Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಪ್ಪನ ಲೈಂಗಿಕ ಕಿರುಕುಳದಿಂದ ಬೇಸತ್ತು ಆತನ ಗುಪ್ತಾಂಗ ಕತ್ತರಿಸಿದ ಮಗಳು!

ಮಹಾರಾಷ್ಟ್ರದ ಪಾಲ್ಘರ್‌ನಲ್ಲಿ ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಮಲತಂದೆಯಿಂದ ಬೇಸತ್ತ 24 ವರ್ಷದ ಯುವತಿಯೊಬ್ಬಳು ಆತನ ಗುಪ್ತಾಂಗಗಳನ್ನು ಕತ್ತರಿಸಿ, ಆತನ ಕುತ್ತಿಗೆ ಮತ್ತು ಮುಖವನ್ನು ಗಾಯಗೊಳಿಸಿದ್ದಾಳೆ. ತನ್ನ ಮೇಲೆ ನಡೆದ ದೌರ್ಜನ್ಯವನ್ನು ವಿವರಿಸುವ ಯುವತಿಯ ವಿಡಿಯೋ ಇಂಟರ್ನೆಟ್‌ಗೆ ಹರಿದಾಡುತ್ತಿದ್ದು, ಈ ವಿಡಿಯೋದಲ್ಲಿ ಆ ಹುಡುಗಿಯ ಕೈಯಲ್ಲಿ ಚಾಕು ಕಾಣಿಸಿಕೊಂಡಿದ್ದು, ಆಕೆಯ ತಂದೆ ಮನೆಯೊಳಗೆ ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನು ನೋಡಬಹುದು.

ಅಪ್ಪನ ಲೈಂಗಿಕ ಕಿರುಕುಳದಿಂದ ಬೇಸತ್ತು ಆತನ ಗುಪ್ತಾಂಗ ಕತ್ತರಿಸಿದ ಮಗಳು!
Sexual Harassment
Follow us
ಸುಷ್ಮಾ ಚಕ್ರೆ
|

Updated on: Mar 27, 2025 | 9:14 PM

ಪಾಲ್ಘರ್, ಮಾರ್ಚ್ 27: ತನ್ನ ಮಲತಂದೆ 2 ವರ್ಷಗಳಿಗೂ ಹೆಚ್ಚು ಕಾಲ ತನ್ನ ಮೇಲೆ ನಡೆಸಿದ ಲೈಂಗಿಕ ಶೋಷಣೆಯಿಂದ ಬೇಸತ್ತಿದ್ದ ಮಹಾರಾಷ್ಟ್ರದ ನಲಸೋಪರದ 24 ವರ್ಷದ ಯುವತಿ ತನ್ನ ಮಲತಂದೆಯ ಮೇಲೆ ಚಾಕುವಿನಿಂದ ಹಲ್ಲೆ ಮಾಡಿ ಅವರ ಜನನಾಂಗಗಳನ್ನು ಕತ್ತರಿಸಿದ್ದಾಳೆ. ಈ ಘಟನೆ ಸೋಮವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ನಲಸೋಪರ ಪೂರ್ವದ ಚಾಲ್‌ನಲ್ಲಿ ನಡೆದಿದೆ. ಈ ಹಲ್ಲೆಯಲ್ಲಿ ಯುವತಿಯ ಮಲತಂದೆ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಕಾಂಡಿವಲಿಯ ಶತಾಬ್ದಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.

ಸೋಮವಾರ ತನ್ನ ಮೇಲೆ ಬಲವಂತವಾಗಿ ಹಲ್ಲೆ ನಡೆಸಲು ಪ್ರಯತ್ನಿಸಿದ 56 ವರ್ಷದ ಮಲತಂದೆಯ ಮೇಲೆ ಆ ಯುವತಿ ಹಲ್ಲೆ ನಡೆಸಿದ್ದಾಳೆ. ಆತನನ್ನು ಕಣ್ಣುಮುಚ್ಚುವಂತೆ ಮನವೊಲಿಸಿ, ಆತನ ಕಣ್ಣಿಗೆ ಬಟ್ಟೆ ಕಟ್ಟಿ ಚಾಕುವಿನಿಂದ ಹಲ್ಲೆ ಮಾಡಿ, ಆತನ ಜನನಾಂಗಗಳನ್ನು ಕತ್ತರಿಸಿದ್ದಾಳೆ. ನೋವಿನಿಂದ ಕಿರುಚುತ್ತಾ, ಆ ವ್ಯಕ್ತಿ ಬಟ್ಟೆಯ ಮೇಲೆಲ್ಲ ರಕ್ತದ ಕಲೆಗಳೊಂದಿಗೆ ಮನೆಯಿಂದ ಹೊರಗೆ ಓಡಿಹೋಗಿದ್ದಾನೆ. ಆದರೂ ಬಿಡದ ಆಕೆ ಅವನನ್ನು ಬೆನ್ನಟ್ಟಿ ರಸ್ತೆಯ ಮೇಲೆ ಮತ್ತೆ ಇರಿದಿದ್ದಾಳೆ. ಆಶ್ಚರ್ಯಚಕಿತರಾದ ಸ್ಥಳಿಯರು ಆಕೆ ಕೈಯಲ್ಲಿ ಚಾಕುವಿನಿಂದ ಓಡಾಡುತ್ತಿರುವ ವೀಡಿಯೊಗಳನ್ನು ಚಿತ್ರೀಕರಿಸಲು ಪ್ರಾರಂಭಿಸಿದರು. ಅವರಲ್ಲಿ ಒಬ್ಬರು ಪೊಲೀಸ್ ತುರ್ತು ಸಂಖ್ಯೆಗೆ ಕರೆ ಮಾಡಿದರು, ನಂತರ ಪೊಲೀಸರು ಸ್ಥಳಕ್ಕೆ ಬಂದು ಗಾಯಗೊಂಡ ವ್ಯಕ್ತಿಯನ್ನು ಆಸ್ಪತ್ರೆಗೆ ಸೇರಿಸಿದರು.

ಇದನ್ನೂ ಓದಿ: ಅಪ್ರಾಪ್ತ ಬಾಲಕಿಯ ಅಪಹರಿಸಿ ಸ್ಮಶಾನಕ್ಕೆ ಎಳೆದೊಯ್ದು ಸಾಮೂಹಿಕ ಅತ್ಯಾಚಾರ

ಇದೀಗ ತುಲಿಂಜ್ ಪೊಲೀಸರು ಮಹಿಳೆಯನ್ನು ವಶಕ್ಕೆ ಪಡೆದು ವೈದ್ಯಕೀಯ ಪರೀಕ್ಷೆಗೆ ಕಳುಹಿಸಿದ್ದಾರೆ. ಭಾರತೀಯ ನ್ಯಾಯ ಸಂಹಿತಾದ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಮಲತಂದೆಯ ವಿರುದ್ಧ ಅತ್ಯಾಚಾರ ಪ್ರಕರಣ ಮತ್ತು ಮಹಿಳೆಯ ವಿರುದ್ಧ ಕೊಲೆಯತ್ನದ ಅಪರಾಧವನ್ನು ದಾಖಲಿಸುವ ಪ್ರಕ್ರಿಯೆಯಲ್ಲಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. “ನಾವು ಹೆಚ್ಚಿನ ತನಿಖೆ ನಡೆಸುತ್ತಿದ್ದೇವೆ. ಶೀಘ್ರದಲ್ಲೇ ಆಕೆಯ ಹೇಳಿಕೆಯನ್ನು ದಾಖಲಿಸುತ್ತೇವೆ” ಎಂದು ತುಲಿಂಜ್ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇದನ್ನೂ ಓದಿ: ಹೈದರಾಬಾದ್: ಅತ್ಯಾಚಾರದಿಂದ ತಪ್ಪಿಸಿಕೊಳ್ಳಲು ಚಲಿಸುತ್ತಿದ್ದ ರೈಲಿನಿಂದ ಹಾರಿದ ಯುವತಿ

ತನ್ನ ಮಲತಂದೆ ರಮೇಶ್ ಭಾರ್ತಿ ಕಳೆದ 2 ವರ್ಷಗಳಿಂದ ತನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆಸುತ್ತಿದ್ದಾನೆ ಎಂದು ಆಕೆ ಹೇಳಿದ್ದಾಳೆ. ಕೋಪದ ಭರದಲ್ಲಿ, ಅದನ್ನು ಸಹಿಸಲಾಗದೆ ಚಾಕುವಿನಿಂದ ಅಪ್ಪನ ಮೇಲೆ ಹಲ್ಲೆ ನಡೆಸಿದ್ದಾಳೆ. ಹುಡುಗಿಯ ನಿಜವಾದ ತಂದೆ ನಿಧನರಾದ ನಂತರ ಆಕೆಯ ತಾಯಿ ರಮೇಶ್ ಅವರನ್ನು ವಿವಾಹವಾಗಿದ್ದರು.

ರಮೇಶ್ ತನ್ನ ಹೆಂಡತಿಯ ಮೇಲಿನ ಆಸಕ್ತಿಯನ್ನು ಕಳೆದುಕೊಂಡ ನಂತರ, ತನ್ನ ಮಲಮಗಳ ಜೊತೆ ಅಸಭ್ಯವಾಗಿ ವರ್ತಿಸಲು ಪ್ರಾರಂಭಿಸಿದನು. ರಮೇಶ್ ಆಕೆಯನ್ನು ಅನುಚಿತವಾಗಿ ಮುಟ್ಟುತ್ತಿದ್ದ ಮತ್ತು ಅವಳನ್ನು ಲೈಂಗಿಕ ಸಂಬಂಧಕ್ಕೆ ಒತ್ತಾಯಿಸುತ್ತಿದ್ದ ಎಂದು ವರದಿಯಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ