AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Daali Dhananjay: ಒಳ್ಳೆಯವನಾ? ಕೆಟ್ಟವನಾ? ಕೌತುಕ ಮೂಡಿಸಿದ ‘ಹೊಯ್ಸಳ’ ಟೀಸರ್​; ಪೊಲೀಸ್​ ಗೆಟಪ್​ನಲ್ಲಿ ಬಂದ ಡಾಲಿ

Daali Dhananjay | Hoysala Movie: ಧನಂಜಯ್​ ಅಭಿಮಾನಿಗಳಿಗೆ ‘ಹೊಯ್ಸಳ’ ಟೀಸರ್ ಇಷ್ಟ ಆಗಿದೆ. ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಇದು 10 ಲಕ್ಷಕ್ಕೂ ಅಧಿಕ ವೀವ್ಸ್​ ಪಡೆದುಕೊಂಡಿದೆ.

Daali Dhananjay: ಒಳ್ಳೆಯವನಾ? ಕೆಟ್ಟವನಾ? ಕೌತುಕ ಮೂಡಿಸಿದ ‘ಹೊಯ್ಸಳ’ ಟೀಸರ್​; ಪೊಲೀಸ್​ ಗೆಟಪ್​ನಲ್ಲಿ ಬಂದ ಡಾಲಿ
ಡಾಲಿ ಧನಂಜಯ್
ಮದನ್​ ಕುಮಾರ್​
|

Updated on:Feb 05, 2023 | 3:44 PM

Share

ನಟ ಡಾಲಿ ಧನಂಜಯ್​ (Daali Dhananjay) ಅವರು ಬ್ಯಾಕ್​ ಟು ಬ್ಯಾಕ್​ ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ಆ ಪೈಕಿ ‘ಹೊಯ್ಸಳ’ ಸಿನಿಮಾ (Hoysala Movie) ಹೆಚ್ಚು ನಿರೀಕ್ಷೆ ಮೂಡಿಸಿದೆ. ಆ ನಿರೀಕ್ಷೆಯನ್ನು ದುಪ್ಪಟ್ಟು ಮಾಡುವ ರೀತಿಯಲ್ಲಿ ಹೊಸ ಟೀಸರ್​ ಬಿಡುಗಡೆ ಮಾಡಲಾಗಿದೆ. ಕಿಚ್ಚ ಸುದೀಪ್​, ಮಲಯಾಳಂ ನಟ ಪೃಥ್ವಿರಾಜ್​ ಸುಕುಮಾರನ್​, ಕಾಲಿವುಡ್​ ಸ್ಟಾರ್​ ಕಾರ್ತಿ, ಟಾಲಿವುಡ್​ ನಟ ಅಡಿವಿ ಶೇಷ್​, ಖ್ಯಾತ ನಿರ್ದೇಶಕ ಸಂತೋಷ್​ ಆನಂದ್​ ರಾಮ್​ ಸೇರಿದಂತೆ ಅನೇಕ ಸೆಲೆಬ್ರಿಟಿಗಳು ಸೋಶಿಯಲ್ ಮೀಡಿಯಾದಲ್ಲಿ ‘ಹೊಯ್ಸಳ’ ಚಿತ್ರದ ಟೀಸರ್ (Hoysala Movie Teaser)​ ಹಂಚಿಕೊಂಡಿದ್ದಾರೆ. ‘ಒಳ್ಳೆಯವ್ನಾ, ಕೆಟ್ಟವನಾ.. ಜಡ್ಜ್​ಮೆಂಟ್​ಗೆ ಸಿಗವಲ್ದು.. ಆದರೆ ಮಂದಿಗೆ ಬಾಳ ಫೇವರೇಟ್​ ಅದಾನ’ ಎನ್ನುವ ಡೈಲಾಗ್​ ಮೂಲಕ ಡಾಲಿ ಧನಂಜಯ್​ ಅವರು ಪಾತ್ರವನ್ನು ಪರಿಚಯಿಸಲಾಗಿದೆ.

‘ಹೊಯ್ಸಳ’ ಸಿನಿಮಾದಲ್ಲಿ ಡಾಲಿ ಧನಂಜಯ್​ ಅವರು ಪೊಲೀಸ್​ ಅಧಿಕಾರಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಗುರುದೇವ್​ ಹೊಯ್ಸಳ ಎಂಬುದು ಅವರ ಪಾತ್ರದ ಹೆಸರು. ಈ ಸಿನಿಮಾದಲ್ಲಿ ಭರ್ಜರಿ ಫೈಟಿಂಗ್​ ದೃಶ್ಯಗಳಿವೆ ಎಂಬುದಕ್ಕೆ ಟೀಸರ್​ನಲ್ಲಿ ಸುಳಿವು ಸಿಕ್ಕಿದೆ. ಧನಂಜಯ್​ ಅಭಿಮಾನಿಗಳಿಗೆ ಈ ಟೀಸರ್​ ಇಷ್ಟ ಆಗಿದೆ. ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಇದು 10 ಲಕ್ಷಕ್ಕೂ ಅಧಿಕ ವೀವ್ಸ್​ ಪಡೆದುಕೊಂಡಿದೆ.

ಇದನ್ನೂ ಓದಿ
Image
ಜನ್ಮದಿನದಂದು ‘ಡಾಲಿ’ ಧನಂಜಯ್ ಹೊಸ ಘೋಷಣೆ; ಹೊಸ ಪ್ರತಿಭೆಗಳಿಗೆ ಸಿಗಲಿದೆ ಅವಕಾಶ
Image
Rachita Ram: ಡಾಲಿ ಧನಂಜಯ್​ ಅಣ್ಣನ ಮಗಳಿಗೆ ರಚಿತಾ ಹೆಸರು; ಆ ಘಟನೆ ನೆನೆದ ‘ಡಿಂಪಲ್​ ಕ್ವೀನ್​’
Image
ಡಾಲಿ ಧನಂಜಯ್​-ಅಮೃತಾ ಅಯ್ಯಂಗಾರ್​ ನಡುವೆ ಏನು ನಡೆಯುತ್ತಿದೆ? ನೇರ ಉತ್ತರ ನೀಡಿದ ನಟಿ
Image
ಡಾಲಿ ಧನಂಜಯ್​ ಹೆಸರಲ್ಲಿ ವಂಚನೆ; ಅಪರಿಚಿತರ ಪೋಸ್ಟ್​ ನಂಬಿ ಮೋಸ ಹೋಗ್ಬೇಡಿ ಎಂದ ನಟ

ಕೆ.ಆರ್.ಜಿ. ಸ್ಟುಡಿಯೋಸ್ ನಿರ್ಮಾಣದ ‘ಹೊಯ್ಸಳ’ ಚಿತ್ರವನ್ನು ವಿಜಯ್ ಕಿರಗಂದೂರು ಅವರು ಅರ್ಪಿಸುತ್ತಿದ್ದಾರೆ. ಕಾರ್ತಿಕ್ ಹಾಗೂ ಯೋಗಿ ಜಿ. ರಾಜ್ ಅವರ ನಿರ್ಮಾಣದಲ್ಲಿ, ವಿಜಯ್ ಎನ್. ಅವರು ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರದ ಕೆಲಸಗಳು ಬಿರುಸಿನಿಂದ ಸಾಗುತ್ತಿವೆ.

ಇದನ್ನೂ ಓದಿ: Uttarakaanda: ರಮ್ಯಾ-ಡಾಲಿ ಧನಂಜಯ್​ ಜೋಡಿಯ ‘ಉತ್ತರಕಾಂಡ’ ಚಿತ್ರಕ್ಕೆ ಪೂಜೆ; ಇಲ್ಲಿವೆ ಮಸ್ತ್​ ಫೋಟೋಗಳು

ಕನ್ನಡ ಚಿತ್ರರಂಗದಲ್ಲಿ ಡಾಲಿ ಧನಂಜಯ ಮತ್ತು ನಟಿ ಅಮೃತಾ ಅಯ್ಯಂಗಾರ್​ ಉತ್ತಮ ಜೋಡಿ ಎನಿಸಿಕೊಂಡಿದ್ದಾರೆ. ‘ಪಾಪ್​ ಕಾರ್ನ್​ ಮಂಕಿ ಟೈಗರ್​’ ಮತ್ತು ‘ಬಡವ ರಾಸ್ಕಲ್​’ ಸಿನಿಮಾಗಳಲ್ಲಿ ಒಟ್ಟಿಗೆ ತೆರೆ ಹಂಚಿಕೊಂಡ ಈ ಜೋಡಿಯನ್ನು ಪ್ರೇಕ್ಷಕರು ಇಷ್ಟಪಟ್ಟಿದ್ದಾರೆ. ಇಬ್ಬರ ನಟನೆಗೆ ಜನರು ಮೆಚ್ಚುಗೆ ಸೂಚಿಸಿದ್ದಾರೆ. ಈಗ ಅವರು ‘ಹೊಯ್ಸಳ’ ಸಿನಿಮಾದಲ್ಲಿ ಮೂರನೇ ಬಾರಿ ಜೊತೆಯಾಗಿ ನಟಿಸುತ್ತಿರುವುದು ಅಭಿಮಾನಿಗಳಿಗೆ ಖುಷಿ ನೀಡಿದೆ.

ಇದನ್ನೂ ಓದಿ: ‘ಇನ್ಮುಂದೆ ಯೋಚಿಸಿ ಸಿನಿಮಾ ಮಾಡ್ತೀನಿ’; ಡಾಲಿ ಧನಂಜಯ್​ ಹೀಗೆ ಹೇಳಿದ್ದೇಕೆ?

ಮಾರ್ಚ್ 30ರಂದು ‘ಹೊಯ್ಸಳ’ ಬಿಡುಗಡೆ ಆಗಲಿದೆ. ಡಾಲಿ ಧನಂಜಯ್ ಅವರು ನಟಿಸುತ್ತಿರುವ 25ನೇ ಸಿನಿಮಾ ಇದು. ಹಾಗಾಗಿ ಅವರ ಅಭಿಮಾನಿಗಳು ಈ ಚಿತ್ರದ ಮೇಲೆ ವಿಶೇಷವಾದ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಅದರಲ್ಲೂ ಅವರು ಪೊಲೀಸ್​ ಆಗಿ ಕಾಣಿಸಿಕೊಳ್ಳುತ್ತಿರುವುದರಿಂದ ಕೌತುಕ ಜೋರಾಗಿದೆ.

ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನ, ಕಾರ್ತಿಕ್ ಎಸ್. ಛಾಯಾಗ್ರಹಣ, ದೀಪು ಎಸ್. ಕುಮಾರ್ ಸಂಕಲನ ಹಾಗೂ ಮಾಸ್ತಿ ಅವರು ಸಂಭಾಷಣೆಯ ಜವಾಬ್ದಾರಿ ನಿಭಾಯಿಸಿದ್ದಾರೆ. ಅಚ್ಯುತ್​ ಕುಮಾರ್, ನವೀನ್ ಶಂಕರ್, ಅವಿನಾಶ್, ರಾಜೇಶ್ ನಟರಂಗ, ನಾಗಭೂಷಣ್ ಮುಂತಾದ ಪ್ರತಿಭಾವಂತ ಕಲಾವಿದರು ಕೂಡ ಈ ಸಿನಿಮಾದಲ್ಲಿ ನಟಿಸಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 3:44 pm, Sun, 5 February 23

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್