ಭಾರತ ಟಿ20 ವಿಶ್ವಕಪ್​ ಗೆಲ್ಲದಿದ್ದರೆ, ರವಿ ಶಾಸ್ತ್ರಿ ಹೆಡ್​ ಕೋಚ್ ಸ್ಥಾನದಲ್ಲಿ ಮುಂದುವರಿಯುವುದು ಕಷ್ಟ: ರಿತೀಂದರ್ ಸಿಂಗ್ ಸೋಧಿ

ಶಾಸ್ತ್ರಿ ಅವರ ಅವಧಿಯಲ್ಲಿ ಟೀಮ್ ಇಂಡಿಯಾ ಕ್ರಿಕೆಟ್ ವಿಶ್ವದ ಉತ್ತುಂಗ ತಲುಪಿದ್ದು ಸುಳ್ಳಲ್ಲ. ಅಸ್ಟ್ರೇಲಿಯಾವನ್ನು ಅದರ ಹಿತ್ತಲಲ್ಲೇ ಸೋಲಿಸಿವುದು ಸಾಮಾನ್ಯ ಸಾಧನೆಯೇನಲ್ಲ. ಹಾಗೆಯೇ, ಭಾರತ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್ ಸಹ ತಲುಪಿತು.

ಭಾರತ ಟಿ20 ವಿಶ್ವಕಪ್​ ಗೆಲ್ಲದಿದ್ದರೆ, ರವಿ ಶಾಸ್ತ್ರಿ ಹೆಡ್​ ಕೋಚ್ ಸ್ಥಾನದಲ್ಲಿ ಮುಂದುವರಿಯುವುದು ಕಷ್ಟ: ರಿತೀಂದರ್ ಸಿಂಗ್ ಸೋಧಿ
ರವಿ ಶಾಸ್ತ್ರಿ
Follow us
TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jul 12, 2021 | 7:39 PM

ಟೀಮ್ ಇಂಡಿಯಾದ ಹೆಡ್​ ಕೋಚ್ ರವಿ ಶಾಸ್ತ್ರಿ ಅಭಿಮಾನಿಗಳು ಅವರನ್ನು ಎಷ್ಟೇ ಸಮರ್ಥಿಸಿಕೊಂಡರೂ ಭಾರತೀಯ ಕ್ರಿಕೆಟ್ ನಿಂಯತ್ರಣ ಮಂಡಳಿ ಅವರನ್ನು ಮತ್ತೊಂದು ಅವಧಿಗೆ ವಿಸ್ತರಿಸುವುದು ದುಸ್ತರ ಎನಿಸುತ್ತಿದೆ. ಭಾರತವೇನಾದರೂ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಗೆದ್ದಿದ್ದರೆ ಅವರಿಗೆ ವಿಸ್ತರಣೆ ಸಿಗುವುದು ನಿಶ್ಚಿತವಾಗಿತ್ತು. ಮುಂಬರುವ ಟಿ20 ವಿಶ್ವಕಪ್ ನಂತರ ಶಾಸ್ತ್ರಿಯ ಟೆನ್ಯೂರ್ ಕೊನೆಗೊಳ್ಳಲಿದೆ. ಈಗ ಶ್ರೀಲಂಕಾ ಪ್ರವಾಸದಲ್ಲಿರುವ ಭಾರತದ ಮತ್ತೊಂದು ಟೀಮಿನ ಕೋಚ್​ ಆಗಿರುವ ಮಾಜಿ ಶ್ರೇಷ್ಠ ಆಟಗಾರ ರಾಹಲ್ ದ್ರಾವಿಡ್​ ಅವರನ್ನು ಸೀನಿಯರ್ ಟೀಮಿನ್ ಕೋಚ್​ ಆಗಿ ನೇಮಕ ಮಾಡಬೇಕು ಎನ್ನುವ ಕೂಗು ಜಾಸ್ತಿಯಾಗುತ್ತಿರುವ ಹಿನ್ನೆಲೆಯಲ್ಲಿ ವಿಶ್ವಕಪ್​ ನಂತರ ರವಿ ಶಾಸ್ತ್ರಿಗೆ ಗುಡ್​ ಬೈ ಹೇಳುವ ಗುಮಾನಿ ದಟ್ಟವಾಗುತ್ತಿದೆ.

ಶಾಸ್ತ್ರಿ ಅವರ ಅವಧಿಯಲ್ಲಿ ಟೀಮ್ ಇಂಡಿಯಾ ಕ್ರಿಕೆಟ್ ವಿಶ್ವದ ಉತ್ತುಂಗ ತಲುಪಿದ್ದು ಸುಳ್ಳಲ್ಲ. ಅಸ್ಟ್ರೇಲಿಯಾವನ್ನು ಅದರ ಹಿತ್ತಲಲ್ಲೇ ಸೋಲಿಸಿವುದು ಸಾಮಾನ್ಯ ಸಾಧನೆಯೇನಲ್ಲ. ಹಾಗೆಯೇ, ಭಾರತ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್ ಸಹ ತಲುಪಿತು. ಆದರೆ ಗಮನಿಸಬೇಕಾದ ಅಂಶವೆಂದರೆ, ಇದೇ ಅವಧಿಯಲ್ಲಿ ಭಾರತ ಐಸಿಸಿ ಪ್ರಮುಖ ಟೂರ್ನಿಗಳನ್ನು ಗೆಲ್ಲಲು ವಿಫಲವಾಯಿತು. ಶಾಸ್ತ್ರಿ ಮತ್ತು ಟೀಮ್ ಇಂಡಿಯಾ ನಾಯಕ ವಿರಾಟ್​ ಕೊಹ್ಲಿ ನಡುವೆ ಉತ್ತಮ ಹೊಂದಾಣಿಕೆ ಇರುವುದರಿಂದ ಕೊಹ್ಲಿ ಮತ್ತೊಂದು ಅವಧಿ ವಿಸ್ತರಣೆಗೆ ಆಗ್ರಹಿಸಿದರೆ ಆಶ್ಚರ್ಯವೇನೂ ಇಲ್ಲ.

ಭಾರತದ ಮಾಜಿ ಆಲ್​ರೌಂಡರ್, ರಿತೀಂದರ್ ಸಿಂಗ್ ಸೋಧಿ ಅವರು, ಭಾರತವೇನಾದರೂ, ಯುಎಈಯಲ್ಲಿ ನಡೆಯಲಿರುವ ಟಿ20 ವಿಶ್ವಕಪ್​ ಗೆದ್ದರೆ, ಶಾಸ್ತ್ರಿ, ತಮ್ಮ ಸ್ಥಾನದಲ್ಲಿ ಮುಂದುವರಿಯಲಿದ್ದಾರೆ ಎಂದು ಹೇಳಿದ್ದಾರೆ.

‘ಟೀಮಿನ ಹೆಡ್​ ಕೋಚ್ ಆಗಿ ರವಿ ಭಾಯ್ ಅವರ ಸಾಧನೆ ಅಧ್ಬುತವಾಗಿದೆ. ಅವರು ಒಂದು ಐಸಿಸಿ ಪ್ ಗೆದ್ದುಕೊಳಿ ಎಂದು ಭಾರತೋಯರೆಲ್ಲ ಕಾಯುತ್ತಿರಿವುದು ನಿಜ. ಅದು ಸಾಧ್ಯವಾದರೆ ಅವರ ಗುರಿ ಈಡೇರಿದಂತಾಗುತ್ತದೆ. ಆದರೆ, ನಾವು ಯೋಚಿಸಬೇಕಿರುವ ಸಂಗತಿಯೆಂದರೆ, ರಾಹುಲ್ ಭಾಯ್​ ಅವರನ್ನು ಭಾರತದ ಮತ್ತೊಂದು ಟೀಮಿನ ಕೋಚ್ ನೇಮಕ ಮಾಡಿ ಶ್ರೀಲಂಕಾ ಕಳಿಸಲಾಗಿದೆ. ಹಾಗೆಯೇ ಇತ್ತೀಚಿಗೆ ನಡೆದ ಇನ್ನೊಂದು ಬೆಳವಣಿಗೆಯನ್ನು ನಾವು ಗಮನಿಸಬೇಕು. ಇಂಗ್ಲೆಂಡ್​ ಪ್ರವಾಸದಲ್ಲ್ಲಿರುವ ಟೀಮ್ ಇಂಡಿಯಾದ ಆರಂಭ ಆಟಗಾರ ಶುಭ್ಮನ್ ಗಿಲ್ ಗಾಯಗೊಂಡಿರುವುದರಿಂದ ಅವರಿಗೆ ಬದಲೀ ಆಟಗಾರನಾಗಿ ಮತ್ತೊಬ್ಬ ಓಪನರ್​ನನ್ನು ಕಳಿಸಬೇಕೆಂದು ಟೀಮ್ ಮ್ಯಾನೇಜ್ಮೆಂಟ್​ ಮಾಡಿರುವ ಮನವಿಯನ್ನು ಬಿಸಿಸಿಐ ಸಾರಾ ಸಗಟು ತಿರಸ್ಕರಿಸಿದೆ. ಇದನ್ನು ನಾವು ಆರ್ಥಮಾಡಿಕೊಳ್ಳಬೇಕಿದೆ. ನನ್ನನ್ನು ಕೇಳುವುದಾದರೆ, ರವಿ ಭಾಯ್​ ಮೇಲೆ ಖಂಡಿತವಾಗಿಯೂ ಒತ್ತಡವಿದೆ,’ ಎಂದು ಸೋಧಿ ಹೇಳಿದ್ದಾರೆ

ಪ್ರಸ್ತುತವಾಗಿ ಶಾಸ್ತ್ರಿ ಇಂಗ್ಲೆಂಡ್​ ಪ್ರವಾಸದಲ್ಲಿರುವ ಟೀಮ್ ಇಂಡಿಯಾದೊಂದಿಗಿದ್ದು ಎರಡು ರಾಷ್ಟ್ರಗಳ ನಡುವೆ 5-ಪಂದ್ಯಗಳ ಟೆಸ್ಟ್ ಸರಣಿ ಆಗಸ್ಟ್ 4ರಿಂದ ನಾರ್ಥಾಂಪನ್​ನಲ್ಲಿ ಆರಂಭವಾಗಲಿದೆ. ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್ ಫೈನಲ್​ ನಂತರ ಮೂರು ವಾರಗಳ ರಜೆಯ ಹಿನ್ನೆಲೆಯಲ್ಲಿ ಚದುರಿರುವ ಆಟಗಾರರು ಜುಲೈ 14 ರಂದು ಜೊತೆಗೂಡಿ ತರಬೇತಿ ಆರಂಭಿಸಲಿದ್ದಾರೆ.

ಇದನ್ನೂ ಓದಿ: Ravi Shastri Age: ಗೂಗಲ್ ಪ್ರಕಾರ ಟೀಮ್ ಇಂಡಿಯಾ ಕೋಚ್ ರವಿ ಶಾಸ್ತ್ರೀಯ ವಯಸ್ಸು 120

ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್