Ram Charan: ‘ಆರ್​ಆರ್​ಆರ್​’ ಗೆದ್ದ ಬಳಿಕ ರಾಮ್​ ಚರಣ್​ ಸಖತ್​ ಬ್ಯುಸಿ; ಕೈಯಲ್ಲಿವೆ ಬಹುನಿರೀಕ್ಷಿತ​ ಚಿತ್ರಗಳು

Ram Charan Upcoming Movies: ಖ್ಯಾತ ನಿರ್ದೇಶಕ ಶಂಕರ್ ಜೊತೆ ರಾಮ್ ಚರಣ್ ಕೈ ಜೋಡಿಸಿದ್ದಾರೆ. ಇಬ್ಬರ ಕಾಂಬಿನೇಶನ್ ಮೇಲೆ ಅಭಿಮಾನಿಗಳು ಸಿಕ್ಕಾಪಟ್ಟೆ ನಿರೀಕ್ಷೆ ಇಟ್ಟುಕೊಂಡಿದ್ದಾರೆ.

Ram Charan: ‘ಆರ್​ಆರ್​ಆರ್​’ ಗೆದ್ದ ಬಳಿಕ ರಾಮ್​ ಚರಣ್​ ಸಖತ್​ ಬ್ಯುಸಿ; ಕೈಯಲ್ಲಿವೆ ಬಹುನಿರೀಕ್ಷಿತ​ ಚಿತ್ರಗಳು
ರಾಮ್ ಚರಣ್
Follow us
ಮದನ್​ ಕುಮಾರ್​
|

Updated on: Feb 05, 2023 | 6:28 PM

ನಟ ರಾಮ್​ ಚರಣ್​ (Ram Charan) ಅವರು ಹಲವು ವರ್ಷಗಳಿಂದ ಚಿತ್ರರಂಗದಲ್ಲಿದ್ದಾರೆ. ದಿನದಿಂದ ದಿನಕ್ಕೆ ಅವರ ಚಾರ್ಮ್​ ಹೆಚ್ಚುತ್ತಿದೆ. ಒಂದಕ್ಕಿಂತ ಮತ್ತೊಂದು ಸೂಪರ್​ ಹಿಟ್​ ಸಿನಿಮಾಗಳನ್ನು ಅವರು ನೀಡುತ್ತಿದ್ದಾರೆ. 2022ರಲ್ಲಿ ತೆರೆಕಂಡ ಎಸ್​ಎಸ್​ ರಾಜಮೌಳಿ ನಿರ್ದೇಶನದ ‘ಆರ್​ಆರ್​ಆರ್​’ (RRR Movie) ಸಿನಿಮಾದಿಂದ ರಾಮ್​ ಚರಣ್​ ಅವರ ವೃತ್ತಿಜೀವನಕ್ಕೆ ಹೊಸ ಮೈಲೇಜ್​ ಸಿಕ್ಕಿತು. ‘ಗೋಲ್ಡನ್​ ಗ್ಲೋಬ್​’ ಪ್ರಶಸ್ತಿ ಪಡೆದಿದ್ದೂ ಅಲ್ಲದೇ ಆಸ್ಕರ್​ಗೆ ನಾಮಿನೇಟ್​ ಆಗಿರುವ ಈ ಸಿನಿಮಾ ವಿಶ್ವ ಮಟ್ಟದಲ್ಲಿ ಸದ್ದು ಮಾಡಿದೆ. ಇಷ್ಟೆಲ್ಲ ಸಾಧನೆಗಳನ್ನು ಮಾಡಿರುವ ರಾಮ್​ ಚರಣ್​ ಅವರು ಈಗ ಮುಂದಿನ ಸಿನಿಮಾಗಳತ್ತ ಗಮನ ಹರಿಸುತ್ತಿದ್ದಾರೆ. ಒಂದಷ್ಟು ಇಂಟರೆಸ್ಟಿಂಗ್ ಪ್ರಾಜೆಕ್ಟ್​ಗಳಿಗೆ ಅವರು ಗ್ರೀನ್​ ಸಿಗ್ನಲ್​ ನೀಡಿದ್ದಾರೆ. ಅವರ ಮುಂಬರುವ ಸಿನಿಮಾಗಳ (Ram Charan Upcoming Movies) ಬಗ್ಗೆ ಅಭಿಮಾನಿಗಳಿಗೆ ಸಖತ್​ ನಿರೀಕ್ಷೆ ಇದೆ. ಆ ಕುರಿತು ಇಲ್ಲಿದೆ ಮಾಹಿತಿ..

ಖ್ಯಾತ ನಿರ್ದೇಶಕ ಶಂಕರ್ ನಿರ್ದೇಶನದ ಸಿನಿಮಾದಲ್ಲಿ ರಾಮ್ ಚರಣ್ ನಟಿಸುತ್ತಿದ್ದಾರೆ. ಇಬ್ಬರ ಕಾಂಬಿನೇಶನ್ ಮೇಲೆ ಅಭಿಮಾನಿಗಳು ಸಿಕ್ಕಾಪಟ್ಟೆ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಬಿಗ್ ಬಜೆಟ್​ನಲ್ಲಿ ಈ ಸಿನಿಮಾ ಸಿದ್ಧವಾಗಲಿದೆ. ಆ್ಯಕ್ಷನ್​ ಪ್ರಿಯರಿಗೆ ಈ ಚಿತ್ರ ಸಖತ್​ ಇಷ್ಟವಾಗಲಿದೆ. ಬಾಲಿವುಡ್​ನ ಬಹುಬೇಡಿಕೆಯ ನಟಿ ಕಿಯಾರಾ ಅಡ್ವಾಣಿ ಅವರು ಈ ಸಿನಿಮಾದಲ್ಲಿ ರಾಮ್ ಚರಣ್​ಗೆ ಜೋಡಿಯಾಗಿ ನಟಿಸುತ್ತಿದ್ದಾರೆ.

ಇದನ್ನೂ ಓದಿ: ಮುಂದಿನ ಸಂಕ್ರಾಂತಿಗೆ ಬಾಕ್ಸ್ ಆಫೀಸ್​ನಲ್ಲಿ ಅಲ್ಲು ಅರ್ಜುನ್​-ರಾಮ್ ಚರಣ್ ಮಧ್ಯೆ ಫೈಟ್​?

ಇದನ್ನೂ ಓದಿ
Image
‘ಗೋಲ್ಡನ್​ ಗ್ಲೋಬ್​​’ ಬಳಿಕ ವಿದೇಶದಲ್ಲಿ ಮತ್ತೆರಡು ಪ್ರಶಸ್ತಿ ಬಾಚಿಕೊಂಡ ‘ಆರ್​ಆರ್​ಆರ್​’ ಚಿತ್ರ
Image
Golden Globes 2023: ‘ಗೋಲ್ಡನ್​ ಗ್ಲೋಬ್​’ ಪ್ರಶಸ್ತಿ ಪಡೆದ ಸಂಭ್ರಮದಲ್ಲಿ ‘ಆರ್​ಆರ್​ಆರ್​’ ತಂಡ; ಇಲ್ಲಿದೆ ಫೋಟೋ ಗ್ಯಾಲರಿ
Image
Golden Globes 2023: ಅತ್ಯುತ್ತಮ ಒರಿಜಿನಲ್ ಸಾಂಗ್ ಪ್ರಶಸ್ತಿ ಬಾಚಿಕೊಂಡ ಆರ್​ಆರ್​ಆರ್​ನ ನಾಟು ನಾಟು ಹಾಡು
Image
RRR: ಜಪಾನ್​ನಲ್ಲಿ ಮೊದಲ ದಿನವೇ 1 ಕೋಟಿ ರೂಪಾಯಿ ಗಳಿಸಿದ ‘ಆರ್​ಆರ್​ಆರ್​’: ಜೋರಾಗಿದೆ ಕ್ರೇಜ್​

ಶಂಕರ್​ ಮತ್ತು ರಾಮ್​ ಚರಣ್​ ಕಾಂಬಿನೇಷನ್​ನ ಸಿನಿಮಾಗೆ ಶೀರ್ಷಿಕೆ ಏನೆಂಬುದು ಇನ್ನೂ ಬಹಿರಂಗ ಆಗಿಲ್ಲ. 2023ರಲ್ಲೇ ಈ ಚಿತ್ರ ರಿಲೀಸ್​ ಆಗುವ ಸಾಧ್ಯತೆ ದಟ್ಟವಾಗಿದೆ. ಖ್ಯಾತ ನಿರ್ಮಾಪಕ ದಿಲ್ ರಾಜು ಅವರು ‘ಶ್ರೀ ವೆಂಕಟೇಶ್ವರ ಕ್ರಿಯೇಷನ್ಸ್’ ಬ್ಯಾನರ್ ಮೂಲಕ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಹಲವು ಕಾರಣಗಳಿಂದಾಗಿ ಈ ಸಿನಿಮಾ ಮೇಲೆ ಅಭಿಮಾನಿಗಳು ನಿರೀಕ್ಷೆ ಇಟ್ಟುಕೊಂಡಿದ್ದಾರೆ.

ಇದನ್ನೂ ಓದಿ: ಆಫ್ರಿಕಾದಲ್ಲಿ ದೇಸಿ ಸ್ಟೈಲ್​ನಲ್ಲಿ ವರ್ಕೌಟ್ ಮಾಡಿದ ರಾಮ್ ಚರಣ್; ಇಲ್ಲಿದೆ ವಿಡಿಯೋ  

ಶಂಕರ್​ ಜೊತೆಗಿನ ಸಿನಿಮಾದ ಕೆಲಸಗಳ ಪೂರ್ಣಗೊಂಡ ಬಳಿಕ ಬುಚ್ಚಿ ಬಾಬು ಸನಾ ನಿರ್ದೇಶನದ ಹೊಸ ಚಿತ್ರದಲ್ಲಿ ರಾಮ್ ಚರಣ್​ ನಟಿಸಲಿದ್ದಾರೆ. ಆ ಚಿತ್ರಕ್ಕೆ ವೆಂಕಟ ಸತೀಶ್ ಕಿಲಾರು ಬಂಡವಾಳ ಹೂಡಲಿದ್ದಾರೆ. ಜೆರ್ಸಿ ಸಿನಿಮಾ ಖ್ಯಾತಿಯ ಗೌತಮ್ ತಿನ್ನನೂರಿ ಸಿನಿಮಾವನ್ನು ಕೂಡ ರಾಮ್​ ಚರಣ್​ ಅವರು ಒಪ್ಪಿಕೊಂಡಿದ್ದಾರೆ.

ಇದನ್ನೂ ಓದಿ: ಹಳೆಯ ಫೋಟೋ ಹಂಚಿಕೊಂಡು ಪತ್ನಿಗೆ ವಿಶೇಷ ಮನವಿ ಮಾಡಿದ ರಾಮ್ ಚರಣ್

‘ಆರ್​ಆರ್​ಆರ್​’ ಸೂಪರ್​ ಹಿಟ್​ ಆಗಿದ್ದರಿಂದ ಮುಂದಿನ ಸಿನಿಮಾಗಳ ಬಗ್ಗೆ ರಾಮ್​ ಚರಣ್​ ಅಭಿಮಾನಿಗಳು ದೊಡ್ಡ ಮಟ್ಟದಲ್ಲಿ ನಿರೀಕ್ಷೆ ಇಟ್ಟುಕೊಳ್ಳುವುದು ಸಹಜ. ಆ ನಿರೀಕ್ಷೆಗೆ ತಕ್ಕಂತೆಯೇ ಅವರು ಶ್ರಮಿಸಬೇಕಿದೆ. ಹಾಗಾಗಿ ಸಿನಿಮಾಗಳ ಆಯ್ಕೆಯಲ್ಲಿ ರಾಮ್​ ಚರಣ್​ ಅವರು ಹೆಚ್ಚು ಕಾಳಜಿ ವಹಿಸುತ್ತಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್