ಫೋನನ್ನು ಕ್ಯಾಬ್‌ನಲ್ಲಿಯೇ ಮರೆತು ಹೋದ ಮಾಲೀಕ; ಮೊಬೈಲ್ ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದ ಚಾಲಕ
ಇತ್ತೀಚಿಗೆ ಪ್ರಾಮಾಣಿಕತೆ, ಮಾನವೀಯತೆ ಮರೆಯಾಗಿ ಅಧರ್ಮ, ಅನ್ಯಾಯಗಳೇ ಹೆಚ್ಚಾಗಿದೆ. ಹೀಗಿರುವಾಗ ಇಲ್ಲೊಬ್ಬ ಕ್ಯಾಬ್ ಚಾಲಕ ಪ್ರಾಮಾಣಿಕತೆ ಇನ್ನೂ ಜೀವಂತವಾಗಿದೆ ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಹೌದು ತನ್ನ ಕ್ಯಾಬ್‌ನಲ್ಲಿ ಸಿಕ್ಕ ಫೋನನ್ನು ಮಾಲೀಕರಿಗೆ ಹಿಂತಿರುಗಿಸುವ ಮೂಲಕ ಪ್ರಾಮಾಣಿಕತೆ ಮೆರೆದ್ದಾರೆ. ಮೈಸೂರಿನಿಂದ ಬೆಂಗಳೂರಿಗೆ ಪ್ರಯಾಣಿಸಿ ಮೊಬೈಲ್ ವಾಪಸ್ ಕೊಟ್ಟಿದ್ದು, ಕ್ಯಾಬ್ ಚಾಲಕನ ಈ ಕಾರ್ಯಕ್ಕೆ ಭಾರೀ ಶ್ಲಾಘನೆ ವ್ಯಕ್ತವಾಗುತ್ತಿದೆ.

ಈಗಂತೂ ಪ್ರಾಮಾಣಿಕತೆ (Honesty), ಮಾನವೀಯತೆ (Humanity) ಮರೆಯಾಗಿದ್ದು, ಇನ್ನೊಬ್ಬರಿಗೆ ಸಹಾಯ ಮಾಡದೆ ಬರೀ ಸ್ವಾರ್ಥ ಜೀವನವನ್ನು ನಡೆಸುವವರೇ ಹೆಚ್ಚಾಗಿದ್ದಾರೆ. ಇವರುಗಳ ನಡುವೆ ಮಾನವೀಯತೆ, ಪ್ರಾಮಾಣಿಕತೆಯನ್ನು ಮೈಗೂಡಿಸಿಕೊಂಡವರೂ ಇದ್ದಾರೆ. ಹೀಗೆ ತಮಗೆ ಸಿಕ್ಕ ವಸ್ತುಗಳನ್ನು ಅದರ ಮಾಲೀಕರಿಗೆ ವಾಪಸ್ ಕೊಟ್ಟು ಪ್ರಾಮಾಣಿಕತೆ ಮರೆದವರ, ಸಹಾಯಕ್ಕೆ ಧಾವಿಸಿ ಮಾನವೀಯತೆ ಮೆರೆದವರ ನೈಜ್ಯ ಕಥೆಗಳನ್ನು ನೀವು ಕೇಳಿರುತ್ತೀರಿ ಅಲ್ವಾ. ಇದೀಗ ಬೆಂಗಳೂರಿನ ಕ್ಯಾಬ್ ಡ್ರೈವರ್ (Cab Driver) ಒಬ್ರು ಪ್ರಾಮಾಣಿಕತೆ ಇನ್ನೂ ಜೀವಂತವಾಗಿದೆ ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಹೌದು ತನ್ನ ಕ್ಯಾಬ್‌ನಲ್ಲಿ ಸಿಕ್ಕ ಫೋನನ್ನು (Phone) ಮಾಲೀಕರಿಗೆ (owner) ಹಿಂತಿರುಗಿಸುವ ಮೂಲಕ ಪ್ರಾಮಾಣಿಕತೆ ಮೆರೆದ್ದಾರೆ. ಮೈಸೂರಿನಿಂದ (Mysore) ಬೆಂಗಳೂರಿಗೆ (Bengaluru) ಪ್ರಯಾಣಿಸಿ ಮೊಬೈಲ್ (mobile) ವಾಪಸ್ ಕೊಟ್ಟಿದ್ದು, ಕ್ಯಾಬ್ ಚಾಲಕನ ಈ ಕಾರ್ಯಕ್ಕೆ ಭಾರೀ ಶ್ಲಾಘನೆ ವ್ಯಕ್ತವಾಗುತ್ತಿದೆ.
ಕ್ಯಾಬ್ ಚಾಲಕನ ಈ ಪ್ರಾಮಾಣಿಕತೆಯ ಸ್ಫೂರ್ತಿದಾಯಕ ಕಥೆಯನ್ನು ಫೋನ್ ಮಾಲೀಕ ಸೋಷಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್ ರೆಡ್ಡಿಟ್‌ನಲ್ಲಿ ಹಂಚಿಕೊಂಡಿದ್ದಾರೆ. coldabhishek ಹೆಸರಿನ ರೆಡ್ಡಿಡ್ ಖಾತೆಯಲ್ಲಿ ಈ ಕುರಿತ ಪೋಸ್ಟ್ ಒಂದನ್ನು ಹಂಚಿಕೊಳ್ಳಲಾಗಿದ್ದು, “ಕಳೆದು ಹೋಗಿದ್ದ ಫೋನನ್ನು ಹಿಂದಿರುಗಿಸಿದ ಪ್ರಾಮಾಣಿಕ ಕ್ಯಾಬ್ ಚಾಲಕ” ಎಂಬ ಶೀರ್ಷಿಕೆಯನ್ನು ಬರೆಯಲಾಗಿದೆ.
ವೈರಲ್ ಪೋಸ್ಟ್ ಇಲ್ಲಿದೆ ನೋಡಿ:
Lost phone returned by Honest Cab Driver byu/coldabhishek inBengaluru
ಇದನ್ನೂ ಓದಿ
“ಕೆಲವು ದಿನಗಳ ಹಿಂದೆ ಹೆಬ್ಬಾಳದ ಬಳಿ ನನ್ನ ಫೋನ್ ಕಳೆದುಹೋಯಿತು. ತಡರಾತ್ರಿ 11 ಗಂಟೆ ಸುಮಾರಿಗೆ, ನನಗೆ ಅಪ್ಲಿಕೇಷನ್‌ಗಳಲ್ಲಿ ಯಾವುದೇ ಆಟೋಗಳು ಕ್ಯಾಬ್‌ಗಳು ಸಿಗಲಿಲ್ಲ. ನನ್ನ ಫೋನ್‌ನ ಬ್ಯಾಟರಿ ತುಂಬಾ ಲೋ ಆಗಿ ಮೊಬೈಲ್ ಕೂಡಾ ಸ್ವಿಚ್ ಆಫ್ ಆಗಿತ್ತು. ಇದರಿಂದ ನಾನು ನಡೆದುಕೊಂಡೇ ಹೋಗಬೇಕಾಯಿತು. ಹೀಗೆ ಹೋಗ್ತಿರ್ಬೇಕಾದ್ರೆ ರಸ್ತೆಯಲ್ಲಿ ಕ್ಯಾಬ್ ನಿಂತಿರುವುದನ್ನು ನೊಡಿದೆ. ಮತ್ತು ನನ್ನನ್ನು ಬಿಡಬಹುದೇ ಎಂದು ಚಾಲಕನನ್ನು ಕೇಳಿದಾಗ ಅದಕ್ಕೆ ಅವನು ಒಪ್ಪಿಕೊಂಡನು. ನಾನು ಹೋಗಬೇಕಾಗಿದ್ದ ಸ್ಥಳವನ್ನು ತಲುಪಿದ ಬಳಿಕ ಹಣ ಕೊಟ್ಟಾಗ ಅದನ್ನು ತೆಗೆದುಕೊಳ್ಳಲು ಕ್ಯಾಬ್ ಚಾಲಕ ನಿರಾಕರಿಸಿದ. ನಂತರ ಏನಾಯಿತೆಂದರೆ, ನಾನು ಕ್ಯಾಬ್‌ನಿಂದ ಇಳಿದ ಬಳಿಕ ನನ್ನ ಫೋನ್ ಜೇಬಿನಿಂದ ಬಿದ್ದು ಅದು ಕಾರ್ ಸೀಟ್‌ನಲ್ಲಿಯೇ ಬಾಕಿಯಾಗಿದೆ ಎಂಬುದು ಅರಿವಿಗೆ ಬಂತು. ನಾನು ಕ್ಯಾಬ್‌ನ್ನು ಆಫ್‌ಲೈನ್‌ನಲ್ಲಿ ಬುಕ್ ಮಾಡಿದ್ದರಿಂದ ಆ ವಾಹನದ ನೋಂದಣಿ ಸಂಖ್ಯೆಯೂ ನನ್ನ ಬಳಿ ಇರಲಿಲ್ಲ. ಆ ಮೊಬೈಲ್ ಸ್ವಿಚ್‌ಆಫ್ ಆಗಿದ್ದರಿಂದ ಕಾಲ್ ಕೂಡಾ ಕನೆಕ್ಟ್ ಆಗ್ತಿರ್ಲಿಲ್ಲ. ನಾನು Samsung ಟ್ರ್ಯಾಕಿಂಗ್ ಸೇವೆಯನ್ನು ಏನಾದ್ರೂ ಮಾಡ್ಬೋದಾ ಅಂತ ನೋಡಿದೆ, ಅದು ಕೂಡಾ ಆಗಿಲ್ಲ. ಜೊತೆಗೆ ಸ್ನೇಹಿತರೆಲ್ಲರೂ ಆ ಮೊಬೈಲ್ ಇನ್ನು ಸಿಗಲ್ಲ ಬಿಡು ಎಂದು ಹೇಳಿದ್ರು. ಇದರಿಂದ ನನಗೆ ಬೇಸರವಾಯಿತು.
ನಂತರ, ಮರುದಿನ, ನನ್ನ ಮೊಬೈಲ್ ಪತ್ತೆಯಾಗಿದೆ ಎಂದು ಸ್ಯಾಮ್‌ಸಂಗ್‌ನಿಂದ ಇಮೇಲ್ ಅಧಿಸೂಚನೆ ಬಂತು. ತಕ್ಷಣ ನಾನು ನನ್ನ ಫೋನ್‌ಗೆ ಕರೆ ಮಾಡಿದೆ, ಕ್ಯಾಬ್ ಚಾಲಕ ಕರೆ ಸ್ವೀಕರಿಸಿ ನಾನುಪ್ರವಾಸದ ನಿಮಿತ್ತ ಮೈಸೂರಿಗೆ ಹೋಗಿದ್ದೇನೆ, ನಾಳೆ ನಿಮ್ಮ ಫೋನ್ ಹಿಂತಿರುಗಿಸುತ್ತೇನೆ ಎಂದು ಹೇಳಿದ. ಆತ ನುಡಿದ ಮಾತಿನಂತೆ ಇಂದು ಬೆಳಿಗ್ಗೆ, ಚಾಲಕ ಬಸ್ಸಿನಲ್ಲಿ ನಾನಿರುವ ಸ್ಥಳಕ್ಕೆ ಬಂದು ನನ್ನ ಫೋನ್ ಅನ್ನು ಹಿಂತಿರುಗಿಸಿದನು. ಅವನ ಪ್ರಾಮಾಣಿಕತೆಗೆ ಬಹುಮಾನವಾಗಿ ನಾನು ಅವನಿಗೆ 1000 ರೂ. ನೀಡಿದ್ರೂ ಅವನು ಅದನ್ನು ಸ್ವೀಕರಿಸಲಿಲ್ಲ. ಕ್ಯಾಬ್ ಚಾಲಕನ ಈ ಪ್ರಾಮಾಣಿಕ ನಡೆ ಮಾನವೀಯತೆಯ ಮೇಲಿನ ನನ್ನ ನಂಬಿಕೆಯನ್ನು ಇನ್ನೂ ಹೆಚ್ಚು ಮಾಡಿದೆ.” ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ವೃದ್ಧ ದಂಪತಿಗೆ ಗುದ್ದಿದ ಸ್ವಿಗ್ಗಿ ಡೆಲಿವರಿ ಬಾಯ್ ಗಾಡಿ
ಎರಡು ದಿನಗಳ ಹಿಂದೆ ಶೇರ್ ಮಾಡಲಾದ ಈ ಪೋಸ್ಟ್ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಅದ್ಭುತ, ಮಾನವೀಯತೆ ಇನ್ನೂ ಜೀವಂತವಾಗಿದೆʼ ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು ʼನಿಮ್ಮ ಫೋನ್ ಸಿಕ್ಕಿದ್ದು ನಿಮ್ಮ ಅದೃಷ್ಟ, ಕ್ಯಾಬ್ ಚಾಲಕನಿಗೂ ಸಹ ಒಂದು ಸಲಾಂʼ ಎಂದು ಹೇಳಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ