Golden Globes 2023: ‘ಗೋಲ್ಡನ್ ಗ್ಲೋಬ್’ ಪ್ರಶಸ್ತಿ ಪಡೆದ ಸಂಭ್ರಮದಲ್ಲಿ ‘ಆರ್ಆರ್ಆರ್’ ತಂಡ; ಇಲ್ಲಿದೆ ಫೋಟೋ ಗ್ಯಾಲರಿ
Golden Globes Photos | RRR Movie: ಲಾಸ್ ಏಂಜಲಿಸ್ನಲ್ಲಿ ‘ಗೋಲ್ಡನ್ ಗ್ಲೋಬ್’ ಪ್ರಶಸ್ತಿ ಪ್ರದಾನ ಸಮಾರಂಭ ನಡೆದಿದೆ. ಸಂಗೀತ ನಿರ್ದೇಶಕ ಎಂಎಂ ಕೀರವಾಣಿ ಅವರು ಪ್ರತಿಷ್ಠಿತ ಟ್ರೋಫಿ ಪಡೆದಿದ್ದಾರೆ.
Updated on: Jan 11, 2023 | 3:41 PM

ತೆಲುಗಿನ ‘ಆರ್ಆರ್ಆರ್’ ಚಿತ್ರತಂಡಕ್ಕೆ ‘ಗೋಲ್ಡನ್ ಗ್ಲೋಬ್’ ಪ್ರಶಸ್ತಿಯ ಗೌರವ ಸಿಕ್ಕಿದೆ. ಈ ಖುಷಿಯ ಕ್ಷಣದಲ್ಲಿ ಇಡೀ ತಂಡ ಭಾಗಿ ಆಗಿದೆ. ಚಿತ್ರತಂಡದವರ ಫೋಟೋಗಳು ವೈರಲ್ ಆಗಿವೆ. ಅವರಿಗೆ ಎಲ್ಲರೂ ಅಭಿನಂದನೆ ತಿಳಿಸುತ್ತಿದ್ದಾರೆ.

‘ಆರ್ಆರ್ಆರ್’ ಸಿನಿಮಾದ ‘ನಾಟು ನಾಟು..’ ಹಾಡಿಗೆ ಸಂಗೀತ ನೀಡಿರುವ ಎಂಎಂ ಕೀರವಾಣಿ ಅವರು ‘ಅತ್ಯುತ್ತಮ ಒರಿಜಿನಲ್ ಸಾಂಗ್’ ವಿಭಾಗದಲ್ಲಿ ‘ಗೋಲ್ಡನ್ ಗ್ಲೋಬ್’ ಪ್ರಶಸ್ತಿ ಪಡೆದಿದ್ದಾರೆ. ಇದು ಚಿತ್ರತಂಡದ ಸಂತಸಕ್ಕೆ ಕಾರಣ ಆಗಿದೆ.

ಲಾಸ್ ಏಂಜಲಿಸ್ನಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆದಿದೆ. ಸಂಗೀತ ನಿರ್ದೇಶಕ ಎಂಎಂ ಕೀರವಾಣಿ ಅವರು ಪ್ರತಿಷ್ಠಿತ ಟ್ರೋಫಿ ಪಡೆಯುವಾಗ ನಿರ್ದೇಶಕ ಎಸ್.ಎಸ್. ರಾಜಮೌಳಿ, ನಟರಾದ ರಾಮ್ ಚರಣ್, ಜೂನಿಯರ್ ಎನ್ಟಿಆರ್ ಮುಂತಾದವರು ಹಾಜರಿದ್ದರು.

ಗೋಲ್ಡನ್ ಗ್ಲೋಬ್ ಪ್ರಶಸ್ತಿ ಪಡೆದ ಬಳಿಕ ಎಂಎಂ ಕೀರವಾಣಿ ಅವರು ವೇದಿಕೆಯಲ್ಲಿ ಇಡೀ ‘ಆರ್ಆರ್ಆರ್’ ತಂಡಕ್ಕೆ ಧನ್ಯವಾದ ಅರ್ಪಿಸಿದ್ದಾರೆ. ಈ ಸಂದರ್ಭದಲ್ಲಿ ಅವರು ತಮ್ಮ ಪತ್ನಿಯ ಬಗ್ಗೆಯೂ ಮಾತನಾಡಿದರು.

ಭಾರತೀಯ ಚಿತ್ರಕ್ಕೆ ಈ ಪ್ರಶಸ್ತಿ ಸಿಕ್ಕಿರುವುದು ಸಿನಿಪ್ರಿಯರಿಗೆ ಸಂತಸ ತಂದಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ, ಅಮಿತಾಭ್ ಬಚ್ಚನ್ ಸೇರಿದಂತೆ ಅನೇಕರು ಅಭಿನಂದನೆ ತಿಳಿಸಿದ್ದಾರೆ. ಎಂಎಂ ಕೀರವಾಣಿ ಅವರ ಖ್ಯಾತಿ ಹೆಚ್ಚಾಗಿದೆ.

2022ರಲ್ಲಿ ಬಿಡುಗಡೆಯಾದ ‘ಆರ್ಆರ್ಆರ್’ ಸಿನಿಮಾಗೆ ರಾಜಮೌಳಿ ನಿರ್ದೇಶನ ಮಾಡಿದ್ದಾರೆ. ಮುಖ್ಯಪಾತ್ರದಲ್ಲಿ ರಾಮ್ ಚರಣ್ ಹಾಗೂ ಜೂನಿಯರ್ ಎನ್ಟಿಆರ್ ನಟಿಸಿದ್ದಾರೆ. ಈ ಚಿತ್ರದಿಂದ ಅವರ ವೃತ್ತಿಬದುಕಿಗೆ ಹೊಸ ಮೈಲೇಜ್ ಸಿಕ್ಕಿದೆ.



















