ಮೂಡಬಿದ್ರೆಯ ಪೇಪರ್ ರಾಜಣ್ಣ; 52 ವರ್ಷಗಳಿಂದ ದಿನ ಪ್ರತಿಕೆ, ಹಾಲು ಮಾರಿ ಸ್ವಾವಲಂಬಿ ಜೀವನ ಸಾಗಿಸುತ್ತಿರುವ ಬಡ ಜೀವ
ಸುಮಾರು 52 ವರ್ಷಗಳಿಂದ ದಿನ ಪತ್ರಿಕೆ ಹಾಗೂ ಹಾಲು ಮಾರಿ ಸ್ವಾವಲಂಬಿ ಜೀವನ ನಡೆಸುತ್ತಿರುವ ಬಡ ಜೀವವದು. ಮೂಡಬಿದ್ರೆ ಪರಿಸರದಲ್ಲಿ ಪೇಪರ್ ರಾಜಣ್ಣ ಎಂದೇ ಚಿರಪರಿಚಿತರಾದ ಇವರು ತಾಯಿ ಮತ್ತು ಪತ್ನಿಯನ್ನು ಕಳೆದುಕೊಂಡು ಒಬ್ಬಂಟಿ ಜೀವನ ಸಾಗಿಸುತ್ತಿದ್ದಾರೆ. ಇಂದಿಗೂ ಪೇಪರ್ ಮಾರಿ ಬಂದ ಹಣದಿಂದ ಸ್ವಾವಲಂಬಿ ಜೀವನ ಸಾಗಿಸುತ್ತಿರುವ ಇವರಿಗೆ ಪುಟ್ಟ ಮನೆ ಕಟ್ಟುವ ಆಸೆಯಂತೆ. ಇವರ ಈ ಪುಟ್ಟ ಕನಸು ನನಸಾಗಲು ಬೇಕಿದೆ ಸಹಾಯ ಹಸ್ತ.

ಮೂಡಬಿದ್ರೆ, ಮಾ. 28: ಕಷ್ಟ ಬಂದರೆ ಸಾಕು ಬದುಕೇ (life) ಮುಗಿದು ಹೋಯಿತು ಅಂದುಕೊಳ್ಳುವವರ ಮಧ್ಯೆ ಕಷ್ಟವನ್ನು ಮೆಟ್ಟಿ ನಿಂತು ಜೀವನ ಸಾಗಿಸುತ್ತಿರುವವರು ಹಲವರಿದ್ದಾರೆ. ಅದೇ ರೀತಿ ಎಂತಹದ್ದೇ ಸಮಸ್ಯೆ (problems) ಬಂದರು ಅದನ್ನು ಮೆಟ್ಟಿ ನಿಂತು ಮುನ್ನಡೆಯಲೇಬೇಕು, ಜೀವನವೆಂಬ ದೋಣಿಯನ್ನು ಸಾಗಿಸಲೇಬೇಕು ಎಂಬುದನ್ನು ತೋರಿಸಿಕೊಟ್ಟವರು ಮೂಡಬಿದ್ರೆಯ (Moodabidri) ರಾಜಣ್ಣ. ಮೂಡಬಿದ್ರೆಯ ಪರಿಸರದಲ್ಲಿ ಪೇಪರ್ ರಾಜಣ್ಣ (Paper Rajanna) ಎಂದೇ ಮನೆ ಮಾತಾಗಿರುವ ಇವರು ಸುಮಾರು 52 ವರ್ಷಗಳಿಂದ ದಿನ ಪತ್ರಿಕೆ (news paper) , ಹಾಲು ಮಾರಿ ಸ್ವಾವಲಂಬಿ (self-reliant) ಬದುಕನ್ನು ನಡೆಸುತ್ತಿದ್ದಾರೆ. ಪತ್ನಿ ಮತ್ತು ತಾಯಿಯನ್ನು ಕಳೆದುಕೊಂಡು ಪ್ರಸ್ತುತ ಹಳೆಯ ಮನೆಯೊಂದರಲ್ಲಿ ಒಂಟಿ ಬದುಕನ್ನು ನಡೆಸುತ್ತಿರುವ ಇವರಿಗೆ ಒಂದು ಪುಟ್ಟ ಮನೆಯನ್ನು ಕಟ್ಟುವ ಆಸೆಯಂತೆ. ಸ್ವಾವಲಂಬಿ ಜೀವನವನ್ನು ನಡೆಸುತ್ತಾ ಮಾದರಿಯಾಗಿರುವ ಇವರ ಈ ಕನಸು ನನಸಾಗಲು ಬೇಕಿದೆ ಸಹಾಯ ಹಸ್ತ.
ವಿ.ಜೆ ಮಧುರಾಜ್ ಎಂಬವರು ಪೇಪರ್ ರಾಜಣ್ಣ ಅವರ ಸ್ವಾವಲಂಬಿ ಬದುಕಿಕ ಕಥೆಯನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಸುಮಾರು 52 ವರ್ಷಗಳಿಂದಲೂ ಸೈಕಲ್‌ನಲ್ಲಿಯೇ ಹೋಗುತ್ತಾ ಮೂಡಬಿದ್ರೆಯ ಪರಿಸರದಲ್ಲಿ ಪೇಪರ್ ಮತ್ತು ಹಾಲು ಮಾರುವ ಕಾಯಕದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ ಪೇಪರ್ ರಾಜಣ್ಣ. ಒಂದು ದಿನ ಪ್ರತಿಕೆ ಮಾರಾಟ ಮಾಡಿದರೆ ಅವರಿಗೆ ಸಿಗುವುದು ಬರೀ ಒಂದು ರೂಪಾಯಿ. ಆ ಒಂದೊಂದು ರೂಪಾಯಿ ಹಣವನ್ನು ಕೂಡಿಟ್ಟು ಇಂದಿಗೂ ಸ್ವಾವಲಂಬಿ ಜೀವನ ಸಾಗಿಸುತ್ತಿದ್ದಾರೆ ರಾಜಣ್ಣ. ಎರಡು ವರ್ಷಗಳ ಹಿಂದೆ ತಾಯಿಯನ್ನು ಹಾಗೂ 10 ತಿಂಗಳ ಹಿಂದೆ ಹೆಂಡತಿಯನ್ನು ಕಳೆದುಕೊಂಡು ರಾಶಿ ರಾಶಿ ನೋವನ್ನು ಮನದಲ್ಲಿಟ್ಟುಕೊಂಡು ಒಬ್ಬಂಟಿ ಜೀವನ ಸಾಗಿಸುತ್ತಿರುವ ರಾಜಣ್ಣ ಜನರೊಂದಿಗೆ ಯಾವಾಗಲೂ ನುಗುಮೊಗದಿಂದಲೇ ಸಂವಹನ ನಡೆಸುತ್ತಾರೆ. ಇವರ ಈ ಬದುಕಿನ ಕಥೆ ಎಂಥವರ ಕಣ್ಣಲ್ಲೂ ನೀರು ತರಿಸುವಂತಿದೆ. ಸದ್ಯ ಸುಮಾರು 65 ವರ್ಷಗಳಷ್ಟು ಹಳೆಯ ಮನೆಯಲ್ಲಿ ವಾಸವಿರುವ ರಾಜಣ್ಣನಿಗೆ ಒಂದು ಮನೆ ಕಟ್ಟುವ ಆಸೆಯಂತೆ. ಇವರ ಈ ಪುಟ್ಟ ಕನಸನ್ನು ನನಸಾಗಿಸಲು ಬೇಕಿದೆ ಎಲ್ಲರ ಸಹಾಯ.
ಇದನ್ನೂ ಓದಿ: ಇದು ವಿಶ್ವದ ಅತ್ಯಂತ ಕುಬ್ಜ ಮೇಕೆ
ವಿಡಿಯೋ ಇಲ್ಲಿದೆ ನೋಡಿ:
View this post on Instagram
ರಾಜಣ್ಣನ ಸ್ವಾವಲಂಬಿ ಬದುಕಿನ ಮನ ಮುಟ್ಟುವ ಕಥೆಯನ್ನು ಸೊಲ್ಮೆ (solme_tulu) ಎಂಬ ಇನ್‌ಸ್ಟಾಗ್ರಾಮ್ ಪೇಜ್ ಒಂದರಲ್ಲಿ ಶೇರ್ ಮಾಡಲಾಗಿದೆ. ಜೊತೆಗೆ ರಾಜಣ್ಣ ಅವರ ಬ್ಯಾಂಕ್ ಡಿಟೇಲ್ಸ್‌ನ್ನು ಕೂಡಾ ಶೇರ್ ಮಾಡಲಾಗಿದ್ದು, ನೀವು ಕೂಡಾ ನಿಮ್ಮ ಕೈಲಾದಷ್ಟು ಸಹಾಯ ಮಾಡಬಹುದು.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:56 am, Fri, 28 March 25