Mrunal Thakur: ‘ಎನ್ಟಿಆರ್ 30’ ಚಿತ್ರಕ್ಕೆ ಮೃಣಾಲ್ ಠಾಕೂರ್ ನಾಯಕಿ? ‘ಸೀತಾ ರಾಮಂ’ ಸುಂದರಿಗೆ ಭರ್ಜರಿ ಆಫರ್
NTR 30 | Mrunal Thakur: ಮೃಣಾಲ್ ಠಾಕೂರ್ ಅವರಿಗೆ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಜನಪ್ರಿಯತೆ ಇದೆ. ತೆಲುಗು ಮಂದಿಗೆ ಅವರು ಫೇವರಿಟ್ ನಟಿ ಆಗಿದ್ದಾರೆ.
Updated on: Feb 12, 2023 | 4:41 PM

ಬಾಲಿವುಡ್ ನಟಿ ಮೃಣಾಲ್ ಠಾಕೂರ್ ಅವರು ದಕ್ಷಿಣ ಭಾರತದಲ್ಲೂ ಫೇಮಸ್ ಆಗಿದ್ದಾರೆ. ಇಲ್ಲಿ ಅವರಿಗೆ ಒಳ್ಳೊಳ್ಳೆಯ ಅವಕಾಶಗಳು ಸಿಗುತ್ತಿವೆ. ಅದರಲ್ಲೂ ಟಾಲಿವುಡ್ನಲ್ಲಿ ಅವರಿಗೆ ಸಿಕ್ಕಾಪಟ್ಟೆ ಡಿಮ್ಯಾಂಡ್ ಸೃಷ್ಟಿ ಆಗಿದೆ.

2022ರಲ್ಲಿ ಮೃಣಾಲ್ ಠಾಕೂರ್ ನಟಿಸಿದ ‘ಸೀತಾ ರಾಮಂ’ ಸಿನಿಮಾ ಸೂಪರ್ ಹಿಟ್ ಆಯಿತು. ಆ ಬಳಿಕ ಅವರನ್ನು ಹುಡುಕಿಕೊಂಡು ಸ್ಟಾರ್ ಸಿನಿಮಾಗಳ ಆಫರ್ಸ್ ಬರುತ್ತಿವೆ. ಎಲ್ಲವನ್ನೂ ಅಳೆದು-ತೂಗಿ ಅವರು ಹೊಸ ಪ್ರಾಜೆಕ್ಟ್ಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ.

ಜೂನಿಯರ್ ಎನ್ಟಿಆರ್ ನಟಿಸಲಿರುವ 30ನೇ ಸಿನಿಮಾಗೆ ಹೀರೋಯಿನ್ ಯಾರು ಎಂಬ ಕೌತುಕ ಅಭಿಮಾನಿಗಳ ಮನದಲ್ಲಿದೆ. ಈ ಚಿತ್ರಕ್ಕೆ ಮೃಣಾಲ್ ಠಾಕೂರ್ ಆಯ್ಕೆ ಆಗಿದ್ದಾರೆ ಎಂಬ ಗಾಸಿಪ್ ಹಬ್ಬಿದೆ. ಈ ಬಗ್ಗೆ ಇನ್ನಷ್ಟೇ ಅಧಿಕೃತ ಮಾಹಿತಿ ಹೊರಬೀಳಬೇಕಿದೆ.

ಇತ್ತೀಚೆಗೆ ತೆಲುಗಿನಲ್ಲಿ ತಾವು ಒಂದು ದೊಡ್ಡ ಸಿನಿಮಾವನ್ನು ಒಪ್ಪಿಕೊಂಡಿರುವುದಾಗಿ ಮೃಣಾಲ್ ಠಾಕೂರ್ ಹೇಳಿದ್ದರು. ಆದರೆ ಅದು ಯಾವ ಸಿನಿಮಾ ಎಂಬುದನ್ನು ಅವರು ಹೇಳಿರಲಿಲ್ಲ. ‘ಎನ್ಟಿಆರ್ 30’ ಚಿತ್ರದ ಕುರಿತಾಗಿಯೇ ಮೃಣಾಲ್ ಹೇಳಿರುವುದು ಎಂದು ಫ್ಯಾನ್ಸ್ ಊಹಿಸುತ್ತಿದ್ದಾರೆ.

ನಾನಿ ನಟನೆಯ 30ನೇ ಚಿತ್ರಕ್ಕೂ ಮೃಣಾಲ್ ಠಾಕೂರ್ ಹೀರೋಯಿನ್. ಆ ಸಿನಿಮಾದ ಕೆಲಸಗಳು ಬಿರುಸಿನಿಂದ ನಡೆಯುತ್ತಿವೆ. ಇನ್ನು, ಬಾಲಿವುಡ್ನಲ್ಲಿ ಕೂಡ ಮೃಣಾಲ್ ಅವರಿಗೆ ಸಖತ್ ಬೇಡಿಕೆ ಇದೆ. ಸಾಲು ಸಾಲು ಸಿನಿಮಾಗಳಲ್ಲಿ ಅವರು ನಟಿಸುತ್ತಿದ್ದಾರೆ.




