AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Summer Tips : ಸ್ಟೈಲಿಶ್ ಆಗಿ ಕಾಣಲು ಬೇಸಿಗೆಯಲ್ಲಿ ಶೂ ಧರಿಸ್ತೀರಾ? ಹಾಗಾದ್ರೆ ಈ ವಿಷಯ ತಿಳಿದಿರಲಿ

ಬೇಸಿಗೆ ಕಾಲ ಬಂದಿದೆ. ಈ ಋತುವಿನಲ್ಲಿ ಬಿಸಿಲು, ಶಾಖ ಮತ್ತು ತೇವಾಂಶದಿಂದ ಬೆವರುವುದು ಸರ್ವೇ ಸಾಮಾನ್ಯವಾಗಿ ಬಿಟ್ಟಿದೆ. ಈ ಸಮಯದಲ್ಲಿ ಸೇವಿಸುವ ಆಹಾರ, ಆರೋಗ್ಯ, ಧರಿಸುವ ಬಟ್ಟೆ ಹಾಗೂ ಪಾದರಕ್ಷೆಗಳ ಮೇಲೆ ಹೆಚ್ಚು ಗಮನ ವಹಿಸಬೇಕಾಗುತ್ತದೆ. ಈ ಬೇಸಿಗೆಯಲ್ಲಿ ಸ್ಟೈಲಿಶ್ ಆಗಿ ಕಾಣಲು ಶೂ ಧರಿಸಿ ಓಡಾಡುತ್ತಾರೆ. ಆದರೆ ಕೆಲವೊಮ್ಮೆ ದುರ್ಗಂಧ ಬೀರುವ ಶೂ ವಾಸನೆ ನಿಮ್ಮನ್ನು ಮುಜುಗರಕ್ಕೀಡು ಮಾಡುತ್ತದೆ. ಹಾಗಾದ್ರೆ ಬೇಸಿಗೆಯ ಋತುವಿನಲ್ಲಿ ಶೂ ಧರಿಸಿದರೆ ಏನೆಲ್ಲಾ ಸಮಸ್ಯೆಗಳು ಉಂಟಾಗುತ್ತದೆ? ಶೂ ಧರಿಸುವವರು ಪಾದಗಳ ಕಾಳಜಿ ವಹಿಸುವುದು ಹೇಗೆ? ಎನ್ನುವ ಕುರಿತಾದ ಮಾಹಿತಿ ಇಲ್ಲಿದೆ.

Summer Tips : ಸ್ಟೈಲಿಶ್ ಆಗಿ ಕಾಣಲು ಬೇಸಿಗೆಯಲ್ಲಿ ಶೂ ಧರಿಸ್ತೀರಾ? ಹಾಗಾದ್ರೆ ಈ ವಿಷಯ ತಿಳಿದಿರಲಿ
ಸಾಂದರ್ಭಿಕ ಚಿತ್ರ
Follow us
ಸಾಯಿನಂದಾ
| Updated By: ಅಕ್ಷಯ್​ ಪಲ್ಲಮಜಲು​​

Updated on: Mar 28, 2025 | 1:58 PM

ಮಾರುಕಟ್ಟೆಗೆ ಬಣ್ಣ ಬಣ್ಣದ ಆಕರ್ಷಕ ಶೂ (Shoe) ಗಳು ಲಗ್ಗೆ ಇಟ್ಟು ಫ್ಯಾಷನ್ ಪ್ರಿಯರ ಗಮನ ಸೆಳೆಯುತ್ತವೆ. ಈ ಶೂಗಳಲ್ಲಿಯೂ ಸಾಕಷ್ಟು ವೆರೈಂಟಿಗಳನ್ನು ಕಾಣಬಹುದು. ಕೆಲವರು ತಮ್ಮ ಉಡುಗೆ ತೊಡುಗೆಗೆ ಮ್ಯಾಚ್ ಆಗುವಂತೆ ಶೂ ಖರೀದಿಸಿ ಧರಿಸುತ್ತಾರೆ. ಆದರೆ ಕೆಲವರು ಬೇಸಿಗೆ (Summer) ಯಲ್ಲಿ ದಿನವಿಡೀ ಶೂ ಧರಿಸಿ ಓಡಾಡುವುದನ್ನು ನೋಡಿರಬಹುದು. ಈ ಋತುವಿನಲ್ಲಿ ಶೂ ಧರಿಸುವುದು ಎಷ್ಟು ಸೂಕ್ತ?, ಅದಲ್ಲದೇ ಬೇಸಿಗೆಯಲ್ಲಿ ಶೂಗೆ ಹೆಚ್ಚು ಆದ್ಯತೆ ನೀಡುವವರು ಈ ಕೆಲವು ವಿಷಯಗಳನ್ನು ತಿಳಿದುಕೊಂಡಿದ್ದರೆ ಒಳ್ಳೆಯದು.

ಬೇಸಿಗೆಯಲ್ಲಿ ಶೂ ಧರಿಸುವವರಿಗೆ ಇಲ್ಲಿದೆ ಕಿವಿಮಾತು

  • ಬೇಸಿಗೆಯಲ್ಲಿ, ಪಾದಗಳಿಗೆ ಉಸಿರಾಡಲು ಅವಕಾಶ ಕೊಡಿ ಹೆಚ್ಚಿನವರು ದಿನಾಪೂರ್ತಿ ಶೂ ಹಾಕಿಕೊಂಡಿರುತ್ತಾರೆ. ಮನೆಗೆ ಬಂದ ಮೇಲೆ ಮತ್ತೆ ಸಾಕ್ಸ್ ಹಾಕಿ ಕೊಂಡು ಓಡಾಡಬೇಡಿ. ಬಿಸಿಲು ಮತ್ತು ಶಾಖದಿಂದಾಗಿ ಪಾದಗಳು ಹೆಚ್ಚು ಬೆವರುತ್ತದೆ. ಶೂಗಳು ಬಿಗಿಯಾಗಿರುವುದರಿಂದ ಇದು ಈ ಪಾದದ ವಾಸನೆಗೆ ಕಾರಣವಾಗುತ್ತದೆ. ಈ ಋತುವಿನಲ್ಲಿ ಲೆದರ್ ಶೂಗಳನ್ನು ಧರಿಸುವುದನ್ನು ಆದಷ್ಟು ತಪ್ಪಿಸಬೇಕು.
  • ಬೇಸಿಗೆಯಲ್ಲಿ, ತುಂಬಾ ಬಿಗಿಯಾಗಿಲ್ಲದ ಶೂಗಳು ಅಥವಾ ಪಾದರಕ್ಷೆಗಳನ್ನು ಖರೀದಿಸಿ. ತುಂಬಾ ಬಿಗಿಯಾದ ಶೂಗಳನ್ನು ಧರಿಸುವುದರಿಂದ ರಕ್ತ ಪರಿಚಲನೆ ಸಮಸ್ಯೆಗಳು, ಊತ ಮತ್ತು ಪಾದಗಳಲ್ಲಿ ನೋವು ಕಂಡು ಬರುತ್ತದೆ.
  • ದಿನವಿಡೀ ಗಾಳಿಯ ಪ್ರಸರಣವಿಲ್ಲದೇ ಪಾದಗಳನ್ನು ಶೂಗಳಲ್ಲಿ ಇರಿಸಿದರೆ ಬ್ಯಾಕ್ಟೀರಿಯಾದ ಸೋಂಕು ಮತ್ತು ಶಿಲೀಂಧ್ರಗಳು ಹೆಚ್ಚಾಗುವ ಸಾಧ್ಯತೆಯಿದೆ. ಹೀಗಾಗಿ ಇಂತಹ ಸಮಸ್ಯೆಗಳು ಬರದಂತೆ ಕೆಲವು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವುದು ಸೂಕ್ತ. ಹೀಗಾಗಿ ಗಾಳಿಯಾಡುವ ಹಗುರವಾದ ಪಾದರಕ್ಷೆಗಳ ಧರಿಸುವುದು ಉತ್ತಮ.
  • ಒಂದು ವೇಳೆ ಶೂ ಧರಿಸುವವರು ಕಾಲಕಾಲಕ್ಕೆ ಶೂಗಳನ್ನು ಸ್ವಚ್ಛಗೊಳಿಸುತ್ತ ಇರಿ. ಬೂಟುಗಳು ಮತ್ತು ಸಾಕ್ಸ್‌ಗಳನ್ನು ಸರಿಯಾಗಿ ಸ್ವಚ್ಛಗೊಳಿಸದಿದ್ದರೆ, ಅದು ನಿಮ್ಮ ಪಾದಗಳ ಚರ್ಮದ ಸೋಂಕಿಗೆ ಕಾರಣವಾಗಬಹುದು.
  • ಬೇಸಿಗೆಯಲ್ಲಿ ಭಾರವಾದ ಶೂಗಳನ್ನು ಧರಿಸಬೇಡಿ. ಇದು ನಿಮ್ಮ ಪಾದಗಳನ್ನು ಹೆಚ್ಚು ಬೆವರು ಮಾಡುವಂತೆ ಮಾಡುತ್ತದೆ. ಯಾವಾಗಲೂ ಬಟ್ಟೆಯಿಂದ ಮಾಡಿದ ಶೂ ಹಾಗೂ ಹತ್ತಿ ಸಾಕ್ಸ್‌ಗಳನ್ನು ಶೂಗಳೊಂದಿಗೆ ಧರಿಸಿ. ಈ ಸಮಯದಲ್ಲಿ, ನೈಲಾನ್ ಅಥವಾ ಪಾಲಿಯೆಸ್ಟರ್ ಬಟ್ಟೆಯಿಂದ ಮಾಡಿದ ಸಾಕ್ಸ್ ಧರಿಸುವುದನ್ನು ಆದಷ್ಟು ತಪ್ಪಿಸಿ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಲೈಂಗಿಕ ದೌರ್ಜನ್ಯ ನಡೆಸಿ ವಿಡಿಯೋ ಮಾಡಿದ್ದಾನೆ: ಮಡೆನೂರು ಮನು ಮೇಲೆ ಆರೋಪ
ಲೈಂಗಿಕ ದೌರ್ಜನ್ಯ ನಡೆಸಿ ವಿಡಿಯೋ ಮಾಡಿದ್ದಾನೆ: ಮಡೆನೂರು ಮನು ಮೇಲೆ ಆರೋಪ
ಕೆಣಕ್ಕಿದ ಸಿರಾಜ್​ಗೆ ಪೂರನ್ ನೀಡಿದ ಉತ್ತರ ಹೇಗಿತ್ತು ಗೊತ್ತಾ?
ಕೆಣಕ್ಕಿದ ಸಿರಾಜ್​ಗೆ ಪೂರನ್ ನೀಡಿದ ಉತ್ತರ ಹೇಗಿತ್ತು ಗೊತ್ತಾ?
ಗುಜರಾತ್ ವಿರುದ್ಧ ಸಿಡಿಲಬ್ಬರದ ಶತಕ ಸಿಡಿಸಿದ ಮಿಚೆಲ್ ಮಾರ್ಷ್
ಗುಜರಾತ್ ವಿರುದ್ಧ ಸಿಡಿಲಬ್ಬರದ ಶತಕ ಸಿಡಿಸಿದ ಮಿಚೆಲ್ ಮಾರ್ಷ್
ಭಾರತೀಯ ಸೇನೆ ಮಾಹಿತಿಯನ್ನು ಪಾಕಿಸ್ತಾನಕ್ಕೆ ಕಳಿಸುತ್ತಿದ್ದ ಇಬ್ಬರ ಬಂಧನ
ಭಾರತೀಯ ಸೇನೆ ಮಾಹಿತಿಯನ್ನು ಪಾಕಿಸ್ತಾನಕ್ಕೆ ಕಳಿಸುತ್ತಿದ್ದ ಇಬ್ಬರ ಬಂಧನ
ಇಲಿಗಳು ತಿಂದ ಆಹಾರವೇ ಈ ದೇವಸ್ಥಾನದ ಪ್ರಸಾದ: ಏನಿದರ ವಿಶೇಷತೆ?
ಇಲಿಗಳು ತಿಂದ ಆಹಾರವೇ ಈ ದೇವಸ್ಥಾನದ ಪ್ರಸಾದ: ಏನಿದರ ವಿಶೇಷತೆ?
ಬಿಜೆಪಿ ನಾಯಕರೆಲ್ಲ ಜೊತೆಗಿದ್ದೇವೆ, ನಮ್ಮ ಹೋರಾಟ ನಿಲ್ಲಲ್ಲ: ಚಲವಾದಿ
ಬಿಜೆಪಿ ನಾಯಕರೆಲ್ಲ ಜೊತೆಗಿದ್ದೇವೆ, ನಮ್ಮ ಹೋರಾಟ ನಿಲ್ಲಲ್ಲ: ಚಲವಾದಿ
ಗುಜರಾತ್​ನ ದಾಹೋದ್​ನಲ್ಲಿ 32 ವರ್ಷಗಳ ಬಳಿಕ ಹುಲಿ ಪ್ರತ್ಯಕ್ಷ
ಗುಜರಾತ್​ನ ದಾಹೋದ್​ನಲ್ಲಿ 32 ವರ್ಷಗಳ ಬಳಿಕ ಹುಲಿ ಪ್ರತ್ಯಕ್ಷ
ಗುತ್ತಿಗೆದಾರರಿಗೆ ಹಣ ಪಾವತಿಯಾಗದ ಕಾರಣ ಸಾಯಿ ಲೇಔಟ್​ನಲ್ಲಿ ಸಮಸ್ಯೆ: ನಿಖಿಲ್
ಗುತ್ತಿಗೆದಾರರಿಗೆ ಹಣ ಪಾವತಿಯಾಗದ ಕಾರಣ ಸಾಯಿ ಲೇಔಟ್​ನಲ್ಲಿ ಸಮಸ್ಯೆ: ನಿಖಿಲ್
‘ಅವನು ಸಾಯೋ ಬದಲು ಇವನು ಸಾಯಬಾರದಾ ಎಂದಿದ್ರು’: ಮಡೆನೂರು ಮನು
‘ಅವನು ಸಾಯೋ ಬದಲು ಇವನು ಸಾಯಬಾರದಾ ಎಂದಿದ್ರು’: ಮಡೆನೂರು ಮನು
ಕೇಂದ್ರಕ್ಕೆ ಪವರ್ ಇಲ್ಲ...ರಾಮನಗರ ಹೆಸರು ಬದಲಾವಣೆ ಬಗ್ಗೆ ಡಿಕೆಶಿ ಸ್ಪಷ್ಟನೆ
ಕೇಂದ್ರಕ್ಕೆ ಪವರ್ ಇಲ್ಲ...ರಾಮನಗರ ಹೆಸರು ಬದಲಾವಣೆ ಬಗ್ಗೆ ಡಿಕೆಶಿ ಸ್ಪಷ್ಟನೆ