Updated on: Feb 14, 2023 | 1:05 PM
ನಟಿ ಸಮಂತಾ ಅವರು ‘ಪುಷ್ಪ’ ಸಿನಿಮಾದ ‘ಹೂ ಅಂತೀಯಾ ಮಾವ..’ ಹಾಡಿಗೆ ಡ್ಯಾನ್ಸ್ ಮಾಡಿ ಸಖತ್ ಫೇಮಸ್ ಆದರು. ಈಗ ಸಿನಿಮಾಗೆ ಸೀಕ್ವೆಲ್ ರೆಡಿ ಆಗುತ್ತಿದೆ. ಈ ಚಿತ್ರದಲ್ಲೂ ವಿಶೇಷ ಸಾಂಗ್ ಇರಲಿದೆ.
‘ಪುಷ್ಪ 2’ ಚಿತ್ರದಲ್ಲಿನ ಐಟಂ ಸಾಂಗ್ನಲ್ಲಿ ನಟಿಸೋಕೆ ನಿರ್ದೇಶಕ ಸುಕುಮಾರ್ ಅವರು ಸಮಂತಾಗೆ ಆಫರ್ ನೀಡಿದ್ದರು. ಆದರೆ, ಈ ಆಫರ್ನ ಅವರು ರಿಜೆಕ್ಟ್ ಮಾಡಿದ್ದಾರೆ.
‘ಪುಷ್ಪ’ ಸಿನಿಮಾ ಹಿಂದಿಯಲ್ಲೂ ಹಿಟ್ ಆಯಿತು. ಇದರಿಂದ ಸಮಂತಾ ಜನಪ್ರಿಯತೆ ಮತ್ತಷ್ಟು ಹೆಚ್ಚಾಯಿತು. ಈಗ ಅವರು ಟಾಲಿವುಡ್ ಆಫರ್ಗಳನ್ನು ರಿಜೆಕ್ಟ್ ಮಾಡುತ್ತಿದ್ದಾರೆ ಎನ್ನಲಾಗಿದೆ.
ಸದ್ಯ ಅವರು ರಾಜ್ ಹಾಗೂ ಡಿಕೆ ನಿರ್ದೇಶನದ ವೆಬ್ ಸೀರಿಸ್ನಲ್ಲಿ ನಟಿಸುತ್ತಿದ್ದಾರೆ. ವರುಣ್ ಧವನ್ ಅವರು ಇದರಲ್ಲಿ ಸಮಂತಾ ಜತೆ ಕಾಣಿಸಿಕೊಳ್ಳುತ್ತಿದ್ದಾರೆ.
ಇತ್ತೀಚೆಗೆ ಸಮಂತಾ ಅವರು ಮುಂಬೈನಲ್ಲಿ ಹೊಸ ಫ್ಲ್ಯಾಟ್ ಖರೀದಿ ಮಾಡಿದ್ದಾರೆ ಎನ್ನಲಾಗುತ್ತಿದೆ. ಹೀಗಿರುವಾಗಲೇ ಅವರು ತೆಲುಗು ಆಫರ್ಗಳನ್ನು ರಿಜೆಕ್ಟ್ ಮಾಡುತ್ತಿದ್ದಾರೆ. ಇದರಿಂದ ಅವರು ಟಾಲಿವುಡ್ ತೊರೆಯುತ್ತಾರಾ ಎನ್ನುವ ಪ್ರಶ್ನೆ ಮೂಡಿದೆ.