- Kannada News Photo gallery A bike theft Arrested In Bengaluru Total 100 Bike seized By kr puram Police News In Kannada
ಬೆಂಗಳೂರಿನಲ್ಲಿ ಸಿಕ್ಕಿಬಿದ್ದ ಸೆಂಚುರಿ ಸ್ಟಾರ್ ಕಳ್ಳ: 1.45 ಕೋಟಿ ಮೌಲ್ಯದ 100 ಬೈಕ್ ವಶಕ್ಕೆ!
ಬೆಂಗಳೂರಿನಲ್ಲೊಬ್ಬ ಖತರ್ನಾಕ್ ಬೈಕ್ ಕಳ್ಳ ಸಿಕ್ಕಿಬಿದ್ದಿದ್ದಾನೆ. ಈ ಸಾಮಾನ್ಯ ಖದೀಮ ಅಲ್ಲ. ಬೈಕ್ ಕದಿಯುವುದರಲ್ಲಿ ಇವನು ಸೆಂಚುರಿಯನ್ನೇ ಬಾರಿಸಿದ್ದಾನೆ. ಮೂರು ವರ್ಷದಲ್ಲಿ ಈತ ಕಳ್ಳತ ಮಾಡಿದ್ದು 1.45 ಕೋಟಿ ಮೌಲ್ಯದ ಬರೋಬ್ಬರಿ 100 ಬೈಕ್ಗಳನ್ನು. ಹೌದು.. ಅಚ್ಚರಿ ಅನ್ನಿಸಿದರೂ ಸತ್ಯ. ಹಾಗಾದ್ರೆ, ಈ ಮಹಾ ಖದೀಮ ಯಾರು? ಯಾವ್ಯಾವ ಕಂಪನಿಯ ಎಷ್ಟೆಷ್ಟು ಬೈಕ್ ಕಳ್ಳತನ ಮಾಡಿದ್ದಾನೆ ಎನ್ನುವ ವಿವರ ಇಲ್ಲಿದೆ ನೋಡಿ.
Updated on: Feb 28, 2025 | 6:52 PM

ಬೆಂಗಳೂರಿನಲ್ಲೊಬ್ಬ ಖತರ್ನಾಕ್ ಬೈಕ್ ಕಳ್ಳನನ್ನು ಕೆ.ಆರ್. ಪುರ ಪೊಲೀಸರು ಬಂಧಿಸಿದ್ದಾರೆ. ಈ ಕಳ್ಳ ಉಳಿದವರಂತೆ ಸಾಮಾನ್ಯ ಕಳ್ಳನಲ್ಲ. ಬೈಕ್ ಕದಿಯುವುದರಲ್ಲಿ ಇವನು ಸೆಂಚುರಿಯನ್ನೇ ಬಾರಿಸಿದ್ದಾನೆ. ಮೂರು ವರ್ಷದಲ್ಲಿ ಈತ ಕಳ್ಳತ ಮಾಡಿದ್ದು ಬರೋಬ್ಬರಿ ನೂರು ಬೈಕ್.

ಆಂಧ್ರಪ್ರದೇಶದ ಬಂಗಾರುಪಾಳ್ಯಂನ ನಿವಾಸಿಯಾದ ಪ್ರಸಾದಬಾಬು ಎಂದು ಈ ಬೈಕ್ ಖದೀಮನನ್ನು ಗುರುತಿಸಲಾಗಿದೆ. ದುಬಾರಿ ಬೈಕ್ಗಳನ್ನೇ ಟಾರ್ಗೆಟ್ ಮಾಡ್ತಿದ್ದ ಈತ, ಲಕ್ಷಾಂತರ ರೂಪಾಯಿಯ ಬೈಕ್ಗಳನ್ನು ಕೇವಲ 15 ರಿಂದ 20 ಸಾವಿರ ರೂಪಾಯಿಗೆ ಮಾರಿಕೊಂಡು ದುಡ್ಡು ಮಾಡಿಕೊಳ್ಳುತ್ತಿದ್ದ.

ಮನೆ ಮುಂದೆ ನಿಲ್ಲಿಸಿದ್ದ ಬೈಕ್ಗಳ ಚಿಟಕಿ ಹೊಡೆಯುವುದರಲ್ಲೇ ಹ್ಯಾಂಡಲ್ ಲಾಕ್ ಮುರಿದು ಕಳ್ಳತನ ಮಾಡುತ್ತಿದ್ದ. ಬಳಿಕ ಕಡಿಮೆ ಹಣಕ್ಕೆ ಮಾರಿಕೊಂಡು ಬಂದ ಹಣದಲ್ಲಿಯೇ ಮೋಜು ಮಸ್ತಿ ಮಾಡುತ್ತಿದ್ದ. ಬೆಂಗಳೂರು, ಚಿತ್ತೂರು, ತಿರುಪತಿ ಸೇರಿ ಹಲವು ಕಡೆ ಈತ ತನ್ನ ಕೈಚಳಕ ತೋರಿಸಿದ್ದಾನೆ.

ಇನ್ನು ಒಂದು ವಿಚಿತ್ರ ಸಂಗತಿ ಅಂದ್ರೆ ಇವನು ಪ್ರತಿದಿನ ಸಂಜೆ ಬಸ್ನಲ್ಲಿ ಬೆಂಗಳೂರಿಗೆ ಬಂದು ತಲುಪುತ್ತಿದ್ದ. ನಂತರ ಕೆ.ಆರ್.ಪುರ, ಟಿನ್ ಫ್ಯಾಕ್ಟರಿ, ಮಹದೇವಪುರ ಜನವಸತಿ ಪ್ರದೇಶಗಳಲ್ಲಿ ಓಡಾಡುತ್ತಿದ್ದ. ಮನೆ ಮುಂದೆ ನಿಂತಿರುವ ಬೈಕ್ಗಳನ್ನು ಕದ್ದು ಬಂದ ದಿನವೇ ಅದೇ ಬೈಕ್ನಲ್ಲಿ ವಾಪಸ್ ಊರಿಗೆ ಎಸ್ಕೇಪ್ ಆಗುತ್ತಿದ್ದ.

ಆರೋಪಿ ಪ್ರಸಾದ್ ಬಾಬು ಸ್ಕ್ರೂಡ್ರೈವರ್ ಬಳಸಿ ಬೈಕ್ನ ಲಾಕ್ ಓಪನ್ ಮಾಡುತ್ತಿದ್ದ, ಹೆಡ್ಲೈಟ್ ಭಾಗದ ಒಳಗೆ ಇರುವ ಎರಡು ವೈರ್ಗಳನ್ನು ಜೋಡಿಸಿ ಸೆಲ್ಫ್ಸ್ಟಾರ್ಟ್ ಮಾಡಿ ಬೈಕ್ ಕದ್ದು ಪರಾರಿಯಾಗುತ್ತಿದ್ದ. ಆತ ಹೇಗೆ ಬೈಕ್ ಕದಿಯುತ್ತಿದ್ದ ಎಂಬುದನ್ನ ಪೊಲೀಸರ ಮುಂದೆಯೇ ಒಂದು ಡೆಮೋ ಮಾಡಿ ತೋರಿಸಿದ್ದಾನೆ.

ಒಟ್ಟು 20 ರಾಯಲ್ ಎನ್ಫಿಲ್ಡ್, 30 ಪಲ್ಸರ್ ಬೈಕ್, 40 ಆ್ಯಕ್ಟಿವಾ ಬೈಕ್ಗಳನ್ನು ಸೇರಿ ಇನ್ನುಳಿದ ಹಲವು ದುಬಾರಿ ಬೈಕ್ಗಳನ್ನು ಕದ್ದಿದ್ದಾನೆ. ಸದ್ಯ ಪೊಲೀಸರು ಈ ಖತರ್ನಾಕ್ ಕಳ್ಳನನ್ನು ಬಂಧಿಸಿದ್ದು. ಸುಮಾರು 1.45 ಕೋಟಿ ರೂಪಾಯಿ ಮೌಲ್ಯದ 100 ಬೈಕ್ ವಶಕ್ಕೆ ಪಡೆದುಕೊಂಡಿದ್ದು. ಕೆ.ಆರ್.ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



















