AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: 10ನೇ ತರಗತಿ ಪರೀಕ್ಷೆಯಲ್ಲಿ 10 ಬಾರಿ ಫೇಲ್‌ ಆಗಿದ್ದ ಯುವಕ ಕೊನೆಗೂ ಪಾಸ್;‌ ಡೋಲು ಬಾರಿಸಿ ಸಂಭ್ರಮಿಸಿದ ಗ್ರಾಮಸ್ಥರು

ಮಹಾರಾಷ್ಟ್ರದಲ್ಲಿ ಸ್ವಾರಸ್ಯಕರ ಘಟನೆಯೊಂದು ನಡೆದಿದ್ದು, 10 ನೇ ತರಗತಿಯ ಬೋರ್ಡ್‌ ಪರೀಕ್ಷೆಯಲ್ಲಿ ಪ್ರತಿ ಬಾರಿ ಫೇಲ್‌ ಆಗುತ್ತಿದ್ದ ಯುವಕನೊಬ್ಬ ಛಲ ಬಿಡದೆ ಸತತವಾಗಿ ಎಸ್.ಎಸ್‌.ಎಲ್.ಸಿ ಪರೀಕ್ಷೆಯನ್ನು ಬರೆಯುವ ಮೂಲಕ ತನ್ನ ಹನ್ನೊಂದನೇ ಪ್ರಯತ್ನದಲ್ಲಿ ಪರೀಕ್ಷೆಯಲ್ಲಿ ಪಾಸ್‌ ಆಗಿದ್ದಾನೆ. ಈ ಖುಷಿಯನ್ನು ಇಡೀ ಗ್ರಾಮವೇ ಮೆರವಣಿಗೆಯ ಮೂಲಕ ಸಂಭ್ರಮಿಸಿದ್ದು, ಈ ಕುರಿತ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದೆ.

Viral Video: 10ನೇ ತರಗತಿ ಪರೀಕ್ಷೆಯಲ್ಲಿ 10 ಬಾರಿ ಫೇಲ್‌ ಆಗಿದ್ದ ಯುವಕ ಕೊನೆಗೂ ಪಾಸ್;‌ ಡೋಲು ಬಾರಿಸಿ ಸಂಭ್ರಮಿಸಿದ ಗ್ರಾಮಸ್ಥರು
ಮಾಲಾಶ್ರೀ ಅಂಚನ್​
| Edited By: |

Updated on: May 31, 2024 | 12:10 PM

Share

ಕಠಿಣ ಪರಿಶ್ರಮ, ಸಾಧಿಸುವ ಛಲವೊಂದಿದ್ದರೇ ಏನನ್ನೂ ಬೇಕಾದರೂ ಜಯಿಸಬಹುದು ಎಂದು ಹೇಳುತ್ತಾರೆ. ಈ ಮಾತನ್ನು ಇಲ್ಲೊಬ್ಬ ಯುವಕ ನಿಜ ಎಂದು ತೋರಿಸಿಕೊಟ್ಟಿದ್ದಾನೆ. ಹೌದು 10 ನೇ ತರಗತಿಯ ಬೋರ್ಡ್‌ ಪರೀಕ್ಷೆಯಲ್ಲಿ ಪ್ರತಿ ಬಾರಿ ಫೇಲ್‌ ಆಗುತ್ತಿದ್ದ ಯುವಕನೊಬ್ಬ ತನ್ನ ಹನ್ನೊಂದನೇ ಪ್ರಯತ್ನದಲ್ಲಿ ಪರೀಕ್ಷೆಯಲ್ಲಿ ಪಾಸ್‌ ಆಗಿದ್ದಾನೆ. ಈ ಖುಷಿಯನ್ನು ಇಡೀ ಗ್ರಾಮವೇ ಸಂಭ್ರಮಾಚರಿಸಿದ್ದು, ಈ ಕುರಿತ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದೆ.

ಈ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದ್ದು,  ಇಲ್ಲಿನ ಕೃಷ್ಣ ನಾಮದೇವ್‌ ಮುಂಡೆ ಎಂಬ ಯುವಕ ಪ್ರತಿ ಬಾರಿಯೂ ಎಸ್‌.ಎಸ್‌.ಎಲ್.‌ಸಿ ಬೋರ್ಡ್‌ ಪರೀಕ್ಷೆಯಲ್ಲಿ ಫೇಲ್‌ ಆಗುತ್ತಿದ್ದ. ತಾಳ್ಮೆ ಕಳೆದುಕೊಳ್ಳದೆ, ಪರೀಕ್ಷೆಯಲ್ಲಿ ಪಾಸ್‌ ಆಗೇ ಆಗುತ್ತೇನೆ ಎಂದು ಛಲ ಬಿಡದೆ ಸತತವಾಗಿ ಪರೀಕ್ಷೆ ಬರೆದು ತನ್ನ  ಹನ್ನೊಂದನೇ ಪ್ರಯತ್ನದಲ್ಲಿ 10 ನೇ ತರಗತಿ ಪರೀಕ್ಷೆಯಲ್ಲಿ ಉತ್ತೀರ್ಣನಾಗಿದ್ದಾನೆ. ಕೃಷ್ಣ ಮಹಾರಾಷ್ಟ್ರದ ಪರಲಿ ತಾಲೂಕಿನ ರತ್ನೇಶ್ವರ ಶಾಲೆಯ ವಿದ್ಯಾರ್ಥಿಯಾಗಿದ್ದ. 10 ನೇ ಬಾರಿ ಬರೆದ ಪರೀಕ್ಷೆಯಲ್ಲಿ ಆತ ಇತಿಹಾಸ ವಿಷಯದಲ್ಲಿ ಫೇಲ್‌ ಆಗಿದ್ದ. ಆದರೆ 11 ನೇ ಪ್ರಯತ್ನದಲ್ಲಿ ಕೃಷ್ಣ ಎಲ್ಲಾ ವಿಷಯಗಳಲ್ಲೂ ಉತ್ತಮ ಅಂಗಗಳೊಂದಿಗೆ ತೇರ್ಗಡೆಯಾಗಿದ್ದಾನೆ. ಕೃಷ್ಣನ ಈ ಯಶಸ್ಸನ್ನು ಆತನ ಕುಟುಂಬ ಮಾತ್ರವಲ್ಲದೇ ಇಡೀ ಗ್ರಾಮವೇ ಸಂಭ್ರಮಿಸಿದೆ. ಆತನ ತಂದೆ ಹಾಗೂ ಗ್ರಾಮಸ್ಥರು ಡೋಲು ಬಾರಿಸುತ್ತಾ ಕೃಷ್ಣನನ್ನು ಹೆಗಲ ಮೇಲೆ ಹೊತ್ತು ಮೆರವಣಿಗೆ ಮಾಡುವ ಮೂಲಕ ಈ ಖುಷಿಯನ್ನು ಸಂಭ್ರಮಿಸಿದ್ದಾರೆ.

ವೈರಲ್​​​ ವಿಡಿಯೋ ಇಲ್ಲಿದೆ ನೋಡಿ:

ವೈರಲ್‌ ವಿಡಿಯೋದಲ್ಲಿ ಸತತ ಪ್ರಯತ್ನಗಳ ಮೂಲಕ 10 ನೇ ತರಗತಿಯಲ್ಲಿ ಪಾಸ್‌ ಆದ ಕೃಷ್ಣ ನಾಮದೇವ್‌ ಎಂಬ ಯುವಕನನ್ನು ಗ್ರಾಮಸ್ಥರು ಹೆಗಲ ಮೇಲೆ ಹೊತ್ತು ಮೆರವಣಿಗೆ ಮಾಡುತ್ತಾ ಸಂಭ್ರಮಿಸಿರುವ ದೃಶ್ಯವನ್ನು ಕಾಣಬಹುದು.

ಇದನ್ನೂ ಓದಿ: ಮದ್ಯವಿದ್ದ ವಾಹನ ಪಲ್ಟಿ, ಗಾಯಗೊಂಡ ಚಾಲಕನ ಸಹಾಯಕ್ಕೆ ಬಾರದೇ ಎಣ್ಣೆ ಬಾಟಲಿಗಾಗಿ ಮುಗಿಬಿದ್ದ ಜನ 

@TeluguScribe ಎಂಬ ಎಕ್ಸ್‌ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋ ಒಂದುವರೆ ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಆ ಯುವಕನ ಛಲ ಮತ್ತು ಸಮರ್ಪಣಾ ಭಾವಕ್ಕೆ ನೆಟ್ಟಿಗರು ಶ್ಲಾಘಿಸಿದ್ದಾರೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ