ಅನ್ಯಕೋಮಿನವನೊಂದಿಗೆ ಹಿಂದೂ ಯುವತಿ ಮದುವೆ: ವಿವಾಹ ಮಾಡಿಸಿದ್ದನಿಗೆ ಹಿಂದೂಗಳಿಂದ ಬೆದರಿಕೆ
ಚಿಕ್ಕಮಗಳೂರಿನಲ್ಲಿ ಅನ್ಯಕೋಮಿನ ಯುವಕನ ಜೊತೆ ಹಿಂದೂ ಯುವತಿ ಮದುವೆಯಾಗಿದ್ದು, ಈ ವಿವಾಹಕ್ಕೆ ಸಾಕ್ಷಿಯಾಗಿದ್ದ ಹಿಂದೂ ಯುವಕನ ಮೇಲೆ ಹಿಂದೂ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ. ಲವ್ ಜಿಹಾದ್ ಎಂದು ಆರೋಪಿಸಿ ಸಾಮಾಜಿಕ ಜಾಲತಾಣದಲ್ಲಿ ಬೆದರಿಕೆ ಹಾಕಲಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ಎಫ್‌ಐಆರ್ ದಾಖಲಾಗಿದೆ.

ಚಿಕ್ಕಮಗಳೂರು, ಮಾರ್ಚ್ 28: ಅನ್ಯಕೋಮಿನ ಯುವಕನ ಜೊತೆ ಹಿಂದೂ ಯುವತಿ ಮದುವೆ (marriage) ಮಾಡಿಸಿದ್ದ ಯುವಕನ ವಿರುದ್ಧ ಹಿಂದೂ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ. ಅವರ ರಿಜಿಸ್ಟರ್ ಮದುವೆಗೆ ಮಹೇಶ್ ಸಾಕ್ಷಿಗೆ ಸಹಿ ಹಾಕಿದ್ದ. ಹೀಗಾಗಿ ಲವ್ ಜಿಹಾದ್ಗೆ (Love Jihad) ಬೆಂಬಲ ನೀಡಿದ ಧರ್ಮ ದ್ರೋಹಿ ಎಂದು ಸಾಮಾಜಿಕ ಜಾಲತಾಣ ಮೂಲಕ ಯುವಕನಿಗೆ ಬೆದರಿಕೆ ಹಾಕಿ ಆಕ್ರೋಶ ವ್ಯಕ್ತಪಡಿಸಲಾಗಿದೆ. ಈ ಬಗ್ಗೆ ಮಹೇಶ್ ದೂರಿನ ಮೇರೆಗೆ ಬಸವನಹಳ್ಳಿ ಠಾಣೆಯಲ್ಲಿ ಬಜರಂಗದಳ ಜಿಲ್ಲಾ ಮುಖಂಡ ಶ್ಯಾಮ್ ಮತ್ತು ಸಾಗರ್ ವಿರುದ್ಧ ಬಿಎನ್ಎಸ್ 353(1)(C), 353(2)ಅಡಿ ಎಫ್‌ಐಆರ್ ದಾಖಲಾಗಿದೆ.
ಚಿಕ್ಕಮಗಳೂರು ನಗರದಲ್ಲಿ ಮಹೇಶ್ ಗೋಬಿ ಅಂಗಡಿ ನಡೆಸುತ್ತಿದ್ದಾರೆ. ಇದೇ ಗೋಬಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಅನ್ಯಕೋಮಿನ ಯುವಕ ಮತ್ತು ಹಿಂದೂ ಯುವತಿ ಪರಸ್ಪರ ಪ್ರೀತಿಸುತ್ತಿದ್ದರು. ಹೀಗಾಗಿ ನಾಲ್ಕು ದಿನಗಳ ಹಿಂದೆ ಚಿಕ್ಕಮಗಳೂರು ಸಬ್ ರಿಜಿಸ್ಟರ್ ಕಚೇರಿಯಲ್ಲಿ ಮುಂದೆ ನಿಂತು ಮಹೇಶ್ ಮದುವೆ ಮಾಡಿಸಿದ್ದ.
ಇದನ್ನೂ ಓದಿ: ತುಮಕೂರು: ಗರ್ಭಿಣಿಯಾಗಿದ್ದಾಗ್ಲೇ ಪರಪುರುಷನ ಜತೆ ಓಡಿಹೋಗಿದ್ದ ಮಹಿಳೆ, ಅಕ್ರಮ ಸಂಬಂಧಕ್ಕೆ ಅಡ್ಡಿಯೆಂದು ಮಗುವಿನ ಕೊಂದ ಮಲತಂದೆ
ಹೀಗಾಗಿ ಹಿಂದೂ ಸಂಘಟನೆಗಳು ಲವ್ ಜಿಹಾದ್ಗೆ ಬೆಂಬಲ ನೀಡಿದ್ದೀಯಾ ಎಂದು ಮಹೇಶ್ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಇದು ಲವ್ ಜಿಹಾದ್ ಎಂದು ಹಿಂದೂ ಸಂಘಟನೆಗಳು ಆರೋಪ ಮಾಡಿವೆ. ಸದ್ಯ ಚಿಕ್ಕಮಗಳೂರು ನಗರದಲ್ಲಿ ವಿವಾಹ ಚರ್ಚೆಗೆ ಕಾರಣವಾಗಿದೆ.
ಮದುವೆಯಾಗಲು ಸುಳ್ಳು ವಿಳಾಸ ಕೊಟ್ಟ ಅನ್ಯಕೋಮಿನ ಯುವಕ, ಹಿಂದೂ ಯುವತಿ
ಇತ್ತೀಚೆಗೆ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಲವ್ ಜಿಹಾದ್ ನಡೆಯುತ್ತಿದ್ದೆಯಾ ಎಂಬ ಅನುಮಾನಗಳು ಹುಟ್ಟಿಕೊಂಡಿದ್ದವು. ಅಂತಹದೊಂದು ಅನುಮಾನಕ್ಕೆ ಕಾರಣವಾಗಿದ್ದು ಮ್ಯಾರೇಜ್ ರಿಜಿಸ್ಟರ್ ಕಚೇರಿಯಲ್ಲಿ ಅಂಟಿಸಿದ್ದ ನೋಟಿಸ್. ವಯಸ್ಸಿಗೆ ಬಂದ ಅನ್ಯಕೋಮಿನ ಯುವಕ, ಹಿಂದೂ ಯುವತಿ ಮಾಡಿರುವ ಮ್ಯಾರೇಜ್ ರಿಜಿಸ್ಟರ್ನಲ್ಲಿ ಸುಳ್ಳು ವಿಳಾಸ ನೀಡಿದ್ದ ಘಟನೆ ನಡೆದಿತ್ತು.
ಅನ್ಯಕೋಮಿನ ಯುವಕ, ಹಿಂದೂ ಯುವತಿ ಮದುವೆಯಾಗಲು ನಕಲಿ ಪ್ರಮಾಣ ಪತ್ರವನ್ನು ನೀಡಿದ್ದರು. ಯಾರದೋ ಮನೆಯ ವಿಳಾಸವನ್ನು ತಮ್ಮ ಮನೆಯ ವಿಳಾಸ ಎಂದು ಹೇಳಿ ಹಿಂದೂ ಯುವತಿಯನ್ನ ಮದುವೆಯಾಗಲು ಅನ್ಯಕೋಮಿನ ಯುವಕ ಮುಂದಾಗಿದ್ದ.
ಇದನ್ನೂ ಓದಿ: ಅಕ್ರಮ ಸಂಬಂಧ ಮುಚ್ಚಿಟ್ಟುಕೊಳ್ಳಲು ಹುಟ್ಟಿದ ಕೂಸು ತಿಪ್ಪೆಗೆ: ಇಬ್ಬರು ಅರೆಸ್ಟ್
ಬೆಂಗಳೂರಿನ ಯುವಕ ಸಲ್ಮಾನ್ ಹಾಗೂ ಹಾಸನ ಮೂಲದ ಯುವತಿ ಪೂರ್ಣಿಮಾ ಇಬ್ಬರ ಸುಳ್ಳು ವಿಳಾಸ ನೀಡಿದ್ದು, ವಿಷಯ ತಿಳಿದ ಮನೆ ಮಾಲೀಕ ಕಂಗಾಲಾಗಿದ್ದರು. ಇಲ್ಲಿ ಯುವಕ, ಯುವತಿ ಮದುವೆಗೆ ಸುಳ್ಳು ಸುಳ್ಳು ದಾಖಲಾತಿಯನ್ನ ಕೊಟ್ಟು ಅಫಿಡವೀಟ್ ಹಾಕಿರುವುದು ಸಾಕಷ್ಟು ಅನುಮಾನಕ್ಕೆ ಕಾರಣವಾಗಿತ್ತು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 12:38 pm, Fri, 28 March 25