ICC T20 World Cup 2021: ಟಿ-20 ವಿಶ್ವಕಪ್​ನಲ್ಲಿ ಭಾರತಕ್ಕೆ ಬದ್ಧವೈರಿ ಪಾಕಿಸ್ತಾನ ಎದುರಾಳಿ! ಎರಡು ಗುಂಪಿನ ತಂಡಗಳ ಪಟ್ಟಿ ಘೋಷಿಸಿದ ಐಸಿಸಿ

ICC T20 World Cup 2021: ಈ ಪಂದ್ಯಾವಳಿಗಾಗಿ ಐಸಿಸಿ ಭಾರತ ಮತ್ತು ಪಾಕಿಸ್ತಾನವನ್ನು ಒಂದೇ ಗುಂಪಿನಲ್ಲಿ ಇರಿಸಿದೆ. ಸೂಪರ್ -12ರ ಹಂತಕ್ಕಾಗಿ, ಪಂದ್ಯಾವಳಿಯಲ್ಲಿ ಎರಡು ಗುಂಪುಗಳನ್ನು ರಚಿಸಲಾಗಿದೆ.

ICC T20 World Cup 2021: ಟಿ-20 ವಿಶ್ವಕಪ್​ನಲ್ಲಿ ಭಾರತಕ್ಕೆ ಬದ್ಧವೈರಿ ಪಾಕಿಸ್ತಾನ ಎದುರಾಳಿ! ಎರಡು ಗುಂಪಿನ ತಂಡಗಳ ಪಟ್ಟಿ ಘೋಷಿಸಿದ ಐಸಿಸಿ
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: ಪೃಥ್ವಿಶಂಕರ

Updated on:Jul 16, 2021 | 4:29 PM

ಈ ವರ್ಷ ನಡೆಯಲ್ಲಿರುವ ಐಸಿಸಿ ಟಿ 20 ವಿಶ್ವಕಪ್ 2021 ರ ಬಗ್ಗೆ ಮುಖ್ಯವಾದ ಸುದ್ದಿ ಹೊರಬಿದ್ದಿದೆ. ಯುನೈಟೆಡ್ ಅರಬ್ ಎಮಿರೇಟ್ಸ್ನಲ್ಲಿ ನಡೆಯಲಿರುವ ವಿಶ್ವಕಪ್ಗಾಗಿ ಎಲ್ಲಾ ತಂಡಗಳ ಗುಂಪನ್ನು ಐಸಿಸಿ ಘೋಷಿಸಿದೆ. ಇದರೊಂದಿಗೆ ಭಾರತ, ಪಾಕಿಸ್ತಾನ ಸೇರಿದಂತೆ ವಿಶ್ವದಾದ್ಯಂತ ಕ್ರಿಕೆಟ್ ಅಭಿಮಾನಿಗಳ ದೊಡ್ಡ ಆಸೆ ಈಡೇರಿದೆ. ಈ ಪಂದ್ಯಾವಳಿಗಾಗಿ ಐಸಿಸಿ ಭಾರತ ಮತ್ತು ಪಾಕಿಸ್ತಾನವನ್ನು ಒಂದೇ ಗುಂಪಿನಲ್ಲಿ ಇರಿಸಿದೆ. ಸೂಪರ್ -12ರ ಹಂತಕ್ಕಾಗಿ, ಪಂದ್ಯಾವಳಿಯಲ್ಲಿ ಎರಡು ಗುಂಪುಗಳನ್ನು ರಚಿಸಲಾಗಿದೆ. ಇದರಲ್ಲಿ ಭಾರತ ಮತ್ತು ಪಾಕಿಸ್ತಾನ 2 ನೇ ಗುಂಪಿನಲ್ಲಿವೆ. ಈ ಎರಡನ್ನು ಹೊರತುಪಡಿಸಿ, ನ್ಯೂಜಿಲೆಂಡ್ ಮತ್ತು ಅಫ್ಘಾನಿಸ್ತಾನ ಕೂಡ ಈ ಗುಂಪಿನಲ್ಲಿ ಇರಲಿವೆ. ಅದೇ ಸಮಯದಲ್ಲಿ, ಪ್ರಸ್ತುತ ಚಾಂಪಿಯನ್ ವೆಸ್ಟ್ ಇಂಡೀಸ್ ಗುಂಪು 1ನೇ ಗುಂಪಿನಲ್ಲಿರಲ್ಲಿದೆ. ಜೊತೆಗೆ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್‌ನಂತಹ ತಂಡಗಳು ಸೇರಿವೆ.

ಜುಲೈ 16 ಶುಕ್ರವಾರ ಯುನೈಟೆಡ್ ಅರಬ್ ಎಮಿರೇಟ್ಸ್ ಮತ್ತು ಒಮಾನ್‌ನಲ್ಲಿ ನಡೆಯಲಿರುವ ಪುರುಷರ ಟಿ 20 ವಿಶ್ವಕಪ್ ಪಂದ್ಯಾವಳಿಯ ಸೂಪರ್ -12 ಹಂತದ ಅರ್ಹತಾ ಪಂದ್ಯಗಳನ್ನು ಮತ್ತು ಗುಂಪುಗಳನ್ನು ಐಸಿಸಿ ಘೋಷಿಸಿತು. ಅರ್ಹತಾ ಹಂತದಲ್ಲಿ, 8 ತಂಡಗಳನ್ನು 2 ಗುಂಪುಗಳಾಗಿ ವಿಂಗಡಿಸಲಾಗಿದ್ದು, ಪ್ರಸ್ತುತ ಸೂಪರ್ -12 ರ ಎರಡು ಗುಂಪುಗಳಲ್ಲಿ 8 ತಂಡಗಳ ಹೆಸರನ್ನು ನಿಗದಿಪಡಿಸಲಾಗಿದೆ. ಕ್ವಾಲಿಫೈಯರ್ ಹಂತದಲ್ಲಿ, ಎರಡೂ ಗುಂಪುಗಳ 2-2 ತಂಡಗಳು ಸೂಪರ್ -12 ರ ಹಂತಕ್ಕೆ ತಲುಪುತ್ತವೆ. ಅದರ ನಂತರ ವಿಶ್ವಕಪ್ ಸ್ಪರ್ಧೆ ಪ್ರಾರಂಭವಾಗುತ್ತದೆ.

ಉಭಯ ತಂಡಗಳು ಐದು ಬಾರಿ ಪರಸ್ಪರ ಸೆಣಸಾಡಿವೆ ಪಂದ್ಯಾವಳಿಯಲ್ಲಿ ಪಂದ್ಯಗಳ ವೇಳಾಪಟ್ಟಿ ಇನ್ನೂ ಬಿಡುಗಡೆಯಾಗಿಲ್ಲವಾದರೂ, ಗುಂಪುಗಳ ಘೋಷಣೆಯೊಂದಿಗೆ, ಭಾರತ ಮತ್ತು ಪಾಕಿಸ್ತಾನದ ಅಭಿಮಾನಿಗಳಿಗೆ ಅತಿದೊಡ್ಡ ಪಂದ್ಯದ ಕಾಯುವಿಕೆ ಈಗಾಗಲೇ ಪ್ರಾರಂಭವಾಗಿದೆ. 2007 ರಲ್ಲಿ ನಡೆದ ಮೊದಲ ಟಿ 20 ವಿಶ್ವಕಪ್ ನಂತರ ಉಭಯ ತಂಡಗಳು ಐದು ಬಾರಿ ಪರಸ್ಪರ ಸೆಣಸಾಡಿವೆ. ಗುಂಪು ಹಂತದಲ್ಲಿ ನಾಲ್ಕು ಬಾರಿ ಮತ್ತು ಫೈನಲ್‌ನಲ್ಲಿ ಒಂದು ಬಾರಿ ಎದುರುಬದುರಾಗಿದ್ದವು. ಪ್ರತಿ ಬಾರಿಯೂ ಭಾರತ ತಂಡ ಗೆದ್ದಿತು. ಈ ಗುಂಪಿನಲ್ಲಿ ಭಾರತ ಮತ್ತು ಪಾಕಿಸ್ತಾನವನ್ನು ಹೊರತುಪಡಿಸಿ, ನ್ಯೂಜಿಲೆಂಡ್ ಮತ್ತು ಅಫ್ಘಾನಿಸ್ತಾನಗಳಿವೆ. ಇವುಗಳಲ್ಲದೆ, ಗ್ರೂಪ್-ಎ ರನ್ನರ್ಸ್-ಅಪ್ ಮತ್ತು ಗ್ರೂಪ್-ಬಿ ವಿಜೇತ ತಂಡಗಳನ್ನು ಎರಡು ಅರ್ಹತಾ ತಂಡಗಳಾಗಿ ಸೇರಿಸಲಾಗುವುದು.

ಉಳಿದ ಗುಂಪುಗಳ ರಚನೆ ಹೀಗಿದೆ ಅದೇ ಸಮಯದಲ್ಲಿ, ಗ್ರೂಪ್ -1 ರಲ್ಲಿ, ಪ್ರಸ್ತುತ ವಿಶ್ವ ಚಾಂಪಿಯನ್ ವೆಸ್ಟ್ ಇಂಡೀಸ್, ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ ಮತ್ತು ಏಕದಿನ ವಿಶ್ವ ಚಾಂಪಿಯನ್ ತಂಡ ಇಂಗ್ಲೆಂಡ್ ಅನ್ನು ಸೇರಿಸಲಾಗಿದೆ. ಗ್ರೂಪ್ ಎ ವಿಜೇತರು ಮತ್ತು ಗ್ರೂಪ್ ಬಿ ಯ ರನ್ನರ್ ಅಪ್ ತಂಡಗಳು ಎರಡು ಅರ್ಹತಾ ತಂಡಗಳಾಗಿ ಸ್ಥಾನ ಪಡೆಯುತ್ತವೆ. ಸೂಪರ್ -12 ಪಂದ್ಯಗಳಿಗೆ ಮೊದಲು ಅಕ್ಟೋಬರ್ 17 ರಿಂದ ಅರ್ಹತಾ ಪಂದ್ಯಗಳೊಂದಿಗೆ ಪಂದ್ಯಾವಳಿ ಪ್ರಾರಂಭವಾಗಲಿದೆ. ಅರ್ಹತಾ ಪಂದ್ಯಗಳಿಗಾಗಿ ಎರಡು ಗುಂಪುಗಳನ್ನು ರಚಿಸಲಾಗಿದೆ. ಇದರ ಗುಂಪು ಎ ಮಾಜಿ ಚಾಂಪಿಯನ್ ಶ್ರೀಲಂಕಾ, ಐರ್ಲೆಂಡ್, ನೆದರ್ಲ್ಯಾಂಡ್ಸ್ ಮತ್ತು ನಮೀಬಿಯಾದ ತಂಡಗಳನ್ನು ಒಳಗೊಂಡಿದೆ. ಆದರೆ ಬಾಂಗ್ಲಾದೇಶ, ಸ್ಕಾಟ್ಲೆಂಡ್, ಪಪುವಾ ನ್ಯೂಗಿನಿಯಾ ಮತ್ತು ಒಮಾನ್ ಬಿ ಗುಂಪಿನಲ್ಲಿವೆ.

Published On - 4:05 pm, Fri, 16 July 21