಲೆಂಡ್​​ನಲ್ಲಿ!?

(Only Covishield Vaccine shots for Indian Cricketers bound for UK Tour here are details)

Published On - 3:20 pm, Fri, 7 May 21

ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ