ಸಾರಿಗೆ ನೌಕರರ ಜತೆಗಿನ ಸಚಿವ ಲಕ್ಷ್ಮಣ ಸವದಿ ಸಭೆ ವಿಫಲ; ನಾಳೆ ಮತ್ತೊಂದು ಸಭೆ ನಿಗದಿ

ನಾಳೆ ಇನ್ನೊಂದು ಸುತ್ತಿನ ಸಭೆಯನ್ನು ಸಾರಿಗೆ ಸಚಿವ ಲಕ್ಷ್ಮಣ ಸವದಿ ಕರೆದಿದ್ದಾರೆ. ನಾಳೆತ ಸಭೆಯಲ್ಲಾದರೂ ಒಮ್ಮತ ಮೂಡುವುದೇ ಎಂಬ ಪ್ರಶ್ನೆ ಇದೀಗ ಉದ್ಭವವಾಗಿದೆ.

ಸಾರಿಗೆ ನೌಕರರ ಜತೆಗಿನ ಸಚಿವ ಲಕ್ಷ್ಮಣ ಸವದಿ ಸಭೆ ವಿಫಲ; ನಾಳೆ ಮತ್ತೊಂದು ಸಭೆ ನಿಗದಿ
ಸಾಂದರ್ಭಿಕ ಚಿತ್ರ
Follow us
guruganesh bhat
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Apr 01, 2021 | 8:49 PM

ಬೆಂಗಳೂರು: ಸಾರಿಗೆ ನೌಕರರ ಜೊತೆ ಸಚಿವ ಲಕ್ಷ್ಮಣ ಸವದಿ ಸಭೆ ವಿಫಲಗೊಂಡಿದೆ. 6ನೇ ವೇತನ ಆಯೋಗ ಜಾರಿಗೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದ ಸಾರಿಗೆ ನೌಕರರ ಬೇಡಿಕೆ ಸಭೆಯಲ್ಲಿ ಪ್ರಸ್ತಾಪವಾಗುತ್ತಿದ್ದಂತೆ ಸಭೆ ವಿಫಲಗೊಂಡಿದೆ ಎಂದು ಮೂಲಗಳು ತಿಳಿಸಿವೆ. ಸಾರಿಗೆ ನೌಕರರ ಬೇಡಿಕೆಗಳ ಕುರಿತು ಕರೆದಿದ್ದ ಸಭೆಯಲ್ಲಿ KSRTC ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಕಳಸದ, BMTC ವ್ಯವಸ್ಥಾಪಕ ನಿರ್ದೇಶಕಿ ಶಿಖಾ, ರಾಜ್ಯ ರಸ್ತೆ ಸಾರಿಗೆ ಕೂಟದ ರಾಜ್ಯಾಧ್ಯಕ್ಷ ಚಂದ್ರಶೇಖರ್, ಪ್ರಧಾನ ಕಾರ್ಯದರ್ಶಿ ಚೆನ್ನಕೇಶವ, ಚಂಪಕಾವತಿ, ತಿಪ್ಪೇಸ್ವಾಮಿ ಸೇರಿದಂತೆ ಹಲವು ಪ್ರಮುಖರು ಉಪಸ್ಥಿತರಿದ್ದರು. ನಾಳೆ ಇನ್ನೊಂದು ಸುತ್ತಿನ ಸಭೆಯನ್ನು ಸಾರಿಗೆ ಸಚಿವ ಲಕ್ಷ್ಮಣ ಸವದಿ ಕರೆದಿದ್ದಾರೆ. ನಾಳೆತ ಸಭೆಯಲ್ಲಾದರೂ ಒಮ್ಮತ ಮೂಡುವುದೇ ಎಂಬ ಪ್ರಶ್ನೆ ಇದೀಗ ಉದ್ಭವವಾಗಿದೆ.

ಸಾರಿಗೆ ನೌಕರರು ತಮ್ಮ 9 ಬೇಡಿಕೆಗಳ ಈಡೇರಿಕೆಗಾಗಿ ಇಂದಿನಿಂದ ವಿಭಿನ್ನ ಧರಣಿ ನಡೆಸುತ್ತಿದ್ದಾರೆ. ಮೊದಲ ದಿನದಂದು ನೌಕರರು ಸರ್ಕಾರದ ವಿರುದ್ಧ ಕಪ್ಪು ಪಟ್ಟಿ ಚಳುವಳಿ ಆರಂಭಿಸಿದ್ದಾರೆ. ಇಂದು ನಾಲ್ಕು ನಿಗಮದ ಡಿಪೋಗಳಲ್ಲಿ ಕಪ್ಪು ಪಟ್ಟಿ ಕಟ್ಟಿಕೊಂಡು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿರುವ ನೌಕರರು ಬೆಳಗ್ಗೆ 10 ಕೆಂಪೇಗೌಡ ಬಸ್ ನಿಲ್ದಾಣದಲ್ಲಿ ಕಪ್ಪುಪಟ್ಟಿ ಧರಿಸಿ ಪ್ರತಿಭಟನೆ ನಡೆಸಿದ್ದಾರೆ.

ಬೇಡಿಕೆ ಈಡೇರಿಸದಿದ್ದರೆ ಏಪ್ರಿಲ್ 7ರಿಂದ ಬಂದ್ ಈಗಾಗಲೇ ಸಾರಿಗೆ ನೌಕರರ ಬೇಡಿಕೆ ಈಡೇರಿಸದಿದ್ದರೆ ಏಪ್ರಿಲ್ 7ರಿಂದ ರಾಜ್ಯಾದ್ಯಂತ ಸಾರಿಗೆ ಸೇವೆ ಬಂದ್​ ಮಾಡುವುದಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಒಕ್ಕೂಟ ಎಚ್ಚರಿಕೆ ನೀಡಿದೆ. ಸಾರಿಗೆ ನೌಕರರ 8 ಬೇಡಿಕೆ ಈಡೇರಿವೆ ಎಂದು ಸಚಿವರು ಮಾಧ್ಯಮ ಪ್ರಕಟಣೆ ನೀಡಿದ ಹಿನ್ನೆಲೆಯಲ್ಲಿ, ಸಾರಿಗೆ ಸಚಿವರ ಪ್ರಕಟಣೆಗೆ ಕೋಡಿಹಳ್ಳಿ ಚಂದ್ರಶೇಖರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ರಾಜ್ಯ ಸಾರಿಗೆ ನೌಕರರ ಒಕ್ಕೂಟದ ಅಧ್ಯಕ್ಷರಾಗಿರುವ ಚಂದ್ರಶೇಖರ್, ನಾವು ಕೇಳಿರುವ ರೀತಿಯಲ್ಲಿ ಯಾವುದೇ ಬೇಡಿಕೆ ಈಡೇರಿಸಿಲ್ಲ. ನೌಕರರು ಕೇಳಿರುವ ರೀತಿಯಲ್ಲಿ ಬೇಡಿಕೆ ಈಡೇರಿಸದಿದ್ದರೆ ಏಪ್ರಿಲ್ 7ರಂದು ಸಾರಿಗೆ ಸೇವೆ ಬಂದ್​ ಮಾಡಿ ಮುಷ್ಕರ ನಡೆಸುವುದಾಗಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ಸಾರಿಗೆ ನೌಕರರ 9 ಬೇಡಿಕೆಗಳಲ್ಲಿ 8 ಬೇಡಿಕೆ ಈಡೇರಿಸಲಾಗಿದೆ ಎಂದು ಸಾರಿಗೆ ಇಲಾಖೆ ಸಚಿವ ಲಕ್ಷ್ಮಣ ಸವದಿ ಮಾಧ್ಯಮ ಪ್ರಕಟಣೆ ನೀಡಿದ್ದರು. ಉಳಿದ ಒಂದು ಬೇಡಿಕೆಯಾದ 6ನೇ ವೇತನ ಆಯೋಗ ಜಾರಿ ಕುರಿತು ನಿಗಮಗಳ ಮಟ್ಟದಲ್ಲಿ ಸಾರಿಗೆ ನೌಕರರ ಸಂಘಟನೆಗಳ ಸಭೆ ನಡೆಸಲಾಗಿದೆ. ಸಂಘಟನೆಗಳು ಸಲಹೆ ನೀಡಲು ಸಮಯಾವಕಾಶ ಕೇಳಿವೆ ಎಂದು ಮಾಧ್ಯಮ ಪ್ರಕಟಣೆಯಲ್ಲಿ ಸಾರಿಗೆ ಸಚಿವ ಲಕ್ಷ್ಮಣ ಸವದಿ ತಿಳಿಸಿದ್ದರು.

ಸಾರಿಗೆ ನೌಕರರ ಕೂಟದ ಗೌರವ ಅಧ್ಯಕ್ಷ ಕSTRIKEಡಿಹಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿ ಚಳುವಳಿ ಆರಂಭವಾಗಿದ್ದು, ಇಂದಿನಿಂದ ನಡೆಯುವ 7 ದಿನಗಳ ಹೋರಾಟದ ರೂಪುರೇಷೆ ಹೀಗಿದೆ. -ಏಪ್ರಿಲ್ 2, ಬೆಂಗಳೂರಿನ ಸರ್ಕಲ್​ಗಳಲ್ಲಿ ಕುಟುಂಬದವರೊಂದಿಗೆ ಸೇರಿಕೊಂಡು ಬಜ್ಜಿ ಬೊಂಡಾ ಮಾರಾಟ – ಏಪ್ರಿಲ್ 3, ನೌಕರರು ಹಾಗೂ ಅವರ ಕುಟುಂಬದವರೊಂದಿಗೆ ನಗರಗಳ ಸರ್ಕಲ್ ಗಳಲ್ಲಿ ಮಾನವ ಸರಪಳಿ ಮಾಡಿ ಭಿತ್ತಿಪತ್ರ ಪ್ರದರ್ಶನ – ಏಪ್ರಿಲ್ 4, ಸಾರ್ವಜನಿಕರಿಗೆ ಕರಪತ್ರ ಹಂಚುವುದು – ಏಪ್ರಿಲ್ 5, ಧರಣಿ ಸತ್ಯಾಗ್ರಹ – ಏಪ್ರಿಲ್ 6, ಸಾಮೂಹಿಕ ಉಪವಾಸ ಸತ್ಯಾಗ್ರಹ – ಏಪ್ರಿಲ್ 7, ರಿಂದ ಕರ್ನಾಟಕದಾದ್ಯಂತ ಬಸ್ ಸಂಚಾರ ಸ್ಥಗಿತಗೊಳಿಸಲಾಗುವುದು.

ಇದನ್ನೂ ಓದಿ: ಕೊಟ್ಟ ಮಾತಿನಂತೆ ಸಾರಿಗೆ ನೌಕರರ ಏಳು ಬೇಡಿಕೆಗಳ ಈಡೇರಿಸಿದ ಸರ್ಕಾರ: ಸಾರಿಗೆ ನೌಕರರ ತಕರಾರೇನು?

ವಾಹನಗಳ ನೋಂದಣಿ ಫಲಕದಲ್ಲಿ ನಂಬರ್ ಹೊರತುಪಡಿಸಿ ಬೇರೆ ಅಕ್ಷರ, ಸಂಘಟನೆ ಹೆಸರು ಇದ್ದರೆ ದಂಡ -ಸಾರಿಗೆ ಇಲಾಖೆ