Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಿಮ್ಮ ಸಹದ್ಯೋಗಿಯನ್ನೇ ಮದುವೆಯಾಗಿ; ವೈಯಕ್ತಿಕ ಹಾಗೂ ವೃತ್ತಿ ಜೀವನವನ್ನು ನಿಭಾಯಿಸಲು ವಿಶಿಷ್ಟ ಸಲಹೆ ನೀಡಿದ ವ್ಯಕ್ತಿ

ಇಂದಿನ ಕಾಲಘಟ್ಟದಲ್ಲಿ ಕೆಲಸದ ಒತ್ತಡದಿಂದಾಗಿ ಹಲವರಿಗೆ ವರ್ಕ್‌-ಲೈಫ್‌ ಬ್ಯಾಲೆನ್ಸ್‌ ಮಾಡುವುದೇ ತುಂಬಾ ದೊಡ್ಡ ಸವಾಲಾಗಿ ಪರಿಣಮಿಸಿದೆ. ಕುಟುಂಬದೊಂದಿಗೆ ಅಥವಾ ವೈಯಕ್ತಿಕ ಸಮಯವನ್ನು ಕಳೆಯಲು ಟೈ ಸಿಕ್ತಿಲ್ಲ ಎಂದು ಬೇಸರ ಮಾಡಿಕೊಳ್ಳುತ್ತಾರೆ. ಅಂತಹವರಿಗಾಗಿ ಇಲ್ಲೊಬ್ರು ವ್ಯಕ್ತಿ ವಿಶಿಷ್ಟ ವರ್ಕ್‌ ಲೈಫ್‌ ಬ್ಯಾಲೆನ್ಸ್‌ ಟಿಪ್ಸ್‌ ನೀಡಿದ್ದಾರೆ. ಹೌದು ನಿಮ್ಮ ಸಹದ್ಯೋಗಿಗಳನ್ನೇ ಮದುವೆಯಾಗಿ ಇದರಿಂದ ಹಲವು ಪ್ರಯೋಜನಗಳಿಗೆ ಎಂದು ಅವರು ಹೇಳಿದ್ದು, ಈ ಪೋಸ್ಟ್‌ ಇದೀಗ ವೈರಲ್‌ ಆಗುತ್ತಿದೆ.

ನಿಮ್ಮ ಸಹದ್ಯೋಗಿಯನ್ನೇ ಮದುವೆಯಾಗಿ; ವೈಯಕ್ತಿಕ ಹಾಗೂ ವೃತ್ತಿ ಜೀವನವನ್ನು ನಿಭಾಯಿಸಲು ವಿಶಿಷ್ಟ ಸಲಹೆ ನೀಡಿದ ವ್ಯಕ್ತಿ
ವೈರಲ್​​ ಫೊಸ್ಟ್​
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on:Mar 27, 2025 | 2:08 PM

ಇಂದಿನ ಬಿಡುವಿಲ್ಲದ ಹಾಗೂ ಧಾವಂತದ ಬದುಕಿನಲ್ಲಿ ವೃತ್ತಿ (work) ಮತ್ತು ವೈಯಕ್ತಿಕ ಜೀವನದ (personal life) ನಡುವೆ ಸಮತೋಲನವನ್ನು ಕಾಯ್ದುಕೊಳ್ಳುವುದು ಜನರಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. 24×7 ಕೆಲಸವೇ ಆಯ್ತು, ಕುಟುಂಬದೊಂದಿಗೆ ಹಾಗೂ ವೈಯಕ್ತಿಕವಾಗಿ ಸಮಯ ಕಳೆಯಲು ಟೈಮ್‌ ಸಿಕ್ತಿಲ್ಲ ಎಂದು ಹಲವರು ಗೊಣಗಾಡುತ್ತಾರೆ. ಇನ್ನೂ ಕೆಲವರು ಈಗ ಏನೋ ಪರವಾಗಿಲ್ಲ, ಮದುವೆ ಆದ್ಮೇಲೆ ಹೆಂಗಪ್ಪಾ ವರ್ಕ್‌-ಲೈಫ್‌ ಬ್ಯಾಲೆನ್ಸ್‌ (Work-life balance) ಮಾಡೋದು ಎಂದು ತಲೆಕೆಡಿಸಿಕೊಳ್ಳುತ್ತಾರೆ. ಅಂತಹವರಿಗೆ ಇಲ್ಲೊಬ್ರು ವ್ಯಕ್ತಿ ವರ್ಕ್‌-ಲೈಫ್‌ ಬ್ಯಾಲೆನ್ಸ್‌ಗೆ ಕ್ರೇಜಿ ಟಿಪ್ಸ್‌ (tips) ಒಂದನ್ನು ನೀಡಿದ್ದಾರೆ. ಹೌದು ನಿಮ್ಮ ಸಹದ್ಯೋಗಿಗಳನ್ನೇ ಮದುವೆಯಾಗಿ ಇದರಿಂದ ಹಲವು ಪ್ರಯೋಜನಗಳಿಗೆ ಎಂದು ಅವರು ಹೇಳಿದ್ದು, ಈ ಪೋಸ್ಟ್‌ ಇದೀಗ ವೈರಲ್‌ ಆಗುತ್ತಿದೆ.

ಬೆಂಗಳೂರು ಮೂಲದ ಸ್ಟ್ಯಾಂಡ್‌ಅಪ್‌ ಕಾಮಿಡಿಯನ್‌ ಹರ್ಷಿತ್‌ ಮಹಾವರ್‌ (Harshith Mahawar) ಎಂಬವರು ವರ್ಕ್‌-ಲೈಫ್‌ ಬ್ಯಾಲೆನ್ಸ್‌ ಮಾಡಲು ಕ್ರೇಜಿ ಟಿಪ್ಸ್‌ ನೀಡಿದ್ದಾರೆ. ಇಂದಿನ ಕಾಲಘಟ್ಟದಲ್ಲಿನ ಕೆಲಸದ ಒತ್ತಡದಿಂದಾಗಿ ಕುಟುಂಬದೊಂದಿಗೆ ಮಾತನಾಡಲು ಕೂಡಾ ಸಮಯ ಸಿಗುತ್ತಿಲ್ಲ. ಇದಕ್ಕೆ ಪರಿಹಾರ ಏನಂದ್ರೆ ನೀವು ನಿಮ್ಮ ಸಹದ್ಯೋಗಿಯನ್ನೇ ಮದುವೆಯಾಗಿ, ಇದರಿಂದ ಹಲವಾರು ಪ್ರಯೋಜನಗಳು ಕೂಡ ಇದೆ ಎಂದು ಹೇಳಿಕೊಂಡಿದ್ದಾರೆ.

ವೈರಲ್​​ ಪೋಸ್ಟ್​ ಇಲ್ಲಿದೆ ನೋಡಿ:

ಇದನ್ನೂ ಓದಿ
Image
ಹಿರಿ ಜೀವಗಳಿಗೆ  ಮರುಮದುವೆ ಮಾಡಿಸಿದ ಮೊಮ್ಮಕ್ಕಳು
Image
ರಾತ್ರಿಯ ರೊಮ್ಯಾ‌ನ್ಸ್ ವಿಡಿಯೋ ಶೇರ್‌ ಮಾಡಿದ ನವಜೋಡಿ
Image
ಕೋಪದಲ್ಲಿ ಗಂಡನ ನಾಲಿಗೆ ಕಚ್ಚಿ ತುಂಡರಿಸಿದ ಹೆಂಡತಿ
Image
ಯಾವ ಲಾಭದಾಯಕ ಉದ್ದಿಮೆಗೂ ಕಮ್ಮಿಯಿಲ್ಲ ಈ ಚೇಳು ಸಾಕಾಣಿಕೆ

ಈ ಕುರಿತ ಪೋಸ್ಟ್‌ ಒಂದನ್ನು ಹರ್ಷಿತ್‌ ತನ್ನ ಲಿಂಕ್ಡ್‌ಇನ್‌ ಖಾತೆಯಲ್ಲಿ ಶೇರ್‌ ಮಾಡಿಕೊಂಡಿದ್ದಾರೆ. “ಕೆಲಸದ ಒತ್ತಡದಿಂದಾಗಿ ಕುಟುಂಬದೊಂದಿಗೆ ಮಾತನಾಡಲು ಸಮಯ ಸಿಕ್ತಿಲ್ಲ, ಕೆಲಸ ಬೇಡ ಎಂದು ಬಿಟ್ರೆ ಕುಟುಂಬ ನಮ್ಮೊಂದಿಗೆ ಮಾತನಾಡಲ್ಲ. ಇಂತಹ ಪರಿಸ್ಥಿತಿಯಲ್ಲಿ ವರ್ಕ್‌ಲೈಫ್‌ ಬ್ಯಾಲೆನ್ಸ್‌ಗೆ ನನ್ನ ಕಡೆಯ ಪರಿಹಾರ ಏನಂದ್ರೆ ನೀವು ನಿಮ್ಮ ಸಹದ್ಯೋಗಿಯನ್ನೇ ಮದುವೆಯಾಗಿ. ಇದರಿಂದ ಹಲವಾರು ಪ್ರಯೋಜನಗಳು ಕೂಡಾ ಇವೆ, ಕ್ಯಾಬ್ ವೆಚ್ಚ ಅರ್ಧದಷ್ಟು ಕಡಿಮೆಯಾಗುತ್ತದೆ‌, ಕೆಲಸದ ಸ್ಥಳಗಳಲ್ಲಿ ಆಗುವಂತಹ ವಿವಾಹೇತರ ಸಂಬಂಧಗಳಿಗೆ ಅವಕಾಶ ಇರುವುದಿಲ್ಲ” ಎಂದು ಕೆಲವೊಂದು ವರ್ಕ್‌ ಲೈಫ್‌ ಬ್ಯಾಲೆನ್ಸ್‌ಗಾಗಿ ಕೆಲವೊಂದು ತಮಾಷೆಯ ಟಿಪ್ಸ್‌ ನೀಡಿದ್ದಾರೆ.

ಇದನ್ನೂ ಓದಿ: ಪರೀಕ್ಷೆಗೆ ತಡ ಆಗುತ್ತೆ ಎಂದು ಮಾರು ದೂರ ಓಡಿ ಬಸ್‌ ಹತ್ತಿದ ವಿದ್ಯಾರ್ಥಿನಿ

ಒಂದು ವಾರಗಳ ಹಿಂದೆ ಶೇರ್‌ ಮಾಡಲಾದ ಈ ಪೋಸ್ಟ್‌ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಇದೊಂದು ಅದ್ಭುತ ತಂತ್ರ, ಮನೆ ಜಗಳಗಳು ಕೆಲಸದ ಸ್ಥಳದಲ್ಲಿ ನಡೆದ್ರೆ ಏನು ಮಾಡೋದಪ್ಪಾʼ ಎಂಬ ಕಾಮೆಂಟ್‌ ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼಕಂಪೆನಿ ಹೆಚ್.‌ಆರ್‌ನ್ನು ಮದುವೆ ಆಗ್ಬೇಕುʼ ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು ʼಅದ್ಭುತ ಪರಿಹಾರʼ ಎಂಬ ಕಾಮೆಂಟ್‌ ಬರೆದುಕೊಂಡಿದ್ದಾರೆ.

ವೈರಲ್​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:05 pm, Thu, 27 March 25

ನಂಜನಗೂಡು ನಂಜುಂಡೇಶ್ವರ ದೇವಾಲಯದಲ್ಲಿ ಓಕುಳಿ ಉತ್ಸವ ಸಂಭ್ರಮ
ನಂಜನಗೂಡು ನಂಜುಂಡೇಶ್ವರ ದೇವಾಲಯದಲ್ಲಿ ಓಕುಳಿ ಉತ್ಸವ ಸಂಭ್ರಮ
Devotional: ಮಹಿಳೆಯರಿಗೆ ಕೈ ಕೆರೆತವಾದ್ರೆ ಏನೆಲ್ಲಾ ಆಗುತ್ತೆ ಗೊತ್ತಾ?
Devotional: ಮಹಿಳೆಯರಿಗೆ ಕೈ ಕೆರೆತವಾದ್ರೆ ಏನೆಲ್ಲಾ ಆಗುತ್ತೆ ಗೊತ್ತಾ?
Daily Horoscope: ಹಣಕಾಸಿನ ವಿಷಯದಲ್ಲಿ ತಾಳ್ಮೆವಹಿಸುವುದು ಒಳ್ಳೆಯದು
Daily Horoscope: ಹಣಕಾಸಿನ ವಿಷಯದಲ್ಲಿ ತಾಳ್ಮೆವಹಿಸುವುದು ಒಳ್ಳೆಯದು
ಉಪೇಂದ್ರ ಊಟ ಮಾಡೋದು ಬಹಳ ವಿಚಿತ್ರ; ಅಚ್ಚರಿಯ ವಿಷಯ ಹೇಳಿದ ಶಿವಣ್ಣ
ಉಪೇಂದ್ರ ಊಟ ಮಾಡೋದು ಬಹಳ ವಿಚಿತ್ರ; ಅಚ್ಚರಿಯ ವಿಷಯ ಹೇಳಿದ ಶಿವಣ್ಣ
ಕ್ಯಾಪ್ಟನ್ ಕೂಲ್ ಧೋನಿಗೆ ಬಿಸಿಸಿಐನಿಂದ ವಿಶೇಷ ಗೌರವ
ಕ್ಯಾಪ್ಟನ್ ಕೂಲ್ ಧೋನಿಗೆ ಬಿಸಿಸಿಐನಿಂದ ವಿಶೇಷ ಗೌರವ
ಸಿಎಸ್​​ಕೆ ಬೌಲರ್​ಗಳ ಎದುರು ಅಬ್ಬರಿಸಿ ಬೊಬ್ಬಿರಿದ ನಿತೀಶ್ ರಾಣಾ
ಸಿಎಸ್​​ಕೆ ಬೌಲರ್​ಗಳ ಎದುರು ಅಬ್ಬರಿಸಿ ಬೊಬ್ಬಿರಿದ ನಿತೀಶ್ ರಾಣಾ
ಲಾಲು ಯಾದವ್ ಸರ್ಕಾರ ಜಂಗಲ್ ರಾಜ್ ಎಂದೇ ನೆನಪುಳಿಯುತ್ತದೆ; ಅಮಿತ್ ಶಾ
ಲಾಲು ಯಾದವ್ ಸರ್ಕಾರ ಜಂಗಲ್ ರಾಜ್ ಎಂದೇ ನೆನಪುಳಿಯುತ್ತದೆ; ಅಮಿತ್ ಶಾ
ಉಪ್ಪಿ, ಶಿವಣ್ಣ, ರಾಜ್ ಶೆಟ್ಟಿ ನಟನೆ ‘45’ ಸಿನಿಮಾ ಟೀಸರ್ ಲಾಂಚ್ ಲೈವ್ ನೋಡಿ
ಉಪ್ಪಿ, ಶಿವಣ್ಣ, ರಾಜ್ ಶೆಟ್ಟಿ ನಟನೆ ‘45’ ಸಿನಿಮಾ ಟೀಸರ್ ಲಾಂಚ್ ಲೈವ್ ನೋಡಿ
ಯುಗಾದಿ ಹಬ್ಬದಂದು ಗೃಹ ಲಕ್ಷ್ಮೀಯರಿಗೆ ಸಿಹಿ ಸುದ್ದಿ ನೀಡಿದ ಸಚಿವೆ
ಯುಗಾದಿ ಹಬ್ಬದಂದು ಗೃಹ ಲಕ್ಷ್ಮೀಯರಿಗೆ ಸಿಹಿ ಸುದ್ದಿ ನೀಡಿದ ಸಚಿವೆ
ಬುಡಕಟ್ಟು ನೃತ್ಯದ ಮೂಲಕ ಛತ್ತೀಸ್​ಗಢದಲ್ಲಿ ಮೋದಿಗೆ ಸಾಂಪ್ರದಾಯಿಕ ಸ್ವಾಗತ
ಬುಡಕಟ್ಟು ನೃತ್ಯದ ಮೂಲಕ ಛತ್ತೀಸ್​ಗಢದಲ್ಲಿ ಮೋದಿಗೆ ಸಾಂಪ್ರದಾಯಿಕ ಸ್ವಾಗತ