AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Gold Rate Today: ದಿನ ಕಳೆದಂತೆ ಚಿನ್ನದ ದರ ಏರುತ್ತಲೇ ಇದೆ.. ಖರೀದಿಸುವುದಾದರೆ ದರ ಹೀಗಿದೆ!

Gold Silver Price in Bangalore: ದಿನ ಸಾಗುತ್ತಿದ್ದಂತೆ ಚಿನ್ನದ ದರ ಏರುತ್ತಲೇ ಇದೆ. ಗರಿಷ್ಠ ಮಟ್ಟ ತಲುಪುವುದರೊಳಗೆ ನೀವು ಕೂಡಿಟ್ಟ ಹಣಕ್ಕೆ ಚಿನ್ನ ಕೊಳ್ಳಬಹುದು ಎಂದೆನಿಸಿದರೆ ಖರೀದಿಸುವುದು ಉತ್ತಮ.

Gold Rate Today: ದಿನ ಕಳೆದಂತೆ ಚಿನ್ನದ ದರ ಏರುತ್ತಲೇ ಇದೆ.. ಖರೀದಿಸುವುದಾದರೆ ದರ ಹೀಗಿದೆ!
ಸಾಂರ್ಭಿಕ ಚಿತ್ರ
shruti hegde
|

Updated on:Apr 06, 2021 | 8:32 AM

Share

ಬೆಂಗಳೂರು: ಚಿನ್ನದ ದರವನ್ನು ಕಳೆದ ಒಂದು ವಾರದಿಂದ ಗಮನಿಸಿದಾಗ ಏರುತ್ತಲೇ ಇದೆ. 22 ಕ್ಯಾರೆಟ್ 10 ಗ್ರಾಂ ಚಿನ್ನ 41 ಸಾವಿರ ಆಸು ಪಾಸಿಗೆ ತಲುಪಿತ್ತು. ಆದರೆ ಇದೀಗ ಮತ್ತೆ 42 ಸಾವಿರದ ಗಡಿ ದಾಟಿದೆ. ಪ್ರತಿ ನಿತ್ಯ ದರ ಗಮನಿದಾಗ ಏರಿಕೆಯತ್ತ ಮುಖ ಮಾಡಿದೆ. ಹಾಗೆಯೇ 24 ಕ್ಯಾರೆಟ್ 10 ಗ್ರಾಂ ಚಿನ್ನ ಕೂಡಾ 45 ಗಡಿ ದಾಟಿ ಆಗಿದೆ. ಒಂದು ಲೆಕ್ಕಾಚಾರದಲ್ಲಿ ನೋಡಿದರೆ, ಸಾರ್ವಕಾಲಿಕ ಗರಿಷ್ಠ ಮಟ್ಟ ತಲುಪಿ 52 ಸಾವಿರದ ಗಡಿ ದಾಟಿದ್ದ ಚಿನ್ನ ಇದೀಗ ಕುಸಿತ ಕಂಡಿದೆ ಎಂಬುದೊಂದೇ ಗ್ರಾಹಕರಿಗೆ ಸಂತೋಷ ನೀಡುವ ವಿಚಾರ.

ಇನ್ನೇನು ಮದುವೆ, ಶುಭ ಕಾರ್ಯಗಳ ಸಮಯ ಪ್ರಾರಂಭವಾಗುತ್ತದೆ. ವಿವಿಧ ಡಿಸೈನ್ ಇರುವ ಚಿನ್ನ ತೊಟ್ಟು, ಅಂದವಾದ ಸೀರೆ ಉಟ್ಟು ಅಲಂಕಾರಗೊಂಡಿರುವ ವಧು, ಚಿನ್ನದ ಸರ ತೊಟ್ಟು ನಿಂತಿದ್ದರೆ ಸಮಾರಂಭದ ಶೋಭೆಯೇ ಬೇರೆ. ಹೀಗೆದ್ದಾಗ ನಾವು ಚಿನ್ನ ಕೊಳ್ಳಬೇಕು ಎಂದು ಅಂದಾಜಿಸಿ ಹಣ ಕೂಡಿಸಬೇಕು. ಇಲ್ಲವೇ, ಮದುವೆಗೆಂದೇ ಅಷ್ಟೊಂದು ವರ್ಷ ಕೂಡಿಟ್ಟ ಹಣವನ್ನು ವ್ಯಯಿಸಬೇಕು ಎಂದಾದಾಗ ಚಿನ್ನದ ದರ ಎಷ್ಟಿದೆ ಎಂಬುದರ ವಿವರ ಇಲ್ಲಿದೆ. ಹಾಗೆಯೇ, ಪೂಜಾ ವಿಶೇಷಗಳಿಗೆ, ದೇವರ ಪೂಜೆಗೆ ಒಂದಿಷ್ಟು ಬೆಳ್ಳಿ ಸಾಮಗ್ರಿಗಳನ್ನು ಕೊಳ್ಳಬೇಕು. ಹಾಗಿದ್ದಾಗ ಬೆಳ್ಳಿ ದರ ಮಾರುಕಟ್ಟೆಯಲ್ಲಿ ಹೇಗಿದೆ ಎಂಬುದರ ವಿವರ ಇಲ್ಲಿದೆ.

ಬೆಂಗಳೂರಿನಲ್ಲಿ 22 ಕ್ಯಾರೆಟ್ ಚಿನ್ನದ ದರ ಮಾಹಿತಿ ದೈನಂದಿನ ದರ ಬದಲಾವಣೆಯನ್ನು ಗಮನಿಸಿದಾಗ ಚಿನ್ನದ ದರ ಇಂದೂ ಏರಿಕೆಕಂಡಿದೆ. 1 ಗ್ರಾಂ ಚಿನ್ನದ ದರ 4,420 ರೂಪಾಯಿ ಇದೆ. 8 ಗ್ರಾಂ ಚಿನ್ನದ ದರ 35,128 ರೂಪಾಯಿಗೆ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದೆ. 10 ಗ್ರಾಂ ಚಿನ್ನದ ದರ 44,200 ರೂಪಾಯಿ ಇದ್ದು, 100 ಗ್ರಾಂ ಚಿನ್ನವನ್ನು 4,42,000 ರೂಪಾಯಿಗೆ ಗ್ರಾಹಕರು ಕೊಳ್ಳುತ್ತಿದ್ದಾರೆ.

24 ಕ್ಯಾರೆಟ್ ಚಿನ್ನದ ದರ ಮಾಹಿತಿ 1 ಗ್ರಾಂ ಚಿನ್ನದ ದರ 4,520 ರೂಪಾಯಿ ಇದ್ದು, 8ಗ್ರಾಂ ಚಿನ್ನದ ದರ 36,160 ರೂಪಾಯಿ ಇದೆ. 10 ಗ್ರಾಂ ಚಿನ್ನದ ದರ 45,200 ರೂಪಾಯಿ ಹಾಗೂ 100 ಗ್ರಾಂ ಚಿನ್ನದ ದರ 4,52,000 ರೂಪಾಯಿ ಇದೆ.

ಬೆಳ್ಳಿ ದರ ಮಾಹಿತಿ ಬೆಳ್ಳಿ ದರವನ್ನು ದೈನಂದಿನ ದರ ಪರಿಶೀಲನೆಯಲ್ಲಿ ಗಮನಿಸಿದಾಗ ಕೊಂಚ ಇಳಿಕೆ ಕಂಡಿದೆ. 1 ಗ್ರಾಂ ಬೆಳ್ಳಿ ನಿನ್ನೆ 65. 91 ರೂಪಾಯಿಗೆ ಮಾರಾಟವಾಗಿದ್ದು, ಇಂದು ದರ 65.90 ರೂಪಾಯಿ ಆಗಿದೆ. 8 ಗ್ರಾಂ ಬೆಳ್ಳಿ ದರ ನಿನ್ನೆ 527.28 ರೂಪಾಯಿ ಇದ್ದು, ಇಂದು ದರ ಇಳಿಕೆಯ ನಂತರ 527.20 ರೂಪಾಯಿ ಆಗಿದೆ. 10 ಗ್ರಾಂ ಬೆಳ್ಳಿ ದರ ನಿನ್ನೆ 659.10 ರೂಪಾಯಿ ಇದ್ದು, ಇಂದು 659 ರೂಪಾಯಿ ಆಗಿದೆ. 100 ಗ್ರಾಂ ಬೆಳ್ಳಿ ದರ 6,591 ರೂಪಾಯಿಗೆ ಮಾರಾಟವಾಗಿದ್ದು, ಇಂದು 6,590 ರೂಪಾಯಿ ಆಗಿದೆ. 1 ಕೆಜಿ ಬೆಳ್ಳಿ ದರ ನಿನ್ನೆ 65,910 ರೂಪಾಯಿ ಇದ್ದು, ಇಂದು 65,900 ರೂಪಾಯಿ ಆಗಿದೆ.

ಇದನ್ನೂ ಓದಿ: Gold Rate Today: ಚಿನ್ನ, ಬೆಳ್ಳಿ ದರ ಹೀಗಿದೆ.. ಕೊಳ್ಳುವ ಆಸೆ ಇದ್ದಲ್ಲಿ ಗಮನಿಸಿ

Gold Rate Today: ಶುಕ್ರವಾರದ ಚಿನ್ನ, ಬೆಳ್ಳಿ ದರ.. ಚಿನ್ನ ಕೊಳ್ಳಲು ಒಳ್ಳೆಯ ದಿನ!

(Gold Rate Today in Bengaluru Hyderabad Chennai Mumbai and Delhi silver price on April 6th 2021)

Published On - 8:25 am, Tue, 6 April 21

Follow Us
shruti hegde
shruti hegde
ಅಬ್ಬಾ, ಗೊತ್ತೇ ಇಲ್ಲದೆ ತಲೆದಿಂಬಿನಡಿ ಸೇರಿತ್ತು ಭಾರಿ ಗಾತ್ರದ ನಾಗರ ಹಾವು!
ಅಬ್ಬಾ, ಗೊತ್ತೇ ಇಲ್ಲದೆ ತಲೆದಿಂಬಿನಡಿ ಸೇರಿತ್ತು ಭಾರಿ ಗಾತ್ರದ ನಾಗರ ಹಾವು!
ಮೋದಿ ಭೇಟಿ ಬಳಿಕ ಬೆಂಗಳೂರಿಗೆ ಆಗಮಿಸಿದ ಪೋಲೆಂಡ್ ಪ್ರಧಾನಿ ಡೊನಾಲ್ಡ್ ಟಸ್ಕ್
ಮೋದಿ ಭೇಟಿ ಬಳಿಕ ಬೆಂಗಳೂರಿಗೆ ಆಗಮಿಸಿದ ಪೋಲೆಂಡ್ ಪ್ರಧಾನಿ ಡೊನಾಲ್ಡ್ ಟಸ್ಕ್
ಇಂದು ಈ ರಾಶಿಯವರು ವಿರೋಧಿಗಳೊಂದಿಗೆ ವಿವಾದಕ್ಕಿಳಿಯಬೇಡಿ
ಇಂದು ಈ ರಾಶಿಯವರು ವಿರೋಧಿಗಳೊಂದಿಗೆ ವಿವಾದಕ್ಕಿಳಿಯಬೇಡಿ
ಸರಸ್ವತಿ ದೇವಾಲಯದಲ್ಲಿ ಮಕ್ಕಳ ಕೈಹಿಡಿದು ವಿದ್ಯಾರಂಭ ಮಾಡಿಸಿದ ಶಶಿ ತರೂರ್
ಸರಸ್ವತಿ ದೇವಾಲಯದಲ್ಲಿ ಮಕ್ಕಳ ಕೈಹಿಡಿದು ವಿದ್ಯಾರಂಭ ಮಾಡಿಸಿದ ಶಶಿ ತರೂರ್
ಸಂಪುಟದಲ್ಲಿ ಮಹಿಳಾ ಮಂತ್ರಿ, ನಿಗಮ ಮಂಡಳಿ ನೇಮಕದ ಬಗ್ಗೆ ಸಿಎಂ ಮಾಹಿತಿ
ಸಂಪುಟದಲ್ಲಿ ಮಹಿಳಾ ಮಂತ್ರಿ, ನಿಗಮ ಮಂಡಳಿ ನೇಮಕದ ಬಗ್ಗೆ ಸಿಎಂ ಮಾಹಿತಿ
‘ಪ್ರೇಮದ ಊರಲಿ’ ಸಿನಿಮಾ 100 ಕೋಟಿ ರೂಪಾಯಿ ಕಲೆಕ್ಷನ್: ನಿರ್ಮಾಪಕರು ಖುಷ್
‘ಪ್ರೇಮದ ಊರಲಿ’ ಸಿನಿಮಾ 100 ಕೋಟಿ ರೂಪಾಯಿ ಕಲೆಕ್ಷನ್: ನಿರ್ಮಾಪಕರು ಖುಷ್
ಅಮಿತ್ ಶಾ ಭೇಟಿಗೆ ಟೈಮ್ ಫಿಕ್ಸ್: ಕುತೂಹಲ ಮೂಡಿಸಿದ ಆರ್ ಅಶೋಕ್ ನಡೆ
ಅಮಿತ್ ಶಾ ಭೇಟಿಗೆ ಟೈಮ್ ಫಿಕ್ಸ್: ಕುತೂಹಲ ಮೂಡಿಸಿದ ಆರ್ ಅಶೋಕ್ ನಡೆ
ಈ ಬಾರಿ ದಸರಾದಲ್ಲಿ ಸಾಲು ಸಾಲು ಅಭಾಸಗಳು:ಅಪಶಕುನದ ಬಗ್ಗೆ ಚರ್ಚೆ!
ಈ ಬಾರಿ ದಸರಾದಲ್ಲಿ ಸಾಲು ಸಾಲು ಅಭಾಸಗಳು:ಅಪಶಕುನದ ಬಗ್ಗೆ ಚರ್ಚೆ!
ದೆಹಲಿ ಮಹಾನಗರ ಪಾಲಿಕೆಯಲ್ಲಿ ಆಪ್- ಬಿಜೆಪಿ ಕೌನ್ಸಿಲರ್‌ಗಳ ನಡುವೆ ಸಂಘರ್ಷ
ದೆಹಲಿ ಮಹಾನಗರ ಪಾಲಿಕೆಯಲ್ಲಿ ಆಪ್- ಬಿಜೆಪಿ ಕೌನ್ಸಿಲರ್‌ಗಳ ನಡುವೆ ಸಂಘರ್ಷ
ವೆಬ್ ಸಿರೀಸ್ ಆಗಬೇಕಿದ್ದ ‘ಪ್ರೇಮದ ಊರಲಿ’ ಕಥೆ: ಇಲ್ಲಿದೆ ಅಚ್ಚರಿಯ ವಿಷಯ
ವೆಬ್ ಸಿರೀಸ್ ಆಗಬೇಕಿದ್ದ ‘ಪ್ರೇಮದ ಊರಲಿ’ ಕಥೆ: ಇಲ್ಲಿದೆ ಅಚ್ಚರಿಯ ವಿಷಯ