AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral: ಮದ್ಯವಿದ್ದ ವಾಹನ ಪಲ್ಟಿ, ಗಾಯಗೊಂಡ ಚಾಲಕನ ಸಹಾಯಕ್ಕೆ ಬಾರದೇ ಎಣ್ಣೆ ಬಾಟಲಿಗಾಗಿ ಮುಗಿಬಿದ್ದ ಜನ 

ಇಲ್ಲೊಂದು ಅಮಾನವೀಯ ಘಟನೆಯೊಂದು ನಡೆದಿದ್ದು, ಮದ್ಯ ತುಂಬಿದ್ದ ವಾಹನ ಪಲ್ಟಿಯಾಗಿ ಚಾಲಕ ಗಂಭೀರವಾಗಿ ಗಾಯಗೊಂಡಿದ್ದರೂ ಆತನ ಸಹಾಯಕ್ಕೆ ಯಾರೂ ಬಾರದೆ ಜನರು ಕೇವಲ ರಸ್ತೆ ಮೇಲೆ ಬಿದ್ದಿದ್ದ ಮದ್ಯದ ಬಾಟಲಿಯನ್ನು ಎತ್ತಿಕೊಂಡು ಹೋಗುವ ಮೂಲಕ ಮಾನವೀಯತೆ ಸತ್ತಂತೆ ವರ್ತಿಸಿದ್ದಾರೆ. ಈ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ. 

Viral: ಮದ್ಯವಿದ್ದ ವಾಹನ ಪಲ್ಟಿ, ಗಾಯಗೊಂಡ ಚಾಲಕನ ಸಹಾಯಕ್ಕೆ ಬಾರದೇ ಎಣ್ಣೆ ಬಾಟಲಿಗಾಗಿ ಮುಗಿಬಿದ್ದ ಜನ 
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​|

Updated on: May 31, 2024 | 10:04 AM

Share

ಮಾನವೀಯತೆ ಎಂಬುದು ಎಲ್ಲಾ ಧರ್ಮಕ್ಕಿಂತ ಮಿಗಿಲಾಗಿದ್ದು, ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಮಾನವೀಯತೆ ಅಳವಡಿಸಿಕೊಳ್ಳಬೇಕು ಎಂದು ಹೇಳುತ್ತಾರೆ. ಆದರೆ ಇತ್ತೀಚಿನ ದಿನಗಳಲ್ಲಿ  ಮಾನವೀಯತೆ ಎಂಬುದು ಮರೆಯಾಗಿ ಹೋಗುತ್ತಿದ್ದು, ಜನರು ಮೃಗೀಯ ರೀತಿಯಲ್ಲಿ ವರ್ತಿಸುತ್ತಿದ್ದಾರೆ. ಇದಕ್ಕೆ ಸೂಕ್ತ ನಿದರ್ಶನದಂತಿರುವ ವಿಡಿಯೋವೊಂದು ಇದೀಗ ವೈರಲ್‌ ಆಗಿದ್ದು, ಮದ್ಯ ತುಂಬಿದ್ದ ವಾಹನ ಪಲ್ಟಿಯಾಗಿ ಚಾಲಕ ಗಂಭೀರವಾಗಿ ಗಾಯಗೊಂಡಿದ್ದರೂ ಆತನ ಸಹಾಯಕ್ಕೆ ಯಾರೂ ಬಾರದೆ ಜನರು ಕೇವಲ ರಸ್ತೆ ಮೇಲೆ ಬಿದ್ದಿದ್ದ ಮದ್ಯದ ಬಾಟಲಿಯನ್ನು ಎತ್ತಿಕೊಂಡು ಹೋಗುವ ಮೂಲಕ ಮಾನವೀಯತೆ ಸತ್ತಂತೆ ವರ್ತಿಸಿದ್ದಾರೆ.

ಈ ಘಟನೆ ಉತ್ತರ ಪ್ರದೇಶದ ಬಿಜ್ನೋರ್‌ ಎಂಬಲ್ಲಿ ನಡೆದಿದ್ದು, ವಿದೇಶಿ ಮತ್ತು ಸ್ವದೇಶಿ ಮದ್ಯ ತುಂಬಿದ್ದ ಡಿಸಿಎಂ ಟ್ರಕ್‌ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದಿದೆ. ಪರಿಣಾಮ ಟ್ರಕ್‌ನಲ್ಲಿದ್ದ ಮದ್ಯದ ಬಾಟಲಿಗಳೆಲ್ಲವೂ ರಸ್ತೆಗುರುಳಿ ಬಿದ್ದಿವೆ. ಈ ಸಂದರ್ಭದಲ್ಲಿ ಸ್ಥಳೀಯರು ಗಂಭೀರವಾಗಿ ಗಾಯಗೊಂಡಿದ್ದ ಚಾಲಕನ ಸಹಾಯಕ್ಕೂ ಧಾವಿಸದೇ ಕೇವಲ ರಸ್ತೆಯಲ್ಲಿ ಬಿದ್ದ ಮದ್ಯದ ಬಾಟಲಿಗಳನ್ನು ಎತ್ತಿಕೊಂಡು ಹೋಗುವ ಮೂಲಕ ಮಾನವೀಯತೆ ಸತ್ತಂತೆ ವರ್ತಿಸಿದ್ದಾರೆ.

ವೈರಲ್​​​ ವಿಡಿಯೋ ಇಲ್ಲಿದೆ ನೋಡಿ:

ಈ ಅಮಾನವೀಯ ಘಟನೆಯ ವಿಡಿಯೋವನ್ನು @as6609536 ಎಂಬ ಹೆಸರಿನ ಎಕ್ಸ್‌ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ವೈರಲ್‌ ವಿಡಿಯೋದಲ್ಲಿ ಅಪಘಾತ ನಡೆದ ಸ್ಥಳದಲ್ಲಿ ಅಲ್ಲಿನ ಸ್ಥಳೀಯರು ಗಂಭೀರವಾಗಿ ಗಾಯಗೊಂಡಿದ್ದ ಚಾಲಕನ ಸಹಾಯಕ್ಕೂ ಧಾವಿಸದೇ ಮದ್ಯದ ಬಾಟಲಿಗಳನ್ನು ಎತ್ತಿಕೊಳ್ಳುವುದರಲ್ಲಿ ನಿರತರಾಗಿರುವ ಅಮಾನವೀಯ ದೃಶ್ಯವನ್ನು ಕಾಣಬಹುದು.

ಇದನ್ನೂ ಓದಿ: ಹೀಟ್‌ ಸ್ಟ್ರೋಕ್‌ಗೆ ಒಳಗಾದ ಕೋತಿ, ಮೂಕ ಜೀವಿಯ ಪ್ರಾಣ ರಕ್ಷಿಸಿದ ಪೊಲೀಸ್‌ ಅಧಿಕಾರಿ

ಮೇ 26 ರಂದು ಹಂಚಿಕೊಳ್ಳಲಾದ ಈ ಇಡಿಯೋ 92 ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಜನರ ಈ ಅಮಾನವೀಯ ವರ್ತನೆಗೆ ನೆಟ್ಟಿಗರು ಗರಂ ಆಗಿದ್ದಾರೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ