AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral video: ಅಂಗಿ ಬಿಚ್ಚಿಕೊಂಡು 300 ಅಡಿ ಎತ್ತರಕ್ಕೆ ಹೋಗಿ ಕುಳಿತ ವ್ಯಕ್ತಿ; ಕೆಳಗಿಳಿಸಲು ಹರಸಾಹಸ!

ವರದಿಯ ಪ್ರಕಾರ 300 ಅಡಿ ಮೇಲೆ ಹತ್ತಿದ ವ್ಯಕ್ತಿ ಕಿರುಚುತ್ತಿರುವುದು ಕೇಳಿ ಬಂತು. ಆ ಸಮಯದಲ್ಲಿ ಅಕ್ಕ ಪಕ್ಕದಲ್ಲಿದ್ದ ಜನರನ್ನು ದೂರ ಹೋಗುವಂತೆ ಎಚ್ಚರಿಸಲಾಯಿತು.

Viral video: ಅಂಗಿ ಬಿಚ್ಚಿಕೊಂಡು 300 ಅಡಿ ಎತ್ತರಕ್ಕೆ ಹೋಗಿ ಕುಳಿತ ವ್ಯಕ್ತಿ; ಕೆಳಗಿಳಿಸಲು ಹರಸಾಹಸ!
ಅಂಗಿ ಬಿಚ್ಚಿಕೊಂಡು 300 ಅಡಿ ಎತ್ತರಕ್ಕೆ ಹೋಗಿ ಕುಳಿತ ವ್ಯಕ್ತಿ
TV9 Web
| Updated By: shruti hegde|

Updated on:Jul 19, 2021 | 3:09 PM

Share

ಧರಿಸಿದ್ದ ಶರ್ಟ್​ ಬಿಚ್ಚಿಕೊಂಡು 300 ಅಡಿ ಎತ್ತರದಲ್ಲಿ ವ್ಯಕ್ತಿ ಒಂದು ಗಂಟೆಗಳ ಕಾಲ ನಿಂತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಘಟನೆ ಕ್ಯಾಲಿಫೋರ್ನಿಯಾದ ಬ್ಯೂನಾ ಪಾರ್ಕ್​ನಲ್ಲಿ ನಡೆದಿದೆ. ಆ ಘಟನೆಯನ್ನು ರಸ್ತೆಯಲ್ಲಿ ಸಾಗುತ್ತಿರುವ ಜನರು ವಿಡಿಯೋ ಮಾಡಿದ್ದಾರೆ. ಆದರೆ ವ್ಯಕ್ತಿಯು ಶಾಂತಿಯಿಂದ ಇದ್ದ ಸ್ಥಳದಲ್ಲಿಯೇ ಕುಳಿತಿರುವುದು ಆಶ್ವರ್ಯವನ್ನುಂಟು ಮಾಡಿದೆ.

ನ್ಯೂಸ್​ವೀಕ್​ ವರದಿಯ ಪ್ರಕಾರ 300 ಅಡಿ ಮೇಲೆ ಹತ್ತಿದ ವ್ಯಕ್ತಿ ಕಿರುಚುತ್ತಿರುವುದು ಕೇಳಿ ಬಂತು. ಆ ಸಮಯದಲ್ಲಿ ಅಕ್ಕ ಪಕ್ಕದಲ್ಲಿದ್ದ ಜನರನ್ನು ದೂರ ಹೋಗುವಂತೆ ಎಚ್ಚರಿಸಲಾಯಿತು. ವ್ಯಕ್ತಿಯನ್ನು ಸುರಕ್ಷಿತವಾಗಿ ಕೆಳಗಿಳಿಸುವ ಸಲುವಾಗ ಓಡಾಡುತ್ತಿದ್ದ ಜನರನನ್ನು ದೂರ ಹೋಗುವಂತೆ ಪೊಲೀಸರು ಸಾರ್ವಜನಿಕರಲ್ಲಿ ಮನವಿ ಮಾಡಿದರು.

ಸ್ವಲ್ಪ ಸಮಯದ ಬಳಿಕ ಅಗ್ನಿಶಾಮಕ ದಳದ ಸಿಬ್ಬಂದಿ ಅಪರಿಚಿತ ವ್ಯಕ್ತಿಯನ್ನು ಸುರಕ್ಷಿತವಾಗಿ ರಕ್ಷಿಸಲು ಮುಂದಾದರು. ರಾತ್ರಿ 9 ಗಂಟೆಯ ಸರಿಸುಮಾರಿಗೆ ಆತನನ್ನು ಕೆಳಗಿಳಿಸಲು ಯಶಸ್ವಿಯಾದರು. 300 ಅಡಿ ಎತ್ತರಕ್ಕೆ ಏರುವಾಗ ಅಥವಾ ಆತನ್ನು ಕೆಳಗೆ ಇಳಿಸುವಾಗ ಯಾವುದೇ ಗಾಯಗಳಾಗಿಲ್ಲ ಎಂಬುದು ವರದಿಯಿಂದ ತಿಳಿದು ಬಂದಿದೆ.

ಇದೀಗ ವ್ಯಕ್ತಿ ಪೊಲೀಸ್​ ಕಸ್ಟಡಿಯಲ್ಲಿದ್ದಾನೆ. ಅಂದಹಾಗೆ ಆತನ ಕುರಿತಾಗಿ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಆತ ಒಂದು ಗಂಟೆಗೂ ಹೆಚ್ಚು ಸಮಯ 300 ಅಡಿ ಎತ್ತರದಲ್ಲಿ ನಿಂತಿದ್ದನು. ಉಳಿದವರು ಆತ ಆತ್ಮಹತ್ಯೆಗೆ ಯತ್ನಿಸುತ್ತಿದ್ದಾನೆ ಎಂದು ಕೂಗುತ್ತಿದ್ದರು. ಇದರಿಂದ ಜನರಿಗೆ ಹೆಚ್ಚು ಭಯವಾಯಿತು ಎಂದು ಪ್ರತ್ಯಕ್ಷದರ್ಶಿಯೋರ್ವರು ತಿಳಿಸಿದರು. ವ್ಯಕ್ತಿಯನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆತ ಮಾನಸಿಕ ಅಸ್ವಸ್ಥ ಎಂಬ ಮಾಹಿತಿ ಲಭ್ಯವಾಗಿದೆ. ಈ ಕುರಿತಂತೆ ವರದಿಗಳಿಂದ ಮಾಹಿತಿ ಲಭ್ಯವಾಗಿದೆ.

ಇದನ್ನೂ ಓದಿ:

ಎಸ್ಎಸ್ಎಲ್​ಸಿ ಪರೀಕ್ಷೆ ಬರೆಯಲು ಬಂದ 55 ವರ್ಷದ ಕೋಲಾರದ ವ್ಯಕ್ತಿ

Viral Tweet: ಮರಗಳಿಂದ ಮನುಷ್ಯರು ಕಲಿಯಬಹುದಾದ 8 ಸುಂದರ ಪಾಠಗಳು ಇವು..; ಹರ್ಷವರ್ಧನ್​ ಗೋಯೆಂಕಾ ಟ್ವೀಟ್ ಸಖತ್ ವೈರಲ್​

Published On - 3:08 pm, Mon, 19 July 21