Video: ಪೊಲೀಸರೊಂದಿಗೆ ನಿವೇತಾ ಪೇತುರಾಜ್‌ ಕಿರಿಕ್, ವಿಡಿಯೋ ಮಾಡಿದವರನ್ನು ತರಾಟೆ ತೆಗೆದುಕೊಂಡ ನಟಿ

ಟಾಲಿವುಡ್‌ನಲ್ಲಿ  ಸಾಕಷ್ಟು ಹಿಟ್‌ ಚಿತ್ರಗಳ ಮೂಲಕ ಹೆಸರು ಮಾಡಿರುವ ನಟಿ ನಿವೇತಾ ಪೇತುರಾಜ್‌ ಅವರಿಗೆ ಸಂಬಂಧಪಟ್ಟ ವಿಡಿಯೋವೊಂದು ಇದೀಗ ವೈರಲ್‌ ಆಗಿದ್ದು, ಕಾರಿನ ಟ್ರಂಕ್‌ ಓಪನ್‌ ಮಾಡುವಂತೆ  ಕೇಳಿದ ಪೊಲೀಸರೊಂದಿಗೆ ಅವರು ವಾಗ್ವದ ನಡೆಸಿದ್ದು ಮಾತ್ರವಲ್ಲದೆ, ಈ ದೃಶ್ಯವನ್ನು ಚಿತ್ರೀಕರಿಸಿದವರನ್ನೂ ತರಾಟೆಗೆ ತೆಗೆದುಕೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ಹರಿದಾಡುತ್ತಿದ್ದು, ಇದೆಲ್ಲಾ ಪಬ್ಲಿಸಿಟಿ ಸ್ಟಂಟ್‌ ಇರಬಹುದು ಎಂದು ನೆಟ್ಟಿಗರು ಮಾತನಾಡಿಕೊಳ್ಳುತ್ತಿದ್ದಾರೆ. 

Video: ಪೊಲೀಸರೊಂದಿಗೆ ನಿವೇತಾ ಪೇತುರಾಜ್‌ ಕಿರಿಕ್, ವಿಡಿಯೋ ಮಾಡಿದವರನ್ನು ತರಾಟೆ ತೆಗೆದುಕೊಂಡ ನಟಿ
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on: May 30, 2024 | 4:40 PM

ಸೆಲೆಬ್ರಿಟಿಗಳಿಗೆ ಸಂಬಂಧಿಸಿದ ಯಾವುದೇ ಸುದ್ದಿಯಾದರೂ ಅದು ಸಖತ್‌ ವೈರಲ್‌ ಆಗುತ್ತದೆ. ಇದೀಗ ಬಹುಭಾಷ ನಟಿ ನಿವೇತಾ ಪೇತುರಾಜ್‌ ಅವರಿಗೆ ಸಂಬಂಧಪಟ್ಟ ವಿಡಿಯೋವೊಂದು ಕೂಡಾ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ.  ನಟಿ ನಿವೇತಾ ಟಾಲಿವುಡ್‌ ಟಾಪ್‌ ಹೀರೋಯಿನ್‌ಗಳಲ್ಲಿ ಒಬ್ಬರು. ತಮಿಳಿನ ‌ʼಒರು ನಾಳ್ ಕೂತುʼ ಚಿತ್ರದ ಮೂಲಕ ಸಿನೆಮಾ ರಂಗಕ್ಕೆ ಎಂಟ್ರಿ ಕೊಟ್ಟ ಇವರಿಗೆ ತೆಲುಗಿನ  ʼಮೆಂಟಲ್‌ ಮಡಿಲೋʼ ಚಿತ್ರ  ಸಾಕಷ್ಟು ಹೆಸರನ್ನು ತಂದುಕೊಟ್ಟಿತು. ತಮಿಳು, ತೆಲುಗು ಸಿನೆಮಾಗಳಲ್ಲಿ ಮಿಂಚಿದ ನಿವೇದಾ ಇತ್ತೀಚಿಗೆ ಯಾವುದೇ ಹೊಸ ಸಿನೆಮಾಗಳಲ್ಲಿ  ಕಾಣಿಸಿಕೊಂಡಿಲ್ಲ. ಆದರೆ ಇದೀಗ ಈ ಸುಂದರಿಗೆ ಸಂಬಂಧಿಸಿ ವಿಡಿಯೋವೊಂದು ವೈರಲ್‌ ಆಗಿದ್ದು, ನಟಿ ಪೊಲೀಸರೊಂದಿಗೆ ವಾಗ್ವಾದಕ್ಕಿಳಿದಿದ್ದು ಮಾತ್ರವಲ್ಲದೆ ಈ ದೃಶ್ಯವನ್ನು ವಿಡಿಯೋ ಚಿತ್ರಕರಣ ಮಾಡಿದವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ವೈರಲ್‌ ವಿಡಿಯೋವನ್ನು ಕಾರ್ತಿಕ್‌ (@Karthikkk_7) ಎಂಬವರು ತಮ್ಮ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.  ವೈರಲ್‌ ವಿಡಿಯೋದಲ್ಲಿ ನಟಿ ನಿವೇತಾ ಪೊಲೀಸರೊಂದಿಗೆ ವಾಗ್ವಾದಕ್ಕಿಳಿದಿರುವ ದೃಶ್ಯವನ್ನು ಕಾಣಬಹುದು. ಪೊಲೀಸರು ನಿವೇತಾ  ಅವರ ಕಾರನ್ನು ತಡೆದು ಟ್ರಂಕ್‌ ತೆರೆಯುವಂತೆ ಹೇಳಿದ್ದಾರೆ. ಡಾಕ್ಯುಮೆಂಟ್‌ಗಳೆಲ್ಲಾ ಸರಿಯಾಗಿವೆ, ದಯವಿಟ್ಟು ಅರ್ಥಮಾಡಿಕೊಳ್ಳಿ ನಾನು ಟ್ರಂಕ್‌ ತೆರೆಯಲ್ಲ. ಎಂದು ಹೇಳುತ್ತಾರೆ. ಪೊಲೀಸರು ಮತ್ತು ನಿವೇತಾ ಅವರ ನಡುವಿನ ವಾಗ್ವಾದದ ದೃಶ್ಯವನ್ನು ರೆಕಾರ್ಡ್‌ ಮಾಡುತ್ತಿದ್ದ ವ್ಯಕ್ತಿಗೂ ಆ ಸಂದರ್ಭದಲ್ಲಿ ನಟಿ ತರಾಟೆಗೆ ತೆಗೆದುಕೊಳ್ಳುತ್ತಾರೆ.

ಇದನ್ನೂ ಓದಿ: ರೈಲ್ವೆ ನಿಲ್ದಾಣ ಆಯ್ತೂ.. ಇದೀಗ ಏರ್‌ಪೋರ್ಟ್‌ನಲ್ಲೂ ಶುರುವಾಯಿತು ಈಕೆಯ ರೀಲ್ಸ್‌ ಹುಚ್ಚಾಟ

ವೈರಲ್​​​ ವಿಡಿಯೋ ಇಲ್ಲಿದೆ ನೋಡಿ:

ಒಂದು ದಿನದ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ 2 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ವಿಡಿಯೋದಲ್ಲಿ ಪೊಲೀಸರು ಕಾಲಿಗೆ ಕ್ರಾಕ್ಸ್‌ ಧರಿಸಿದ್ದ ಕಾರಣ ನೆಟ್ಟಿಗರು ಇದೆಲ್ಲಾ ಪಬ್ಲಿಸಿಟಿ ಸ್ಟಂಟ್‌ ಎಂದು ಕಾಮೆಂಟ್‌ ಮಾಡುತ್ತಿದ್ದಾರೆ. ಹೀಗಿದ್ದರೂ ನಟಿ ಈ ವಿಡಿಯೋದ ಬಗ್ಗೆ ಇನ್ನೂ ಯಾವುದೇ ಸ್ಪಷ್ಟನೆಯನ್ನು ನೀಡಿಲ್ಲ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ
ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ
ಮಾಧ್ಯಮದವರನ್ನು ಯಾಕೆ ಆಹ್ವಾನಿಸಿಲ್ಲ ಎಂದು ಜಾರಕಿಹೊಳಿಯನ್ನು ಕೇಳಬೇಕು: ಸಿಎಂ
ಮಾಧ್ಯಮದವರನ್ನು ಯಾಕೆ ಆಹ್ವಾನಿಸಿಲ್ಲ ಎಂದು ಜಾರಕಿಹೊಳಿಯನ್ನು ಕೇಳಬೇಕು: ಸಿಎಂ
ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗು: ಧನುಗೆ ಹನುಮಂತ ಹೀಗೆ ಹೇಳಿದ್ದೇಕೆ?
ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗು: ಧನುಗೆ ಹನುಮಂತ ಹೀಗೆ ಹೇಳಿದ್ದೇಕೆ?
ಪ್ರಿಯಾಂಕ್ ಹೇಳಿದ್ದನ್ನು ಸಿದ್ದರಾಮಯ್ಯ ಬಹಳ ಹೊತ್ತು ಕಿವಿಗೆ ಹಾಕ್ಕೊಳಲ್ಲ!
ಪ್ರಿಯಾಂಕ್ ಹೇಳಿದ್ದನ್ನು ಸಿದ್ದರಾಮಯ್ಯ ಬಹಳ ಹೊತ್ತು ಕಿವಿಗೆ ಹಾಕ್ಕೊಳಲ್ಲ!
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ಹೆಚ್​ಎಂಪಿ ವೈರಸ್ ವಿಷಯದಲ್ಲಿ ನಮ್ಮ ಸರ್ಕಾರ ಅಲರ್ಟ್ ಆಗಿದೆ: ಶಿವಕುಮಾರ್
ಹೆಚ್​ಎಂಪಿ ವೈರಸ್ ವಿಷಯದಲ್ಲಿ ನಮ್ಮ ಸರ್ಕಾರ ಅಲರ್ಟ್ ಆಗಿದೆ: ಶಿವಕುಮಾರ್