Sign In

By signing in or creating an account, you agree with Associated Broadcasting Company's Terms & Conditions and Privacy Policy.

Summer Tips : ಬೇಸಿಗೆಯಲ್ಲಿ ಟ್ಯಾಂಕ್ ನೀರು ಬಿಸಿಯಾಗುವುದನ್ನು ತಪ್ಪಿಸುವುದು ಹೇಗೆ? ಇಲ್ಲಿದೆ ಟಿಪ್ಸ್

ಬಿಸಿಲಿನ ಝಳ ಜೋರಾಗಿದೆ, ಹೀಗಾಗಿ ಹೆಚ್ಚಿನವರು ತಣ್ಣೀರಿನಲ್ಲಿ ಸ್ನಾನ ಮಾಡುತ್ತಾರೆ. ಆದರೆ ಮನೆಯ ಟ್ಯಾಂಕ್ ನಲ್ಲಿ ತುಂಬಿಸಿಟ್ಟ ನೀರು ಬಿಸಿಲಿಗೆ ಬಿಸಿಯಾಗಿ ಮಧ್ಯಾಹ್ನದ ವೇಳೆಗೆ ಕೊತ ಕೊತ ಕುದಿಯಲು ಪ್ರಾರಂಭವಾಗುತ್ತದೆ. ಬಿಸಿಲು ತಗ್ಗಿದ ಮೇಲೂ ಕೂಡ ಟ್ಯಾಂಕ್ ನೀರು ಬಿಸಿ ಮಾತ್ರ ಕಡಿಮೆಯಾಗಲ್ಲ. ಹೌದು, ನಿಮ್ಮ ಮನೆಯ ಮೇಲೆ ಇರಿಸಲಾದ ಟ್ಯಾಂಕ್‌ನಲ್ಲಿನ ನೀರು ತುಂಬಾ ಬಿಸಿಯಾಗುತ್ತಿದ್ದಂತೆ ಈ ಕೆಲವು ಸಲಹೆಗಳು ಅನುಸರಿಸಬಹುದಾಗಿದ್ದುದಾಗಿದ್ದು, ಈ ಕುರಿತಾದ ಕೆಲವು ಟಿಪ್ಸ್ ಇಲ್ಲಿದೆ.

Summer Tips : ಬೇಸಿಗೆಯಲ್ಲಿ ಟ್ಯಾಂಕ್ ನೀರು ಬಿಸಿಯಾಗುವುದನ್ನು ತಪ್ಪಿಸುವುದು ಹೇಗೆ? ಇಲ್ಲಿದೆ ಟಿಪ್ಸ್
ಸಾಂದರ್ಭಿಕ ಚಿತ್ರ
Follow us
ಸಾಯಿನಂದಾ
| Updated By: ಅಕ್ಷಯ್​ ಪಲ್ಲಮಜಲು​​

Updated on: Mar 24, 2025 | 5:16 PM

ಬೇಸಿಗೆ (Summer) ಬಂದೇಬಿಡ್ತು, ಈ ಋತು ಶುರು ಆಗುತ್ತಲೇ ಬಿಸಿಲು ನೆತ್ತಿಯನ್ನು ಸುಡುತ್ತಿದೆ. ಇನ್ನೂ ದಿನ ಉರುಳುತ್ತಾ ಹೇಗಪ್ಪಾ ತಡೆದುಕೊಳ್ಳುವುದು. ಈಗಿನ ಬಿಸಿಲು ನೋಡಿದರೆ ಯಾಕಾದ್ರೂ ಬೇಸಿಗೆ ಶುರುವಾಗುತ್ತದೆ ಎಂದು ಗೊಣಗುವವರೇ ಹೆಚ್ಚಾಗಿದ್ದಾರೆ. ಬಿಸಿಲಿನ ಝಳ ಸಹಿಸಿಕೊಳ್ಳುವುದೇ ಕಷ್ಟ ಎನ್ನುವಂತಾಗಿದೆ. ಫ್ಯಾನ್ (Fan) ನಡಿಯಲ್ಲಿ ಕುಳಿತುಕೊಂಡರೂ ಬಿಸಿ ಗಾಳಿಯಿಂದ ಬಿಸಿ ಬಿಸಿ ಅನುಭವವಾಗುತ್ತಿದೆ. ತಣ್ಣನೆಯ ನೀರಿನಲ್ಲಿ ಸ್ನಾನ ಮಾಡುವ ಎಂದು ಮನಸ್ಸು ಬಯಸಿದ್ರು ಟ್ಯಾಂಕ್ (Tank) ನಲ್ಲಿ ತುಂಬಿಸಿಟ್ಟ ನೀರು ಬಿಸಿಯಾಗಿರುತ್ತದೆ. ಈ ಋತುವಿನಲ್ಲಿ ಬಿಸಿಲು ಮತ್ತು ಶಾಖದಿಂದಾಗಿ ಟ್ಯಾಂಕ್​ನಲ್ಲಿನ ನೀರು ತುಂಬಾ ಬಿಸಿಯಾಗುತ್ತದೆ. ಆದರೆ ಟ್ಯಾಂಕ್ ನಲ್ಲಿದ್ದ ನೀರನ್ನು ಸಂಪೂರ್ಣವಾಗಿ ತಂಪಾಗಿಸಲು ಈ ಕೆಲವು ಸಲಹೆಗಳು ಉಪಯೋಗವಾಗಬಹುದು.

ಟ್ಯಾಂಕ್ ನೀರು ತಣ್ಣಗಾಗಿಸಲು ಇಲ್ಲಿದೆ ಟಿಪ್ಸ್

  1. ಬೇಸಿಗೆಯಲ್ಲಿ ನೀರಿನ ಟ್ಯಾಂಕ್ ಅನ್ನು ನೇರ ಸೂರ್ಯನ ಬೆಳಕು ಬೀಳುವುದನ್ನು ತಪ್ಪಿಸಿ. ಸಾಧ್ಯವಾದರೆ ನೀರಿನ ಟ್ಯಾಂಕ್ ನೆರಳಿನಲ್ಲಿ ಇರಿಸಿ.
  2. ಬೇಸಿಗೆಯಲ್ಲಿ ಟ್ಯಾಂಕ್ ಮತ್ತು ಪೈಪ್ ಬಿಸಿಯಾಗುತ್ತದೆ. ಹೀಗಾಗಿ ಸೂರ್ಯನ ಬಿಸಿಲಿನಿಂದ ಪೈಪ್ ಅನ್ನು ರಕ್ಷಿಸಲು ಕವರ್ ಅನ್ನು ಬಳಸುವುದು ಉತ್ತಮ.
  3. ಬಿಸಿಲು ಜೋರಾಗಿದ್ದರೆ ಟ್ಯಾಂಕ್ ಮೇಲೆ ತಗಡಿನ ಶೆಡ್ ಅನ್ನು ನಿರ್ಮಿಸುವುದು ಪ್ರಯೋಜನಕಾರಿಯಾಗಿದೆ.
  4. ಟ್ಯಾಂಕ್ ಅನ್ನು ಬಿಳಿ ಬಟ್ಟೆಯಿಂದ ಮುಚ್ಚಬಹುದು. ಇದು ಅಲ್ಯೂಮಿನಿಯಂ ಹಾಳೆಯಿಂದ ಟ್ಯಾಂಕ್ ಮುಚ್ಚುವುದು ಉತ್ತಮ. ಇದು ಸೂರ್ಯನ ಬೆಳಕು ಟ್ಯಾಂಕ್ ಮೇಲೆ ಬೀಳುವುದನ್ನು ತಪ್ಪಿಸಿ ನೀರನ್ನು ತಂಪಾಗಿಸುತ್ತದೆ.
  5. ಟ್ಯಾಂಕ್ ನೀರು ಬಿಸಿಯಾಗುತ್ತಿದ್ದರೆ ಒದ್ದೆಯಾದ ಸೆಣಬಿನ ಗೋಣಿ ಚೀಲ ಅಥವಾ ದಪ್ಪ ಬಟ್ಟೆಯನ್ನು ಟ್ಯಾಂಕ್ ಮೇಲೆ ಹಾಕಿ ಬಿಡಿ. ಹೀಗೆ ಮಾಡಿದ್ರೆ ಟ್ಯಾಂಕ್‌ನ ಬಿಸಿಯಾಗುವುದನ್ನು ನೀರನ್ನು ತಂಪಾಗಿರಿಸುವಂತೆ ಮಾಡುತ್ತದೆ.
  6. ನೀರಿನ ಟ್ಯಾಂಕ್ ಕಪ್ಪು ಅಥವಾ ಗಾಢ ಬಣ್ಣದಲ್ಲಿದ್ದರೆ ಅದಕ್ಕೆ ತಿಳಿ ಬಣ್ಣವನ್ನು ಬಳಿಯುವುದು ಸೂಕ್ತ. ತಿಳಿ ಬಣ್ಣಗಳು ಸೂರ್ಯನ ಬೆಳಕನ್ನು ಕಡಿಮೆ ಹೀರಿಕೊಳ್ಳುವ ಕಾರಣ ನೀರು ಬಿಸಿಯಾಗುವುದಿಲ್ಲ.
  7. ಮನೆಯಲ್ಲಿ ಟ್ಯಾಂಕ್ ಅನ್ನು ತೆರೆದ ಜಾಗದಲ್ಲಿ ಇದ್ದರೆ ಟ್ಯಾಂಕ್ ಸುತ್ತಲೂ ಹುಲ್ಲು ಅಥವಾ ತೇವವಾದ ಮಣ್ಣನ್ನು ಹಾಕಿಡಿ. ಹೀಗೆ ಮಾಡಿದರೆ ಶಾಖ ಕಡಿಮೆ ಮಾಡಿ ನೀರು ತಂಪಾಗಿಸುತ್ತದೆ.
  8. ಟ್ಯಾಂಕ್ ನೀರನ್ನು ತಂಪಾಗಿಸಲು ಸುಲಭವಾದ ಉಪಾಯವೆಂದರೆ ಐಸ್ ಕ್ಯೂಬ್ ಬಳಸುವುದು. ಸ್ನಾನ ಮಾಡುವುದಕ್ಕೆ ಹೋಗುವ ಮುಂಚೆ ಐಸ್ ಕ್ಯೂಬ್ ಗಳನ್ನು ನೀರಿನ ಟ್ಯಾಂಕ್ ಗೆ ಹಾಕಿ, ಇದರಿಂದಾಗಿ ಟ್ಯಾಂಕ್ ನೀರು ಕ್ರಮೇಣವಾಗಿ ತಣ್ಣಗಾಗುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ
Image
ಸುನಿತಾ ವಿಲಿಯಮ್ಸ್ ನಂತೆ ವಿಜ್ಞಾನಿಯಾಗಲು ಬಯಸುವಿರಾ? ಸಿದ್ದತೆ ಹೇಗಿರಬೇಕು?
Image
AI ಕ್ಷೇತ್ರದಲ್ಲಿ ವೃತ್ತಿಜೀವನ ರೂಪಿಸಿಕೊಳ್ಳಲು ಹಲವು ಅವಕಾಶಗಳಿವೆ!
Image
9 ವಿವಿ ಮುಚ್ಚಲ್ಲ: ಬಿಎಸ್​​ವೈ ಮೊಮ್ಮಗನ ಉದಾಹರಣೆಯೊಂದಿಗೆ ಡಿಕೆಶಿ ಸ್ಪಷ್ಟನೆ
Image
SSLC ಪ್ರಶ್ನೆ ಪತ್ರಿಕೆ ಲೀಕ್: ಯೂಟ್ಯೂಬ್, ಇನ್​ಸ್ಟಾದಲ್ಲಿ ವೈರಲ್​!