Viral: ಬಸ್ ನಿಲ್ಲಿಸದ ಚಾಲಕ; ಪರೀಕ್ಷೆಗೆ ತಡ ಆಗುತ್ತೆ ಎಂದು ಮಾರು ದೂರ ಓಡಿ ಬಸ್ ಹತ್ತಿದ ವಿದ್ಯಾರ್ಥಿನಿ
12ನೇ ತರಗತಿ ಬೋರ್ಡ್ ಪರೀಕ್ಷೆಗೆ ತೆರಳಲು ಬಸ್ಸಿಗಾಗಿ ಕಾಯುತ್ತಿದ್ದ ವಿದ್ಯಾರ್ಥಿನಿಗೆ ಬಸ್ ನಿಲ್ಲಿಸದೆ ಚಾಲಕ ಸೀದಾ ಹೋದ ಘಟನೆಯೊಂದು ನಡೆದಿದೆ. ಇನ್ನೂ ತಡವಾದರೆ ಪರೀಕ್ಷೆ ಬರೆಯಲು ಸಾಧ್ಯವಾಗುವುದಿಲ್ಲವೋ ಎಂಬ ಭಯಕ್ಕೆ ವಿದ್ಯಾರ್ಥಿನಿ ತನ್ನ ಪ್ರಾಣವನ್ನೂ ಲೆಕ್ಕಿಸದರೆ ಓಡೋಡಿ ಹೋಗಿ ಆ ಬಸ್ ಹತ್ತಿದ್ದು, ಈ ಘಟನೆಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ. ವಿದ್ಯಾರ್ಥಿನಿಗೆ ಬಸ್ ನಿಲ್ಲಿಸದಿದ್ದಕ್ಕೆ ಆಕ್ರೋಶ ವ್ಯಕ್ತವಾದ ಬಳಿಕ ಚಾಲಕ ಮತ್ತು ಕಂಡಕ್ಟರ್ ಇಬ್ಬರನ್ನೂ ಸೇವೆಯಿಂದ ಅಮಾನತುಗೊಳಿಸಲಾಗಿದೆ.

ತಮಿಳುನಾಡು, ಮಾ. 27: 12 ನೇ ತರಗತಿ ಬೋರ್ಡ್ ಪರೀಕ್ಷೆ (Board Exma) ಬರೆಯಲು ತೆರಳಿದ್ದ ವಿದ್ಯಾರ್ಥಿನಿಗೆ ಸ್ಥಳದಲ್ಲಿ ಬಸ್ (bus) ನಿಲ್ಲಿಸದೆ ಮಾರು ದೂರ ನಿಲ್ಲಿಸುವ ಮೂಲಕ ಚಾಲಕನೊಬ್ಬ ಆಕೆಯನ್ನು ಓಡುವಂತೆ ಮಾಡಿದ ಘಟನೆಯೊಂದು ನಡೆದಿದೆ. ಬಸ್‌ಸ್ಟ್ಯಾಂಡ್ (bus stand) ಬಳಿ ನಿಂತಿದ್ದ ವಿದ್ಯಾರ್ಥಿನಿಯನ್ನು ಗಮನಿಸಿದರೂ ಚಾಲಕ (driver) ಬಸ್ ನಿಲ್ಲಿಸದೆ ಸೀದಾ ಹೋಗಿದ್ದು, ಇನ್ನೂ ತಡವಾದರೆ ಪರೀಕ್ಷೆ (exam) ಬರೆಯಲು ಸಾಧ್ಯವಾಗುತ್ತೋ ಇಲ್ಲವೋ ಎಂಬ ಭಯದಿಂದ ವಿದ್ಯಾರ್ಥಿನಿ (student) ಜೀವದ ಹಂಗು ತೊರೆದು ಓಡೋಡಿ ಹೋಗಿ ಬಸ್ ಹತ್ತಿದ್ದಾಳೆ. ಈ ಘಟನೆಯ ವಿಡಿಯೋವನ್ನು ಯಾರೋ ವಿಡಿಯೋ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಈ ಬಗ್ಗೆ ಭಾರೀ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ, ಚಾಲಕ ಮತ್ತು ಕಂಡಕ್ಟರ್ ಇಬ್ಬರನ್ನೂ ಅಮಾನತುಗೊಳಿಸಲಾಗಿದೆ.
ಈ ಘಟನೆ ತಮಿಳುನಾಡಿನ ತಿರುಪತ್ತೂರು ಜಿಲ್ಲೆಯಲ್ಲಿ ನಡೆದಿದ್ದು, ಚಾಲಕನೊಬ್ಬ ಬಸ್‌ಸ್ಟ್ಯಾಂಡ್‌ನಲ್ಲಿ ಬಸ್ ನಿಲ್ಲಿಸದೆ, ಪರೀಕ್ಷೆಗೆ ತೆರಳಿದ್ದ ವಿದ್ಯಾರ್ಥಿನಿಯನ್ನು ಬಸ್ ಹಿಂದೆ ಓಡುವಂತೆ ಮಾಡಿದ ಘಟನೆ ನಡೆದಿದೆ. ಕೊಥಕೋಟೈ ಬಸ್ ನಿಲ್ದಾಣದ ಬಳಿ ಸರ್ಕಾರಿ ಬಸ್‌ಗಾಗಿ ವಿದ್ಯಾರ್ಥಿನಿ ಕಾದು ನಿಂತಿದ್ದು, ಆದರೆ ಆಕೆಯನ್ನೂ ನೋಡಿಯೂ ಬಸ್ ಚಾಲಕ ಬಸ್ ನಿಲ್ಲಿಸದೆ ವೇಗವಾಗಿ ಹೋಗಿದ್ದಾನೆ. ಬೋರ್ಡ್ ಪರೀಕ್ಷೆ ಇರುವ ಕಾರಣ ಬಸ್ ಮಿಸ್ ಆದ್ರೆ ಪರೀಕ್ಷೆ ಬರೆಯಲು ಸಾಧ್ಯವಾಗುವುದಿಲ್ಲ ಎಂಬ ಭಯದಿಂದ ಆ ವಿದ್ಯಾರ್ಥಿನಿ ಓಡಿ ಹೋಗಿ ಬಸ್ ಹತ್ತಿದ್ದಾಳೆ. ಈ ದೃಶ್ಯವನ್ನು ಬೈಕ್ ಸವಾರನೊಬ್ಬ ವಿಡಿಯೋ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಹರಿ ಬಿಟ್ಟಿದ್ದಾನೆ. ಈ ಘಟನೆಯ ಬಗ್ಗೆ ಭಾರೀ ಆಕ್ರೋಶ ವ್ಯಕ್ತವಾದ ಬಳಿಕ ಇದಕ್ಕೆ ಪ್ರತಿಕ್ರಿಯಿಸಿದ ತಮಿಳುನಾಡು ಸಾರಿಗೆ ಇಲಾಖೆ ಅಧಿಕಾರಿಗಳು ಚಾಲಕ ಮುನಿರಾಜ್ ಹಾಗೂ ಗುತ್ತಿಗೆ ಆಧಾರದ ಮೇಲೆ ನೇಮಕಗೊಂಡಿದ್ದ ಕಂಡಕ್ಟರ್ ಅಶೋಕ್ ಕುಮಾರ್‌ನನ್ನು ಸೇವೆಯಿಂದ ಅಮಾನತುಗೊಳಿಸಿದ್ದಾರೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ:
Tamil Nadu: Video of a schoolgirl chasing a bus to ensure she doesn’t miss exam has caught the attention of TN Transport minister.
Minister orders immediate action against the bus driver and conductor for not stopping at the bus stop pic.twitter.com/O8HZWUYTRF
— Gautam (@gautyou) March 25, 2025
ಈ ಘಟನೆಗೆ ಸಂಬಂಧಿಸಿದ ವಿಡಿಯೋವನ್ನು ಗೌತಮ್ (gautyou) ಎಂಬವರು ತಮ್ಮ ಎಕ್ಸ್ ಖಾತೆಯಲ್ಲಿ ಶೇರ್ ಮಾಡಿದ್ದಾರೆ. ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಚಾಲಕ ಬಸ್ ನಿಲ್ಲಿಸಿಲ್ಲವೆಂದು ವಿದ್ಯಾರ್ಥಿನಿಯೋರ್ವಳು ಪರೀಕ್ಷೆಗೆ ತಡವಾದರೆ ಕಷ್ಟ ಎಂದು ಅದೇ ಬಸ್ಸಿನ ಹಿಂದೆ ಜೀವದ ಹಂಗು ತೊರೆದು ಓಡೋಡಿ ಹೋಗುತ್ತಿರುವ ದೃಶ್ಯವನ್ನು ಕಾಣಬಹುದು. ಒಂದಷ್ಟು ದೂರ ಹೋದ ಬಳಿಕ ಬಸ್ ನಿಲ್ಲಿಸಿದ್ದು, ನಂತರ ಬಸ್ ಹತ್ತಿ ವಿದ್ಯಾರ್ಥಿ ಪರೀಕ್ಷೆ ಬರೆಯಲು ಹೋಗಿದ್ದಾಳೆ.
ಇದನ್ನೂ ಓದಿ: ಕಬ್ಬಿನ ಹಾಲು ತೆಗೆಯುವ ಯಂತ್ರಕ್ಕೆ ಸಿಲುಕಿದ ಜಡೆ
ಮಾರ್ಚ್ 25 ರಂದು ಶೇರ್ ಮಾಡಲಾದ ಈ ವಿಡಿಯೋ 3 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼನನ್ನ ಶಾಲಾ ದಿನಗಳಲ್ಲಿ ನಾನು ಕೂಡಾ ಇದೇ ರೀತಿ ಬಸ್ ಹಿಂದೆ ಓಡಿದ್ದೆʼ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼಇಂತಹ ಘಟನೆಗಳು ತಮಿಳುನಾಡಿನಲ್ಲಿ ಸಾಮಾನ್ಯವಾಗಿದೆ, ಬಸ್ ಚಾಲಕರು ಹೀಗೆ ಅತಿರೇಕದ ವರ್ತನೆಯನ್ನೇ ತೋರುತ್ತಾರೆʼ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ