Viral: ವೈರಲ್ ಆಯ್ತು ಅನಂತ್ ಅಂಬಾನಿ-ರಾಧಿಕ ಮದುವೆ ಆಮಂತ್ರಣ ಪತ್ರಿಕೆ, ಮದುವೆ ಎಲ್ಲಿ, ಯಾವಾಗ ಗೊತ್ತಾ?
Ananth Ambani Radhika Merchantʼs Wedding Invitation Card: ಉದ್ಯಮಿ ಮುಖೇಶ್ ಅಂಬಾನಿಯ ಕಿರಿಯ ಪುತ್ರ ಅನಂತ್ ಅಂಬಾನಿ ತನ್ನ ಬಹುಕಾಲದ ಗೆಳತಿ ರಾಧಿಕಾ ಮರ್ಚೆಂಟ್ ಅವರನ್ನು ಜುಲೈ 12 ರಂದು ವಿವಾಹವಾಗಲಿದ್ದಾರೆ. ಒಂದೆಡೆ ಈ ಜೋಡಿ ಕುಟುಂಬಸ್ಥರು ಮತ್ತು ಆಪ್ತರೊಂದಿಗೆ ಇಟಲಿಯ ಫ್ರೆಂಚ್ ಕ್ರೂಸ್‌ನಲ್ಲಿ ಎರಡನೇ ಬಾರಿಗೆ ವಿವಾಹ ಪೂರ್ವ ಕಾರ್ಯಕ್ರವನ್ನು ಆಚರಿಸುತ್ತಿದ್ದರೆ, ಮತ್ತೊಂದೆಡೆ ಅವರ ಮದುವೆ ಆಮಂತ್ರಣ ಪತ್ರಿಕೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ.
ದೇಶದ ಆಗರ್ಭ ಶ್ರೀಮಂತರ ಪೈಕಿ ಅಗ್ರಸ್ಥಾನದಲ್ಲಿರುವ ಖ್ಯಾತ ಉದ್ಯಮಿ, ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ್ ಅಂಬಾನಿ ಅವರ ಕಿರಿಯ ಪುತ್ರ ಅನಂತ್ ಅಂಬಾನಿ ಹಾಗೂ ಕೈಗಾರಿಕೋದ್ಯಮಿ ವೀರೇನ್ ಮರ್ಚೆಂಟ್ ಅವರ ಪುತ್ರಿ ರಾಧಿಕಾ ಮರ್ಚೆಂಟ್ ಅವರ 3 ದಿನಗಳ ವಿವಾಹ ಪೂರ್ವ ಕಾರ್ಯಕ್ರಮವು ಗುಜರಾತ್‌ನ ಜಾಮ್ ನಗರದಲ್ಲಿ ಅದ್ಧೂರಿಯಾಗಿ ನೆರವೇರಿತ್ತು. ಇದೀಗ ಈ ಜೋಡಿಯ ಅದ್ಧೂರಿ ವಿವಾಹ ಕಾರ್ಯಕ್ರಮವು ಜುಲೈ 12 ರಂದು ನಡೆಯಲಿದ್ದು, ಇವರ ಮದುವೆ ಆಮಂತ್ರಣ ಪತ್ರಿಕೆ (Ananth Ambani Radhika Merchantʼs Wedding Invitation Card) ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ಈ ಕುರಿತ ಪೋಸ್ಟ್ ಒಂದನ್ನು ಸುದ್ದಿ ಸಂಸ್ಥೆ ANI ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದು, “ಅನಂತ್ ಅಂಬಾನಿ ಮತ್ತು ರಾಧಿಕ ಅವರ ವಿವಾಹವು ಜುಲೈ 12 ರಂದು ಮುಂಬೈನಲ್ಲಿ ನಡೆಯಲಿದೆ” ಎಂಬ ಶೀರ್ಷಿಕೆಯನ್ನು ಬರೆದುಕೊಳ್ಳಲಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಆಹ್ವಾನ ಪತ್ರಿಕೆಯ ಪ್ರಕಾರ, ಅನಂತ್ ಮತ್ತು ರಾಧಿಕಾ ಮುಂಬೈನ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್‌ನಲ್ಲಿರುವ (ಬಿಕೆಸಿ) ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್‌ನಲ್ಲಿ ಹಿಂದೂ ಸಂಪ್ರದಾಯದಂತೆ ವಿವಾಹವಾಗಲಿದ್ದು, ಜುಲೈ 12 ರ ಶುಕ್ರವಾರದಂದು ಅದ್ಧೂರಿಯಾಗಿ ಇವರ ಶುಭ ವಿವಾಹವು ನಡೆಯಲಿದೆ. ಈ ಸಮಾರಂಭದಲ್ಲಿ ಅಥಿತಿಗಳು ಭಾರತೀಯ ಸಾಂಪ್ರದಾಯಿಕ ಉಡುಗೆಯನ್ನು ತೊಡಬೇಕು ಎಂದು ಹೇಳಲಾಗಿದೆ. ಇದಾದ ನಂತರ ಜುಲೈ 13 ರಂದು ʼಶುಭ್ ಆಶೀರ್ವಾದ್ʼ ಸಮಾರಂಭ ಹಾಗೂ ಜುಲೈ 14 ರಂದು ಆರತಕ್ಷತೆ ಕಾರ್ಯಕ್ರಮ ನಡೆಯಲಿದೆ.
ಇದನ್ನೂ ಓದಿ: ಪೊಲೀಸರೊಂದಿಗೆ ನಿವೇತಾ ಪೇತುರಾಜ್ ಕಿರಿಕ್, ವಿಡಿಯೋ ತರಾಟೆ ತೆಗೆದುಕೊಂಡ ನಟಿ
ವೈರಲ್ ಫೋಟೋ ಇಲ್ಲಿದೆ ನೋಡಿ:
Anant Ambani and Radhika’s Wedding to be held in Mumbai on 12th July at the Jio World Convention Centre in BKC. Wedding to be performed in accordance with the traditional Hindu Vedic way.
The main wedding ceremonies will start on Friday, 12th July with the auspicious Shubh… pic.twitter.com/YKnaAIAs7o
— ANI (@ANI) May 30, 2024
ಈ ವರ್ಷದ ಮಾರ್ಚ್ ತಿಂಗಳಲ್ಲಿ ಅಂಬಾನಿ ಕುಟುಂಬವು ಜಾಮ್ ನಗರದಲ್ಲಿ ಅದ್ಧೂರಿ ವಿವಾಹಪೂರ್ವ ಸಮಾರಂಭವನ್ನು ಆಯೋಜಿಸಿತ್ತು. ಈಗ ಎಲ್ಲರೂ ಅನಂತ್-ರಾಧಿಕಾ ಜೋಡಿಯ ಅದ್ಧೂರಿ ವಿವಾಹ ಸಮಾರಂಭಕ್ಕೆ ಕಾತುರದಿಂದ ಕಾಯುತ್ತಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 4:53 pm, Thu, 30 May 24