AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Summer Juice: ಬಿರುಬಿಸಿಲಿಗೆ ದೇಹಕ್ಕೆ ತಂಪು ನೀಡುವ ಸೋರೆಕಾಯಿ ಜ್ಯೂಸ್, ಇಲ್ಲಿದೆ ರೆಸಿಪಿ

ಬೇಸಿಗೆ ಶುರುವಾಗಿದೆ. ಬಿಸಿಲ ಧಗೆ ನೆತ್ತಿ ಸುಡುತ್ತಿದೆ. ಬಿಸಿಲಿನ ಝಳಕ್ಕೆ ದೇಹದಲ್ಲಿ ನೀರಿನ ಅಂಶ ಕಡಿಮೆಯಾಗಿ, ದೇಹ ನಿರ್ಜಲೀಕರಣವಾಗುವುದು ಸಹಜ. ಈ ವೇಳೆ ಸೇವಿಸುವ ಆಹಾರಗಳ ಬಗ್ಗೆಯು ಹೆಚ್ಚು ಗಮನ ನೀಡಬೇಕು. ಹೀಗಾಗಿ ಈ ಋತುವಿನಲ್ಲಿ ದ್ರವ ಪದಾರ್ಥಗಳು ದಣಿದ ದೇಹಕ್ಕೆ ಬೇಗ ಶಕ್ತಿ ತುಂಬುತ್ತವೆ. ಅಂತಹ ಪಾನೀಯಗಳಲ್ಲಿ ಸೋರೆ ಕಾಯಿ ಜ್ಯೂಸ್ ಬೆಸ್ಟ್. ಮನೆಯಲ್ಲಿ ಸೋರೆ ಕಾಯಿಯಿದ್ದರೆ ಸುಲಭವಾಗಿ ಜ್ಯೂಸ್ ಮಾಡಿ ದಾಹವನ್ನು ನೀಗಿಸಿ ಕೊಳ್ಳಬಹುದಾಗಿದೆ. ಮನೆಯಲ್ಲಿ ಈ ಕೆಲವು ಸಾಮಗ್ರಿಗಳಿದ್ದರೆ ಸೋರೆ ಕಾಯಿ ಜ್ಯೂಸ್ ಕುಡಿಯಲು ಸಿದ್ಧವಾದಂತೆ.

Summer Juice: ಬಿರುಬಿಸಿಲಿಗೆ ದೇಹಕ್ಕೆ ತಂಪು ನೀಡುವ ಸೋರೆಕಾಯಿ ಜ್ಯೂಸ್, ಇಲ್ಲಿದೆ ರೆಸಿಪಿ
ಸಾಂದರ್ಭಿಕ ಚಿತ್ರ
ಸಾಯಿನಂದಾ
| Edited By: |

Updated on:Mar 24, 2025 | 11:22 AM

Share

ಕಳೆದ ಕೆಲವು ದಿನಗಳಿಂದ ಬಿಸಿಲಿನ ಧಗೆಯು ಹೆಚ್ಚಾಗುತ್ತಿದ್ದು, ಹೀಗಾಗಿ ಹೊರಗಡೆ ಕಾಲಿಡಲು ಸಾಧ್ಯವಾಗುತ್ತಿಲ್ಲ. ಈ ಬಿಸಿಲಿನ ಝಳಕ್ಕೆ ದೇಹವನ್ನು ತಂಪಾಗಿಸುವ ಪಾನೀಯ (Drinks) ಗಳನ್ನು ಸೇವಿಸುವ ಬಯಕೆಯಾಗುವುದು ಸಹಜ. ಹೀಗಾಗಿ ಹೆಚ್ಚಿನವರು ಮಾರುಕಟ್ಟೆಯಲ್ಲಿ ಸಿಗುವ ಪಾನೀಯಗಳ ಮೊರೆ ಹೋಗುತ್ತಾರೆ. ಆದರೆ ಮನೆಯಲ್ಲಿ ಸೋರೆಕಾಯಿ (Bottle Gourd) ಯಿದ್ದರೆ ಈ ಬೇಸಿಗೆಗೆ ಇದರ ಜ್ಯೂಸ್ ಮಾಡಿ ಕುಡಿಯುವುದು ಒಳ್ಳೆಯದು. ಈ ತರಕಾರಿಯ ಜ್ಯೂಸ್ (Juice) ದೇಹವನ್ನು ತಂಪಾಗಿಸುವುದಲ್ಲದೆ, ರಕ್ತದೊತ್ತಡ (Blood Pressure) ವನ್ನು ಕಡಿಮೆ ಮಾಡುತ್ತದೆ ಹೀಗೆ ಹತ್ತಾರು ಆರೋಗ್ಯ ಪ್ರಯೋಜನಗಳಿವೆ. ಹಾಗಾದ್ರೆ ಮನೆಯಲ್ಲೇ ಸುಲಭವಾಗಿ ಸೋರೆಕಾಯಿ ಜ್ಯೂಸ್ ಮಾಡುವ ಸಿಂಪಲ್ ವಿಧಾನ ಇಲ್ಲಿದೆ.

ಸೋರೆ ಕಾಯಿ ಜ್ಯೂಸ್ ಮಾಡಲು ಬೇಕಾಗುವ ಸಾಮಗ್ರಿಗಳು

* ಒಂದು ಕಪ್ ಸೋರೆಕಾಯಿ

* ಒಂದು ಹಿಡಿ ಪುದೀನ

ಇದನ್ನೂ ಓದಿ
Image
ಸುನಿತಾ ವಿಲಿಯಮ್ಸ್ ನಂತೆ ವಿಜ್ಞಾನಿಯಾಗಲು ಬಯಸುವಿರಾ? ಸಿದ್ದತೆ ಹೇಗಿರಬೇಕು?
Image
AI ಕ್ಷೇತ್ರದಲ್ಲಿ ವೃತ್ತಿಜೀವನ ರೂಪಿಸಿಕೊಳ್ಳಲು ಹಲವು ಅವಕಾಶಗಳಿವೆ!
Image
9 ವಿವಿ ಮುಚ್ಚಲ್ಲ: ಬಿಎಸ್​​ವೈ ಮೊಮ್ಮಗನ ಉದಾಹರಣೆಯೊಂದಿಗೆ ಡಿಕೆಶಿ ಸ್ಪಷ್ಟನೆ
Image
SSLC ಪ್ರಶ್ನೆ ಪತ್ರಿಕೆ ಲೀಕ್: ಯೂಟ್ಯೂಬ್, ಇನ್​ಸ್ಟಾದಲ್ಲಿ ವೈರಲ್​!

* ಅರ್ಧ ಚಮಚ ಜೀರಿಗೆ ಪುಡಿ

* ಅರ್ಧ ಚಮಚ ಕಾಳು ಮೆಣಸಿನ ಪುಡಿ

* ಒಂದು ಇಂಚು ಶುಂಠಿ

* ರುಚಿಗೆ ತಕ್ಕಷ್ಟು ಉಪ್ಪು

* ಎರಡು ಚಮಚ ನಿಂಬೆ ರಸ

* ನೀರು

* ಮಂಜುಗಡ್ಡೆ

ಇದನ್ನೂ ಓದಿ: ಸ್ಲೀಪ್ ಡೈವೋರ್ಸ್ ನಲ್ಲಿ ಚೀನಾ, ದಕ್ಷಿಣ ಕೊರಿಯಾವನ್ನೇ ಹಿಂದಿಕ್ಕಿದ ಭಾರತ

ಜ್ಯೂಸ್ ಮಾಡುವ ವಿಧಾನ

* ಮೊದಲನೆಯದಾಗಿ ಒಂದು ಮಿಕ್ಸಿ ಜಾರಿಗೆ ಒಂದು ಕಪ್ ಸಿಪ್ಪೆ ಸುಲಿದು ಕತ್ತರಿಸಿದ ಸೋರೆಕಾಯಿಯನ್ನು ಹಾಕಿ ಕೊಳ್ಳಿ.

* ತದನಂತರ ಒಂದು ಹಿಡಿ ಪುದೀನಾ, ಜೀರಿಗೆ ಪುಡಿ, ಕಾಳು ಮೆಣಸಿನ ಪುಡಿ, ಒಂದು ಇಂಚು ಶುಂಠಿ, ನಿಂಬೆ ರಸ, ರುಚಿಗೆ ತಕ್ಕಷ್ಟು ಉಪ್ಪು ಹಾಗೂ ನೀರನ್ನು ಹಾಕಿ ಚೆನ್ನಾಗಿ ರುಬ್ಬಿಕೊಳ್ಳಿ.

* ಒಂದು ಲೋಟಕ್ಕೆ ಈ ಸೋರೆಕಾಯಿ ಮಿಶ್ರಣ ಸುರಿದು, ಐಸ್ ಕ್ಯೂಬ್ ಸೇರಿಸಿಕೊಂಡರೆ ಸೋರೆಕಾಯಿ ಜ್ಯೂಸ್ ಸಿದ್ಧ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:22 am, Mon, 24 March 25

ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ