Hair Care: ಕೂದಲಿನ ಬೆಳವಣಿಗೆಗೆ ಈರುಳ್ಳಿ ರಸ ಹೇಗೆ ಪ್ರಯೋಜನಕಾರಿ? ಕೇಶ ವಿನ್ಯಾಸಕರು ನೀಡುವ ಸಲಹೆಗಳೇನು?
ಇತ್ತೀಚೆಗಿನ ದಿನಗಳಲ್ಲಿ ಎಲ್ಲರನ್ನು ಕಾಡುವ ಸಮಸ್ಯೆಗಳಲ್ಲಿ ಕೂದಲು ಉದುರುವಿಕೆ ಕೂಡ ಒಂದು. ಪುರುಷರು ಮತ್ತು ಮಹಿಳೆಯರು ಇಬ್ಬರಲ್ಲಿ ಈ ಸಮಸ್ಯೆ ಕಾಣಿಸಿಕೊಳ್ಳುತ್ತಿದ್ದು ಸರಿಯಾದ ಆರೈಕೆ ಮಾಡದೇ ಹೋದರೆ ಬೋಳು ತಲೆಗೂ ಕಾರಣವಾಗುತ್ತದೆ. ಹೀಗಾಗಿ ಹೆಚ್ಚಿನವರು ಮಾರುಕಟ್ಟೆಯಲ್ಲಿ ಸಿಗುವ ವಿವಿಧ ತೈಲಗಳು ಸೇರಿದಂತೆ ಉತ್ಪನ್ನಗಳನ್ನು ಬಳಸುತ್ತಾರೆ. ಆದರೆ ಮನೆಯಲ್ಲಿರುವ ಈರುಳ್ಳಿ ರಸ ಕೂದಲು ಉದುರುವಿಕೆಯನ್ನು ತಡೆಯಲು ಹೇಗೆ ಸಹಾಯಕವಾಗಿದೆ. ಕೇಶ ವಿನ್ಯಾಸಕ ಈ ಬಗ್ಗೆ ಏನು ಹೇಳುತ್ತಾರೆ ಎನ್ನುವ ಕುರಿತಾದ ಮಾಹಿತಿ ಇಲ್ಲಿದೆ.

ತಲೆಯ ತುಂಬಾ ಕೂದಲಿದ್ದರೆ ನೋಡುವುದಕ್ಕೆ ಚಂದ. ಇನ್ನು ಕೆಲವರಿಗೆ ನೀಳವಾದ, ಸೊಂಪಾದ ಕೂದಲಿರಬೇಕೆನ್ನುವ ಆಸೆ. ಆದರೆ ಇತ್ತೀಚೆಗಿನ ದಿನಗಳಲ್ಲಿ ಕೂದಲು ಉದುರುವಿಕೆ (hair fall) , ಬಿಳಿ ಕೂದಲು (white hair) ಹಾಗೂ ತಲೆ ಹೊಟ್ಟು (dandruff) ಸೇರಿದಂತೆ ಇನ್ನಿತ್ತರ ಸಮಸ್ಯೆಯಿಂದ ಕೂದಲಿನ ಆರೋಗ್ಯ ಕಾಪಾಡಿಕೊಳ್ಳುವುದೇ ಸವಾಲಿನ ಕೆಲಸ. ಕೆಲವರು ಏನೇ ಮಾಡಿದ್ರು ಕೂದಲು ಉದುರುವುದು ಮಾತ್ರ ನಿಲ್ಲುತ್ತಿಲ್ಲ, ಕೂದಲು ಉದ್ದನೆ ಬೆಳೆಯುತ್ತಿಲ್ಲ ಎಂದು ಹೇಳುವುದನ್ನು ಕೇಳಿರುತ್ತೇವೆ. ಹೀಗಾಗಿ ಕೂದಲಿನ ಉದುರುವಿಕೆ ತಡೆಯಲು ನಾನಾ ರೀತಿ ಪ್ರಯೋಗಗಳನ್ನು ಮಾಡುತ್ತಿರುತ್ತಾರೆ. ಆದರೆ ಗಲಾಟ್ಟಾ ಇಂಡಿಯಾ (Galatta India) ಯೂಟ್ಯೂಬ್ ಚಾನೆಲ್ (YouTube Chanel) ಗೆ ನೀಡಿದ ಸಂದರ್ಶನದಲ್ಲಿ ಕೇಶ ವಿನ್ಯಾಸಕ ಜಾವೇದ್ ಹಬೀಬ್ (Hair stylist Jawed Habib) ಅವರು ಕೂದಲು ಉದುರುವಿಕೆಯನ್ನು ತಡೆಯಲು ಈರುಳ್ಳಿ ರಸ ಬಳಸುವುದು ಹೇಗೆ? ಇದು ಎಷ್ಟು ಪರಿಣಾಮಕಾರಿಯಾಗಿದೆ? ಎನ್ನುವುದನ್ನು ತಿಳಿಸಿದ್ದಾರೆ.
ಕೂದಲು ಬೆಳೆವಣಿಗೆ ಉತ್ತೇಜಿಸಲು ಈರುಳ್ಳಿ ರಸ ಹೇಗೆ ಪರಿಣಾಮಕಾರಿ?
ಕೂದಲು ಉದುರುವಿಕೆ ಸಮಸ್ಯೆ ಎದುರಿಸುತ್ತಿರುವ ಜನರು ಏನು ಮಾಡಬೇಕು ಎನ್ನುವುದಕ್ಕೆ ಉತ್ತರಿಸಿರುವ ಜಾವೇದ್ ಹಬೀಬ್, ಕೂದಲು ಬೆಳೆಯುತ್ತದೆ ಎಂದು ಹೇಳುವ ಎಲ್ಲಾ ಕೂದಲಿನ ಎಣ್ಣೆಗೆ ಸಂಬಂಧಪಟ್ಟ ಜಾಹೀರಾತುಗಳು ಸುಳ್ಳು ಎಂದಿದ್ದಾರೆ.
ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸಲು ಕೂದಲಿನ ಎಣ್ಣೆ ಅಥವಾ ಇತರ ಉತ್ಪನ್ನಗಳ ಬದಲಿಗೆ ಪ್ರಮುಖ ಅಡುಗೆ ಪದಾರ್ಥವಾದ ಈರುಳ್ಳಿಯನ್ನು ಬಳಸುವುದು ಪರಿಣಾಮಕಾರಿ. ಈರುಳ್ಳಿಯ ರಸವನ್ನು ತೆಗೆದು ಕೂದಲಿಗೆ ಚೆನ್ನಾಗಿ ಮಸಾಜ್ ಮಾಡಿ. ವಾರಕ್ಕೆ 2 ಬಾರಿ ಮಸಾಜ್ ಮಾಡುವುದರಿಂದ ಉತ್ತಮ ಫಲಿತಾಂಶವು ನೋಡಲು ಸಾಧ್ಯ. ಅದಲ್ಲದೇ ಈ ವೇಸ್ಟ್ ಎಂದು ಬಿಸಾಡುವ ಈರುಳ್ಳಿ ಸಿಪ್ಪೆಯೂ ನಿಮ್ಮ ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ, ಇದನ್ನು ನಿಮ್ಮ ಕೂದಲಿನ ಹಚ್ಚುವುದು ಒಳ್ಳೆಯದು ಎಂದಿದ್ದಾರೆ.
ಕೂದಲಿನ ಆರೈಕೆಯಲ್ಲಿ ಈ ರೀತಿ ಈರುಳ್ಳಿ ರಸ ಬಳಸಿದರೆ ಪರಿಣಾಮಕಾರಿಯಾಗಿ ಕೆಲಸ ಮಡುತ್ತದೆ. ಹೀಗಾಗಿ ತಾಜಾ ಈರುಳ್ಳಿಯಿಂದ ರಸವನ್ನು ತೆಗೆದುಕೊಳ್ಳಿ. ಈ ಈರುಳ್ಳಿಯೂ ಬಲವಾದ ವಾಸನೆಯನ್ನು ಹೊಂದಿರಬೇಕು, ಕಣ್ಣುಗಳಲ್ಲಿ ನೀರು ತರಿಸುವಂತಿರಬೇಕು. ಈ ಹ್ಯಾಕ್ ಶೇಕಡಾ 99 ರಷ್ಟು ಕೂದಲು ಬೆಳೆಯಲು ಸಹಾಯ ಮಾಡುತ್ತದೆ ಎಂದು ವಿವರಿಸಿದ್ದಾರೆ.
ಇದನ್ನೂ ಓದಿ: ನೀವು ಬಟ್ಟೆಯನ್ನು ಎಷ್ಟು ಸಲ ಧರಿಸಿದ ಬಳಿಕ ಒಗೆಯಲು ಹಾಕಬೇಕು?
ಕೂದಲಿಗೆ ಎಣ್ಣೆ ಹಚ್ಚುವ ಸರಿಯಾದ ವಿಧಾನ ಯಾವುದು?
ಜಾವೇದ್ ಹಬೀಬ್ ಕೂದಲಿಗೆ ಎಣ್ಣೆ ಹಚ್ಚುವ ವಿಧಾನದ ಬಗ್ಗೆ ವಿವರಿಸಿದ್ದು, ಒದ್ದೆಯಾದ ಕೂದಲಿಗೆ ಎಣ್ಣೆ ಹಚ್ಚುವುದು ಬಹಳ ಮುಖ್ಯ. ಕೇಶರಾಶಿಗೆ ಎಣ್ಣೆ ಹಚ್ಚುವ ಮೊದಲು ಮತ್ತು ನಂತರ ಈ ಕೆಲವು ಕ್ರಮಗಳನ್ನು ತೆಗೆದುಕೊಳ್ಳಬೇಕು. ಎಣ್ಣೆ ಹಚ್ಚುವ ಮೊದಲು ಕೂದಲನ್ನು ಒದ್ದೆಯಾಗಿಸಬೇಕು. ಕೂದಲನ್ನು ಒದ್ದೆ ಮಾಡಲು ಉಗುರು ಬೆಚ್ಚಗಿನ ನೀರನ್ನು ಬಳಸಬೇಕು. ಆದರೆ ಈ ನೀರು ತುಂಬಾ ಬಿಸಿಯಾಗಿರಬಾರದು ಅಥವಾ ತುಂಬಾ ತಣ್ಣಗಾಗಿರದಂತೆ ನೋಡಿ ಕೊಳ್ಳಿ. ಕೂದಲನ್ನು ಸಂಪೂರ್ಣವಾಗಿ ಒದ್ದೆಯಾಗಿಸಿದ ಬಳಿಕ ಎಣ್ಣೆ ಹಚ್ಚಿ ಎಂದಿದ್ದಾರೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ