Samantha: ನಟಿ ಸಮಂತಾ ಹೆಸರು ಕೆಡಿಸಲು ಸಂಚು; ಇದರ ಹಿಂದೆ ಇರೋರು ಯಾರು?
ಸಮಂತಾ ಅವರು ‘ಪುಷ್ಪ’ ಸಿನಿಮಾದಲ್ಲಿ ಹೆಜ್ಜೆ ಹಾಕಿದ್ದರು. ಈ ಹಾಡಿನಲ್ಲಿ ಸಮಂತಾ ಡ್ಯಾನ್ಸ್ ಮಾಡಿದ ಪರಿ ನೋಡಿ ಫ್ಯಾನ್ಸ್ ಖುಷಿಪಟ್ಟಿದ್ದರು. ಈಗ ಸಮಂತಾ ಅವರು ವೆಬ್ ಸೀರಿಸ್ನಲ್ಲಿ ಬ್ಯುಸಿ ಇದ್ದಾರೆ.
ನಟಿ ಸಮಂತಾ (Samantha) ಅವರು ಇತ್ತೀಚೆಗೆ ಸಾಕಷ್ಟು ತೊಂದರೆಗಳನ್ನು ಎದುರಿಸುತ್ತಿದ್ದಾರೆ. ಅವರ ವೈಯಕ್ತಿಕ ಜೀವನದಲ್ಲಿ ಸಾಕಷ್ಟು ಏಳುಬೀಳುಗಳನ್ನು ಕಂಡಿದ್ದಾರೆ. ಹೀಗಿರುವಾಗಲೇ ಅವರಿಗೆ Myositis ಹೆಸರಿನ ಕಾಯಿಲೆ ಕಾಣಿಸಿಕೊಂಡಿತು. ಇದರಿಂದ ಅವರು ಸಾಕಷ್ಟು ನೊಂದಿದ್ದಾರೆ. ಈಗ ಸಮಂತಾ ಹೆಸರು ಕೆಡಿಸಲು ಕೆಲವರಿಂದ ಹುನ್ನಾರ ನಡೆಯುತ್ತಿದೆ. ಇದನ್ನು ಮಾಡಿದವರು ಯಾರು ಎನ್ನುವ ಪ್ರಶ್ನೆ ಮೂಡಿದೆ.
ಸಮಂತಾ ಅವರು ‘ಪುಷ್ಪ’ ಸಿನಿಮಾದಲ್ಲಿ ಹೆಜ್ಜೆ ಹಾಕಿದ್ದರು. ಈ ಹಾಡಿನಲ್ಲಿ ಸಮಂತಾ ಡ್ಯಾನ್ಸ್ ಮಾಡಿದ ಪರಿ ನೋಡಿ ಫ್ಯಾನ್ಸ್ ಖುಷಿಪಟ್ಟಿದ್ದರು. ಈಗ ಸಮಂತಾ ಅವರು ವೆಬ್ ಸೀರಿಸ್ನಲ್ಲಿ ಬ್ಯುಸಿ ಇದ್ದಾರೆ. ರಾಜ್ ಹಾಗೂ ಡಿಕೆ ನಿರ್ದೇಶನ ಮಾಡುತ್ತಿರುವ ವೆಬ್ ಸೀರಿಸ್ನಲ್ಲಿ ಸಮಂತಾ ನಟಿಸುತ್ತಿದ್ದಾರೆ. ಇಂಗ್ಲಿಷ್ ‘ಸಿಟಾಡೆಲ್’ ಸೀರಿಸ್ನ ಭಾರತದ ವರ್ಷನ್ ಇದಾಗಿದೆ. ಇದರ ಶೂಟಿಂಗ್ ಭರದಿಂದ ಸಾಗುತ್ತಿದೆ. ಇದಕ್ಕಾಗಿ ಸಮಂತಾ ಮುಂಬೈನಲ್ಲಿ ಇದ್ದಾರೆ.
ಸಮಂತಾ ಇತ್ತೀಚೆಗೆ ಮುಂಬೈನಲ್ಲಿ ಮನೆ ಖರೀದಿ ಮಾಡಿದ್ದಾರೆ. ಅವರು ಮುಂಬೈನಲ್ಲೇ ಸೆಟಲ್ ಆಗಲಿದ್ದಾರೆ ಎನ್ನಲಾಗಿತ್ತು. ಹೀಗಿರುವಾಗಲೇ ಸಮಂತಾಗೆ ‘ಪುಷ್ಪ 2’ ಚಿತ್ರದಲ್ಲಿ ಹೆಜ್ಜೆ ಹಾಕೋಕೆ ಆಫರ್ ನೀಡಿದ್ದರು, ಆದರೆ ಅದನ್ನು ಅವರು ತಿರಸ್ಕರಿಸಿದರು ಎನ್ನುವ ಸುದ್ದಿ ಹೊರಬಿತ್ತು. ಇದನ್ನು ಸಮಂತಾ ಟೀಂ ಅಲ್ಲಗಳೆದಿದೆ. ‘ಪುಷ್ಪ 2 ತಂಡದಿಂದ ಯಾವುದೇ ಆಫರ್ ಬಂದಿಲ್ಲ’ ಅನ್ನೋದನ್ನು ಸ್ಪಷ್ಟಪಡಿಸಿದೆ.
‘ಖುಷಿ’ ಸಿನಿಮಾದಲ್ಲಿ ಸಮಂತಾ ನಟಿಸುತ್ತಿದ್ದಾರೆ. ಈ ಚಿತ್ರದ ಕೆಲಸಗಳು ಸದ್ಯ ಅರ್ಧಕ್ಕೆ ನಿಂತಿವೆ. ಈ ಚಿತ್ರಕ್ಕೆ ಸಮಂತಾ ಡೇಟ್ಸ್ ನೀಡುತ್ತಿಲ್ಲ ಎನ್ನುವ ಆರೋಪ ಕೇಳಿ ಬಂತು. ಇದು ಕೂಡ ಸಮಂತಾ ಹೆಸರು ಕೆಡಿಸಲು ಮಾಡಿರೋ ಪ್ಲ್ಯಾನ್ ಎನ್ನಲಾಗುತ್ತಿದೆ. ಇದು ಯಾರು ಎನ್ನುವುದನ್ನು ಪತ್ತೆ ಹಚ್ಚಲು ಸಮಂತಾ ಫ್ಯಾನ್ಸ್ ಮುಂದಾಗಿದ್ದಾರೆ.
ಇದನ್ನೂ ಓದಿ: Samantha: ದೇವರ ಮೊರೆಹೋದ ನಟಿ ಸಮಂತಾ; ಇನ್ನೂ ವಾಸಿ ಆಗಿಲ್ಲವೇ ಅಪರೂಪದ ಕಾಯಿಲೆ?
ಸಮಂತಾ ಅವರು ನಾಗಚೈತನ್ಯ ಜತೆ ವಿಚ್ಛೇದನ ಪಡೆದುಕೊಂಡರು. ಆಗ ಸಮಂತಾ ತುಂಬಾನೇ ಕುಗ್ಗಿದ್ದರು. ಹೀಗಿರುವಾಗಲೇ myositis ಕಾಯಿಲೆ ಕಾಣಿಸಿಕೊಂಡಿತು. ಸಮಂತಾ ಸದ್ಯ ಇದರಿಂದ ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದಾರೆ. ಅವರು ಆದಷ್ಟು ಬೇಗ ಸಂಪೂರ್ಣ ಗುಣಮುಖರಾಗಲಿ ಎಂದು ಫ್ಯಾನ್ಸ್ ಪ್ರಾರ್ಥಿಸುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ