ನಟಿ ಪೂಜಾ ಹೆಗ್ಡೆ ತುಂಬಾ ಇಷ್ಟಪಡುವಂಥ ಆ ಒಂದು ಸಿನಿಮಾ ಸೀನ್​ ಇದೇ!

  • TV9 Web Team
  • Published On - 18:54 PM, 19 Aug 2020
ನಟಿ ಪೂಜಾ ಹೆಗ್ಡೆ ತುಂಬಾ ಇಷ್ಟಪಡುವಂಥ ಆ ಒಂದು ಸಿನಿಮಾ ಸೀನ್​ ಇದೇ!

ಹೈದರಾಬಾದ್​: ತೆಲುಗು ಸ್ಟಾರ್​ ಅಲ್ಲು ಅರ್ಜುನ್ ಜೊತೆ ಅಲಾ ವೈಕುಂಠಪುರಮುಲೋ ಸಿನಿಮಾದಲ್ಲಿ ಸಖತ್​ ಹಾಟ್​ ಆಗಿ ಕಾಣಿಸಿಕೊಂಡಿದ್ದ ಬಹುಭಾಷಾ ನಟಿ ಹಾಗೂ ಕನ್ನಡತಿ ಪೂಜಾ ಹೆಗ್ಡೆ ನಟನೆಗೆ ಫ್ಯಾನ್ಸ್​ಗಳೂ ಫುಲ್​ ಫಿದಾ ಆಗಿದ್ದರು. ಇದೀಗ ಸಿನಿಮಾದಲ್ಲಿ ತಮ್ಮ ಹಾಗೂ ಅಲ್ಲು ಅರ್ಜುನ್​ ಕಾಂಬಿನೇಷನ್​ನ ಫೇವರೇಟ್​ ಸೀನ್​ ಇದೇ ಎಂದು ಚಿತ್ರದ ಸಣ್ಣ ತುಣುಕೊಂದನ್ನು ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಅಲಾ ವೈಕುಂಠಪುರಮುಲೋ ಚಿತ್ರದ ಸೂಪರ್​ ಹಿಟ್​ ಸಾಂಗ್​ಗಳಲ್ಲಿ ಒಂದಾದ ರಾಮುಲೋ ರಾಮುಲಾದ ಈ ಒಂದು ಸೀನ್​ ನನಗೆ ಬಹಳ fun ಅನ್ನಿಸಿತು ಎಂದು ಹಂಚಿಕೊಂಡಿದ್ದಾರೆ. ಈ ಸಿಂಗಲ್​ ಸೀನ್​ನಲ್ಲಿ ನಮ್ಮಿಬ್ಬರ ಟೈಮಿಂಗ್​ ಮತ್ತು ಌಕ್ಟಿಂಗ್​ ಸಖತ್ತಾಗಿತ್ತು ಎಂದು ಹೇಳಿದ್ದಾರೆ.

ರಾಮುಲೋ ರಾಮುಲಾ ಹಾಡಿಗೆ ಅನುರಾಗ್​ ಕುಲಕರ್ಣಿ ಹಾಗೂ ಮಾಂಗ್ಲಿ ದನಿಗೂಡಿಸಿದ್ದು S ತಮನ್​ರ ಮ್ಯೂಸಿಕ್​ ಮ್ಯಾಜಿಕ್​ ಇದೆ.

https://www.instagram.com/p/CD9QexMnN8d/