‘ಏಷ್ಯಾ ಸ್ಟಾರ್ ಗಾಲಾ’ದಲ್ಲಿ ಕನ್ನಡದ ನಟಿ ಸಂಹಿತಾ ವಿನ್ಯಾ, ಫಾರೆವರ್ ನವೀನ್ ಕುಮಾರ್ ಭಾಗಿ
Asia Star Gala: ‘ಏಷ್ಯಾ ಸ್ಟಾರ್ ಗಾಲಾ’ ಫ್ಯಾಷನ್ ಇವೆಂಟ್ನಲ್ಲಿ ಹಲವು ವಿಶೇಷತೆಗಳು ಕಂಡುಬಂದವು. ಶ್ರೀಲಂಕಾದ ಕೊಲಂಬೊ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ರನ್ವೇನಲ್ಲಿ ಈ ಇವೆಂಟ್ ನಡೆಯಿತು.
ಫ್ಯಾಷನ್ ಲೋಕದಲ್ಲಿ ಮೆಟ್ ಗಾಲಾ (Met Gala) ಇವೆಂಟ್ ತುಂಬ ಮಹತ್ವ ಪಡೆದುಕೊಂಡಿದೆ. ವರ್ಷಕ್ಕೊಮ್ಮೆ ನಡೆಯುವ ಈ ಫ್ಯಾಷನ್ ಹಬ್ಬದಲ್ಲಿ ಅನೇಕ ಸೆಲೆಬ್ರಿಟಿಗಳು ಭಾಗವಹಿಸುತ್ತಾರೆ. ಮಾಡೆಲ್ಗಳಿಗೆ ಮತ್ತು (Fashion Designer) ಡಿಸೈನರ್ಗಳಿಗೆ ಇದೊಂದು ಉತ್ಸವವೇ ಸರಿ. ಮೆಟ್ ಗಾಲಾ ರೀತಿಯೇ ಇತ್ತೀಚೆಗೆ ‘ಏಷ್ಯಾ ಸ್ಟಾರ್ ಗಾಲಾ’ (Asia Star Gala) ಶೀರ್ಷಿಕೆಯಲ್ಲಿ ಫ್ಯಾಷನ್ ಇವೆಂಟ್ ನಡೆಸಲಾಯಿತು. ಶ್ರೀಲಂಕಾದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಹಲವು ದೇಶದ ಸೆಲೆಬ್ರಿಟಿಗಳು ಭಾಗಿ ಆಗಿದ್ದರು. ಕನ್ನಡದ ನಟಿ ಸಂಹಿತಾ ವಿನ್ಯಾ (Samhita Vinya) ಅವರು ಇದರ ರೆಡ್ ಕಾರ್ಪೆಟ್ನಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು. ಕರ್ನಾಟಕದ ಖ್ಯಾತ ಡಿಸೈನರ್ ಫಾರೆವರ್ ನವೀನ್ ಕುಮಾರ್ (Forever Naveen Kumar) ಅವರು ವಿನ್ಯಾಸಗೊಳಿಸಿದ ಆಕರ್ಷಕ ಗೌನ್ ಧರಿಸಿ ಅವರು ಈ ಫ್ಯಾಷನ್ ಇವೆಂಟ್ನಲ್ಲಿ ಪಾಲ್ಗೊಂಡರು.
‘ಏಷ್ಯಾ ಸ್ಟಾರ್ ಗಾಲಾ’ ಫ್ಯಾಷನ್ ಇವೆಂಟ್ನಲ್ಲಿ ಹಲವು ವಿಶೇಷತೆಗಳು ಕಂಡುಬಂದವು. ಶ್ರೀಲಂಕಾದ ಕೊಲಂಬೊ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ರನ್ವೇನಲ್ಲಿ ಈ ಇವೆಂಟ್ ನಡೆದಿದ್ದು ಇದೇ ಮೊದಲ ಬಾರಿಗೆ! ಹಲವು ದೇಶಗಳ ಪ್ರಖ್ಯಾತ ಫ್ಯಾಷನ್ ಡಿಸೈನರ್ಗಳು ಹಾಗೂ ಸೆಲೆಬ್ರಿಟಿಗಳು ಇದರಲ್ಲಿ ಭಾಗಿ ಆಗಿದ್ದರು. ಬೆಂಗಳೂರಿನ ಫ್ಯಾಷನ್ ಡಿಸೈನರ್ ಫಾರೆವರ್ ನವೀನ್ ಕುಮಾರ್ ಅವರು ಈ ಇವೆಂಟ್ನಲ್ಲಿ ಭಾಗವಹಿಸಿದ್ದರು.
ನವೀನ್ ಅವರ ವಿನ್ಯಾಸಗಳಿಗೆ ನಟಿ ಸಂಹಿತಾ ವಿನ್ಯಾ ಅವರು ಬ್ರ್ಯಾಂಡ್ ಅಂಬಾಸಿಡರ್ ಆಗಿ ಕೆಲಸ ಮಾಡುತ್ತಿದ್ದಾರೆ. ಆ ಮೂಲಕ ಅವರು ಹಲವು ವೇದಿಕೆಗಳಲ್ಲಿ ಕ್ಯಾಟ್ ವಾಕ್ ಮಾಡಿದ್ದಾರೆ. ಈಗ ‘ಏಷ್ಯಾ ಸ್ಟಾರ್ ಗಾಲಾ’ ಫ್ಯಾಷನ್ ಇವೆಂಟ್ನ ರೆಡ್ ಕಾರ್ಪೆಟ್ನಲ್ಲಿ ಅವರು ಹೆಜ್ಜೆ ಹಾಕಿ ಗಮನ ಸೆಳೆದಿದ್ದಾರೆ.
ಫಾರೆವರ್ ನವೀನ್ ಕುಮಾರ್ ವಿನ್ಯಾಸಗೊಳಿಸಿದ 5.7 ಅಡಿ ಎತ್ತರದ ಫೆದರ್ ವಿಂಗ್ಸ್ ಡಿಸೈನ್ ಅನ್ನು ‘ಏಷ್ಯಾ ಸ್ಟಾರ್ ಗಾಲಾ’ದ ರೆಡ್ ಕಾರ್ಪೆಟ್ ಕಾರ್ಯಕ್ರಮದಲ್ಲಿ ಶೋಕೇಸ್ ಮಾಡಲಾಯಿತು. ಅದನ್ನು ಧರಿಸಿ ಸಂಹಿತಾ ವಿನ್ಯಾ ಅವರು ಮಿರಿಮಿರಿ ಮಿಂಚಿದರು. ಈ ಡಿಸೈನ್ನಿಂದಾಗಿ ನವೀನ್ ಮತ್ತು ಸಂಹಿತಾ ಎಲ್ಲರ ಗಮನ ಸೆಳೆದರು.
ನವೀನ್ ಕುಮಾರ್ ಅವರು 2016ರಿಂದ ಫ್ಯಾಷನ್ ಲೋಕದಲ್ಲಿ ಡಿಸೈನರ್ ಆಗಿ ಗುರುತಿಸಿಕೊಂಡಿದ್ದಾರೆ. ಹಲವು ಸ್ಟಾರ್ ನಟಿಯರಿಗೆ, ಪ್ರತಿಷ್ಠಿತ ಟಿವಿ ಶೋಗಳಿಗೆ, ಅಂತಾರಾಷ್ಟ್ರೀಯ ಕಾರ್ಯಕ್ರಮಗಳಿಗೆ ಅವರು ಫ್ಯಾಷನ್ ಡಿಸೈನಿಂಗ್ ಮಾಡಿದ್ದಾರೆ. ನಟಿ ಸಂವಿತಾ ವಿನ್ಯಾ ಅವರು ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಮಾಡೆಲಿಂಗ್ ಕೂಡ ಅವರ ವೃತ್ತಿಯಾಗಿದೆ. ಹಲವು ಪ್ರತಿಷ್ಠಿತ ಫ್ಯಾಷನ್ ಶೋಗಳಲ್ಲಿ ಅವರು ಕಾಣಿಸಿಕೊಂಡಿದ್ದಾರೆ.
ಇದನ್ನೂ ಓದಿ:
Met Gala 2021: 40 ಕೆಜಿ ತೂಕದ ಡ್ರೆಸ್ ತೊಟ್ಟ ಸಿಮೋನ್ ಬೈಲ್ಸ್; ಮೆಟ್ ಗಾಲಾದಲ್ಲಿ ಮಿರಿಮಿರಿ ಮಿಂಚಿದ ಅಥ್ಲೀಟ್
Met Gala 2021: ಸದಾ ಮೈಮಾಟದಿಂದ ಸೆಳೆಯುತ್ತಿದ್ದ ಸುಂದರಿ ಕಿಮ್ ಇಂದು ಹೀಗೇಕೆ ಆದ್ರು? ಇದು ಸಿನಿಮಾ ಅಲ್ಲ ರಿಯಲ್