ಈ ದೇಶದಲ್ಲಿ ನಡೆಯುತ್ತೆ ಪ್ರೇತಗಳ ಮದುವೆ, ಉದ್ದೇಶವೇನು?

ಪ್ರಪಂಚದಲ್ಲಿ ಒಂದೊಂದು ದೇಶದಲ್ಲಿ ಒಂದೊಂದು ಬಗೆಯ ಸಂಪ್ರದಾಯವಿದೆ, ಹಾಗೆಯೇ ಈ ದೇಶದಲ್ಲಿ ನಡೆಯುತ್ತೆ ಪ್ರೇತ ಮದುವೆ, ಮದುವೆಗೂ ಮುನ್ನ ಸಾವನ್ನಪ್ಪಿದವರ ಶವಗಳಿಗೆ ಮದುವೆ ಮಾಡಲಾಗುತ್ತದೆ.

ಈ ದೇಶದಲ್ಲಿ ನಡೆಯುತ್ತೆ ಪ್ರೇತಗಳ ಮದುವೆ, ಉದ್ದೇಶವೇನು?
ಪ್ರೇತ ಮದುವೆ
Follow us
ನಯನಾ ರಾಜೀವ್
|

Updated on: May 31, 2024 | 10:16 AM

ಪ್ರಪಂಚದ ವಿವಿಧ ಭಾಗಗಳಲ್ಲಿ ಬೇರೆ ಬೇರೆ ರೀತಿಯ ಸಂಪ್ರದಾಯವನ್ನು ಕಾಣಬಹುದು. ಅನೇಕ ಸಂಪ್ರದಾಯಗಳು ಹುಟ್ಟಿಗೆ ಸಂಬಂಧಿಸಿದ್ದಾಗಿದ್ದರೆ, ಇನ್ನೂ ಕೆಲವು ಸಾವಿಗೆ ಸಂಬಂಧಿಸಿದ್ದಾಗಿವೆ. ಪ್ರೇತಗಳ ಮದುವೆ ಬಗ್ಗೆ ಎಲ್ಲಾದರೂ ಕೇಳಿದ್ದೀರ. ಅಂತಹ ಒಂದು ಪದ್ಧತಿ ಚೀನಾದಲ್ಲಿದೆ. ಚೀನಾ ಈಗಾಗಲೇ ವಿಚಿತ್ರ ಸಂಪ್ರದಾಯ ಹಾಗೂ ಆಹಾರ ಪದ್ಧತಿಯಿಂದ ಪ್ರಚಲಿತದಲ್ಲಿದೆ. ಕಳೆದ 3 ಸಾವಿರ ವರ್ಷಗಳಿಂದ ಈ ಸಂಪ್ರದಾಯ ನಡೆದುಕೊಂಡು ಬಂದಿದೆ.

ಮದುವೆಯಾಗದೆ ಮರಣ ಹೊಂದಿದರೆ ಸತ್ತ ಮೇಲೂ ಅವರಿಗೆ ಮದುವೆ ಮಾಡಲಾಗುತ್ತದೆ.ಇದಲ್ಲದೆ ವರದಕ್ಷಿಣೆ ವಹಿವಾಟು ಕೂಡ ನಡೆಯುತ್ತದೆ. ಮದುವೆಗೂ ಮುನ್ನ ಜಾತಕ ಹೊಂದಾಣಿಕೆಯಾಗುತ್ತದೋ ಇಲ್ಲವೋ ಎಂಬುದನ್ನು ಕೂಡ ನೋಡುತ್ತಾರೆ. ಸತ್ತವರ ಮದುವೆ ನಿಶ್ಚಯವಾದಾಗ, ಕುಟುಂಬ ಸದಸ್ಯರು ಒಟ್ಟಾಗಿ ದಾನ ಮತ್ತು ವರದಕ್ಷಿಣೆಯ ಬಗ್ಗೆ ಮಾತನಾಡುತ್ತಾರೆ. ಇದರಲ್ಲಿ, ವಧುವಿನ ಕುಟುಂಬವು ವರನ ಕುಟುಂಬದಿಂದ ವರದಕ್ಷಿಣೆಯಾಗಿ ಹಣವನ್ನು ಬೇಡಿಕೆ ಮಾಡುತ್ತದೆ.

ಇದರಲ್ಲಿ ಆಭರಣ, ಗಾಡಿ, ಮನೆ , ಹಣದ ಬೇಡಿಕೆ ಇಡುತ್ತಾರೆ. ಇದೆಲ್ಲವೂ ಕಾಗದದ ವಹಿವಾಟಾಗಿರುತ್ತೆ ಆದರೆ ನಿಜವಾಗಿಯೂ ಅವರ ಬಳಿ ಏನನ್ನೂ ತೆಗೆದುಕೊಳ್ಳುವುದಿಲ್ಲ. ಸತ್ತವರ ಎರಡು ಹೆಣಗಳನ್ನು ಸಮಾಧಿಯಿಂದ ಹೊರ ತೆಗೆದು ಒಂದೇ ಸಮಾಧಿಯಲ್ಲಿ ಮತ್ತೆ ಹೂಳಲಾಗುತ್ತದೆ. ಸತ್ತ ಮೇಲೆ ಅನ್ಯಲೋಕಕ್ಕೆ ಒಬ್ಬಂಟಿಯಾಗಿ ಹೋಗುವುದು ಬೇಡ ಎಂದು ಜತೆ ಮಾಡಿ ಕಳುಹಿಸುತ್ತಾರೆ.

ಮತ್ತಷ್ಟು ಓದಿ: ಇಲ್ಲಿ ನಡೆಯುತ್ತದೆ ಸತ್ತವರಿಗೂ ಮದುವೆ; ಇದು ತುಳುನಾಡಿನ ಪ್ರೇತ ಕಲ್ಯಾಣ

ಇಂಡೋನೇಷ್ಯಾದ ಫಿಜಿಯಲ್ಲೂ ಇಂಥದ್ದೇ ಸಂಪ್ರದಾಯವಿದೆ. ಫಿಜಿಯಲ್ಲಿ ಮದುವೆಯಾಗದೆ ಮೃತಪಟ್ಟರೆ ಅವರನ್ನು ದೇವತೆಗಳು ಕಾಡುತ್ತಾರೆ ಎಂದು ಹೇಳಲಾಗುತ್ತದೆ. ಹೀಗಾಗಿ ಸತ್ತವರನ್ನು ತೊಂದರೆಯಿಂದ ರಕ್ಷಿಸಲು ಪ್ರೇತ ಮದುವೆ ಸಂಪ್ರದಾಯವನ್ನು ಮಾಡಿದ್ದಾರೆ. ಇಲ್ಲಿ ಸತ್ತವರ ಅಸ್ತಿಪಂಜರವನ್ನು ತೆಗೆದು ತೊಳೆಯಲಾಗುತ್ತದೆ.

ನಂತರ ಅದಕ್ಕೆ ಹೊಸ ಬಟ್ಟೆ ತೊಡಿಸಿ ಗ್ರಾಮದ ಸುತ್ತಲೂ ಓಡಾಡಿಸುತ್ತಾರೆ. ಹೀಗೆ ಮಾಡಿರುವುದರಿಂದ ಮೃತ ಆತ್ಮಕ್ಕೆ ಶಾಂತಿ ಹಾಗೂ ಸದ್ಗತಿ ಸಿಗುತ್ತೆ ಎಂಬುದು ನಂಬಿಕೆ. ಪ್ರೇತ ವಿವಾಹವು ದುಃಖಿತ ಸಂಬಂಧಿಕರಿಗೆ ಭಾವನಾತ್ಮಕ ಪರಿಹಾರದ ಒಂದು ರೂಪವಾಗಿ ಕಾರ್ಯನಿರ್ವಹಿಸುತ್ತದೆ.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ