ಭಾರತದ ಲಸಿಕೆ ಕೊವ್ಯಾಕ್ಸಿನ್​ ಸಂಪೂರ್ಣ ಸುರಕ್ಷಿತ! ಸರ್ಟಿಫಿಕೇಟ್​ ಕೊಟ್ಟ ಪ್ರತಿಷ್ಠಿತ ಲ್ಯಾನ್ಸೆಟ್​ ವೈದ್ಯಕೀಯ ಜರ್ನಲ್​

ಕೊವ್ಯಾಕ್ಸಿನ್ ಲಸಿಕೆಯಿಂದ ರೋಗ ನಿರೋಧಕ ಶಕ್ತಿ ವೃದ್ಧಿಸುತ್ತದೆ. ಈ ಲಸಿಕೆ ಸುರಕ್ಷಿತವೂ ಆಗಿದೆ ಎಂದು ಹೇಳಿರುವ ಲ್ಯಾನ್ಸೆಟ್ ವೈದ್ಯಕೀಯ ಜರ್ನಲ್​ ಕೊವ್ಯಾಕ್ಸಿನ್​ ಕುರಿತಾಗಿ ಎದ್ದಿದ್ದ ಅನುಮಾನಗಳನ್ನು ದೂರಮಾಡಿದೆ.

ಭಾರತದ ಲಸಿಕೆ ಕೊವ್ಯಾಕ್ಸಿನ್​ ಸಂಪೂರ್ಣ ಸುರಕ್ಷಿತ! ಸರ್ಟಿಫಿಕೇಟ್​ ಕೊಟ್ಟ ಪ್ರತಿಷ್ಠಿತ ಲ್ಯಾನ್ಸೆಟ್​ ವೈದ್ಯಕೀಯ ಜರ್ನಲ್​
ಪ್ರಾತಿನಿಧಿಕ ಚಿತ್ರ
Follow us
Skanda
| Updated By: ಸಾಧು ಶ್ರೀನಾಥ್​

Updated on:Jan 22, 2021 | 4:54 PM

ದೆಹಲಿ: ಭಾರತೀಯ ಕೊರೊನಾ ಲಸಿಕೆಗಳ ಕುರಿತು ದೇಶದಲ್ಲೇ ಸಾಕಷ್ಟು ಅನುಮಾನ ವ್ಯಕ್ತವಾಗಿದ್ದವು. ಅದರಲ್ಲೂ ಭಾರತ್ ಬಯೋಟೆಕ್​ ಸಂಸ್ಥೆ ತಯಾರಿಸಿದ ಕೊವ್ಯಾಕ್ಸಿನ್​ ಲಸಿಕೆಯ ಬಗ್ಗೆ ಹಲವರು ಸಂದೇಹ ವ್ಯಕ್ತಪಡಿಸಿದ್ದರು. ಆದರೆ, ಇದೀಗ ಪ್ರತಿಷ್ಠಿತ ಲ್ಯಾನ್ಸೆಟ್ ವೈದ್ಯಕೀಯ ಜರ್ನಲ್​ನಲ್ಲಿ ಈ ಕುರಿತು ಲೇಖನ ಪ್ರಕಟವಾಗಿದ್ದು, ಕೊವ್ಯಾಕ್ಸಿನ್​ ಲಸಿಕೆ ಸುರಕ್ಷಿತ ಎಂದು ಲ್ಯಾನ್ಸೆಟ್​ ಅಭಿಪ್ರಾಯಪಟ್ಟಿದೆ.

ರೋಗ ನಿರೋಧಕ ಶಕ್ತಿ ವೃದ್ಧಿಸುತ್ತದೆ. ಈ ಲಸಿಕೆ ಸುರಕ್ಷಿತವೂ ಆಗಿದೆ ಕೊವ್ಯಾಕ್ಸಿನ್ ಲಸಿಕೆಯಿಂದ ರೋಗ ನಿರೋಧಕ ಶಕ್ತಿ ವೃದ್ಧಿಸುತ್ತದೆ. ಈ ಲಸಿಕೆ ಸುರಕ್ಷಿತವೂ ಆಗಿದೆ ಎಂದು ಹೇಳಿರುವ ಲ್ಯಾನ್ಸೆಟ್ ವೈದ್ಯಕೀಯ ಜರ್ನಲ್​ ಕೊವ್ಯಾಕ್ಸಿನ್​ ಕುರಿತಾಗಿ ಎದ್ದಿದ್ದ ಅನುಮಾನಗಳನ್ನು ದೂರಮಾಡಿದೆ. ಈ ಮಧ್ಯೆ ಭಾರತ್​ ಬಯೋಟೆಕ್​ ಸಂಸ್ಥೆ ತಯಾರಿಸುತ್ತಿರುವ ಮೂಗಿನ ಮೂಲಕ ನೀಡಬಹುದಾದ ಕೊರೊನಾ ಲಸಿಕೆಯ ಮೊದಲ ಹಂತದ ವೈದ್ಯಕೀಯ ಪರೀಕ್ಷೆಗೂ ಅನುಮತಿ ಸಿಕ್ಕಿರುವುದು ಮತ್ತಷ್ಟು ನಿರೀಕ್ಷೆಗಳಿಗೆ ಕಾರಣವಾಗಿದೆ.

ರೋಗ ನಿರೋಧಕ ಶಕ್ತಿ ಇಲ್ಲದವರಿಗೆ ಕೊವ್ಯಾಕ್ಸಿನ್​ ಕೊಡಬಾರದಂತೆ.. ಇದೆಂಥ ವರಸೆ!

Published On - 4:51 pm, Fri, 22 January 21