ಆಫ್ರಿಕಾದಲ್ಲಿ ದೇಸಿ ಸ್ಟೈಲ್​ನಲ್ಲಿ ವರ್ಕೌಟ್ ಮಾಡಿದ ರಾಮ್ ಚರಣ್; ಇಲ್ಲಿದೆ ವಿಡಿಯೋ  

ಆಫ್ರಿಕಾದಲ್ಲಿ ರಾಮ್ ಚರಣ್ ಅವರಿಗೆ ವರ್ಕೌಟ್ ಮಾಡಲು ಜಿಮ್ ಸಿಕ್ಕಿಲ್ಲ. ಈ ಕಾರಣಕ್ಕೆ ಕಲ್ಲು, ರಾಡ್​​ಗಳನ್ನು ಬಳಕೆ ಮಾಡಿಕೊಂಡು ಡಂಬೆಲ್​​ಗಳನ್ನು ಸಿದ್ಧಪಡಿಸಿಕೊಂಡಿದ್ದಾರೆ.

ಆಫ್ರಿಕಾದಲ್ಲಿ ದೇಸಿ ಸ್ಟೈಲ್​ನಲ್ಲಿ ವರ್ಕೌಟ್ ಮಾಡಿದ ರಾಮ್ ಚರಣ್; ಇಲ್ಲಿದೆ ವಿಡಿಯೋ  
ರಾಮ್ ಚರಣ್
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on:Nov 17, 2022 | 7:43 PM

ರಾಜಮೌಳಿ (SS Rajamouli) ನಿರ್ದೇಶನದ, ರಾಮ್ ಚರಣ್ (Ram Charan) ಹಾಗೂ ಜ್ಯೂ.ಎನ್​ಟಿಆರ್​ ಅಭಿನಯದ ‘ಆರ್​ಆರ್​ಆರ್​’ ಸಿನಿಮಾ ಸೂಪರ್ ಹಿಟ್ ಆಯಿತು. ಇತ್ತೀಚೆಗೆ ಈ ಚಿತ್ರ ಜಪಾನ್​ನಲ್ಲೂ ರಿಲೀಸ್ ಆಗಿದೆ. ಇದರ ಪ್ರಮೋಷನ್​​ಗಾಗಿ ರಾಮ್ ಚರಣ್ ಅಲ್ಲಿಗೂ ತೆರಳಿದ್ದರು. ಈಗ ಅವರು ರಿಲೀಫ್ ಆಗಿದ್ದಾರೆ. ಆಫ್ರಿಕಾದಲ್ಲಿ ಅವರು ರಜೆಯ ಮಜ ಕಳೆಯುತ್ತಿದ್ದಾರೆ. ಆದರೆ, ಅವರು ವರ್ಕೌಟ್ ಮಾತ್ರ ತಪ್ಪಿಸಿಲ್ಲ. ಪಕ್ಕಾ ದೇಸಿ ಸ್ಟೈಲ್​ನಲ್ಲಿ ವರ್ಕೌಟ್ ಮಾಡಿದ್ದಾರೆ. ಈ ವಿಡಿಯೋ ಅನ್ನು ರಾಮ್ ಚರಣ್ ಅವರು ಶೇರ್ ಮಾಡಿಕೊಂಡಿದ್ದಾರೆ.

ರಾಮ್ ಚರಣ್ ಅವರು ಈ ಮೊದಲಿನಿಂದಲೂ ಫಿಟ್​ನೆಸ್​ಗೆ ಹೆಚ್ಚು ಆದ್ಯತೆ ನೀಡುತ್ತಾ ಬಂದಿದ್ದಾರೆ. ‘ಆರ್​ಆರ್​ಆರ್​’ ಚಿತ್ರಕ್ಕಾಗಿ ಅವರು ತೂಕ ಹೆಚ್ಚಿಸಿಕೊಂಡಿದ್ದರು. ಅವರು ಆ ಚಿತ್ರಕ್ಕಾಗಿ ಹಾಕಿದ ಶ್ರಮ ಎಷ್ಟು ಎಂಬುದು ತೆರೆಮೇಲೆ ಕಾಣಿಸುತ್ತದೆ. ಸಿನಿಮಾ ಶೂಟಿಂಗ್ ಪೂರ್ಣಗೊಂಡ ಬಳಿಕವೂ ಅವರು ವರ್ಕೌಟ್ ಬಿಟ್ಟಿಲ್ಲ. ಆಫ್ರಿಕಾದಲ್ಲಿಯೂ ಅವರು ವರ್ಕೌಟ್ ಮುಂದುವರಿಸಿದ್ದಾರೆ.

ಇದನ್ನೂ ಓದಿ
Image
RRR OTT Release: ‘ಆರ್​ಆರ್​ಆರ್​’ ಚಿತ್ರ ಒಟಿಟಿಯಲ್ಲಿ ಪ್ರಸಾರ ಆಗೋದು ಯಾವಾಗ? ಆ ದಿನಾಂಕಕ್ಕಾಗಿ ಕಾದಿರುವ ಫ್ಯಾನ್ಸ್​
Image
RRR 2: ಆರ್​ಆರ್​ಆರ್​ ಸೀಕ್ವೆಲ್​ ಮಾಡಲು ಉತ್ಸಾಹ ತೋರಿದ ರಾಜಮೌಳಿ, ರಾಮ್​ ಚರಣ್​, ಜ್ಯೂ. ಎನ್​ಟಿಆರ್​
Image
‘RRR’ ಯಶಸ್ಸು; ಚಿತ್ರತಂಡಕ್ಕೆ 18 ಲಕ್ಷ ಮೌಲ್ಯದ ಚಿನ್ನದ ನಾಣ್ಯ ಉಡುಗೊರೆ ನೀಡಿದ ನಟ ರಾಮ್ ಚರಣ್
Image
RRR Twitter Review: ನಿದ್ದೆ ಬಿಟ್ಟು ‘ಆರ್​ಆರ್​ಆರ್​’ ಸಿನಿಮಾ ನೋಡಿ ಬಂದ ಪ್ರೇಕ್ಷಕರು ಏನಂದ್ರು?

ಆಫ್ರಿಕಾದಲ್ಲಿ ರಾಮ್ ಚರಣ್ ಅವರಿಗೆ ವರ್ಕೌಟ್ ಮಾಡಲು ಜಿಮ್ ಸಿಕ್ಕಿಲ್ಲ. ಈ ಕಾರಣಕ್ಕೆ ಕಲ್ಲು, ರಾಡ್​​ಗಳನ್ನು ಬಳಕೆ ಮಾಡಿಕೊಂಡು ಡಂಬೆಲ್​​ಗಳನ್ನು ಸಿದ್ಧಪಡಿಸಿಕೊಂಡಿದ್ದಾರೆ. ಅದರಲ್ಲಿಯೇ ವರ್ಕೌಟ್ ಮಾಡಿದ್ದಾರೆ. ಇದನ್ನು ನೋಡಿ ಫ್ಯಾನ್ಸ್ ಭೇಷ್ ಎಂದಿದ್ದಾರೆ. ವರ್ಕೌಟ್ ಮಿಸ್ ಮಾಡದ ರಾಮ್ ಚರಣ್​ ಬಗ್ಗೆ ಅಭಿಮಾನಿಗಳು ಹೆಮ್ಮೆ ವ್ಯಕ್ತಪಡಿಸಿದ್ದಾರೆ.

ರಾಮ್ ಚರಣ್ ಅವರು ನಿರ್ದೇಶಕ ಶಂಕರ್ ಜತೆ ಕೈ ಜೋಡಿಸುತ್ತಿದ್ದಾರೆ. ಬಿಗ್ ಬಜೆಟ್ ಸಿನಿಮಾ ಇದಾಗಿದ್ದು ನ್ಯೂಜಿಲೆಂಡ್​ನಲ್ಲಿ ಶೂಟಿಂಗ್ ನಡೆಯಲಿದೆ. ವೆಕೇಶನ್ ಪೂರ್ಣಗೊಂಡ ನಂತರದಲ್ಲಿ ರಾಮ್ ಚರಣ್ ನೇರವಾಗಿ ಆಫ್ರಿಕಾದಿಂದ ನ್ಯೂಜಿಲೆಂಡ್​ಗೆ ಕಾಲಿಡಲಿದ್ದಾರೆ ಎನ್ನಲಾಗುತ್ತಿದೆ. ಕಿಯಾರಾ ಅಡ್ವಾಣಿ ಅವರು ಚಿತ್ರದ ನಾಯಕಿ ಎನ್ನಲಾಗುತ್ತಿದೆ.

ಇದನ್ನೂ ಓದಿ: ನಿಂತೇ ಹೋಯ್ತು ರಾಮ್ ಚರಣ್ ಹೊಸ ಸಿನಿಮಾ?; ರಾಜಮೌಳಿ ಎಫೆಕ್ಟ್​ ಎಂದು ದೂಷಿಸಿದ ಫ್ಯಾನ್ಸ್

ರಾಮ್ ಚರಣ್ ಅವರಿಗೆ ಈ ವರ್ಷ ಗೆಲುವು ಸೋಲು ಎರಡೂ ಸಿಕ್ಕಿದೆ. ‘ಆರ್​ಆರ್​ಆರ್​’ ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ ಸಾವಿರಾರು ಕೋಟಿ ಬಾಚಿಕೊಂಡಿತು. ‘ಆರ್​ಆರ್​ಆರ್​’ ಜಪಾನ್​ನಲ್ಲಿ ದೊಡ್ಡ ಗೆಲುವು ಕಂಡಿದೆ. ‘ಆಚಾರ್ಯ’ ಸಿನಿಮಾ ರಿಲೀಸ್ ಆಗಿ ದೊಡ್ಡ ನಷ್ಟ ಅನುಭವಿಸಿತು.

Published On - 7:43 pm, Thu, 17 November 22

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ