ಪ್ರೇಯಸಿಯೊಂದಿಗಿರಲು ಆಕೆಯ ಮನೆಗೆ ಹುಡುಗಿ ವೇಷತೊಟ್ಟು ಹೋಗುತ್ತಿದ್ದ ಪ್ರಿಯಕರ; ಕಡೆಗೂ ಸಿಕ್ಕಿಬಿದ್ದ!
ಮೀಸೆಯನ್ನು ಮರೆಮಾಡಲು ಸ್ಕಾರ್ಫ್ನಿಂದ ತನ್ನ ಮುಖವನ್ನು ಮುಚ್ಚಿದ್ದು, ಇದಲ್ಲದೇ ಈತನ ನಡಿಗೆ ಕಂಡು ಸ್ಥಳೀಯರಿಗೆ ಅನುಮಾನ ಹುಟ್ಟಿಕೊಂಡಿದೆ. ಪತೀದಿನ ಬರುತ್ತಿದ್ದರಿಂದ ನಾಳಿನ ಬರುವಿಕೆಗಾಗಿ ಕಾಲೋನಿ ನಿವಾಸಿಗಳು ಕಾದು ಕುಳಿತಿದ್ದರು. ಮಾರನೇ ದಿನ ಸಲ್ವಾರ್ ಸೂಟ್ ಧರಿಸಿದ್ದ ಬಂದಿದ್ದ ವೇಳೆ ನೆರೆಹೊರೆಯವರು ಆತನನ್ನು ಹಿಡಿದು ಮನಬದ್ದಂತೆ ಥಳಿಸಿದ್ದಾರೆ.
ಮಧ್ಯಪ್ರದೇಶ: ತನ್ನ ಪ್ರೇಯಸಿಯೊಂದಿಗೆ ಸಮಯ ಕಳೆಯಲು ಆಕೆಯ ಮನೆಗೆ ಹುಡುಗಿಯ ವೇಷತೊಟ್ಟು ಹೋಗುತ್ತಿದ್ದ ಪ್ರಿಯಕರ ಇದೀಗ ಸಿಕ್ಕಿಬಿದ್ದಿರುವ ಘಟನೆ ಮಧ್ಯಪ್ರದೇಶದ ಛಿಂದ್ವಾರಾದಲ್ಲಿ ನಡೆದಿದೆ. ಹುಡುಗಿಯಂತೆ ಚೂಟಿದಾರ್ ಧರಿಸಿ ತಲೆ ಹಾಗೂ ಮುಖಕ್ಕೆ ಶಾಲು ಸುತ್ತಿಕೊಂಡು ಪ್ರೇಯಿಸಿಯ ಮನೆಗೆ ಹೋಗಿ ಆಕೆಯೊಂದಿಗೆ ಸಮಯ ಕಳೆದು ಬರುತ್ತಿದ್ದ ಯುವಕನನ್ನು ಇದೀಗ ಸ್ಥಳೀಯರು ಮನಬಂದಂತೆ ಥಳಿಸಿದ್ದಾರೆ.
ಮಾಹಿತಿಯ ಪ್ರಕಾರ, ಸೋನ್‌ಪುರ್, ಚಿಂದ್ವಾರದಲ್ಲಿ ಅವನು ತನ್ನ ಮೀಸೆಯನ್ನು ಮರೆಮಾಡಲು ಸ್ಕಾರ್ಫ್ನಿಂದ ತನ್ನ ಮುಖವನ್ನು ಮುಚ್ಚಿದ್ದನು. ಇದಲ್ಲದೇ ಈತನ ನಡಿಗೆ ಕಂಡು ಸ್ಥಳೀಯರಿಗೆ ಅನುಮಾನ ಹುಟ್ಟಿಕೊಂಡಿದೆ. ಪತೀದಿನ ಬರುತ್ತಿದ್ದರಿಂದ ನಾಳಿನ ಬರುವಿಕೆಗಾಗಿ ಕಾಲೋನಿ ನಿವಾಸಿಗಳು ಕಾದು ಕುಳಿತ್ತಿದ್ದರು. ಮಾರನೇ ದಿನ ಸಲ್ವಾರ್ ಸೂಟ್ ಧರಿಸಿದ್ದ ಯುವಕ ತನ್ನ ಗೆಳತಿಯನ್ನು ಭೇಟಿ ಮಾಡಲು ಸ್ಕೂಟಿಯಲ್ಲಿ ಬಂದಿದ್ದ ವೇಳೆ ನೆರೆಹೊರೆಯವರು ಆತನನ್ನು ಹಿಡಿದು ಮನಬದ್ದಂತೆ ಥಳಿಸಿದ್ದಾರೆ.
ಇದನ್ನೂ ಓದಿ: ಮದುವೆಯಾದ ಎರಡೇ ದಿನದಲ್ಲೇ ಮಗುವಿಗೆ ಜನ್ಮ ನೀಡಿದ ಯುವತಿ; ಶಾಕ್ಗೆ ಒಳಗಾಗ ವರನ ಕುಟುಂಬ
ಈ ವೇಳೆ ಆತ ತನ್ನ ಪ್ರೇಯಸಿಯೊಂದಿಗಿರಲು ಈ ರೀತಿ ವೇಷ ತೊಟ್ಟು ಬರುವುದಾಗಿ ಹೇಳಿಕೊಂಡಿದ್ದಾನೆ. ಪ್ರಿಯಕರನಿಗೆ ಥಳಿಸುತ್ತಿರುವುದನ್ನು ನೋಡಿದ ಗೆಳತಿ ಮನೆಯಿಂದ ಹೊರಗೆ ಓಡಿ ಬಂದು ಇಡೀ ಕಥೆಯನ್ನು ಹೇಳಿ ಪ್ರೇಮಿಯನ್ನು ಜನರಿಂದ ರಕ್ಷಿಸಿದ್ದಾಳೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ