ಮುಸ್ಲಿಮರ ಪವಿತ್ರ ರಂಜಾನ್ ತಿಂಗಳು ಆರಂಭಕ್ಕೆ ದಿನಗಣನೆ: ಇಂದು ದರ್ಶನವಾಗದ ಚಂದ್ರ
ಕರ್ನಾಟಕದಲ್ಲಿ ರಂಜಾನ್ ತಿಂಗಳ ಆರಂಭಕ್ಕಾಗಿ ಮುಸ್ಲಿಮರ ಕಾಯುತ್ತಿದ್ದಾರೆ. ಇಂದು ಚಂದ್ರ ದರ್ಶನ ಆಗದ ಕಾರಣ, ರಾಜ್ಯಾದ್ಯಂತ ಭಾನುವಾರದಿಂದ ಉಪವಾಸ ಆರಂಭವಾಗಲಿದೆ. ಕರಾವಳಿ ಭಾಗದಲ್ಲಿ ನಾಳೆ ಚಂದ್ರ ದರ್ಶನವಾಗುವ ಸಾಧ್ಯತೆಯಿದೆ. ವಕ್ಫ್ ಮಂಡಳಿಯ ಮಾಜಿ ಅಧ್ಯಕ್ಷ ಮೌಲಾನಾ ಶಫಿ ಸಅದಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ.

ಬೆಂಗಳೂರು, ಫೆಬ್ರವರಿ 28: ಮುಸ್ಲಿಮರ ಪವಿತ್ರ ರಂಜಾನ್ (Ramadan) ತಿಂಗಳು ಆರಂಭಕ್ಕೆ ದಿನಗಣನೆ ಶುರುವಾಗಿದೆ. ನಾಳೆ ಚಂದ್ರ ದರ್ಶನವಾದರೆ ಭಾನುವಾರದಿಂದ ರಂಜಾನ ಉಪವಾಸ ಆರಂಭವಾಗಲಿದೆ. ಕರಾವಳಿ ಭಾಗದಲ್ಲಿ ನಾಳೆ ಚಂದ್ರ ದರ್ಶನ ಸಾಧ್ಯತೆ ಇದೆ ಎಂದು ಟಿವಿ9 ಗೆ ವಕ್ಫ್ ಮಂಡಳಿ ಮಾಜಿ ಅಧ್ಯಕ್ಷ ಮೌಲಾನಾ ಶಫಿ ಸಅದಿ ಮಾಹಿತಿ ನೀಡಿದ್ದಾರೆ.
ಪವಿತ್ರ ರಂಜಾನ್ ತಿಂಗಳ ಆರಂಭಿಸಲು ಚಂದ್ರನ ದರ್ಶನಕ್ಕಾಗಿ ಪ್ರಪಂಚದಾದ್ಯಂತದ ಮುಸ್ಲಿಮರು ಕಾತುರದಿಂದ ಕಾಯುತ್ತಿದ್ದಾರೆ. ರಂಜಾನ್ ಮಾಸದಲ್ಲಿ ಮುಸ್ಲಿಂ ಬಾಂಧವರು ಉಪವಾಸ ಆಚರಣೆ ಮಾಡುತ್ತಾರೆ. ನಿತ್ಯ ಸೂರ್ಯೋದಯಕ್ಕೂ ಮುನ್ನ ಹಾಗೂ ಸೂರ್ಯಹಸ್ತದ ಬಳಿಕ ಇಫ್ತಾರ್ ಆಚರಿಸುತ್ತಾರೆ.
ಇದನ್ನೂ ಓದಿ: ರಂಜಾನ್ ಮಾಸದಲ್ಲಿ ಮುಸ್ಲಿಂ ಸರ್ಕಾರಿ ನೌಕರರಿಗೆ ಆಫೀಸ್ನಿಂದ ಬೇಗ ಹೊರಡಲು ಅವಕಾಶ; ಬಿಜೆಪಿ ಆಕ್ರೋಶ
ಇಸ್ಲಾಮಿಕ್ ನಂಬಿಕೆಯ ಪ್ರಕಾರ ಪ್ರವಾದಿ ಮುಹಮ್ಮದ್‌ಗೆ ಕುರಾನ್‌ನ ಮೊದಲ ಬಹಿರಂಗಪಡಿಸುವಿಕೆಯ ಸ್ಮರಣಾರ್ಥವಾಗಿ ರಂಜಾನ ಉಪವಾಸವನ್ನು ಆಚರಿಸಲಾಗುತ್ತದೆ. ಈ ಇಸ್ಲಾಮಿಕ್ ಪವಿತ್ರ ತಿಂಗಳ ಆರಂಭವು ಚಂದ್ರ ದರ್ಶನದ ಮೂಲಕ ಆರಂಭಗೊಳ್ಳುತ್ತದೆ.
ಕರ್ನಾಟಕದಲ್ಲೂ ಮುಸ್ಲಿಂ ಸರ್ಕಾರಿ ನೌಕರರಿಗೆ ಅವಕಾಶ ನೀಡುವಂತೆ ಮನವಿ
ರಂಜಾನ್ ಮಾಸ ಸಮೀಪಿಸುತ್ತಿದೆ. ನೆರೆಯ ಆಂಧ್ರ ಮತ್ತು ತೆಲಂಗಾಣ ಸರ್ಕಾರಗಳು ರಂಜಾನ್ ಮಾಸದಲ್ಲಿ ಸರ್ಕಾರಿ ಕಚೇರಿಗಳಲ್ಲಿ ಕೆಲಸ ಮಾಡುವ ಮುಸ್ಲಿಂ ಸಿಬ್ಬಂದಿಗೆ ಸಂಜೆ 4 ಗಂಟೆ ಬಳಿಕ ಉಪವಾಸ ಬಿಡಲು ಅನುಮತಿ ನೀಡಿದೆ. ಇದೇ ಮಾದರಿಯಲ್ಲೇ ಕರ್ನಾಟಕದಲ್ಲೂ ಮುಸ್ಲಿಂ ಸಿಬ್ಬಂದಿಗೆ ಅವಕಾಶ ನೀಡಬೇಕೆಂದು ಸಿಎಂ ಸಿದ್ದರಾಮಯ್ಯಗೆ ಮನವಿ ಸಲ್ಲಿಸಲಾಗಿದೆ.
ಇದನ್ನೂ ಓದಿ: ಕರ್ನಾಟಕದಲ್ಲಿ ಇನ್ಮುಂದೆ ತಯಾರಾಗುವ ಎಲ್ಲಾ ಉತ್ಪನ್ನಗಳ ಮೇಲೆ ಕನ್ನಡ ಲೇಬಲ್ ಕಡ್ಡಾಯ
ರಂಜಾನ್ ಉಪವಾಸ ತೊರೆಯಲು ಅನುಕೂಲ ಆಗುವಂತೆ ಮುಸ್ಲಿಂ ಸರ್ಕಾರಿ ನೌಕರರಿಗೆ ವಿನಾಯಿತಿ ನೀಡುವಂತೆ ಕಾಂಗ್ರೆಸ್ ಅಲ್ಪಸಂಖ್ಯಾತ ನಾಯಕರಾದ ಸೈಯದ್ ಅಹ್ಮದ್ ಮತ್ತು ಎ.ಆರ್.ಎಂ.ಹುಸೈನ್ ಮನವಿ ಸಲ್ಲಿಸಿದ್ದಾರೆ. ಸಿಎಂ ರಾಜಕೀಯ ಕಾರ್ಯದರ್ಶಿ ನಝೀರ್ ಅಹ್ಮದ್ ಅಹ್ಮದ್ ಮೂಲಕ ಒತ್ತಾಯಿಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.