AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಗುಪ್ತಾಂಗವನ್ನು ಕಚ್ಚಿ ಹಿಡಿದ ಹಾವು; ಹಾವಿನಿಂದ ಬಿಡಿಸಿಕೊಳ್ಳಲು ಪರದಾಡಿದ ವ್ಯಕ್ತಿ

ಕಣ್ತಪ್ಪಿ ಕೆಲವೊಮ್ಮೆ ಹಾವುಗಳ ಮೇಲೆ ಕಾಲಿಟ್ಟರೆ ಭಯದಿಂದಲೋ ಅಥವಾ ನೋವಿನಿಂದಲೋ ಹಾವುಗಳು ಕಾಲಿಗೆ ಕಚ್ಚಿ ಓಡಿ ಬಿಡುತ್ತವೆ. ಆದ್ರೆ ಇಲ್ಲೊಂದು ವಿಚಿತ್ರ ಘಟನೆ ನಡೆದಿದ್ದು, ವ್ಯಕ್ತಿಯೊಬ್ಬ ಟ್ರೆಕ್ಕಿಂಗ್‌ ಹೋದ ಸಂದರ್ಭದಲ್ಲಿ ಹಾವೊಂದು ಆತನ ಗುಪ್ತಾಂಗವನ್ನು ಕಚ್ಚಿ ಹಿಡಿದಿದ್ದು, ಹಾವಿನ ಕಡಿತದಿಂದ ಬಿಡಿಸಿಕೊಳ್ಳಲು ಆತ ಪರದಾಡಿದ್ದಾನೆ. ಈ ವಿಡಿಯೋ ಇದೀಗ ಭಾರೀ ವೈರಲ್‌ ಆಗುತ್ತಿದೆ. 

Viral Video: ಗುಪ್ತಾಂಗವನ್ನು ಕಚ್ಚಿ ಹಿಡಿದ ಹಾವು; ಹಾವಿನಿಂದ ಬಿಡಿಸಿಕೊಳ್ಳಲು ಪರದಾಡಿದ ವ್ಯಕ್ತಿ
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​|

Updated on:May 29, 2024 | 11:52 AM

Share

ಮಳೆಗಾಲ ಶುರುವಾಗುತ್ತಿದ್ದಂತೆ ಹಾವುಗಳ ಕಾಟ ಕೂಡಾ ಜಾಸ್ತಿ ಇರುತ್ತೆ. ಅದರಲ್ಲೂ ಈ ಬೆಟ್ಟ ಗುಡ್ಡ ಪ್ರದೇಶಗಳಲ್ಲಿ ಹಾವುಗಳ ಕಾಟ ತುಸು ಹೆಚ್ಚೇ ಇರುತ್ತದೆ. ಇಂತಹ ಸಂದರ್ಭದಲ್ಲಿ ಟ್ರೆಕ್ಕಿಂಗ್‌, ಹೈಕಿಂಗ್‌ ಹೋಗುವವರು ತುಂಬಾನೇ ಜಾಗರೂಕರಾಗಿರಬೇಕು. ಏಕೆಂದರೆ  ಕೆಲವೊಮ್ಮೆ ಕಣ್ತಪ್ಪಿ ಹಾವು ಕಡಿತಕ್ಕೆ ತುತ್ತಾಗುವ ಸಾಧ್ಯತೆ ಇರುತ್ತದೆ.  ಸಾಮಾನ್ಯವಾಗಿ ಹಾವುಗಳು ಭಯದಿಂದಲೋ ಅಥವಾ ನೋವಿನಿಂದಲೋ ನಮ್ಮ ಕಾಲಿಗೆ ಕಚ್ಚಿ ಅಲ್ಲಿಂದ ಓಡಿ ಹೋಗುತ್ತವೆ. ಆದರೆ ಇಲ್ಲೊಂದು ವಿಚಿತ್ರ ಘಟನೆ ನಡೆದಿದ್ದು, ವ್ಯಕ್ತಿಯೊಬ್ಬ ಟ್ರೆಕ್ಕಿಂಗ್‌ ಹೋದ ಸಂದರ್ಭದಲ್ಲಿ ಭಾರೀ ಗಾತ್ರದ ಹಾವೊಂದು ಆತನ ಗುಪ್ತಾಂಗವನ್ನೇ ಕಚ್ಚಿ ಹಿಡಿದಿದೆ.  ಹಾವಿನ ಕಡಿತದಿಂದ ಬಿಡಿಸಿಕೊಳ್ಳಲು ಆ ವ್ಯಕ್ತಿ ಪರದಾಡಿದ್ದಾನೆ. ಈ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದೆ.

ಈ ಕುರಿತ ವಿಡಿಯೋವೊಂದನ್ನು @masterfishes ಎಂಬ ಹೆಸರಿನ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ವೈರಲ್‌ ವಿಡಿಯೋದಲ್ಲಿ ಭಾರೀ ಗಾತ್ರದ ಹಾವೊಂದು ವ್ಯಕ್ತಿಯೊರ್ವನ ಗುಪ್ತಾಂಗವನ್ನು ಕಚ್ಚಿ ಹಿಡಿದಿರುವಂತಹ ದೃಶ್ಯವನ್ನು ಕಾಣಬಹುದು. ಟ್ರೆಕ್ಕಿಂಗ್‌ ಮಾಡುವ ವೇಳೆ ಹಾವೊಂದು ಯುವಕನೊಬ್ಬನ ಕಾಲನ್ನು ಸುತ್ತುತ್ತಾ ಮೇಲೆ ಬಂದು ಆತನ ಗುಪ್ತಾಂಗವನ್ನೇ ಕಚ್ಚಿ ಹಿಡಿದಿದೆ. ದೇವ್ರೆ ಈ ಕಷ್ಟದಿಂದ ಹೇಗಪ್ಪಾ ಪಾರಾಗೋದು ಎಂದು ಹಾವಿನ ಕಡಿತದಿಂದ ಬಿಡಿಸಿಕೊಳ್ಳಲು ಆ ಯುವಕ ಪರದಾಡಿದ್ದಾನೆ.

ಇದನ್ನೂ ಓದಿ:  ಬಾಯ್‌ಫ್ರೆಂಡ್‌ ಜತೆ ಜಗಳ, ಪ್ರಿಯಕರನ್ನು ಹೆದರಿಸಲು ರೈಲ್ವೆ ಟ್ರ್ಯಾಕ್‌ ಮೇಲೆ ಜಿಗಿದು ಪ್ರಾಣ ಕಳೆದುಕೊಂಡ ಮಹಿಳೆ

ವೈರಲ್​​ ವಿಡಿಯೋ ಇಲ್ಲಿದೆ ನೋಡಿ:

ಮೇ 21 ರಂದು ಹಂಚಿಕೊಳ್ಳಲಾದ ಈ ವಿಡಿಯೋ 4.1 ಮಿಲಿಯನ್‌ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಈ ಅಚ್ಚರಿಯ ದೃಶ್ಯವನ್ನು ಕಂಡು ನೋಡುಗರು ಶಾಕ್‌ ಆಗಿದ್ದಾರೆ. ಇನ್ನು ಇದು ಯಾವದಕ್ಕೂ ಪ್ರಯೋಜನವಿಲ್ಲ ಅದನ್ನು ಕಿತ್ತು  ಹಾಕಿ ಎಂದು ನೆಟ್ಟಿಗರು ಹೇಳಿದ್ದಾರೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:48 am, Wed, 29 May 24