ಮುಂದಿನ ಸಂಕ್ರಾಂತಿಗೆ ಬಾಕ್ಸ್ ಆಫೀಸ್​ನಲ್ಲಿ ಅಲ್ಲು ಅರ್ಜುನ್​-ರಾಮ್ ಚರಣ್ ಮಧ್ಯೆ ಫೈಟ್​?

ಈ ಬಾರಿ ಸಂಕ್ರಾಂತಿಗೆ ರಿಲೀಸ್ ಆದ ಎಲ್ಲಾ ಚಿತ್ರಗಳು ಒಳ್ಳೆಯ ಕಲೆಕ್ಷನ್ ಮಾಡಿವೆ. ಈ ಕಾರಣಕ್ಕೆ ಅನೇಕರು ನಿರ್ಮಾಪಕರು 2024ರ ಸಂಕ್ರಾತಿ ಮೇಲೆ ಕಣ್ಣಿಟ್ಟಿದ್ದಾರೆ.

ಮುಂದಿನ ಸಂಕ್ರಾಂತಿಗೆ ಬಾಕ್ಸ್ ಆಫೀಸ್​ನಲ್ಲಿ ಅಲ್ಲು ಅರ್ಜುನ್​-ರಾಮ್ ಚರಣ್ ಮಧ್ಯೆ ಫೈಟ್​?
ರಾಮ್ ಚರಣ್-ಅಲ್ಲು ಅರ್ಜುನ್
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Jan 22, 2023 | 6:30 AM

ಸಂಕ್ರಾಂತಿ ಸಂದರ್ಭದಲ್ಲಿ ಸಿನಿಮಾಗಳನ್ನು ರಿಲೀಸ್ ಮಾಡಲು ಅನೇಕ ನಿರ್ಮಾಪಕರು ಮುಂದೆ ಬರುತ್ತಾರೆ. ಈ ಬಾರಿ ತಮಿಳಿನಲ್ಲಿ ‘ವಾರಿಸು’ (Varisu Movie) ಹಾಗೂ ‘ತುನಿವು’ ಸಿನಿಮಾಗಳು (Tunivu Movie) ರಿಲೀಸ್ ಆದವು. ‘ ತೆಲುಗಿನಲ್ಲಿ ‘ವೀರ ಸಿಂಹ ರೆಡ್ಡಿ’ ಹಾಗೂ ‘ವಾಲ್ತೇರು ವೀರಯ್ಯ’ ಚಿತ್ರ ರಿಲೀಸ್ ಆಯಿತು. ಎಲ್ಲಾ ಚಿತ್ರಗಳು ಒಳ್ಳೆಯ ಕಲೆಕ್ಷನ್ ಮಾಡಿವೆ. ಈ ಕಾರಣಕ್ಕೆ ಅನೇಕ ನಿರ್ಮಾಪಕರು 2024ರ ಸಂಕ್ರಾತಿ ಮೇಲೆ ಕಣ್ಣಿಟ್ಟಿದ್ದಾರೆ.

‘ವೀರ ಸಿಂಹ ರೆಡ್ಡಿ’ ಹಾಗೂ ‘ವಾಲ್ತೇರು ವೀರಯ್ಯ’ ಚಿತ್ರಗಳನ್ನು ನಿರ್ಮಾಣ ಮಾಡಿದ್ದು ‘ಮೈತ್ರಿ ಮೂವಿ ಮೇಕರ್ಸ್​’. ಅವರ ನಿರ್ಮಾಣದಲ್ಲೇ ‘ಪುಷ್ಪ 2’ ಸಿನಿಮಾ ಸಿದ್ಧಗೊಳ್ಳುತ್ತಿದೆ. ಈ ಕಾರಣಕ್ಕೆ ಮುಂದಿನ ಸಂಕ್ರಾತಿ ಮೇಲೆ ‘ಪುಷ್ಪ 2’ ತಂಡ ಕಣ್ಣಿಟ್ಟಿದೆ. ಸಂಕ್ರಾತಿ ಸಂದರ್ಭದಲ್ಲೇ ‘ಪುಷ್ಪ 2’ ಚಿತ್ರವನ್ನು ರಿಲೀಸ್ ಮಾಡಬೇಕು ಎಂದು ಮೈತ್ರಿ ಮೂವಿ ಮೇಕರ್ಸ್ ನಿರ್ಮಾಪಕರು ಟಾರ್ಗೆಟ್ ಇಟ್ಟುಕೊಂಡಿದ್ದಾರೆ.

ರಾಮ್ ಚರಣ್ ನಟನೆಯ 15ನೇ ಚಿತ್ರಕ್ಕೆ ಇನ್ನೂ ಟೈಟಲ್ ಫಿಕ್ಸ್ ಆಗಿಲ್ಲ. ಈ ಚಿತ್ರವನ್ನು ದಿಲ್ ರಾಜು ನಿರ್ಮಾಣ ಮಾಡುತ್ತಿದ್ದಾರೆ. ಅವರ ನಿರ್ಮಾಣದ ‘ವಾರಿಸು’ ಸಿನಿಮಾ ಸಂಕ್ರಾಂತಿಗೆ ರಿಲೀಸ್ ಆಗಿ ಹಣ ಮಾಡಿದೆ. ಈ ಕಾರಣಕ್ಕೆ ದಿಲ್ ರಾಜು ಕೂಡ ಮುಂದಿನ ಸಂಕ್ರಾಂತಿ ಮೇಲೆ ಕಣ್ಣಿಟ್ಟಿದ್ದಾರೆ. ಈ ಎರಡೂ ಚಿತ್ರಗಳು ಈಗ ಸಂಕ್ರಾಂತಿಗೆ ರಿಲೀಸ್ ಆದರೆ ಬಾಕ್ಸ್ ಆಫೀಸ್​​ನಲ್ಲಿ ದೊಡ್ಡ​ ಕ್ಲ್ಯಾಶ್ ಏರ್ಪಡಲಿದೆ.

ರಾಮ್ ಚರಣ್ ಹಾಗೂ ಅಲ್ಲು ಅರ್ಜುನ್​ಗೆ ದೊಡ್ಡ ಅಭಿಮಾನ ಬಳಗ ಇದೆ. ರಾಮ್ ಚರಣ್​ ನಟನೆಯ ‘ಆರ್​ಆರ್​ಆರ್​’ ಸಿನಿಮಾ ಸೂಪರ್ ಹಿಟ್ ಆಗಿದೆ. ವಿದೇಶದಲ್ಲಿ ಅನೇಕ ಪ್ರಶಸ್ತಿಗಳನ್ನು ಬಾಚಿಕೊಂಡಿದೆ. ಹೀಗಾಗಿ ರಾಮ್ ಚರಣ್ ಅವರ ಇನ್ನೂ ಶೀರ್ಷಿಕೆ ಇಡದ 15ನೇ ಸಿನಿಮಾ ಬಗ್ಗೆ ಕುತೂಹಲ ಮೂಡಿದೆ. ಅದೇ ರೀತಿ ಅಲ್ಲು ಅರ್ಜುನ್ ಅವರು ‘ಪುಷ್ಪ’ ಯಶಸ್ಸಿನ ಅಲೆಯಲ್ಲಿ ತೇಲುತ್ತಿದ್ದಾರೆ. ಈ ಚಿತ್ರ ಸೂಪರ್ ಹಿಟ್ ಆಗಿದೆ. ಹೀಗಾಗಿ ‘ಪುಷ್ಪ 2’ ಚಿತ್ರದ ಬಗ್ಗೆ ನಿರೀಕ್ಷೆ ಹೆಚ್ಚಿದೆ. ಎರಡೂ ಸಿನಿಮಾಗಳು ಒಟ್ಟಿಗೆ ರಿಲೀಸ್ ಆದರೆ ಬಾಕ್ಸ್ ಆಫೀಸ್​ನಲ್ಲಿ ಧಮಾಕ ಏರ್ಪಡಲಿದೆ.

ಇದನ್ನೂ ಓದಿ: ಆಫ್ರಿಕಾದಲ್ಲಿ ದೇಸಿ ಸ್ಟೈಲ್​ನಲ್ಲಿ ವರ್ಕೌಟ್ ಮಾಡಿದ ರಾಮ್ ಚರಣ್; ಇಲ್ಲಿದೆ ವಿಡಿಯೋ  

ರಾಮ್ ಚರಣ್ ಅವರ 15ನೇ ಚಿತ್ರಕ್ಕೆ ಖ್ಯಾತ ನಿರ್ದೇಶಕ ಶಂಕರ್ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಅದೇ ರೀತಿ ‘ಪುಷ್ಪ 2’ ಚಿತ್ರಕ್ಕೆ ಸುಕುಮಾರ್ ಅವರು ನಿರ್ದೇಶನ ಮಾಡುತ್ತಿದ್ದಾರೆ. ಎರಡೂ ಸಿನಿಮಾಗಳು ದೊಡ್ಡ ಬಜೆಟ್​ನಲ್ಲಿ ಮೂಡಿ ಬರುತ್ತಿವೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ