AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Financial Success Tips : ಶ್ರೀಮಂತ ವ್ಯಕ್ತಿಯಾಗಿ ಬೆಳೆಯಬೇಕಾ? ಹಾಗಾದ್ರೆ ದುಡ್ಡು ಮಾಡುವ ಈ ರಹಸ್ಯ ತಿಳಿದಿರಲಿ

ಕೈ ತುಂಬಾ ಆದಾಯ, ಐಷಾರಾಮಿ ಬದುಕು ಎಲ್ಲರ ಕನಸಾಗಿರುತ್ತದೆ. ಆದರೆ ಕೆಲವರು ಮಾತ್ರ ಶ್ರೀಮಂತ ವ್ಯಕ್ತಿಯಾಗಿ ಜೀವನ ನಡೆಸುತ್ತಾರೆ. ಇನ್ನು ಕೆಲವರು ಎಷ್ಟೇ ಕಷ್ಟ ಪಟ್ಟು ದುಡಿದರೂ ಕೂಡ ಕೈಯಲ್ಲಿ ಒಂದು ರೂಪಾಯಿ ಉಳಿಯುವುದಿಲ್ಲ. ಈಗಿರುವಂತೆ ಬದುಕಿದರೆ ಹಣವನ್ನು ಸಂಪಾದಿಸಲು ಸಾಧ್ಯವೇ ಇಲ್ಲ. ಬುದ್ಧಿವಂತಿಕೆಯನ್ನು ಬಸಿ ಸವಾಲುಗಳನ್ನು ಎದುರಿಸಿ ಹೊಸ ಆದಾಯದ ಮೂಲಗಳನ್ನು ಕಂಡುಕೊಳ್ಳಬೇಕು. ಯಶಸ್ವಿ ವ್ಯಕ್ತಿಯಾಗಲು ಹಾಗೂ ಕೈ ತುಂಬಾ ಆದಾಯವು ನಿಮ್ಮದಾಗಬೇಕಾದರೆ ಈ ಕೆಲವು ರಹಸ್ಯಗಳು ತಿಳಿದಿದ್ದರೆ ಒಳ್ಳೆಯದು.

Financial Success Tips : ಶ್ರೀಮಂತ ವ್ಯಕ್ತಿಯಾಗಿ ಬೆಳೆಯಬೇಕಾ? ಹಾಗಾದ್ರೆ ದುಡ್ಡು ಮಾಡುವ ಈ ರಹಸ್ಯ ತಿಳಿದಿರಲಿ
ಸಾಂದರ್ಭಿಕ ಚಿತ್ರ
ಸಾಯಿನಂದಾ
| Edited By: |

Updated on:Mar 27, 2025 | 5:01 PM

Share

ದುಡ್ಡು (Money)ಯಾರಿಗೆ ತಾನೇ ಬೇಡ ಹೇಳಿ? ಹಣ ಕಂಡರೆ ಹೆಣ ಕೂಡ ಬಾಯಿ ಬಿಡುತ್ತದೆ. ಈಗೇನಿದ್ದರೂ ದುಡ್ಡಿನ ಮೇಲೆ ಎಲ್ಲವೂ ನಿಂತಿದೆ. ಕೈಯಲ್ಲಿ ಒಂದಷ್ಟು ಹಣಯಿದ್ದರೆ ಎಲ್ಲಾ ಕೆಲಸಗಳು ಆಗುತ್ತದೆ. ದುಡ್ಡಿದವನಿಗೆ ಮಾತ್ರ ಗೌರವ, ಮರ್ಯಾದೆ ಸಿಗುತ್ತದೆ. ಹಾಗಂತ ಎಲ್ಲರಿಗೂ ಕೂಡ ದುಡ್ಡು ಮಾಡಲು ಸಾಧ್ಯವಿಲ್ಲ. ಹಣ ಸಂಪಾದನೆ ಮಾಡುವುದು ಅನೇಕರಿಗೆ ನಿಗೂಢ ರಹಸ್ಯವಾದ್ರೆ, ಕೆಲವರಿಗೆ ಆ ಟ್ರಿಕ್ಸ್ (Tricks) ಚೆನ್ನಾಗಿ ಗೊತ್ತಿರುತ್ತದೆ. ದುಡ್ಡು ಮಾಡೋಕೆ ಹಗಲು ರಾತ್ರಿ ಕಷ್ಟ ಪಡಬೇಕು ಎನ್ನುವವರ ನಡುವೆ ಈ ಕೆಲವು ರಹಸ್ಯಗಳು ತಿಳಿದಿದ್ದರೆ ಹಣವು ಸಲೀಸಾಗಿ ಹರಿದು ಬರುತ್ತದೆ.

  • ಬಜೆಟ್ ಹೊಂದಿಸಿಕೊಳ್ಳಿ : ನಿಮ್ಮ ಆರ್ಥಿಕ ಪ್ರಗತಿಯ ಮೂಲಾಧಾರವೇ ಈ ಬಜೆಟ್ ಹೊಂದಿಸಿಕೊಳ್ಳುವುದು. ನೀವು ದುಡಿದ ಹಣವು ಎಲ್ಲಿಗೆ ಹೋಗುತ್ತಿದೆ ಎಂಬುದನ್ನು ಅರ್ಥಮಾಡಿಕೊಳ್ಳುವ ಮೂಲಕ ಅದಕ್ಕೆ ಅನುಗುಣವಾಗಿ ಬಜೆಟ್ ಹೊಂದಿಸಿಕೊಳ್ಳಿ. ಈ ಮೂಲಕ ಗುರಿಗಳಿಗೆ ಹೊಂದಿಕೆಯಾಗುವ ಮಾರ್ಗಸೂಚಿಯನ್ನು ರಚಿಸಬಹುದು. ಈ ಬಜೆಟ್ ಹೊಂದಿಕೆಯೂ ಹಣ ಉಳಿತಾಯ ಮಾಡುವುದು ಸಹಾಯ ಮಾಡುತ್ತದೆ.
  • ವೆಚ್ಚಗಳನ್ನು ಟ್ರ್ಯಾಕ್ ಮಾಡಿ : ಕೆಲವರ ಕೈಯಲ್ಲಿ ತಿಂಗಳ ಕೊನೆಯಲ್ಲಿ ಒಂದು ರೂಪಾಯಿ ಕೂಡ ಉಳಿಯಲ್ಲ. ದುಡಿದ ಹಣವು ಎಲ್ಲಿ ಹೋಯಿತು ಎನ್ನುವುದೇ ತಿಳಿಯುವುದೇ ಇಲ್ಲ. ಹೀಗಾಗಿ ವೆಚ್ಚಗಳನ್ನು ಟ್ರ್ಯಾಕ್ ಮಾಡುವುದು ಗೊತ್ತಿರಬೇಕು. ತಿಂಗಳ ಖರ್ಚುಗಳನ್ನು ಟ್ರ್ಯಾಕ್ ಮಾಡಲು ನೀವು ಬಜೆಟ್ ಸಾಫ್ಟ್‌ವೇರ್ ಅಥವಾ ಅಪ್ಲಿಕೇಶನ್‌ಗಳನ್ನು ಬಳಸಬಹುದು. ಇದು ನಿಮ್ಮ ಹಣ ಎಲ್ಲಿ ಖರ್ಚಾಯಿತು, ಆ ಹಣವನ್ನು ಹೇಗೆ ಉಳಿಸಬಹುದು ಎನ್ನುವುದು ತಿಳಿಯುತ್ತದೆ. ವೆಚ್ಚಗಳನ್ನು ಟ್ರ್ಯಾಕ್ ಮಾಡುವುದರಿಂದ ಬೇಡದ ಖರ್ಚು ವೆಚ್ಚಗಳಿಗೆ ಕಡಿವಾಣ ಹಾಕಲು ಸಾಧ್ಯವಾಗುತ್ತದೆ.
  • ತ್ವರಿತ ಹೂಡಿಕೆ ತಂತ್ರಗಳು : ಹೆಚ್ಚಿನವರಿಗೆ ಹೆಚ್ಚು ಆದಾಯ ಗಳಿಸಬೇಕು ಎನ್ನುವುದು ಇರುತ್ತದೆ. ಆದರೆ ಹೂಡಿಕೆ ಮಾಡುವ ತಂತ್ರಗಳ ಬಗ್ಗೆ ತಿಳಿದಿರುವುದಿಲ್ಲ. ಆದಾಯವನ್ನು ಹೆಚ್ಚಿಸಲು ಹೂಡಿಕೆ ಮಾಡುವುದು ಪರಿಣಾಮಕಾರಿ ಮಾರ್ಗಗಳಲ್ಲಿ ಒಂದಾಗಿದೆ. ಹೀಗಾಗಿ ರಿಯಲ್ ಎಸ್ಟೇಟ್, ಇಟಿಎಫ್‌ಗಳು ಅಥವಾ ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡುವ ಮೂಲಕ ಆದಾಯವಚ್ ಹೆಚ್ಚಿಸಿಕೊಳ್ಳಬಹುದು.
  • ಆದಾಯದ ಮೂಲ ಹೆಚ್ಚಿಸಿ : ಆದಾಯ ಹೆಚ್ಚಿಸಲು ಒಂದೇ ಆದಾಯದ ಮೂಲವನ್ನು ಅವಲಂಬಿಸಿರದೇ ಎರಡು ಅಥವಾ ಎರಡಕ್ಕಿಂತ ಹೆಚ್ಚಿನ ಆದಾಯ ಮೂಲವನ್ನು ಹೊಂದುವುದು. ಇದು ಆರ್ಥಿಕ ಭದ್ರತೆಯನ್ನು ಸೃಷ್ಟಿಸಿ ಹಣವನ್ನು ವೇಗಗೊಳಿಸಲು ಸಹಾಯ ಮಾಡುತ್ತದೆ. ಹೆಚ್ಚುವರಿ ಆದಾಯ ಗಳಿಸಲು ಡಿಜಿಟಲ್ ಉತ್ಪನ್ನಗಳನ್ನು ರಚಿಸುವುದು, ಲಾಭಾಂಶ ಪಾವತಿಸುವ ಷೇರುಗಳಲ್ಲಿ ಹೂಡಿಕೆ ಮಾಡುವುದು. ಯೂಟ್ಯೂಬ್ ಚಾನೆಲನ್ನು ಪ್ರಾರಂಭಿಸುವುದು, ಈ ಮೂಲಕ ಪ್ರತಿಭೆ ಅಥವಾ ಹವ್ಯಾಸಗಳನ್ನು ಬಳಸಿಕೊಳ್ಳುವುದು ಉತ್ತಮ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:54 pm, Thu, 27 March 25

ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಮಾಡದ ತಪ್ಪಿಗೆ ಸುಟ್ಟು ಕರಕಲಾದ ಸೀಬರ್ಡ್ ಬಸ್ಸಿನ ಕೊನೆಯ ದೃಶ್ಯ
ಮಾಡದ ತಪ್ಪಿಗೆ ಸುಟ್ಟು ಕರಕಲಾದ ಸೀಬರ್ಡ್ ಬಸ್ಸಿನ ಕೊನೆಯ ದೃಶ್ಯ
ಚಾಮರಾಜನಗರ ಬೋನಿಗೆ ಬಿದ್ದ ಹುಲಿ
ಚಾಮರಾಜನಗರ ಬೋನಿಗೆ ಬಿದ್ದ ಹುಲಿ
2026 ವೃಶ್ಚಿಕ ರಾಶಿಗೆ ಗುರು ಸಂಚಾರದಿಂದ ಆರ್ಥಿಕ ಪ್ರಗತಿಯ ವರ್ಷ
2026 ವೃಶ್ಚಿಕ ರಾಶಿಗೆ ಗುರು ಸಂಚಾರದಿಂದ ಆರ್ಥಿಕ ಪ್ರಗತಿಯ ವರ್ಷ
ಬಸ್​ ದುರಂತದಲ್ಲಿ ಸುಟ್ಟು ಕರಕಲಾದ ಮೃತದೇಹಗಳ ಗುರುತು ಪತ್ತೆ ಹೇಗಿರುತ್ತೆ?
ಬಸ್​ ದುರಂತದಲ್ಲಿ ಸುಟ್ಟು ಕರಕಲಾದ ಮೃತದೇಹಗಳ ಗುರುತು ಪತ್ತೆ ಹೇಗಿರುತ್ತೆ?