AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿನಲ್ಲಿ ಸಿಕ್ಕಿಬಿದ್ದ ಸೆಂಚುರಿ ಸ್ಟಾರ್ ಕಳ್ಳ: 1.45 ಕೋಟಿ ಮೌಲ್ಯದ 100 ಬೈಕ್ ವಶಕ್ಕೆ!

ಬೆಂಗಳೂರಿನಲ್ಲೊಬ್ಬ ಖತರ್ನಾಕ್​ ಬೈಕ್ ಕಳ್ಳ ಸಿಕ್ಕಿಬಿದ್ದಿದ್ದಾನೆ. ಈ ಸಾಮಾನ್ಯ ಖದೀಮ ಅಲ್ಲ. ಬೈಕ್ ಕದಿಯುವುದರಲ್ಲಿ ಇವನು ಸೆಂಚುರಿಯನ್ನೇ ಬಾರಿಸಿದ್ದಾನೆ. ಮೂರು ವರ್ಷದಲ್ಲಿ ಈತ ಕಳ್ಳತ ಮಾಡಿದ್ದು 1.45 ಕೋಟಿ ಮೌಲ್ಯದ ಬರೋಬ್ಬರಿ 100 ಬೈಕ್​ಗಳನ್ನು. ಹೌದು.. ಅಚ್ಚರಿ ಅನ್ನಿಸಿದರೂ ಸತ್ಯ. ಹಾಗಾದ್ರೆ, ಈ ಮಹಾ ಖದೀಮ ಯಾರು? ಯಾವ್ಯಾವ ಕಂಪನಿಯ ಎಷ್ಟೆಷ್ಟು ಬೈಕ್ ಕಳ್ಳತನ ಮಾಡಿದ್ದಾನೆ ಎನ್ನುವ ವಿವರ ಇಲ್ಲಿದೆ ನೋಡಿ.

ರಮೇಶ್ ಬಿ. ಜವಳಗೇರಾ
|

Updated on: Feb 28, 2025 | 6:52 PM

Share
ಬೆಂಗಳೂರಿನಲ್ಲೊಬ್ಬ ಖತರ್ನಾಕ್​ ಬೈಕ್ ಕಳ್ಳನನ್ನು ಕೆ.ಆರ್​. ಪುರ ಪೊಲೀಸರು ಬಂಧಿಸಿದ್ದಾರೆ. ಈ ಕಳ್ಳ ಉಳಿದವರಂತೆ ಸಾಮಾನ್ಯ ಕಳ್ಳನಲ್ಲ. ಬೈಕ್ ಕದಿಯುವುದರಲ್ಲಿ ಇವನು ಸೆಂಚುರಿಯನ್ನೇ ಬಾರಿಸಿದ್ದಾನೆ. ಮೂರು ವರ್ಷದಲ್ಲಿ ಈತ ಕಳ್ಳತ ಮಾಡಿದ್ದು ಬರೋಬ್ಬರಿ ನೂರು ಬೈಕ್​.

1 / 6
ಆಂಧ್ರಪ್ರದೇಶದ ಬಂಗಾರುಪಾಳ್ಯಂನ ನಿವಾಸಿಯಾದ ಪ್ರಸಾದಬಾಬು ಎಂದು ಈ ಬೈಕ್ ಖದೀಮನನ್ನು ಗುರುತಿಸಲಾಗಿದೆ. ದುಬಾರಿ ಬೈಕ್​ಗಳನ್ನೇ ಟಾರ್ಗೆಟ್​ ಮಾಡ್ತಿದ್ದ ಈತ, ಲಕ್ಷಾಂತರ ರೂಪಾಯಿಯ ಬೈಕ್​ಗಳನ್ನು ಕೇವಲ 15 ರಿಂದ 20 ಸಾವಿರ ರೂಪಾಯಿಗೆ ಮಾರಿಕೊಂಡು ದುಡ್ಡು ಮಾಡಿಕೊಳ್ಳುತ್ತಿದ್ದ.

2 / 6
ಮನೆ ಮುಂದೆ ನಿಲ್ಲಿಸಿದ್ದ ಬೈಕ್​ಗಳ ಚಿಟಕಿ ಹೊಡೆಯುವುದರಲ್ಲೇ ಹ್ಯಾಂಡಲ್​ ಲಾಕ್ ಮುರಿದು ಕಳ್ಳತನ ಮಾಡುತ್ತಿದ್ದ. ಬಳಿಕ ಕಡಿಮೆ ಹಣಕ್ಕೆ ಮಾರಿಕೊಂಡು ಬಂದ ಹಣದಲ್ಲಿಯೇ ಮೋಜು ಮಸ್ತಿ ಮಾಡುತ್ತಿದ್ದ. ಬೆಂಗಳೂರು, ಚಿತ್ತೂರು, ತಿರುಪತಿ ಸೇರಿ ಹಲವು ಕಡೆ ಈತ ತನ್ನ ಕೈಚಳಕ ತೋರಿಸಿದ್ದಾನೆ.

3 / 6
ಇನ್ನು ಒಂದು ವಿಚಿತ್ರ ಸಂಗತಿ ಅಂದ್ರೆ ಇವನು ಪ್ರತಿದಿನ ಸಂಜೆ ಬಸ್​​ನಲ್ಲಿ ಬೆಂಗಳೂರಿಗೆ ಬಂದು ತಲುಪುತ್ತಿದ್ದ. ನಂತರ ಕೆ.ಆರ್​.ಪುರ, ಟಿನ್​ ಫ್ಯಾಕ್ಟರಿ, ಮಹದೇವಪುರ ಜನವಸತಿ ಪ್ರದೇಶಗಳಲ್ಲಿ ಓಡಾಡುತ್ತಿದ್ದ. ಮನೆ ಮುಂದೆ ನಿಂತಿರುವ ಬೈಕ್​ಗಳನ್ನು ಕದ್ದು ಬಂದ ದಿನವೇ ಅದೇ ಬೈಕ್​ನಲ್ಲಿ ವಾಪಸ್ ಊರಿಗೆ ಎಸ್ಕೇಪ್ ಆಗುತ್ತಿದ್ದ.

4 / 6
ಆರೋಪಿ ಪ್ರಸಾದ್​ ಬಾಬು ಸ್ಕ್ರೂಡ್ರೈವರ್​ ಬಳಸಿ ಬೈಕ್​ನ ಲಾಕ್ ಓಪನ್ ಮಾಡುತ್ತಿದ್ದ, ಹೆಡ್​​ಲೈಟ್​​ ಭಾಗದ ಒಳಗೆ ಇರುವ ಎರಡು ವೈರ್​ಗಳನ್ನು ಜೋಡಿಸಿ ಸೆಲ್ಫ್​ಸ್ಟಾರ್ಟ್ ಮಾಡಿ ಬೈಕ್​ ಕದ್ದು ಪರಾರಿಯಾಗುತ್ತಿದ್ದ. ಆತ ಹೇಗೆ ಬೈಕ್ ಕದಿಯುತ್ತಿದ್ದ ಎಂಬುದನ್ನ ಪೊಲೀಸರ ಮುಂದೆಯೇ ಒಂದು ಡೆಮೋ ಮಾಡಿ ತೋರಿಸಿದ್ದಾನೆ.

5 / 6
 ಒಟ್ಟು 20 ರಾಯಲ್ ಎನ್​​ಫಿಲ್ಡ್​, 30 ಪಲ್ಸರ್ ಬೈಕ್, 40 ಆ್ಯಕ್ಟಿವಾ ಬೈಕ್​ಗಳನ್ನು ಸೇರಿ ಇನ್ನುಳಿದ ಹಲವು ದುಬಾರಿ ಬೈಕ್​ಗಳನ್ನು ಕದ್ದಿದ್ದಾನೆ. ಸದ್ಯ ಪೊಲೀಸರು ಈ ಖತರ್ನಾಕ್ ಕಳ್ಳನನ್ನು ಬಂಧಿಸಿದ್ದು. ಸುಮಾರು 1.45 ಕೋಟಿ ರೂಪಾಯಿ ಮೌಲ್ಯದ 100 ಬೈಕ್ ವಶಕ್ಕೆ ಪಡೆದುಕೊಂಡಿದ್ದು. ಕೆ.ಆರ್​.ಪುರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

6 / 6
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ

ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!

ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ

ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್

ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ

ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು

ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ

ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!

ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು

ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ