ಜೂ.ಎನ್​ಟಿಆರ್​ ಕುಟುಂಬಕ್ಕೆ ಮತ್ತೊಂದು ಆಘಾತ; ನಂದಮೂರಿ ರಾಮಕೃಷ್ಣಗೆ ಕಾರು ಅಪಘಾತ

ಜುಬಿಲಿ ಹಿಲ್ಸ್ ರಸ್ತೆ ಸಂಖ್ಯೆ-10ರಲ್ಲಿ ಈ ಅಪಘಾತ ಸಂಭವಿಸಿದೆ. ರಾಮಕೃಷ್ಣ ಅವರೇ ಕಾರು ಚಲಾಯಿಸುತ್ತಿದ್ದರು. ಅಪಘಾತದಲ್ಲಿ ಕಾರು ಸಂಪೂರ್ಣ ಜಖಂಗೊಂಡಿದೆ.

ಜೂ.ಎನ್​ಟಿಆರ್​ ಕುಟುಂಬಕ್ಕೆ ಮತ್ತೊಂದು ಆಘಾತ; ನಂದಮೂರಿ ರಾಮಕೃಷ್ಣಗೆ ಕಾರು ಅಪಘಾತ
ನಂದಮೂರಿ ರಾಮಕೃಷ್ಣ
Follow us
ರಾಜೇಶ್ ದುಗ್ಗುಮನೆ
|

Updated on:Feb 11, 2023 | 4:47 PM

ನಂದಮೂರಿ ಕುಟುಂಬಕ್ಕೆ (Nandamuri Family) ಸಾಲು ಸಾಲು ಆಘಾತಗಳು ಎದುರಾಗುತ್ತಿವೆ. ಇತ್ತೀಚೆಗೆ ನಂದಮೂರಿ ತಾರಕರತ್ನ ಅವರು ಹೃದಯಾಘಾತಕ್ಕೆ ಒಳಗಾದರು. ಅವರನ್ನು ಬೆಂಗಳೂರಿನ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. ಈಗ ಜೂ.ಎನ್​ಟಿಆರ್ ಚಿಕ್ಕಪ್ಪ ನಂದಮೂರಿ ರಾಮಕೃಷ್ಣ (Nandamuri Ramakrishna ) ಅವರಿಗೆ ಕಾರು ಅಪಘಾತ ಆಗಿದೆ. ಇಂದು (ಫೆಬ್ರವರಿ 11) ಮುಂಜಾನೆ ಈ ಅಪಘಾತ ಸಂಭವಿಸಿದೆ ಎಂದು ತಿಳಿದು ಬಂದಿದೆ.

ಜುಬಿಲಿ ಹಿಲ್ಸ್ ರಸ್ತೆ ಸಂಖ್ಯೆ-10ರಲ್ಲಿ ಈ ಅಪಘಾತ ಸಂಭವಿಸಿದೆ. ರಾಮಕೃಷ್ಣ ಅವರೇ ಕಾರು ಚಲಾಯಿಸುತ್ತಿದ್ದರು. ಅಪಘಾತದಲ್ಲಿ ಕಾರು ಸಂಪೂರ್ಣ ಜಖಂಗೊಂಡಿದೆ. ಈ ವೇಳೆ ರಾಮಕೃಷ್ಣ ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಅವರನ್ನು ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗಿದೆ. ಅವರು ಈಗ ಚೇತರಿಕೆ ಕಾಣುತ್ತಿದ್ದಾರೆ ಎಂದು ತಿಳಿದು ಬಂದಿದೆ. ಈ ಪ್ರಕರಣಕ್ಕೆ ಸಂಬಂಧಿಸಿ ಯಾವುದೇ ಕೇಸ್​ ದಾಖಲಾಗಿಲ್ಲ ಎಂದು ಪೊಲೀಸರು ಹೇಳಿದ್ದಾರೆ.

ನಂದಮೂರಿ ಕುಟುಂಬದಲ್ಲಿ ಸರಣಿ ದುರಂತಗಳು ನಡೆಯುತ್ತಿದ್ದು ಅಭಿಮಾನಿಗಳು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ನಂದಮೂರಿ ತಾರಕರತ್ನ ಅವರಿಗೆ ಹೃದಯಾಘಾತವಾಗಿತ್ತು. ಅವರು ನಿಧಾನವಾಗಿ ಚೇತರಿಕೆ ಕಾಣುತ್ತಿದ್ದಾರೆ. ಹೀಗಿರುವಾಗಲೇ ಅವರ ಕುಟುಂಬದ ಸದಸ್ಯನಿಗೆ ಅಪಘಾತ ಆಗಿದ್ದು ನಿಜಕ್ಕೂ ಬೇಸರದ ಸಂಗತಿ.

ಇದನ್ನೂ ಓದಿ
Image
2015ರಲ್ಲಿ ಚಿತ್ರರಂಗ ತೊರೆಯಬೇಕೆಂದುಕೊಂಡಿದ್ದ ಕೀರವಾಣಿ; ಆ ವರ್ಷ ನಡೆಯಿತು ಚಮತ್ಕಾರ
Image
Kangana Ranaut: ‘ನನ್ನ ಧಾಕಡ್​ ಚಿತ್ರದ್ದು ಐತಿಹಾಸಿಕ ಸೋಲು ನಿಜ’: ಕಂಗನಾ ರಣಾವತ್​ ಬಹಿರಂಗ ಹೇಳಿಕೆ
Image
Nandamuri Taraka Ratna: ನಟ ನಂದಮೂರಿ ತಾರಕ ರತ್ನ ತೀವ್ರ ಅಸ್ವಸ್ಥ; ಪ್ರಜ್ಞೆ ತಪ್ಪಿದ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲು

ನಂದಮೂರಿ ಕುಟುಂಬಕ್ಕೆ ಅಪಘಾತದ ಭಯ

ನಂದಮೂರಿ ಕುಟುಂಬದ ಅನೇಕರು ಅಪಘಾತಕ್ಕೆ ತುತ್ತಾಗಿದ್ದಿದೆ. ಅನೇಕರು ಮೃತಪಟ್ಟಿದ್ದಾರೆ ಕೂಡ. ಜೂನಿಯರ್ ಎನ್​ಟಿಆರ್ ಒಮ್ಮೆ ರಸ್ತೆ ಅಪಘಾತಕ್ಕೀಡಾಗಿದ್ದರು. ಈ ವೇಳೆ ಅವರಿಗೆ ಸಾಕಷ್ಟು ಗಾಯಗಳಾಗಿದ್ದವು. ಅದೃಷ್ಟವಶಾತ್ ಬದುಕುಳಿದರು. ಜೂ.ಎನ್​ಟಿಆರ್ ತಂದೆ ನಂದಮೂರಿ ಹರಿಕೃಷ್ಣ ರಸ್ತೆ ಅಪಘಾತದಲ್ಲಿ ಕೊನೆಯುಸಿರು ಎಳೆದರು. ನಂದಮೂರಿ ಜಾನಕಿರಾಮ್ ಕಾರು ಅಪಘಾತದಲ್ಲಿ ಸಾವನ್ನಪ್ಪಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 4:35 pm, Sat, 11 February 23