Personality Test : ಈ ಚಿತ್ರದಲ್ಲಿ ನಿಮ್ಮ ನೆಚ್ಚಿನ ಬೀಚ್ ಯಾವುದು? ಇದುವೇ ಹೇಳುತ್ತೆ ನಿಮ್ಮ ವ್ಯಕ್ತಿತ್ವ
ಬೀಚ್ ಎಂದರೆ ಯಾರಿಗೆ ತಾನೆ ಇಷ್ಟ ಹೇಳಿ, ಬಿಡುವು ಸಿಕ್ಕಾಗೆಲೆಲ್ಲಾ ಕೆಲವು ಕಡಲಕಿನಾರೆಗೆ ಪ್ರವಾಸ ಬೆಳೆಸುತ್ತಾರೆ. ಸಂಜೆಯ ವೇಳೆ ಸೂರ್ಯಸ್ತ ಹಾಗೂ ತಂಪಾದ ತಂಗಾಳಿಯೂ ಮೈ ಸ್ಪರ್ಶಿಸುವುದೇ ಚಂದ. ಆದರೆ ಈ ಬೀಚ್ ಕೂಡ ವ್ಯಕ್ತಿತ್ವ ಹೇಳುತ್ತದೆಯಂತೆ. ಈ ಚಿತ್ರದಲ್ಲಿ ನಾಲ್ಕು ರೀತಿಯ ಆಕರ್ಷಕ ಚೀಚ್ ಚಿತ್ರಗಳಿವೆ. ಇದರಲ್ಲಿ ನೀವು ಆಯ್ಕೆ ಮಾಡಿಕೊಳ್ಳುವ ಬೀಚ್ ಚಿತ್ರ ಯಾವುದು ಎನ್ನುವುದರ ಆಧಾರದ ಮೇಲೆ ನಿಮ್ಮ ವ್ಯಕ್ತಿತ್ವವನ್ನು ಸುಲಭವಾಗಿ ನಿರ್ಣಯಿಸಬಹುದಾಗಿದ್ದು, ಈ ಕುರಿತಾದ ಕುತೂಹಲಕಾರಿ ಮಾಹಿತಿ ಇಲ್ಲಿದೆ.

ಸಾಂದರ್ಭಿಕ ಚಿತ್ರ
ಒಬ್ಬ ವ್ಯಕ್ತಿ ಹೇಗೆ ಎಂದು ತಿಳಿಯುವುದು ಕಷ್ಟಕರ. ಸನ್ನಿವೇಶ ಹಾಗೂ ಸಂದರ್ಭಕ್ಕೆ ವ್ಯಕ್ತಿಯೂ ಪ್ರತಿಕ್ರಿಯಿಸುವ ರೀತಿ ವಿಭಿನ್ನವಾಗಿರುತ್ತದೆ. ಸಂದರ್ಭಕ್ಕೆ ಅನುಗುಣವಾಗಿ ವ್ಯಕ್ತಿಯ ಗುಣಸ್ವಭಾವ ರಿವೀಲ್ ಆಗುತ್ತದೆ. ಆದರೆ ವ್ಯಕ್ತಿಯ ಮುಖ, ಅಂಗೈ ನೋಡಿ, ಹಸ್ತರೇಖೆ, ಹಣೆ, ಮೂಗು, ಕಣ್ಣು, ಮೂಗು, ಹುಬ್ಬು ಹಾಗೂ ಕಿವಿಯ ಆಕಾರದಿಂದಲೇ ವ್ಯಕ್ತಿತ್ವ (Personality) ಹೇಳುವುದನ್ನು ನೋಡಿರಬಹುದು. ಆದರೆ ಎಷ್ಟೋ ಸಲ ಕೆಲವು ಚಿತ್ರಗಳ ಆಯ್ಕೆಯು ವ್ಯಕ್ತಿ ಹೇಗೆ ಎನ್ನುವುದನ್ನು ಬಹಿರಂಗ ಪಡಿಸುತ್ತದೆ. ಈ ಚಿತ್ರದಲ್ಲಿ ನಾಲ್ಕು ರೀತಿಯ ಆಕರ್ಷಕ ಚೀಚ್ (Beach) ಗಳನ್ನು ನೋಡಬಹುದು. ನೀವು ಆಯ್ಕೆ ಮಾಡಿಕೊಳ್ಳುವ ಬೀಚ್ ಚಿತ್ರ ಯಾವುದು ಎನ್ನುವುದರ ಆಧಾರದ ಮೇಲೆ ನಿಮ್ಮ ವ್ಯಕ್ತಿತ್ವವನ್ನು ಸುಲಭವಾಗಿ ನಿರ್ಣಯಿಸಬಹುದು.
- ಮೊದಲ ಬೀಚ್ ಚಿತ್ರ ಆಯ್ಕೆ ಮಾಡಿಕೊಂಡರೆ ಆ ವ್ಯಕ್ತಿಗಳು ಶಾಂತ ಸ್ವಭಾವದ ಸಭ್ಯ ವ್ಯಕ್ತಿಗಳೆಂದು ಪರಿಗಣಿಸಬಹುದು. ಈ ಜನರು ಸ್ನೇಹಪರರಾಗಿದ್ದು ಎಲ್ಲರ ಮೇಲೂ ಕಾಳಜಿ ವಹಿಸುವ ಗುಣ ಹೊಂದಿರುತ್ತಾರೆ. ಸಣ್ಣ ಪುಟ್ಟ ವಿಷಯಗಳು ಇವರ ಮೇಲೆ ಪ್ರಾಬಲ್ಯ ಸಾಧಿಸಲು ಇವರು ಬಿಡುವುದಿಲ್ಲ. ಈ ಜನರಿಗೆ ಆತ್ಮೀಯರು ಹಾಗೂ ಪ್ರೀತಿಪಾತ್ರರ ಜೊತೆಗೆ ಸಮಯ ಕಳೆಯುವುದೆಂದರೆ ಇಷ್ಟ. ಪ್ರತಿಯೊಂದು ಕ್ಷಣವನ್ನು ಆನಂದಿಸುತ್ತಾರೆ.
- ಎರಡನೇ ಚಿತ್ರ ಆಯ್ಕೆ ಮಾಡಿಕೊಂಡ ವ್ಯಕ್ತಿಗಳು ಅತ್ಯಂತ ಸೃಜನಶೀಲರು ಮತ್ತು ಜೀವನದ ಸೂಕ್ಷ್ಮ ವಿಷಯಗಳ ಬಗ್ಗೆಯೂ ಹೆಚ್ಚು ಗಮನ ಹರಿಸುತ್ತಾರೆ. ನೋಡಿದ್ದೆಲ್ಲವನ್ನು ಖರೀದಿಸುವ ವ್ಯಕ್ತಿಗಳಾಗಿದ್ದು, ಇತರರಿಗೆ ಸಹಾಯ ಮಾಡುವ ಗುಣ ಈ ವ್ಯಕ್ತಿಗಳಲ್ಲಿ ಅಧಿಕವಾಗಿರುತ್ತದೆ. ಇಡೀ ಜಗತ್ತನ್ನು ವಿಭಿನ್ನ ದೃಷ್ಟಿಕೋನದಿಂದ ನೋಡಲು ಬಯಸುವ ವ್ಯಕ್ತಿಗಳಾಗಿದ್ದು, ಜನರ ಜೊತೆಗೆ ಬೆರೆಯುವುದಕ್ಕಿಂತ ಏಕಾಂತವಾಗಿರುವುದೆಂದರೆ ಈ ವ್ಯಕ್ತಿಗಳಿಗೆ ತುಂಬಾನೇ ಇಷ್ಟ. ತಮ್ಮ ಜೊತೆಗೆ ಹೆಚ್ಚು ಸಮಯ ಕಳೆಯುವ ಮೂಲಕ ಖುಷಿ ಪಡುತ್ತಾರೆ.
- ಮೂರನೇ ಚಿತ್ರ ಆಯ್ಕೆ ಮಾಡಿಕೊಂಡ ವ್ಯಕ್ತಿಗಳು ಸೂಕ್ಷ್ಮ, ಭಾವನಾತ್ಮಕ ವ್ಯಕ್ತಿಗಳಾಗಿರುತ್ತಾರೆ. ಈ ವ್ಯಕ್ತಿಗಳು ತಮ್ಮ ರೋಮ್ಯಾಂಟಿಕ್ ವ್ಯಕ್ತಿತ್ವದಿಂದಲೇ ಸಂಗಾತಿಗೆ ಇಷ್ಟವಾಗುತ್ತಾರೆ. ಪ್ರಾಮಾಣಿಕತೆ ಇವರಿಗೆ ಹುಟ್ಟಿನಿಂದಲೇ ಬಂದಿರುತ್ತದೆ. ಸಂಬಂಧವನ್ನು ನಿಷ್ಠೆಯಿಂದ ನಿಭಾಯಿಸಿಕೊಂಡು ಹೋಗುವುದರಲ್ಲಿ ಇವರು ಒಂದು ಹೆಜ್ಜೆ ಮುಂದೆ ಇರುತ್ತಾರೆ. ತಮಗಿಂತ ಇತರರಿಗೆ ಹೆಚ್ಚು ಆದ್ಯತೆ ನೀಡುವ ವ್ಯಕ್ತಿಗಳಾಗಿದ್ದು ಹೀಗಾಗಿ ಸಮಾಜದಲ್ಲಿ ಗೌರವಕ್ಕೆ ಪಾತ್ರರಾಗುತ್ತಾರೆ.
- ನಾಲ್ಕನೇ ಚಿತ್ರ ಆಯ್ಕೆ ಮಾಡಿಕೊಳ್ಳುವ ವ್ಯಕ್ತಿಗಳಲ್ಲಿ ಹೊಸ ಹೊಸ ವಿಷಯಗಳನ್ನು ಅನ್ವೇಷಿಸುವ ಗುಣವಿರುತ್ತದೆ. ಸ್ವಭಾವತಃ ಶಕ್ತಿಯುತ ಆಕರ್ಷಕ ವ್ಯಕ್ತಿತ್ವ ಹೊಂದಿದ್ದು, ಹಾಸ್ಯಪ್ರಜ್ಞೆ ಈ ವ್ಯಕ್ತಿಗಳಲ್ಲಿ ಹೆಚ್ಚು ಇರುತ್ತದೆ. ಹೊಸ ವಿಷಯಗಳ ಬಗ್ಗೆ ಹೆಚ್ಚು ಕುತೂಹಲವಿದ್ದು ಅದನ್ನು ತಿಳಿದುಕೊಳ್ಳುವವರೆಗೂ ಇವರು ಹಿಂದೆ ಸರಿಯುವುದಿಲ್ಲ. ಇವರು ಅಂದುಕೊಂಡಿದ್ದನ್ನು ಸಾಧಿಸಲು ಕಷ್ಟ ಪಟ್ಟು ಕೆಲಸ ಮಾಡುತ್ತಾರೆ. ಈ ವ್ಯಕ್ತಿಗಳಿಗೆ ಒಂದೇ ಸ್ಥಳದಲ್ಲಿ ಹೆಚ್ಚು ಸಮಯ ಕಳೆಯಲಾಗದು.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ