Viral: ಜಸ್ಟ್ ಪಾಸಾದ್ರೆ ಸಾಕು, ಇದಕ್ಕಿಂತ ಕಮ್ಮಿ ಅಂಕ ಬೇಡ; ದೈವಕ್ಕೆ ಚೀಟಿ ಮುಖಾಂತರ ಮನವಿಯಿಟ್ಟ ವಿದ್ಯಾರ್ಥಿ
ಹೆಚ್ಚಿನ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ರ್ಯಾಂಕ್ ಅಥವಾ ಫಸ್ಟ್ ಕ್ಲಾಸ್ ಅಲ್ಲಿ ಪಾಸ್ ಆಗುವಂತೆ ಮಾಡು ದೇವ್ರೆ ಎಂದು ರಿಸಲ್ಟ್ ಸಮಯದಲ್ಲಿ ದೇವರಲ್ಲಿ ಬೇಡಿಕೊಳ್ಳುತ್ತಾರೆ. ಆದ್ರೆ ಇಲ್ಲೊಬ್ಬ ವಿದ್ಯಾರ್ಥಿ ನನ್ನನ್ನು ಜಸ್ಟ್ ಪಾಸ್ ಮಾಡು ಎಂದು ಚೀಟಿ ಬರೆದು ದೈವ ದೇವರಿಗೆ ಮನವಿಯಿಟ್ಟಿದ್ದಾನೆ. ಪರೀಕ್ಷೆಯಲ್ಲಿ ನನಗೆ ಇಂತಿಷ್ಟು ಮಾರ್ಕ್ ಬರಬೇಕೆಂದು ಬರೆದು ದೈವ ದೇವರ ಹುಂಡಿಗೆ ಆ ಚೀಟಿಯನ್ನು ಹಾಕಿದ್ದಾನೆ. ಇದೀಗ ಈ ಚೀಟಿ ಫೋಟೊ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

ಕುಂದಾಪುರ, ಮಾ. 26: ವಿದ್ಯಾರ್ಥಿಗಳಿಗೆ (students) ಪರೀಕ್ಷೆ (exam) ಬರೆಯುವ ಭಯ ಒಂದು ಕಡೆಯಾದ್ರೆ, ರಿಸಲ್ಟ್ (result) ಸಮಯದಲ್ಲಿ ಅಯ್ಯೋ ಎಷ್ಟು ಮಾರ್ಕ್ (marks) ಬರುತ್ತೋ, ಮನೆಯಲ್ಲಿ ಇನ್ನೆಷ್ಟು ಬೈಗುಳ ತಿನ್ನೋಕೆ ಇರುತ್ತೋ ಎಂದು ಭಯಪಟ್ಟುಕೊಳ್ಳುತ್ತಾರೆ. ಇದೇ ಭಯದಲ್ಲಿ ರಿಸಲ್ಟ್ ಸಮಯದಲ್ಲಿ ವಿದ್ಯಾರ್ಥಿಗಳು ಫಸ್ಟ್ ಕ್ಲಾಸ್ ಮಾರ್ಕ್ ಬರುವಂತೆ ಮಾಡಪ್ಪಾ ದೇವ್ರೇ ಎಂದು ದೇವರಲ್ಲಿ ಬೇಡಿಕೊಳ್ಳುತ್ತಾರೆ. ಅಂತದ್ರಲ್ಲಿ ಇಲ್ಲೊಬ್ಬ ವಿದ್ಯಾರ್ಥಿ ಪರೀಕ್ಷೆಯಲ್ಲಿ (exam) ಪಾಸ್ (Pass) ಮಾಡಿಸುವಂತೆ ದೇವರಿಗೆ ಚೀಟಿಯನ್ನೇ ಬರೆದಿದ್ದಾನೆ. ಹೌದು ಪರೀಕ್ಷೆಯಲ್ಲಿ ನನಗೆ ಇಂತಿಷ್ಟು ಅಂಕ ಬರಬೇಕೆಂದು ಚೀಟಿ (billet) ಬರೆದು ಅದನ್ನು ಹುಂಡಿಗೆ ಹಾಕಿ ದೈವ ದೇವರಲ್ಲಿ ಜಸ್ಟ್ ಪಾಸ್ ಮಾಡಿಸುವಂತೆ ಮನವಿಯನ್ನು ಮಾಡಿದ್ದಾನೆ. ಇದೀಗ ಈ ಚೀಟಿ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ವಿದ್ಯಾರ್ಥಿಯೋರ್ವ ಚೀಟಿ ಬರೆದು ನನಗೆ ಇಂತಿಷ್ಟು ಅಂಕ ಬರುವಂತೆ ಮಾಡಿ ಪಾಸ್ ಮಾಡಿಸು ಅಂತ ಚೀಟಿ ಬರೆದು ದೈವಕ್ಕೆ ಕೋರಿಕೆಯಿಟ್ಟಿದ್ದಾನೆ. ಕುಂದಾಪುರದ ಹೊಳ ಮಗ್ಗಿ ಹೊರ ಬೊಬ್ಬರ್ಯ ದೈವಸ್ಥಾನದ ಕಾಣಿಕೆ ಹುಂಡಿಯಲ್ಲಿ ಈ ಚೀಟಿ ಪತ್ತೆಯಾಗಿದೆ. ದೈವಸ್ಥಾನದ ಹುಂಡಿ ಎಣಿಕೆ ಕಾರ್ಯ ನಡೆಯುವ ವೇಳೆ ವಿದ್ಯಾರ್ಥಿ ಜಸ್ಟ್ ಪಾಸ್ ಮಾಡುವಂತೆ ಕೋರಿದ್ದ ಚೀಟಿ ಲಭ್ಯವಾಗಿದ್ದು, ಇದರ ಫೋಟೋ ಇದೀಗ ಭಾರೀ ವೈರಲ್ ಆಗುತ್ತಿದೆ.
ಈ ಕುರಿತ ಫೋಟೋವನ್ನು Namma Kundapura ಹೆಸರಿನ ಫೇಸ್‌ಬುಕ್ ಪೇಜ್ ಒಂದರಲ್ಲಿ ಶೇರ್ ಮಾಡಲಾಗಿದೆ. ಈ ಚೀಟಿ ಫೋಟೋದಲ್ಲಿ “ಪರೀಕ್ಷೆಯಲ್ಲಿ ನನಗೆ ಇಷ್ಟು ಮಾರ್ಕ್ ಬರಬೇಕು ದೇವರೇ ಹೊರ ಬೊಬ್ಬರ್ಯ; ಗಣಿತ- 39, 38, 37, 36, ಇಂಗ್ಲೀಷ್- 39, 38, 37, ಕನ್ನಡ- 40, 39 ವಿಜ್ಞಾನ- 39, 38, ಹಿಂದಿ- 40, 39, ಸಮಾಜ ವಿಜ್ಞಾನ- 38, 37 ಮತ್ತೆ ಇದಕ್ಕಿಂತ ಕಡಿಮೆ ಅಂಕ ಬೇಡ ದೇವರೆ” ಎಂದು ಪರೀಕ್ಷೆಯಲ್ಲಿ ಜಸ್ಟ್ ಪಾಸ್ ಮಾಡಿಸುವಂತೆ ಮನವಿ ಮಾಡಿರುವ ದೃಶ್ಯವನ್ನು ಕಾಣಬಹುದು.
ಇದನ್ನು ಓದಿ: ಮುಸ್ಲಿಂ ಗೆಳತಿಯ ಜೊತೆ ರಂಜಾನ್ ಉಪವಾಸ ಆಚರಿಸಿದ ಹಿಂದೂ ಯುವತಿ; ವಿಡಿಯೋ ವೈರಲ್
ಒಂದು ದಿನದ ಹಿಂದೆ ಶೇರ್ ಮಾಡಲಾದ ಈ ಪೋಸ್ಟ್ 500 ಕ್ಕೂ ಹೆಚ್ಚು ಲೈಕ್ಸ್ ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಪಾಪಾ ಬಡಪಾಯಿ ವಿದ್ಯಾರ್ಥಿ, ತನಗೆ ಪಾಸ್ ಆಗುವಷ್ಟು ಅಂಕ ಬೇಕೆಂದು ದೇವರಲ್ಲಿ ನಂಬಿಕೆ ಇಟ್ಟು ಚೀಟಿ ಬರೆದಿದ್ದಾರೆ. ಇದರಲ್ಲಿ ತಪ್ಪೇನು, ಅವನ ಆಸೆ ಈಡೇರಲಿʼ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ. ಇನ್ನೊಬ್ಬ ಬಳಕೆದಾರರು ʼಪಾಪ ಆ ವಿದ್ಯಾರ್ಥಿಯನ್ನು ಪಾಸು ಮಾಡಪ್ಪಾ ದೇವರೇʼ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼಅವನಿಗೆ ದುರಾಸೆಯಿಲ್ಲ ಜಸ್ಟ್ ಪಾಸ್ ಮಾಡಿಸುವಂತೆ ಕೇಳಿಕೊಂಡಿದ್ದಾನೆʼ ಎಂಬ ತಮಾಷೆಯ ಕಾಮೆಂಟ್ ಬರೆದುಕೊಂಡಿದ್ದಾನೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:06 pm, Wed, 26 March 25