Sign In

By signing in or creating an account, you agree with Associated Broadcasting Company's Terms & Conditions and Privacy Policy.

ಊಟದ ವಿಚಾರಕ್ಕೆ ಗಂಡ-ಹೆಂಡ್ತಿ ಗಲಾಟೆ: ಮಧ್ಯಪ್ರವೇಶಿಸಿದ ಅತ್ತೆ ಮೇಲೆ ಸೊಸೆ ಹಲ್ಲೆ

ಸೊಸೆಯಿಂದ ಅತ್ತೆ ಮೇಲೆ ಕುಡುಗೋಲಿನಿಂದ ಮಾರಣಾಂತಿಕವಾಗಿ ಹಲ್ಲೆ ಮಾಡಿರುವಂತಹ ಘಟನೆ ಬೆಳಗಾವಿ ತಾಲೂಕಿನ ಮಾವಿನಕಟ್ಟಿ ಗ್ರಾಮದಲ್ಲಿ ನಡೆದಿದೆ. ಊಟದ ವಿಚಾರವಾಗಿ ನಡೆದ ಜಗಳ ಬಳಿಕ ಕೈ ಕೈ ಮೀಲಾಯಿಸುವ ಹಂತಕ್ಕೆ ಹೋಗಿದೆ. ಈ ವೇಳೆ ಸೊಸೆ ತನ್ನ ಅತ್ತೆ ಮೇಲೆ ಹಲ್ಲೆ ಮಾಡಿದ್ದಾರೆ. ಸದ್ಯ ಮಾರಿಹಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಊಟದ ವಿಚಾರಕ್ಕೆ ಗಂಡ-ಹೆಂಡ್ತಿ ಗಲಾಟೆ: ಮಧ್ಯಪ್ರವೇಶಿಸಿದ ಅತ್ತೆ ಮೇಲೆ ಸೊಸೆ ಹಲ್ಲೆ
ಊಟದ ವಿಚಾರಕ್ಕೆ ಗಂಡ-ಹೆಂಡ್ತಿ ಗಲಾಟೆ: ಮಧ್ಯಪ್ರವೇಶಿಸಿದ ಅತ್ತೆ ಮೇಲೆ ಸೊಸೆ ಹಲ್ಲೆ
Follow us
Sahadev Mane
| Updated By: ಗಂಗಾಧರ​ ಬ. ಸಾಬೋಜಿ

Updated on: Mar 20, 2025 | 10:24 PM

ಬೆಳಗಾವಿ, ಮಾರ್ಚ್​ 20: ಸೊಸೆಯಿಂದ (Daughter-in-law) ಅತ್ತೆ ಮೇಲೆ ಕುಡುಗೋಲಿನಿಂದ ಮಾರಣಾಂತಿಕವಾಗಿ ಹಲ್ಲೆ (attack) ಮಾಡಿರುವಂತಹ ಘಟನೆ ಬೆಳಗಾವಿ ತಾಲೂಕಿನ ಮಾವಿನಕಟ್ಟಿ ಗ್ರಾಮದಲ್ಲಿ ನಡೆದಿದೆ. ಅತ್ತೆ ಜಾನವ್ವ ಹುದಲಿ(80) ಮೇಲೆ ಸೊಸೆ ಶಿಲ್ಪಾ ನಾಗರಾಜ್ ಹುದಲಿ ಹಲ್ಲೆ ಆರೋಪ ಮಾಡಲಾಗಿದೆ. ನಿನ್ನೆ ರಾತ್ರಿ ತಾಯಿ ಜಾನವ್ವ ಮನೆಗೆ ಪುತ್ರ ನಾಗರಾಜ್ ಊಟಕ್ಕೆ ಹೋಗಿದ್ದ. ಇದನ್ನೇ ಪ್ರಶ್ನಿಸಿ ಗಂಡನೊಂದಿಗೆ ಗಲಾಟೆ ಆರಂಭಿಸಿದ್ದ ಪತ್ನಿ ಶಿಲ್ಪಾ, ಗಂಡ, ಹೆಂಡತಿ ಗಲಾಟೆ ವೇಳೆ ಮಧ್ಯಪ್ರವೇಶ ಮಾಡಿದ ಅತ್ತೆ ಮತ್ತು ನಾದಿನಿ ಮೇಲೆ ಕೈಗೆ ಸಿಕ್ಕ ಕುಡುಗೋಲಿನಿಂದ ಹಲ್ಲೆ ಮಾಡಿದ್ದಾರೆ. ಸದ್ಯ ಮಾರಿಹಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಅತ್ತೆ ಮೇಲೆ ಸೊಸೆಯಿಂದ ಮಾರಣಾಂತಿಕ ಹಲ್ಲೆ

ಜಾನವ್ವ ಹುದಲಿ (84) ಬೆಳಗಾವಿ ತಾಲೂಕಿನ ಮಾವಿನ ಕಟ್ಟಿ ಗ್ರಾಮದ ನಿವಾಸಿ. ಇರುವ ಒಬ್ಬ ಮಗನಿಂದ  ಬೇರೆಯಾಗಿದ್ದರಿಂದ ಮಗಖಳೊಟ್ಟಿಗೆ ಬೇರೆ ಮನೆ ಮಾಡಿಕೊಂಡು ಅಲ್ಲೇ ಜೀವನ ನಡೆಸುತ್ತಿದ್ದರು. ಇಳಿ ವಯಸ್ಸಿನಲ್ಲೂ ಮಗನ ಕನವರಿಕೆ ಮಾಡ್ತಿರುವ ಈ ವೃದ್ಧೆ ಮೇಲೆ ಕ್ರೌರ್ಯ ಮೆರೆದಿದ್ದು ಬೇರೆ ಯಾರು ಅಲ್ಲಾ ಈಕೆಯ ಸೊಸೆ ಶಿಲ್ಪಾ ಹುದಲಿನೇ.

ಇದನ್ನೂ ಓದಿ: ಅತ್ತೆ ಸೊಸೆ ಜಗಳ: ಬೆಳಗಾವಿಯಲ್ಲಿ ಅತ್ತೆ ಮೇಲೆ ಕುಡುಗೋಲಿಂದ ಹಲ್ಲೆ ಮಾಡಿದ ಸೊಸೆ ಶಿಲ್ಪಾ ನಾಗರಾಜ್

ಇದನ್ನೂ ಓದಿ
Image
ಶಿವಮೊಗ್ಗ: ಹಸು ರಕ್ಷಣೆಗೆ ಬಾವಿಗೆ ಇಳಿದಿದ್ದ ವ್ಯಕ್ತಿ ‌ಉಸಿರುಗಟ್ಟಿ ಸಾವು
Image
ಕೈಗೆ ಗಂಭೀರ ಗಾಯದೊಂದಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅತ್ತೆ
Image
ಬೆಂಗಳೂರು: ಪಾಕಿಸ್ತಾನಕ್ಕೆ ರಕ್ಷಣಾ ಮಾಹಿತಿ ರವಾನಿಸುತ್ತಿದ್ದ ಗೂಢಚಾರ ಬಂಧನ
Image
ನಾಪತ್ತೆಯಾಗಿದ್ದ 10ನೇ ತರಗತಿ ವಿದ್ಯಾರ್ಥಿ ಭದ್ರಾ ನದಿಯಲ್ಲಿ ಶವವಾಗಿ ಪತ್ತೆ

ನಿನ್ನೆ ತನ್ನ ಪಕ್ಕದ ಏರಿಯಾದಲ್ಲಿದ್ದ ಅತ್ತೆ ಮನೆಗೆ ಗಂಡ ಊಟಕ್ಕೆ ಹೋಗಿದ್ದಾನೆ. ಈ ವಿಚಾರ ಹೆಂಡತಿ ಶಿಲ್ಪಾಗೆ ಗೊತ್ತಾಗಿದೆ, ವಿಚಾರ ತಿಳಿಯುತ್ತಿದ್ದಂತೆ ಅತ್ತೆ ಮನೆಗೆ ಬಂದ ಶಿಲ್ಪಾ ಅಲ್ಲಿ ಗಂಡನ ಜೊತೆಗೆ ಜಗಳ ತೆಗೆದಿದ್ದಾಳೆ. ಬಹಿರಂಗವಾಗಿ ಕೆಟ್ಟದಾಗಿ ಬೈಯ್ಯವುದನ್ನ ಮಾಡಲಾರಂಭಿಸಿದ್ದಾರೆ. ಈ ವೇಳೆ ಇಬ್ಬರ ಜಗಳ ಕೈ ಕೈ ಮೀಲಾಯಿಸುವ ಹಂತಕ್ಕೆ ಹೋಗಿದೆ. ಇವರ ಜಗಳ ಬಿಡಿಸಿಲು ಬಂದ ವೃದ್ಧೆ ಜಾನವ್ವಾಳ ಮೇಲೆಯೂ ಶಿಲ್ಪಾ ಮುಗಿ ಬಿದ್ದಿದ್ದಾಳೆ. ಅಲ್ಲೇ ಇದ್ದ ಕುಡಗೋಲಿನಿಂದ ಅತ್ತೆ ಕೈಗೆ ಹಾಕಿಯೇ ಬಿಟ್ಟಿದ್ದಾಳೆ. ಈ ವೇಲೆ ಅಡ್ಡ ಬಂದ ನಾದಿನಿ ಕಸ್ತೂರಿ ಕಿವಿ ಕೂಡ ಹರಿದು ಹಾಕಿದ್ದಾಳೆ.

ಇನ್ನೂ ಜಾನವ್ವಳ ಕೈಗೆ ಬಲವಾಗಿ ಏಟು ಬೀಳ್ತಿದ್ದಂತೆ ಅಕ್ಕಪಕ್ಕದ ಜನರು ಓಡಿ ಬಂದು ಇವರ ಜಗಳ ಬೀಡಿಸಿದ್ದಾರೆ. ಕೂಡಲೇ ಆ್ಯಂಬುಲೆನ್ಸ್ ಕರೆಯಿಸಿ ಆಸ್ಪತ್ರೆಗೆ ಕಳುಹಿಸಿ ಕೊಟ್ಟಿದ್ದಾರೆ. ಅತ್ತೆ, ಗಂಡನ ಜೊತೆಗೆ ತಾನೂ ಕೂಡ ಬೆಳಗಾವಿ ಬಿಮ್ಸ್ ಆಸ್ಪತ್ರೆಗೆ ಬಂದ ಸೊಸೆ ಶಿಲ್ಪಾ, ದೂರದಲ್ಲಿ ನಿಂತ್ರೇ ಇತ್ತ ತಾಯಿಗೆ ಆದ ಗಾಯ ಕಂಡು ಮಗ ಓಡಾಡಿ ತಾಯಿಯನ್ನ ಅಡ್ಮಿಟ್ ಮಾಡಿ ಚಿಕಿತ್ಸೆ ಕೊಡಿಸಿದ್ದಾನೆ. ಇತ್ತ ಕಿವಿಗೆ ಗಾಯವಾಗಿದ್ದ ಕಸ್ತೂರಿ ಕೂಡ ತನ್ನ ಬಗ್ಗೆ ಕಾಳಜಿ ಬಿಟ್ಟು ತಾಯಿ ಬಗ್ಗೆ ಕಾಳಜಿ ತೋರಿಸಿ ಆಕೆಗೆ ಉಪಚರಿಸುವ ಕೆಲಸ ಮಾಡಿದಳು.

ನಾನು ಹಲ್ಲೆ ಮಾಡಿಲ್ಲ ಎಂದ ಸೊಸೆ

ಇಲ್ಲಿ ವೃದ್ದೆ ಕೈಗೆ ಗಂಭೀರ ಗಾಯವಾದ್ರೂ ಮಗನಿಗೆ ಊಟ ಹಾಕ್ತಿರಲಿಲ್ಲ. ಊಟ ಹಾಕಲು ಕರೆದ ಆತನ ಪರಿಸ್ಥಿತಿ ನೋಡಲು ಆಗ್ತಿಲ್ಲ ಅಂತಾ ಮತ್ತೆ ಮಗನ ಬಗ್ಗೆ ಯೋಚಿಸುತ್ತಿದ್ದಾಳೆ. ಇತ್ತ ಸೊಸೆ ಮಾಡಿದ ಗಲಾಟೆಯಿಂದಾಗಿ ಭಯ ಕೂಡ ವೃದ್ದೆಯ ಕಣ್ಣಲ್ಲಿ ಎದ್ದು ಕಾಣಿಸುತ್ತಿದ್ದು, ಕಣ್ಣೀರಿಟ್ಟು ಸಂಕಟ ಹೊರ ಹಾಕಿದ್ದಾರೆ. ಹಲ್ಲೆ ಮಾಡಿದ್ದರ ಬಗ್ಗೆ ಸೊಸೆಗೆ ಕೇಳಿದರೆ ‘ನಾನು ಹಲ್ಲೆ ಮಾಡಿಲ್ಲ. ಅವರೇ ಮಾಡಿಕೊಂಡು ಬಂದಿದ್ದಾರೆ’ ಅಂತಾ ಊಟರ್ನ್ ಹೊಡೆದಿದ್ದಾರೆ. ಘಟನೆ ಕುರಿತು ಪ್ರತಿಕ್ರಿಯೆ ನೀಡಿದ ನಗರ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್, ಕೇಸ್ ಆಗಿದೆ ತನಿಖೆ ಮಾಡುತ್ತಿದ್ದೇವೆ, ಬಿದ್ದು ಗಾಯವಾಗಿದೆ ಅಂತಾ ಹೇಳಿದ್ದು ಪರಿಶೀಲನೆ ನಡೆಸುವುದಾಗಿ ಹೇಳಿದ್ದಾರೆ.

ಇದನ್ನೂ ಓದಿ: ಶಿವಮೊಗ್ಗ: ಹಸು ರಕ್ಷಣೆಗೆ ಬಾವಿಗೆ ಇಳಿದಿದ್ದ ವ್ಯಕ್ತಿ ‌ಉಸಿರುಗಟ್ಟಿ ಸಾವು

ಅತ್ತೆ, ಸೊಸೆ ತಾಯಿ-ಮಗಳಂತೆ ಇರುವುದನ್ನ ಬಿಟ್ಟು ಈ ರೀತಿ ಕಚ್ಚಾಡಿ ಇದೀಗ ಒಬ್ಬರು ಆಸ್ಪತ್ರೆ ಪಾಲಾಗಿದ್ದರೆ ಇನ್ನೊಬ್ಬರಿಗೆ ಬಂಧನ ಭೀತಿ ಎದುರಾಗಿದೆ. ಅದೇನೆ ಇರಲಿ ಮನೆಯಲ್ಲಿ ಊಟದ ವಿಚಾರಕ್ಕೆ ಶುರುವಾದ ಜಗಳ ವಿಕೋಪಕ್ಕೆ ತಿರುಗಿ ವೃದ್ಧೆ ಮೇಲೆ ಹಲ್ಲೆಯಾಗಿದೆ. ಕುಳಿತು ಮಾತಾಡಿಕೊಂಡು ಬಗೆ ಹರಿಸಿಕೊಳ್ಳುವುದನ್ನ ಬಿಟ್ಟು ಗಲಾಟೆ ಮಾಡಿದ್ದು ಎಷ್ಟರ ಮಟ್ಟಿಗೆ ಸರಿ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಕಮೆಂಟೇಟರ್ ಜಾನಿ ನಿಜವಾದ ಹೆಸರೇನು? ಈ ಹೆಸರು ಬಂದಿದ್ದು ಹೇಗೆ?
ಕಮೆಂಟೇಟರ್ ಜಾನಿ ನಿಜವಾದ ಹೆಸರೇನು? ಈ ಹೆಸರು ಬಂದಿದ್ದು ಹೇಗೆ?
ಆಣೆ ಪ್ರಮಾಣ ಮಾಡುವುದು ಯಾಕೆ? ಆಣೆ ತಪ್ಪಿದರೆ ಏನಾಗುತ್ತದೆ ನೋಡಿ
ಆಣೆ ಪ್ರಮಾಣ ಮಾಡುವುದು ಯಾಕೆ? ಆಣೆ ತಪ್ಪಿದರೆ ಏನಾಗುತ್ತದೆ ನೋಡಿ
ರವಿ ಮೀನ ರಾಶಿಯಲ್ಲಿ ಸಂಚರಿಸುವ ಈ ದಿನದ ರಾಶಿ ಭವಿಷ್ಯ ಇಲ್ಲಿದೆ
ರವಿ ಮೀನ ರಾಶಿಯಲ್ಲಿ ಸಂಚರಿಸುವ ಈ ದಿನದ ರಾಶಿ ಭವಿಷ್ಯ ಇಲ್ಲಿದೆ
‘ಕಾವೇರಿ ಆರತಿ’: ಜಲ ರಕ್ಷಣೆ ಬಗ್ಗೆ ಡಿಕೆ ಶಿವಕುಮಾರ್​​ ಪ್ರತಿಜ್ಞಾವಿಧಿ
‘ಕಾವೇರಿ ಆರತಿ’: ಜಲ ರಕ್ಷಣೆ ಬಗ್ಗೆ ಡಿಕೆ ಶಿವಕುಮಾರ್​​ ಪ್ರತಿಜ್ಞಾವಿಧಿ
ಟಿವಿ9 ಎಕ್ಸ್​ಪೋನಲ್ಲಿ ರಾಶಿಕಾ ಶೆಟ್ಟಿ ಸುತ್ತಾಟ, ನಟಿಗೆ ಇಷ್ಟವಾಗಿದ್ದೇನು?
ಟಿವಿ9 ಎಕ್ಸ್​ಪೋನಲ್ಲಿ ರಾಶಿಕಾ ಶೆಟ್ಟಿ ಸುತ್ತಾಟ, ನಟಿಗೆ ಇಷ್ಟವಾಗಿದ್ದೇನು?
ಸ್ಪೀಕರ್ ವರ್ತನೆ ಸರಿಯಾ ತಪ್ಪಾ ಅಂತ ಜನ ತೀರ್ಮಾನಿಸುತ್ತಾರೆ: ಯುಟಿ ಖಾದರ್
ಸ್ಪೀಕರ್ ವರ್ತನೆ ಸರಿಯಾ ತಪ್ಪಾ ಅಂತ ಜನ ತೀರ್ಮಾನಿಸುತ್ತಾರೆ: ಯುಟಿ ಖಾದರ್
ಸರ್ಕಾರದ ಕ್ರಮವನ್ನು ಹೈಕೋರ್ಟ್​​ನಲ್ಲಿ ಪ್ರಶ್ನಿಸುತ್ತೇವೆ: ಬಸನಗೌಡ ಯತ್ನಾಳ್
ಸರ್ಕಾರದ ಕ್ರಮವನ್ನು ಹೈಕೋರ್ಟ್​​ನಲ್ಲಿ ಪ್ರಶ್ನಿಸುತ್ತೇವೆ: ಬಸನಗೌಡ ಯತ್ನಾಳ್
ನಿರ್ದೇಶಕ ಎಟಿ ರಘು ನಿಧನದ ಸುದ್ದಿ ಕೇಳಿ ಆಘಾತ ಆಯಿತು: ದೊಡ್ಡಣ್ಣ
ನಿರ್ದೇಶಕ ಎಟಿ ರಘು ನಿಧನದ ಸುದ್ದಿ ಕೇಳಿ ಆಘಾತ ಆಯಿತು: ದೊಡ್ಡಣ್ಣ
ಸದನದ ಗೌರವ ಕಾಪಾಡಲು ನಾವು ಹೋರಾಟ ಮಾಡಿದ್ದು: ಅಶೋಕ
ಸದನದ ಗೌರವ ಕಾಪಾಡಲು ನಾವು ಹೋರಾಟ ಮಾಡಿದ್ದು: ಅಶೋಕ
ಸಸ್ಪೆಂಡ್ ಮಾಡುವ ಪ್ರಸ್ತಾವನೆ ಮಂಡಿಸಿದ ಸಂಸದೀಯ ವ್ಯವಹಾರಗಳ ಸಚಿವ ಪಾಟೀಲ್
ಸಸ್ಪೆಂಡ್ ಮಾಡುವ ಪ್ರಸ್ತಾವನೆ ಮಂಡಿಸಿದ ಸಂಸದೀಯ ವ್ಯವಹಾರಗಳ ಸಚಿವ ಪಾಟೀಲ್