ವಿರಾಟ್ ಕೊಹ್ಲಿ- ಅನುಷ್ಕಾ ಶರ್ಮಾ ದಂಪತಿಗಳ ಅಂಗರಕ್ಷನ ವಾರ್ಷಿಕ ಆದಾಯ ಅದೆಷ್ಟು ಕೋಟಿ ಗೊತ್ತಾ?
ಕೊಹ್ಲಿ ಅನುಷ್ಕಾ ಜೋಡಿ ಅಂಗರಕ್ಷಕ ಸೋನು ವಾರ್ಷಿಕ ಸಂಬಳ ಬರೋಬ್ಬರಿ ₹1.2 ಕೋಟಿ. 1,200ಕೋಟಿಗೂ ಅಧಿಕ ಆಸ್ತಿ ಪಾಸ್ತಿ ಹೊಂದಿರುವ ವಿರುಷ್ಕಾ ಜೋಡಿಗೆ, ಇದೇನು ದೊಡ್ಡ ಮೊತ್ತವಲ್ಲ ಬಿಡಿ.
ಸ್ಟಾರ್ ಸೆಲೆಬ್ರಿಟಿಗಳನ್ನ ರಕ್ಷಣೆ ಮಾಡುವ ಬಾಡಿಗಾರ್ಡ್ಗಳಿಗೆ ಎಷ್ಟು ಸಂಬಳ ಇರಬಹುದು ಅಂದ್ರೆ, ಲಕ್ಷಗಟ್ಟಲೇ ಅನ್ನೋ ಉತ್ತರ ಬರುತ್ತೆ. ಆದ್ರೀಗ ಭಾರತದ ಸ್ಟಾರ್ ಸೆಲೆಬ್ರಿಟಿ ದಂಪತಿಯ ಅಂಗರಕ್ಷನ ಸಂಬಳ ಎಷ್ಟಿದೆ ಅನ್ನೋದು ಗೊತ್ತಾದ್ರೆ, ನಿವೋಮ್ಮೆ ಗಾಬರಿ ಬೀಳದೇ ಇರೋದಿಲ್ಲ. ಸದ್ಯ ಭಾರತದಲ್ಲಿ ದಿ ಮೋಸ್ಟ್ ಸೆಲೆಬ್ರಿಟಿ ಜೋಡಿ ಅಂದ್ರೆ, ಅದು ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ. ಟೀಮ್ ಇಂಡಿಯಾ ನಾಯಕನಾಗಿ ವಿರಾಟ್ ಕೊಹ್ಲಿ ಕೋಟಿ ಕೋಟಿ ಸಂಪಾದಿಸಿದ್ರೆ, ಬಾಲಿವುಡ್ನಲ್ಲಿ ನಟಿಸೋ ಮೂಲಕ ಅನುಷ್ಕಾ ಶರ್ಮಾ ಕೂಡ ಕೋಟಿ ಕೋಟಿ ಆದಾಯ ಗಳಿಸ್ತಾರೆ.
ವಿರಾಟ್ ಮತ್ತು ಅನುಷ್ಕಾರ ಒಟ್ಟು ಆಧಾಯ ₹1,200ಕೋಟಿಗೂ ಅಧಿಕ ಅಂತ ಹೇಳಲಾಗುತ್ತೆ. 2020ರಲ್ಲೇ ಇಷ್ಟಿದ್ದ ಇವರಿಬ್ಬರ ಒಟ್ಟು ಆದಾಯ ಈ ವರ್ಷ ಅದೆಷ್ಟು ಹೆಚ್ಚಾಗಿದೆಯೋ? ಆದ್ರೀಗ ವಿರುಷ್ಕಾ ಜೋಡಿ ತಮ್ಮ ರಕ್ಷಣೆಗೆ ಇಟ್ಟುಕೊಂಡಿರುವ ಬಾಡಿಗಾರ್ಡ್ಗೆ ಅದೆಷ್ಟು ಸಂಬಳ ಕೊಡ್ತಾರೆ ಅನ್ನೋದು ಗೊತ್ತಾದ್ರೆ, ನಿಮ್ಮ ತಲೆ ಗಿರ್ರರ್ರ್ ಅನ್ನದೇ ಇರೋದಿಲ್ಲ.
ಯಾರು ವಿರಾಟ್ ಅನುಷ್ಕಾ ಜೋಡಿಯ ಅಂಗರಕ್ಷಕ? ಈತನನ್ನ ವಿರುಷ್ಕಾ ಜೋಡಿ ಪ್ರೀತಿಯಿಂದ ಸೋನು ಅಂತಾ ಕರೀತಾರೆ. ಆದ್ರೆ ಈತನ ಅಸಲಿ ಹೆಸರು ಪ್ರಕಾಶ್ ಸಿಂಗ್. ಆರಂಭದಲ್ಲಿ ಈತ ಅನುಷ್ಕಾಗೆ ಬಾಡಿಗಾರ್ಡ್ ಆಗಿದ್ದ, ಆದ್ರೀಗ ವಿರಾಟ್ಗೂ ಕೂಡ ಅಂಗರಕ್ಷಕನಾಗಿ ಕೆಲಸ ಮಾಡುತ್ತಿದ್ದಾನೆ. ಈತನ ವಾರ್ಷಿಕ ಆದಾಯ ಕಂಪನಿಯ ಸಿಇಓಗಳಿಗಿಂತ ಹೆಚ್ಚಿದೆ ಅಂದ್ರೆ, ನೀವು ನಂಬಲೇಬೇಕು..
ವಿರುಷ್ಕಾ ಅಂಗರಕ್ಷನ ವಾರ್ಷಿಕ ಆದಾಯ ₹1.2 ಕೋಟಿ! ನಿಜ.. ಇಷ್ಟೊಂದು ಕೊಹ್ಲಿ ಅನುಷ್ಕಾ ಜೋಡಿ ಅಂಗರಕ್ಷಕ ಸೋನು ವಾರ್ಷಿಕ ಸಂಬಳ ಬರೋಬ್ಬರಿ ₹1.2 ಕೋಟಿ. 1,200ಕೋಟಿಗೂ ಅಧಿಕ ಆಸ್ತಿ ಪಾಸ್ತಿ ಹೊಂದಿರುವ ವಿರುಷ್ಕಾ ಜೋಡಿಗೆ, ಇದೇನು ದೊಡ್ಡ ಮೊತ್ತವಲ್ಲ ಬಿಡಿ. ಇದೇ ಕಾರಣಕ್ಕೆ ಸೋನು ಭಾರತದಲ್ಲೇ, ಅತೀ ಹೆಚ್ಚು ಸಂಬಳ ಪಡೆಯುವ ಅಂಗರಕ್ಷಕ ಎನಿಸಿಕೊಂಡಿದ್ದಾನೆ. ಇನ್ನು ವಿರುಷ್ಕಾ ಜೋಡಿ ಸೋನುನನ್ನ ತಮ್ಮ ಕುಟುಂಬದ ಸದಸ್ಯನಂತೆ ನೋಡಿಕೊಳ್ತಾರೆ. ಸೋನು ಹುಟ್ಟು ಹಬ್ಬವನ್ನ ವಿರಾಟ್ ಅನುಷ್ಕಾ ಗ್ರ್ಯಾಂಡ್ ಆಗೇ ಸೆಲೆಬ್ರೇಟ್ ಮಾಡ್ತಾರೆ. ಹಾಗೇ ಸೋನುಗೆ ಅದ್ದೂರಿಯಾದ ಗಿಫ್ಟ್ ಕೊಟ್ಟು ಖುಷಿ ಪಡಿಸ್ತಾರೆ.
Published On - 7:16 pm, Fri, 16 July 21