ದಳಪತಿ ವಿಜಯ್ ಜೊತೆ​ ಹೊಸ ಚಿತ್ರದಲ್ಲಿ ನಟಿಸಲು 3 ಕೋಟಿ ರೂ. ಪಡೆಯುತ್ತಿರುವ ಕನ್ನಡತಿ! ಯಾರದು?

ಟಾಲಿವುಡ್​, ಕಾಲಿವುಡ್​, ಬಾಲಿವುಡ್​ನಲ್ಲಿ ನಟಿಸಿರುವ ಈ ಸುಂದರಿಗೆ ಹೊಸ ಹೊಸ ಆಫರ್​ಗಳು ಹರಿದು ಬರುತ್ತಿವೆ. ಸಂಭಾವನೆ ವಿಚಾರದಲ್ಲಿ ಅವರು ಸಿಕ್ಕಾಪಟ್ಟೆ ದುಬಾರಿ ಆಗಿದ್ದಾರೆ.

  • TV9 Web Team
  • Published On - 7:56 AM, 9 Apr 2021
ದಳಪತಿ ವಿಜಯ್ ಜೊತೆ​ ಹೊಸ ಚಿತ್ರದಲ್ಲಿ ನಟಿಸಲು 3 ಕೋಟಿ ರೂ. ಪಡೆಯುತ್ತಿರುವ ಕನ್ನಡತಿ! ಯಾರದು?
ದಳಪತಿ ವಿಜಯ್​

ಪರಭಾಷೆ ಸಿನಿಮಾಗಳಲ್ಲಿ ಕರ್ನಾಟಕದ ಸುಂದರಿಯರು ಸಖತ್​ ಸದ್ದು ಮಾಡುತ್ತಿದ್ದಾರೆ. ತೆಲುಗು, ತಮಿಳಿನ ಸ್ಟಾರ್​ ನಟರ ಸಿನಿಮಾಗಳಿಗೆ ನಾಯಕಿಯಾಗಿ ಕನ್ನಡತಿಯರು ಆಯ್ಕೆ ಆಗುತ್ತಿದ್ದಾರೆ. ದಿನದಿಂದ ದಿನಕ್ಕೆ ಅವರ ಬೇಡಿಕೆ ಕೂಡ ಹೆಚ್ಚಾಗುತ್ತಿದೆ. ಅಂಥವರಲ್ಲಿ ಮೊದಲು ಕೇಳಿಬರುವ ಹೆಸರು ನಟಿ ಪೂಜಾ ಹೆಗ್ಡೆ ಅವರದ್ದು. ಟಾಲಿವುಡ್​, ಕಾಲಿವುಡ್​, ಬಾಲಿವುಡ್​ನಲ್ಲಿ ನಟಿಸಿರುವ ಈ ಸುಂದರಿಗೆ ಹೊಸ ಹೊಸ ಆಫರ್​ಗಳು ಹರಿದು ಬರುತ್ತಿವೆ. ಸಂಭಾವನೆ ವಿಚಾರದಲ್ಲಿ ಅವರು ಸಿಕ್ಕಾಪಟ್ಟೆ ದುಬಾರಿ ಆಗಿದ್ದಾರೆ. ಈ ಬಗ್ಗೆ ಒಂದು ಸುದ್ದಿ ಕೇಳಿಬರುತ್ತಿದೆ.

2012ರಲ್ಲಿ ಚಿತ್ರರಂಗಕ್ಕೆ ಕಾಲಿಟ್ಟ ಪೂಜಾ ಹೆಗ್ಡೆ ಈಗಾಗಲೇ ಹೃತಿಕ್​ ರೋಷನ್​, ಜ್ಯೂ. ಎನ್​ಟಿಆರ್​, ಅಲ್ಲು ಅರ್ಜುನ್​, ಮಹೇಶ್​ ಬಾಬು ಮುಂತಾದ ಸ್ಟಾರ್​ ಕಲಾವಿದರ ಜೊತೆ ತೆರೆಹಂಚಿಕೊಂಡಿದ್ದಾರೆ. ಬಹುದಿನಗಳ ಬಳಿಕ ಅವರು ತಮಿಳು ಚಿತ್ರರಂಗಕ್ಕೆ ಮರಳುತ್ತಿದ್ದಾರೆ. ದಳಪತಿ ವಿಜಯ್​ ನಟನೆಯ 65ನೇ ಚಿತ್ರಕ್ಕೆ ನಾಯಕಿಯಾಗಿ ಪೂಜಾ ಆಯ್ಕೆ ಆಗಿದ್ದಾರೆ. ಅದರಲ್ಲಿ ಅವರು ಪಡೆಯುತ್ತಿರುವ ಸಂಭಾವನೆಯ ಮೊತ್ತ ಕೇಳಿ ಇನ್ನುಳಿದ ನಟಿಯರಿಗೆ ತಲೆ ಗಿರಗಿರ ಎನ್ನುತ್ತಿದೆ.

ಹೌದು, ದಳಪತಿ ವಿಜಯ್​ ಜೊತೆ ನಟಿಸಲು ಪೂಜಾ ಹೆಗ್ಡೆ ಬರೋಬ್ಬರಿ 3 ಕೋಟಿ ರೂ. ಸಂಭಾವನೆ ಪಡೆಯುತ್ತಿದ್ದಾರೆ ಎಂಬ ಮಾಹಿತಿ ಕೇಳಿಬಂದಿದೆ. ಈ ಚಿತ್ರಕ್ಕೆ ಈಗಾಗಲೇ ರಷ್ಯಾದಲ್ಲಿ ಶೂಟಿಂಗ್​ ಆರಂಭ ಆಗಿದೆ. ವಿಜಯ್​ ಸೇರಿದಂತೆ ಅನೇಕ ಕಲಾವಿದರು ರಷ್ಯಾಗೆ ತೆರಳಿದ್ದಾರೆ. ಶೀಘ್ರದಲ್ಲೇ ಪೂಜಾ ಹೆಗ್ಡೆ ಕೂಡ ಶೂಟಿಂಗ್​ ಸೆಟ್​ ಸೇರಿಕೊಳ್ಳಲಿದ್ದಾರೆ. ಅಂದಹಾಗೆ, ಈವರೆಗಿನ ವೃತ್ತಿಜೀವನದಲ್ಲಿ ಪೂಜಾ ಅತಿ ಹೆಚ್ಚು ಸಂಭಾವನೆ ಪಡೆದ ಸಿನಿಮಾ ಇದು ಎಂಬುದು ವಿಶೇಷ.

Actress Pooja Hegde

ನಟಿ ಪೂಜಾ ಹೆಗ್ಡೆ

ಸದ್ಯಕ್ಕಂತೂ ಪೂಜಾ ಸಿಕ್ಕಾಪಟ್ಟೆ ಬ್ಯುಸಿ ಆಗಿದ್ದಾರೆ. ರಣವೀರ್​ ಸಿಂಗ್​ ಜೊತೆ ಸರ್ಕಸ್​, ಪ್ರಭಾಸ್​ ಜೊತೆ ರಾಧೆ ಶ್ಯಾಮ್​ ಮುಂತಾದ ಸಿನಿಮಾಗಳ ಕೆಲಸಗಳಲ್ಲಿ ಅವರು ತೊಡಗಿಕೊಂಡಿದ್ದಾರೆ. ಎಷ್ಟೇ ಬ್ಯುಸಿ ಆಗಿದ್ದರೂ ಸಹ ವಿಜಯ್​ ಜೊತೆಗಿನ ಸಿನಿಮಾವನ್ನು ಮಿಸ್​ ಮಾಡಿಕೊಳ್ಳಲು ಅವರು ಸಿದ್ಧವಿರಲಿಲ್ಲ. ಹಾಗಾಗಿ ತಮ್ಮ ಎಲ್ಲ ಡೇಟ್ಸ್​ಗಳನ್ನು ಹೊಂದಾಣಿಕೆ ಮಾಡಿಕೊಂಡು ವಿಜಯ್​ ಜೊತೆ ನಟಿಸಲು ಪೂಜಾ ಗ್ರೀನ್​ ಸಿಗ್ನಲ್​ ನೀಡಿದರು. ಅದರ ಪರಿಣಾಮವಾಗಿ ಅವರಿಗೆ ದುಬಾರಿ ಸಂಭಾವನೆ ಸಿಗುತ್ತಿದೆ.

ಇದನ್ನೂ ಓದಿ: Pooja Hegde: ರಶ್ಮಿಕಾಗೆ ಪೈಪೋಟಿ ನೀಡುವ ಕನ್ನಡತಿ ಪೂಜಾ ಹೆಗ್ಡೆಗೆ ಕಾಲಿವುಡ್​ನಲ್ಲಿ ಸಿಕ್ತು ಬಂಪರ್​ ಆಫರ್​!

(Pooja Hegde gets huge remuneration to star opposite Thalapathy Vijay)