‘ಗೋಲ್ಡನ್​ ಗ್ಲೋಬ್​​’ ಬಳಿಕ ವಿದೇಶದಲ್ಲಿ ಮತ್ತೆರಡು ಪ್ರಶಸ್ತಿ ಬಾಚಿಕೊಂಡ ‘ಆರ್​ಆರ್​ಆರ್​’ ಚಿತ್ರ

ಈಗ ರಾಜಮೌಳಿ ನಿರ್ದೇಶನದ ‘ಆರ್​ಆರ್​ಆರ್​’ ಸಿನಿಮಾ ಆಸ್ಕರ್ ಅವಾರ್ಡ್ಸ್​​ ಪಡೆಯುವ ರೇಸ್​ನಲ್ಲಿದೆ. ಈ ಚಿತ್ರ ಆಸ್ಕರ್ ಗೆದ್ದರೆ ಹೊಸ ದಾಖಲೆ ನಿರ್ಮಾಣ ಆಗಲಿದೆ.

‘ಗೋಲ್ಡನ್​ ಗ್ಲೋಬ್​​’ ಬಳಿಕ ವಿದೇಶದಲ್ಲಿ ಮತ್ತೆರಡು ಪ್ರಶಸ್ತಿ ಬಾಚಿಕೊಂಡ ‘ಆರ್​ಆರ್​ಆರ್​’ ಚಿತ್ರ
ಆರ್​ಆರ್​ಆರ್​ ಚಿತ್ರದಲ್ಲಿ ರಾಮ್ ಚರಣ್
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Jan 16, 2023 | 8:32 AM

ನಿರ್ದೇಶಕ ರಾಜಮೌಳಿ (SS Rajamouli) ಸಿನಿಮಾಗಳು ಬಾಕ್ಸ್​ ಆಫೀಸ್​​ನಲ್ಲಿ ಸಾಕಷ್ಟು ಸದ್ದು ಮಾಡುತ್ತಿದ್ದವು. ಈ ಬಾರಿ ಅವರ ಸಿನಿಮಾ ‘ಆರ್​ಆರ್​ಆರ್​’ ಬಾಕ್ಸ್ ಆಫೀಸ್​ ಗಳಿಕೆಗೆ ಸೀಮಿತ ಆಗಿಲ್ಲ. ಈ ಚಿತ್ರ ಪ್ರಶಸ್ತಿಗಳ ಮೇಲೆ ಕಣ್ಣಿಟ್ಟಿದೆ. ಪ್ರತಿಷ್ಠಿತ ‘ಗೋಲ್ಡನ್ ಗ್ಲೋಬ್​​’ನಲ್ಲಿ ‘ಆರ್​ಆರ್​ಆರ್​’ (RRR Movie) ಚಿತ್ರದ ‘ನಾಟು ನಾಟು..’ ಪ್ರಶಸ್ತಿ ಪಡೆಯಿತು. ಈ ಸಂತಸ ಇನ್ನೂ ಹಾಗೆಯೇ ಇರುವಾಗ ಮತ್ತೊಂದು ಪ್ರಶಸ್ತಿಯನ್ನು ‘ಆರ್​ಆರ್​ಆರ್​’ ಚಿತ್ರ ಹೊತ್ತು ತಂದಿದೆ. ಹೌದು, ಕ್ರಿಟಿಕ್ಸ್ ಚಾಯ್ಸ್​ ಅವಾರ್ಡ್ಸ್​ 2023ರಲ್ಲಿ ‘ಅತ್ಯುತ್ತಮ ವಿದೇಶಿ ಭಾಷೆ ಚಿತ್ರ’ ಪ್ರಶಸ್ತಿಯನ್ನು ‘ಆರ್​ಆರ್​ಆರ್​’ ಪಡೆದುಕೊಂಡಿದೆ. ಈ ಅವಾರ್ಡ್ ಪಡೆಯಲು ಹಲವು ಸೂಪರ್ ಹಿಟ್ ಚಿತ್ರಗಳು ಸ್ಪರ್ಧೆ ಮಾಡಿದ್ದವು. ಅಂತಿಮವಾಗಿ ‘ಆರ್​ಆರ್​ಆರ್​’ ಚಿತ್ರಕ್ಕೆ ಅವಾರ್ಡ್ ಸಿಕ್ಕಿದೆ. ‘ನಾಟು ನಾಟು..’ ಹಾಡಿಗೂ ಅವಾರ್ಡ್​ ಒಲಿದಿದೆ.

‘ಕ್ರಿಟಿಕ್ಸ್​ ಚಾಯ್ಸ್​ನಲ್ಲಿ ಅತ್ಯುತ್ತಮ ವಿದೇಶಿ ಭಾಷೆಯ ಸಿನಿಮಾ ಅವಾರ್ಡ್ ಹಾಗೂ ನಾಟು ನಾಟು.. ಹಾಡು ಅತ್ಯುತ್ತಮ ಒರಿಜನಲ್ ಸಾಂಗ್ ಪ್ರಶಸ್ತಿ ಪಡೆದಿದ್ದಕ್ಕೆ ಆರ್​ಆರ್​ಆರ್​ ತಂಡಕ್ಕೆ ಧನ್ಯವಾದಗಳು’ ಎಂದು ಕ್ರಿಟಿಕ್ಸ್ ಚಾಯ್ಸ್ ಅವಾರ್ಡ್​ ಟ್ವಿಟರ್ ಖಾತೆ ಮೂಲಕ ಟ್ವೀಟ್ ಮಾಡಲಾಗಿದೆ.

ಈ ಪ್ರಶಸ್ತಿಯನ್ನು ಪಡೆಯುವಾಗ ರಾಜಮೌಳಿ ಅವರು ತಾಯಿ ಹಾಗೂ ಪತ್ನಿಗೆ ಧನ್ಯವಾದ ಹೇಳಿದ್ದಾರೆ. ‘ನನ್ನ ತಾಯಿ ಚಿಕ್ಕ ವಯಸ್ಸಿನಲ್ಲಿ ಕಾಮಿಕ್ಸ್ ಹಾಗೂ ಕಥೆ ಪುಸ್ತಕ ಓದಲು ಹೆಚ್ಚು ಉತ್ತೇಜನ ನೀಡುತ್ತಿದ್ದರು. ಇದರಿಂದ ನನಗೆ ಸಿನಿಮಾ ಬಗ್ಗೆ ಆಸಕ್ತಿ ಬಂತು. ಇನ್ನು ನನ್ನ ಪತ್ನಿ ನನ್ನ ಜೀವನದ ಡಿಸೈನರ್. ಅವರಿಗೆ ಧನ್ಯವಾದ​’ ಎಂದಿದ್ದಾರೆ ರಾಜಮೌಳಿ.

ಇದನ್ನೂ ಓದಿ
Image
ಬಾಕ್ಸ್​ ಆಫೀಸ್​ನಲ್ಲಿ ನೂರಾರು ಕೋಟಿ ಬಾಚಿದ ‘ಬ್ರಹ್ಮಾಸ್ತ್ರ’ ಚಿತ್ರದಿಂದ ರಾಜಮೌಳಿಗೆ ಸಿಕ್ಕ ಹಣ ಎಷ್ಟು?
Image
ರಾಜಮೌಳಿ ಕಾಲಿಗೆ ನಮಸ್ಕರಿಸಿದ ರಣಬೀರ್ ಕಪೂರ್; ಪಬ್ಲಿಸಿಟಿ ಸ್ಟಂಟ್ಸ್ ಎಂದ ನೆಟ್ಟಿಗರು
Image
ಕೊನೇ ಕ್ಷಣದಲ್ಲಿ ಅಮಿತ್ ಶಾ ಭೇಟಿಯಿಂದ ಹಿಂದೆ ಸರಿದ ರಾಜಮೌಳಿ? ಇದಕ್ಕಿದೆ ದೊಡ್ಡ ಕಾರಣ
Image
‘ನನ್ನ ಸಿನಿಮಾದಲ್ಲಿ ಅಂಥ ನಟರು ಇರೋದೇ ಬೇಡ’: ರಾಜಮೌಳಿಗೆ ಕಂಡೀಷನ್​ ಹಾಕಿದ ಮಹೇಶ್​ ಬಾಬು?

ರಾಜಮೌಳಿ ಆಸ್ಕರ್ ಮೇಲೆಯೂ ಕಣ್ಣಿಟ್ಟಿದ್ದಾರೆ. ಭಾರತದ ಯಾವ ಚಿತ್ರಕ್ಕೂ ಆಸ್ಕರ್ ಪ್ರಶಸ್ತಿ ಸಿಕ್ಕಿಲ್ಲ. ಈಗ ರಾಜಮೌಳಿ ನಿರ್ದೇಶನದ ‘ಆರ್​ಆರ್​ಆರ್​’ ಸಿನಿಮಾ ಆಸ್ಕರ್ ಅವಾರ್ಡ್ಸ್​​ ಪಡೆಯುವ ರೇಸ್​ನಲ್ಲಿದೆ. ಈ ಚಿತ್ರ ಆಸ್ಕರ್ ಗೆದ್ದರೆ ಹೊಸ ದಾಖಲೆ ನಿರ್ಮಾಣ ಆಗಲಿದೆ.

ಇದನ್ನೂ ಓದಿ: SS Rajamouli: ‘RRR ಬಾಲಿವುಡ್​ ಚಿತ್ರವಲ್ಲ’: ರಾಜಮೌಳಿ ಹೇಳಿಕೆಗೆ ಹಿಂದಿ ಮಂದಿ ಅಸಮಾಧಾನ

‘ಆರ್​ಆರ್​ಆರ್​’ ಸಿನಿಮಾ ಇತ್ತೀಚೆಗೆ ‘ಗೋಲ್ಡನ್ ಗ್ಲೋಬ್​’ ಅವಾರ್ಡ್​​ನಲ್ಲಿ ಪ್ರಶಸ್ತಿ ಬಾಚಿಕೊಂಡಿತ್ತು. ಆಗ ಇಡೀ ತಂಡ ಅಲ್ಲಿಗೆ ಹಾಜರಾಗಿ ಪ್ರಶಸ್ತಿ ಪಡೆದು ಸಂಭ್ರಮಿಸಿತ್ತು. ‘ಆರ್​ಆರ್​ಆರ್​’ ಚಿತ್ರದಿಂದ ರಾಜಮೌಳಿ ಖ್ಯಾತಿ ಹೆಚ್ಚಿದೆ. ವಿದೇಶದಲ್ಲೂ ಈ ನಿರ್ದೇಶಕನ ಬಗ್ಗೆ ಎಲ್ಲರೂ ಮಾತನಾಡಿಕೊಳ್ಳುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ