Viral Video: ಹೀಟ್ ಸ್ಟ್ರೋಕ್‌ಗೆ ಒಳಗಾದ ಕೋತಿ, ಮೂಕ ಜೀವಿಯ ಪ್ರಾಣ ರಕ್ಷಿಸಿದ ಪೊಲೀಸ್ ಅಧಿಕಾರಿ
ಇದೀಗ ಸೋಷಿಯಲ್ ಮೀಡಿಯಾದಲ್ಲಿ ಹೃದಯಸ್ಪರ್ಶಿ ವಿಡಿಯೋವೊಂದು ಹರಿದಾಡುತ್ತಿದ್ದು, ಉತ್ತರ ಪ್ರದೇಶದ ಬುಲಂದ್‌ಶಹರ್‌ನಲ್ಲಿ ವಿಪರೀತ ಬಿಸಿಲಿನಿಂದ ಕೋತಿಯೊಂದು ಹೀಟ್ ಸ್ಟ್ರೋಕ್‌ಗೆ ಒಳಗಾಗಿ ಪ್ರಜ್ಞೆ ತಪ್ಪಿ ಬಿದ್ದಿದೆ. ಆ ತಕ್ಷಣ ಅಲ್ಲಿಗೆ ಧಾವಿಸಿದ ಪೊಲೀಸ್ ಹೆಡ್ ಕಾನ್‌ಸ್ಟೇಬಲ್ ವಿಕಾಸ್ ತೋಮರ್ ಸಿಪಿಆರ್ (ಕಾರ್ಡಿಯೋಪಲ್ಮನರಿ ರೆಸಸಿಟೇಶನ್) ಪ್ರಾಥಮಿಕ ಚಿಕಿತ್ಸೆಯನ್ನು ನೀಡುವ ಮೂಲಕ ಕೋತಿಯ ಪ್ರಾಣ ರಕ್ಷಿಸಿದ್ದಾರೆ. ಈ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ಈ ವರ್ಷ ವಾತಾವರಣದಲ್ಲಿ ಉಂಟಾಗಿರುವ ತಾಪಮಾನದ ಏರಿಕೆಯಿಂದ ಜನರು ಬಸವಳಿದಿದ್ದಾರೆ. ಶಾಖದ ಹೊಡೆತಕ್ಕೆ ತುತ್ತಾಗಿ ಕೆಲ ಜನರು ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಮಾತ್ರವಲ್ಲದೆ ಪ್ರಾಣಿ ಪಕ್ಷಿಗಳೂ ಕೂಡಾ ಬಿಸಿಲ ಝಳಕ್ಕೆ ತತ್ತರಿಸಿ ಹೋಗಿವೆ. ಅದೇ ರೀತಿ ಇಲ್ಲೊಂದು ಕೋತಿ ಕೂಡಾ ಬಿಸಿಲ ತಾಪಕ್ಕೆ ನಿರ್ಜಲೀಕರಣಗೊಂಡು ಪ್ರಜ್ಞೆ ತಪ್ಪಿ ಬಿದ್ದಿದ್ದು, ಪೊಲೀಸ್ ಅಧಿಕಾರಿಯೊಬ್ಬರು ಸತತ 45 ನಿಮಿಷಗಳ ಕಾಲ ಸಿಪಿಆರ್ ಚಿಕಿತ್ಸೆಯನ್ನು ನೀಡುವ ಮೂಲಕ ಪ್ರಜ್ಞೆ ತಪ್ಪಿ ಬಿದ್ದಿದ್ದ ಕೋತಿಯ ಪ್ರಾಣವನ್ನು ರಕ್ಷಣೆ ಮಾಡಿದ್ದಾರೆ. ಈ ಕುರಿತ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಪೊಲೀಸ್ ಅಧಿಕಾರಿಯ ಈ ಮಾನವೀಯ ಕಾರ್ಯಕ್ಕೆ ಭಾರೀ ಶ್ಲಾಘನೆ ವ್ಯಕ್ತವಾಗಿದೆ.
ಈ ಘಟನೆ ಮೇ 24 ರಂದು ಉತ್ತರಪ್ರದೇಶದ ಬುಲಂದ್‌ಶಹರ್‌ನಲ್ಲಿ ನಡೆದಿದ್ದು, ಅಲ್ಲೇ ಪೊಲೀಸ್ ಠಾಣೆಯ ಆವರಣದಲ್ಲಿನ ಮರವೊಂದರಲ್ಲಿದ್ದ ಕೋತಿ ನಿರ್ಜಲೀಕರಣ ಮತ್ತು ವಿಪರೀತ ಶಾಖದ ಹೊಡೆತದಿಂದ ತಲೆ ತಿರುಗಿ ಕೆಳಗೆ ಬೀಳುತ್ತದೆ. ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಕೋತಿಯನ್ನು ಕಂಡ ಪೊಲೀಸ್ ಹೆಡ್ ಕಾನ್‌ಸ್ಟೇಬಲ್ ವಿಕಾಸ್ ತೋಮರ್ ಸಿಪಿಆರ್ ಮಾಡುವ ಮೂಲಕ ಕೋತಿಯ ಪ್ರಾಣವನ್ನು ರಕ್ಷಿಸಿದ್ದಾರೆ. ಹಾಗೂ ಕೋತಿಯ ದೇಹವನ್ನು ತಂಪಾಗಿರಿಸಲು ಅದರ ಮೇಲೆ ನೀರನ್ನು ಕೂಡಾ ಸುರಿದಿದ್ದಾರೆ. ಇವರ ಈ ಮಾನವೀಯ ಕಾರ್ಯದ ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗುತ್ತಿದೆ.
ಇದನ್ನೂ ಓದಿ: ವೈರಲ್ ಆಯ್ತು ಅನಂತ್ ಅಂಬಾನಿ-ರಾಧಿಕ ಮದುವೆ ಆಮಂತ್ರಣ ಪತ್ರಿಕೆ, ಮದುವೆ ಎಲ್ಲಿ, ಯಾವಾಗ ಗೊತ್ತಾ?
ವೈರಲ್ ವಿಡಿಯೋ ಇಲ್ಲಿದೆ ನೋಡಿ:
Watch: In the premises of a police station in Bulandshahr, a lifeless monkey, unconscious from the heat, by a police officer hours and gave water, saving its life. pic.twitter.com/OcHegw3iZa
— IANS (@ians_india) May 30, 2024
@ians_india ಎಂಬ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋ 51 ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಪೊಲೀಸ್ ಅಧಿಕಾರಿಯ ಈ ಮಾನವೀಯ ಕಾರ್ಯಕ್ಕೆ ನೆಟ್ಟಿಗರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ