ಶಿವಮೊಗ್ಗ: ಹಸು ರಕ್ಷಣೆಗೆ ಬಾವಿಗೆ ಇಳಿದಿದ್ದ ವ್ಯಕ್ತಿ ಉಸಿರುಗಟ್ಟಿ ಸಾವು
ಶಿವಮೊಗ್ಗದ ತೀರ್ಥಹಳ್ಳಿ ತಾಲ್ಲೂಕಿನಲ್ಲಿ ಬಾವಿಗೆ ಬಿದ್ದ ಹಸುವನ್ನು ರಕ್ಷಿಸಲು ಹೋಗಿ ಕೇರಳ ಮೂಲದ ವ್ಯಕ್ತಿ ಉಸಿರುಗಟ್ಟಿ ಮೃತಪಟ್ಟಿರುವಂತಹ ಘಟನೆ ನಡೆದಿದೆ. ಅಗ್ನಿಶಾಮಕ ದಳ ಸಿಬ್ಬಂದಿ ಸದ್ಯ ಹಸು ಮತ್ತು ವ್ಯಕ್ತಿಯ ಮೃತದೇಹವನ್ನು ಹೊರತೆಗೆದಿದ್ದಾರೆ. ಘಟನೆ ಸಂಬಂಧ ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶಿವಮೊಗ್ಗ, ಮಾರ್ಚ್ 20: ಬಾವಿಗೆ ಬಿದ್ದಿದ್ದ ಹಸು (cow) ಮೇಲೆತ್ತಲು ಇಳಿದಿದ್ದ ವ್ಯಕ್ತಿ ಉಸಿರುಗಟ್ಟಿ ಸಾವನ್ನಪ್ಪಿರುವಂತಹ (death) ಘಟನೆ ತೀರ್ಥಹಳ್ಳಿಯ ಕೋಣಂದೂರು ಸಮೀಪದ ಕಾರಕೊಡ್ಲು ಗ್ರಾಮದಲ್ಲಿ ನಡೆದಿದೆ. ಕೇರಳದ ಮೂಲದ ಸತೀಶ್ (45) ಮೃತ ವ್ಯಕ್ತಿ. ಸದ್ಯ ಸತೀಶ್ ಮತ್ತು ಹಸುವಿನ ಮೃತದೇಹವನ್ನು ಅಗ್ನಿಶಾಮಕ ಸಿಬ್ಬಂದಿಗಳು ಹೊರತೆಗೆದಿದ್ದಾರೆ. ಕೋಣಂದೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮರಣೋತ್ತರ ಪರೀಕ್ಷೆ ಮಾಡಲಾಗಿದ್ದು, ಬಳಿಕ ವ್ಯಕ್ತಿಯ ಮೃತದೇಹವನ್ನು ಕೇರಳಕ್ಕೆ ರವಾನಿಸಲಾಗುವುದು. ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತೀರ್ಥಹಳ್ಳಿಯ ಕೋಣಂದೂರು ಸಮೀಪದ ಕಾರಕೊಡ್ಲು ಗ್ರಾಮದಲ್ಲಿ ರಾಘು ಎಂಬುವವರು ಇತ್ತೀಚೆಗೆ ರಿಂಗ್ ಬಾವಿ ನಿರ್ಮಿಸಿದ್ದರು. ಹಸುವೊಂದು ಆಕಸ್ಮಿಕವಾಗಿ ಬಾವಿಗೆ ಬಿದ್ದಿದೆ. ಅದನ್ನು ರಕ್ಷಿಸಲು ಸತೀಶ್ ಬಾವಿಗೆ ಇಳಿದಿದ್ದಾಗ ದುರ್ಘಟನೆ ಸಂಭವಿಸಿದೆ.
ತ್ರಿಚಕ್ರ ಬೈಕ್ಗೆ ಕಾರು ಡಿಕ್ಕಿ: 2 ವರ್ಷದ ಮಗು ಸೇರಿ ವೃದ್ಧ ದುರ್ಮರಣ
ತ್ರಿಚಕ್ರ ಬೈಕ್ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ 2 ವರ್ಷದ ಮಗು ಸೇರಿದಂತೆ ವೃದ್ಧ ದುರ್ಮರಣ ಹೊಂದಿರುವಂತಹ ಘಟನೆ ದಾವಣಗೆರೆ ತಾಲೂಕಿನ ಗಾಂಧಿನಗರ ಗ್ರಾಮದ ಬಳಿ ನಡೆದಿದೆ. ಚಂದ್ರಾನಾಯ್ಕ (50), ಮೊಮ್ಮಗ ಯುವರಾಜ್ (2) ಮೃತರು. ಚಂದ್ರಾ ನಾಯ್ಕ ಪತ್ನಿ ರೇಣುಕಾ ಬಾಯಿ ಮತ್ತು ಪುತ್ರ ಪ್ರೀತಂ ಸ್ಥಿತಿ ಗಂಭೀರವಾಗಿದೆ. ಮೃತರು ದಾವಣಗೆರೆ ತಾಲೂಕಿನ ತೋಳಹುಣಸೆ ಗ್ರಾಮದ ನಿವಾಸಿಗಳು. ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಇದನ್ನೂ ಓದಿ: ಇಬ್ಬರು ಹೆಂಡರ ನೀಚ ಗಂಡ: ಪ್ರೀತಿ ನಂಬಿ ಬಂದವಳು ಬಾಬುನ ಕ್ರೌರ್ಯಕ್ಕೆ ನರಳಿ ನರಳಿ ಪ್ರಾಣಬಿಟ್ಟಳು
ವಿಕಲಚೇತನ ಕುಟುಂಬದ ನಾಲ್ವರು ತ್ರಿಚಕ್ರ ಬೈಕ್ನಲ್ಲಿ ತೆರಳುತ್ತಿದ್ದರು. ಜಗಳೂರು ಕಡೆಯಿಂದ ಬರುತ್ತಿದ್ದ ತ್ರಿಚಕ್ರ ಬೈಕ್ಗೆ ಕಾರು ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಕಾರು ಚಾಲಕನಿಗೂ ಸಣ್ಣಪುಟ್ಟ ಗಾಯಗಳಾಗಿವೆ. ಗಾಯಾಳುಗಳಿಗೆ ದಾವಣಗೆರೆ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.
ದ್ವಿಚಕ್ರ ವಾಹನದಲ್ಲಿ ಗಾಂಜಾ ಸಾಗಿಸುತ್ತಿದ್ದ ನಾಲ್ವರ ಬಂಧನ
ದ್ವಿಚಕ್ರ ವಾಹನದಲ್ಲಿ ಗಾಂಜಾ ಸಾಗಿಸುತ್ತಿದ್ದ ನಾಲ್ವರನ್ನು ಪೊಲೀಸರು ಬಂಧಿಸಿರುವಂತಹ ಘಟನೆ ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ವಡಕೆಹಳ್ಳ ಗ್ರಾಮದ ಆಂಜನೇಯ ದೇವಸ್ಥಾನದ ಬಳಿ ನಡೆದಿದೆ. ಕೊಳ್ಳೇಗಾಲ ಡಿವೈಎಸ್ಪಿ ಧರ್ಮೇಂದ್ರ ಮಾರ್ಗದರ್ಶನದಲ್ಲಿ ದಾಳಿ ಮಾಡಿ, ಹನೂರು ತಾಲೂಕಿನ ಬಿದರಳ್ಳಿಯ ಮಂಜುನಾಥ ಅಲಿಯಾಸ್ ಮಂಜ, ಯರಂಬಾಡಿ ಗ್ರಾಮದ ರಾಮಕೃಷ್ಣ, ಹೊಸಪಾಳ್ಯದ ಮಹದೇವಪ್ಪ, ಒಡೆಯರಪಾಳ್ಯ ಬಳಿಯ ಕಲ್ಲುಕುರೆದೊಡ್ಡಿ ಗ್ರಾಮದ ಪ್ರಭು ಅನ್ನು ಬಂಧಿಸಲಾಗಿದೆ.
ಇದನ್ನೂ ಓದಿ: ಅಮ್ಮನಿಗೆ ಬೈದಿದ್ದಕ್ಕೆ ಮಾವನನ್ನೇ ಕೊಂದ ಪುತ್ರ: ಅಳಿಯನ ಕೈಯಲ್ಲೇ ಹೆಣವಾದ ಪಂಚನಹಳ್ಳಿ ಸಾಹುಕಾರ
ಕಾಡಂಚಿನ ಪ್ರದೇಶದಲ್ಲಿ ಗಾಂಜಾ ಸಾಗಿಸುತ್ತಿದ್ದಾಗ ಎಸ್ಪಿ ಸೂಚನೆ ಮೇರೆಗೆ ಡಿವೈಎಸ್ಪಿ ಪತ್ತೆ ದಳದ ಸಿಬ್ಬಂದಿ ದಾಳಿ ಮಾಡಿದ್ದಾರೆ. ದಾಳಿ ವೇಳೆ 2 ದ್ವಿಚಕ್ರ ವಾಹನ, 3 ಕೆಜಿ 600 ಗ್ರಾಮ್ ತೂಕದ ಒಣಗಾಂಜಾ ಜಪ್ತಿ ಮಾಡಲಾಗಿದೆ. ಗಾಂಜಾ ಜಪ್ತಿ ಬಗ್ಗೆ ರಾಮಾಪುರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 9:07 pm, Thu, 20 March 25